Lakshana Serial: ಮಗಳ ಕಣ್ಣೆದುರೇ ಮೌರ್ಯನಿಗೆ ಗುಂಡಿಟ್ಟ ಚಂದ್ರಶೇಖರ್, ಡೆವಿಲ್ ಅಂದುಕೊಂಡಂತೆ ಎಲ್ಲವೂ ನಡೆಯುತ್ತಿದೆ
ಡೆವಿಲ್ ಮಾತಿನಂತೆ ತಂದೆಯನ್ನು ಹಿಂಬಾಲಿಸುತ್ತಾ ಹೋದ ನಕ್ಷತ್ರಳಿಗೆ ಶಾಕ್ ಒಂದು ಕಾದಿರುತ್ತೆ. ತನ್ನ ತಂದೆ ಯಾವಾಗಲೂ ಕಾನೂನು ಹಾಗೂ ನ್ಯಾಯದ ಪರ ಎಂದು ಹೇಳಿದ ನಕ್ಷತ್ರಳಿಗೆ ಸಿ.ಎಸ್ ಮೌರ್ಯನ ಮೇಲೆ ಗನ್ ಗುರಿ ಮಾಡಿ ಇಟ್ಟಿರುವ ದೃಶ್ಯ ಕಾಣುತ್ತದೆ.
ಧಾರಾವಾಹಿ: ಲಕ್ಷಣ (Lakshana)
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 8.30
ನಿರ್ದೇಶನ: ಶಿವರಾಮ್ ಮಾಗಡಿ
ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಮೌರ್ಯನ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಚಂದ್ರಶೇಖರ್ ಮತ್ತು ನಕ್ಷತ್ರ ಒಂದು ಪ್ಲಾನ್ ಮಾಡಿ ಆತನಿಗೆ ಬಲೆ ಬೀಸುತ್ತಾರೆ. ಅದರಲ್ಲಿ ಯಶಸ್ಸು ಕೂಡಾ ಆಗುತ್ತಾರೆ. ಮೌರ್ಯನನ್ನು ತನ್ನ ತಂದೆ ಪೋಲಿಸರಿಗೆ ಒಪ್ಪಿಸುತ್ತಾರೆ ಎನ್ನುವ ನಂಬಿಕೆಯಲ್ಲಿ ನಕ್ಷತ್ರ ಮನೆಗೆ ಹೋಗುತ್ತಾಳೆ. ಆದರೆ ಸಿ.ಎಸ್ ಬೇರೆ ಏನೋ ಪ್ಲಾನ್ ಮಾಡಿ ಮೌರ್ಯನನ್ನು ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಿರುತ್ತಾರೆ.
ಮೌರ್ಯನಿಗೆ ಗುಂಡಿಟ್ಟ ಚಂದ್ರಶೇಖರ್
ಕೂಡಿ ಹಾಕಿದ್ದ ಮೌರ್ಯನಿಗೆ ಚಂದ್ರಶೇಖರ್ ಕೆಲವೊಂದು ಬುದ್ಧಿ ಮಾತುಗಳನ್ನು ಹೇಳುತ್ತಾರೆ. ಇದು ಆತನಿಗೆ ಕೊಟ್ಟ ಕೊನೆಯ ಅವಕಾಶವಾಗಿತ್ತು. ಅದೇನೆಂದರೆ ನನ್ನ ಮಗಳಿಗೆ ಯಾವುದೇ ತೊಂದರೆ ನೀಡುವುದಿಲ್ಲ ಅಂತಿದ್ದರೆ ನಿನ್ನನ್ನು ಬಿಟ್ಟು ಬಿಡುತ್ತೇನೆ. ಇಲ್ಲ ಅಂತಿದ್ದರೆ ಪರಿಣಾಮ ಬೇರೆದೇ ಆಗಿರುತ್ತದೆ ಅಂತ ಸಿ.ಎಸ್ ಹೇಳುತ್ತಾರೆ. ಆದರೆ ಸಿ.ಎಸ್ ಮಾತಿಗೆ ಜಗ್ಗದ ಮೌರ್ಯ ನೀನು ಏನು ಬೇಕಾದರೂ ಮಾಡಿಕೋ, ನನಗೆ ನಿನ್ನ ಮಗಳನ್ನು ಸಾಯಿಸಿದರೆ ಮಾತ್ರ ನೆಮ್ಮದಿ ಎಂದು ಹೇಳುತ್ತಾನೆ.
ಇವನ ಈ ಮಾತಿಗೆ ಕೋಪಗೊಂಡ ಸಿ.ಎಸ್, ತಪ್ಪು ನನ್ನದು ತಾನೆ ನನ್ನ ಮಗಳಿಗೆ ಯಾಕೆ ಶಿಕ್ಷೆ ಕೊಡುತ್ತೀಯಾ, ಇನ್ನೂ ನಿನ್ನ ಬಳಿ ಸಮಯವಿದೆ. ಯೋಚನೆ ಮಾಡು ನಕ್ಷತ್ರಳಿಗೆ ತೊಂದರೆ ಕೊಡಲ್ಲ ಎಂದಿದ್ದರೆ ನಿನ್ನನ್ನು ಬಿಟ್ಟು ಕಳುಹಿಸುತ್ತೇನೆ. ಇಲ್ಲ ನನ್ನ ಮಗಳನ್ನು ಸಾಯಿಸಿಯೇ ತೀರುತ್ತೇನೆ ಅಂತಿದ್ದರೆ, ನನ್ನ ಮಗಳ ರಕ್ಷಣೆಗಾಗಿ ನಿನ್ನನ್ನೇ ಸಾಯಿಸಿ ಬಿಡುತ್ತೇನೆ ಎಂದು ಹೇಳಿ ಗನ್‌ನ್ನು ಕೈಯಲ್ಲಿ ಹಿಡಿದು ನೇರವಾಗಿ ಮೌರ್ಯನಿಗೆ ಗುರಿ ಮಾಡಿ ಹಿಡಿಯುತ್ತಾರೆ ಚಂದ್ರಶೇಖರ್.
ಇಲ್ಲಿ ಇವರಿಬ್ಬರ ಮಧ್ಯೆ ಆಗಿರುವ ಮಾತುಕತೆಗೂ ಹಾಗೂ ಭಾರ್ಗವಿ ತನ್ನ ಮಗಳಾದ ಮಿಲ್ಲಿಯ ಜೊತೆ ನಡೆಸುವ ಮಾತುಕತೆಯೂ ಎರಡು ಒಂದೇ ಆಗಿರುತ್ತದೆ. ಅಂದರೆ ಡೆವಿಲ್ ಭಾರ್ಗವಿ ಹೇಳಿದಂತೆ ಎಲ್ಲವೂ ನಡೆಯುತ್ತಿದೆ ಅಂತನೇ ಹೇಳಬಹುದು. ಚಂದ್ರಶೇಖರ್ ಈ ದಿನ ಮೌರ್ಯನನ್ನು ಸಾಯಿಸುತ್ತಾನೆ. ತನ್ನ ಮುದ್ದಿನ ಮಗಳಿಗೋಸ್ಕರ ಏನು ಬೇಕಾದರೂ ಮಾಡುತ್ತಾನೆ ಆ ಸಿ.ಎಸ್. ಅವನಿಗೆ ಆ ಮೌರ್ಯನನ್ನು ಸಾಯಿಸುವುದು ದೊಡ್ಡ ವಿಷಯನಾ. ಇವತ್ತು ಒಂದು ಮೀಡಿಯಾದಲ್ಲಿ ಬಿಸಿ ಬಿಸಿ ನ್ಯೂಸ್ ಹರಿದಾಡುತ್ತೆ. ಅದು ಏನಂದ್ರೆ ಕೊಲೆಯ ಆರೋಪದಲ್ಲಿ ಜೈಲು ಸೇರಿದ ಪ್ರಭಾವಿ ಬ್ಯುಸಿನೆಸ್‌ಮ್ಯಾನ್ ಚಂದ್ರಶೇಖರ್. ತಂದೆಯ ವಿರುದ್ಧವೇ ಮಗಳ ಸಾಕ್ಷಿ ಅಂತ ಹೇಳಿ ಜೋರಾಗಿ ನಗುತ್ತಾಳೆ ಭಾರ್ಗವಿ.
ಇದನ್ನು ಓದಿ: ಮೌರ್ಯನಿಗೆ ಚಂದ್ರಶೇಖರ್ ಇನ್ನೊಂದು ಮುಖದ ಪರಿಚಯ
ಈ ತಾಯಿಯ ಪ್ಲಾನ್ ಏನೇಂಬುವುದು ಮಗಳಾದ ಮಿಲ್ಲಿಗೆ ಅರ್ಥವಾಗದೆ, ಸಿ.ಎಸ್‌ಗೆ ಈ ಕೇಸ್‌ನಿಂದ ಪಾರಾಗಿ ಬರುವುದು ಅಂತದ್ದೇನು ಕಷ್ಟ ಅಲ್ಲಲ್ವ ಅಮ್ಮ, ಮತ್ತೆ ಆ ನಕ್ಷತ್ರ ಅವಳ ಪ್ರೀತಿಯ ಅಪ್ಪನ ವಿರುದ್ಧ ಅದು ಹೇಗೆ? ಸಾಕ್ಷಿ ಹೇಳಲು ಸಾಧ್ಯ ಎಂದು ಭಾರ್ಗವಿಯನ್ನು ಪ್ರಶ್ನೆ ಮಾಡುತ್ತಾಳೆ ಮಿಲ್ಲಿ. ಆಗ ತಾನು ನಕ್ಷತ್ರಳಿಗೆ ಕಾಲ್ ಮಾಡಿ ಆ ಸಿ.ಎಸ್ ಮೌರ್ಯನನ್ನು ಸಾಯಿಸುತ್ತಾನೆ ಅನ್ನುವ ವಿಷಯವನ್ನು ಆಗಲೇ ಹೇಳಿದ್ದೇನೆ. ಇಷ್ಟು ಹೊತ್ತಿಗಾಗಲೇ ಆಕೆ ಅಲ್ಲಿಗೆ ಹೋಗಿರಬಹುದು ಎಂತ ಡೆವಿಲ್ ಹೇಳುತ್ತಾಳೆ.
ಡೆವಿಲ್ ಮಾತಿನಂತೆ ತಂದೆಯನ್ನು ಹಿಂಬಾಲಿಸುತ್ತಾ ಹೋದ ನಕ್ಷತ್ರಳಿಗೆ ಶಾಕ್ ಒಂದು ಕಾದಿರುತ್ತೆ. ತನ್ನ ತಂದೆ ಯಾವಾಗಲೂ ಕಾನೂನು ಹಾಗೂ ನ್ಯಾಯದ ಪರ ಎಂದು ಹೇಳಿದ ನಕ್ಷತ್ರಳಿಗೆ ಸಿ.ಎಸ್ ಮೌರ್ಯನ ಮೇಲೆ ಗನ್ ಗುರಿ ಮಾಡಿ ಇಟ್ಟಿರುವ ದೃಶ್ಯ ಕಾಣುತ್ತದೆ. ತಂದೆಯ ಕೈಯಿಂದ ಈ ಕೆಲಸ ಆಗದಂತೆ ತಡೆಯಲು ಬಂದಾಗ ಚಂದ್ರಶೇಖರ್ ಮೌರ್ಯನಿಗೆ ಗನ್‌ನಿಂದ ಶೂಟ್ ಮಾಡಿ ಆಗುತ್ತೆ. ಈ ದೃಶ್ಯವನ್ನು ನೋಡಿ ಬೆಚ್ಚಿ ಬೀಳುತ್ತಾಳೆ ನಕ್ಷತ್ರ. ಇನ್ನು ಈ ಮೌರ್ಯನಿಂದ ನಿನಗೇನು ತೊಂದರೆ ಆಗಲ್ಲ ಅಂತ ಸಿ.ಎಸ್ ಹೇಳುತ್ತಾರೆ. ಇತ್ತ ಕಡೆ ತನ್ನ ಅಣ್ಣ ಯಾವ ರೀತಿ ಎಂಬುದನ್ನು ಚೆನ್ನಾಗಿ ಅರಿತಿದ್ದ ಭಾರ್ಗವಿ ಮೀಡಿಯಾದ ವ್ಯಕ್ತಿಗೆ ಕಾಲ್ ಮಾಡಿ ಸಿ.ಎಸ್ ವಿರುದ್ಧ ಕೊಲೆ ಆರೋಪದ ನ್ಯೂಸ್ ಹಾಕುವಂತೆ ಹೇಳುತ್ತಾಳೆ. ಇದು ನಾನು ಸಿ.ಎಸ್‌ಗೆ ಕೋಡುತ್ತಿರುವ ಮೊದಲ ಉಡುಗೊರೆ. ಇನ್ನೂ ಕೂಡಾ ಅವನು ನರಳಾಡಲು ಇದೆ. ಇವತ್ತು ಆ ಸಿ.ಎಸ್ ಸಂಪಾದಿಸಿದ ಘನತೆಯ ಗೋಪುರ ಒಡೆದು ಹೋಗುತ್ತದೆ ಅಂತ ಹೇಳುತ್ತಾ ಅಟ್ಟಹಾಸದ ನಗುವನ್ನು ಬೀರುತ್ತಾಳೆ ಭಾರ್ಗವಿ. ಸಿ.ಎಸ್ ಮಾಡಿದ ಒಂದು ತಪ್ಪಿನ ಪರಿಣಾಮ ಯಾವ ರೀತಿ ಇರುತ್ತೋ ಎಂದು ಮುಂದೆ ನೋಡಬೇಕಾಗಿದೆ.
ಮಧುಶ್ರೀ ಅಂಚನ್
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:53 am, Tue, 29 November 22