Lakshana Serial: ಮೌರ್ಯನಿಗೆ ಚಂದ್ರಶೇಖರ್ ಇನ್ನೊಂದು ಮುಖದ ಪರಿಚಯ
ಮೌರ್ಯನಿಗೆ ನನ್ನ ದಾರಿಯಲ್ಲಿ ಪಾಠ ಕಲಿಸಬೇಕಂದ್ರೆ ಹೀಗೆನೇ ಮಾಡಬೇಕು. ನಾವು ಅವನನ್ನು ಹುಡುಕಿಕೊಂಡು ಹೋಗುವುದಲ್ಲ, ಅವನೇ ನಮ್ಮನ್ನು ಹುಡುಕಿಕೊಂಡು ಬಂದು ನಮ್ಮ ಬೋನಿಗೆ ಬೀಳಬೇಕು ಎಂದು ಸಿ.ಎಸ್ ಹೇಳುವಾಗಲೇ ಮೌರ್ಯ ಅವರನ್ನು ಹಿಂಬಾಲಿಸುತ್ತಾ ಬರುವುದು ಗೊತ್ತಾಗುತ್ತೆ.
ಧಾರಾವಾಹಿ : ಲಕ್ಷಣ (Lakshana)
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 8.30
ನಿರ್ದೇಶನ: ಶಿವರಾಮ್ ಮಾಗಡಿ
ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಮೌರ್ಯನನ್ನು ಹಿಡಿಯಲು ಅವನ ಹಾದಿಯಲ್ಲೇ ಹೋಗಿ ಅವನಿಗೆ ಪಾಠ ಕಲಿಸಬೇಕೆಂದು ಪ್ಲಾನ್ ಮಾಡಿರುತ್ತಾರೆ ನಕ್ಷತ್ರ ಹಾಗೂ ಚಂದ್ರಶೇಖರ್. ಪ್ಲಾನ್ ಪ್ರಕಾರ ಶ್ವೇತಾಳೊಂದಿಗೆ ಮೌರ್ಯ ಹೇಳಿದ ಸ್ಥಳಕ್ಕೆ ಬರುತ್ತಾಳೆ ನಕ್ಷತ್ರ. ನಂತರ ಶ್ವೇತಾಳನ್ನು ಮನೆಗೆ ಕಳುಹಿಸಿ ಮೌರ್ಯ ಎಲ್ಲಿದ್ದನೆಂದು ಹುಡುಕುತ್ತಾ ಹೊರಡುತ್ತಾಳೆ. ಆಕೆ ಬರುವುದನ್ನು ದೂರದಿಂದಲೇ ಗಮನಿಸುತ್ತಿದ್ದ ಮೌರ್ಯ ರೋಷದಿಂದ ಬಾ ನಕ್ಷತ್ರ ಇಂದೇ ನಿನ್ನ ಕೊನೆಯ ದಿನವೆಂದು ಹೇಳುತ್ತಿರುತ್ತಾನೆ.
ಸಿಎಸ್ ಆಟಕ್ಕೆ ಸೋತ ಮೌರ್ಯ
ಮೌರ್ಯ ನೋಡು ನೋಡುತ್ತಿದ್ದಂತೆ ನಕ್ಷತ್ರಳನ್ನು ಕಾರಿನಲ್ಲಿ ಬಂದ ಯಾರೋ ಕಿಡ್ನಾಪ್ ಮಾಡುತ್ತಾರೆ. ಇದನ್ನು ನೋಡಿದ ಮೌರ್ಯನಿಗೆ ಕೋಪ ಬಂದು ನನ್ನ ಬೇಟೆಯನ್ನು ಯಾರೋ ಬೇರೆಯವರು ಕಿತ್ತುಕೊಂಡು ಹೋಗುವುದನ್ನು ನೋಡಿ ನಾನು ಸುಮ್ಮನಿರಬೇಕಾ, ಆ ಸಿ.ಎಸ್ ಮಗಳು ಯಾವತ್ತಿದ್ರು ನನ್ನ ಕೈಯಿಂದನೇ ಸಾಯಬೇಕು ಎಂದು ಹೇಳಿ ನಕ್ಷತ್ರಳನ್ನು ಕಿಡ್ನಾಪ್ ಮಾಡಿದ ಕಾರನ್ನು ಹಿಂಬಾಲಿಸುತ್ತಾ ಹೋಗುತ್ತಾನೆ. ಇತ್ತ ಕಡೆ ನಕ್ಷತ್ರ ಜೋರಾಗಿ ಕಿರುಚಾಡುತ್ತಾ ನೀವು ಯಾಕೆ ನನ್ನನ್ನು ಕಿಡ್ನಾಪ್ ಮಾಡಿದ್ದೀರಾ ಅಂತ ಕಿಡ್ನಾರ್ಸ್ ಕತ್ತು ಹಿಡಿದು ಕೇಳುವ ಸಂದರ್ಭದಲ್ಲಿ, ನಾನೇ ಕಿಡ್ನಾಪ್ ಮಾಡಿದ್ದು ಮಗಳೇ ಅಂತಾ ಅಲ್ಲೇ ಇದ್ದ ಸಿ.ಎಸ್ ಹೇಳಿದಾಗ ಒಂದು ಕ್ಷಣ ಶಾಕ್ ಆದ ನಕ್ಷತ್ರ ನೀನಾ ಅಪ್ಪ, ನಾನು ಗಾಬರಿಯಾದೇ ಅದಲ್ಲದೆ ನನ್ನ ಗಂಡನ ಮಾತನ್ನು ಮೀರಿ ಇಲ್ಲಿಗೆ ಬಂದಿದ್ದೇನೆ. ನನಗೆ ಹೇಗಾಗಬೇಡ ಅಪ್ಪ ಅಂತ ಹೇಳುತ್ತಾಳೆ. ಮೌರ್ಯನಿಗೆ ನನ್ನ ದಾರಿಯಲ್ಲಿ ಪಾಠ ಕಲಿಸಬೇಕಂದ್ರೆ ಹೀಗೆನೇ ಮಾಡಬೇಕು. ನಾವು ಅವನನ್ನು ಹುಡುಕಿಕೊಂಡು ಹೋಗುವುದಲ್ಲ, ಅವನೇ ನಮ್ಮನ್ನು ಹುಡುಕಿಕೊಂಡು ಬಂದು ನಮ್ಮ ಬೋನಿಗೆ ಬೀಳಬೇಕು ಎಂದು ಸಿ.ಎಸ್ ಹೇಳುವಾಗಲೇ ಮೌರ್ಯ ಅವರನ್ನು ಹಿಂಬಾಲಿಸುತ್ತಾ ಬರುವುದು ಗೊತ್ತಾಗುತ್ತೆ. ಇವನು ಈ ಸಲ ಮಿಸ್ ಆಗದೇ ಪಕ್ಕಾ ನಾವು ಬೀಸಿದ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ ಅಂತ ಸಿ.ಎಸ್ ಹೇಳುತ್ತಾರೆ.
ಅವರನ್ನೇ ಹೀಂಬಾಲಿಸುತ್ತಾ ಬರುತ್ತಿದ್ದ ಮೌರ್ಯ ಯಾರಾಗಿರಬಹುದು ಕಿಡ್ನಾಪ್ ಮಾಡಿದ್ದು ಆ ನಕ್ಷತ್ರಳನ್ನು ಅಂತ ಯೋಚನೆ ಮಾಡುತ್ತಿರುವಾಗ, ಶ್ವೇತಾ ಹೇಳಿದ ಜೋಪಾನ ನಕ್ಷತ್ರಳೇ ನಿನ್ನನ್ನು ಹುಡುಕಿ ಬಂದಿದ್ದಾಳೆ ಎಂದು ಹೇಳಿದ ಆ ಒಂದು ಮಾತು ನೆನಪಾಗಿ ಇದೆಲ್ಲಾ ಚಂದ್ರಶೇಖರ್ ಮಾಡಿರುವ ಟ್ರಾಪ್, ಅದರಲ್ಲಿ ನಾನು ಸಿಕ್ಕಿಹಾಕಿಕೊಂಡಿದ್ದೇನೆ ಎನ್ನುವ ಅರಿವಾಗುತ್ತದೆ. ಸಿ.ಎಸ್ ಬೀಸಿದ ಬಲೆಯಿಂದ ತಪ್ಪಿಸಿಕೊಳ್ಳಲಾಗದೆ ಕೊನೆಗೂ ಸಿಕ್ಕಿಕೊಳ್ಳುತ್ತಾನೆ ಮೌರ್ಯ.
ಇದನ್ನು ಓದಿ: ಮೌರ್ಯನಿಗೆ ಚಂದ್ರಶೇಖರ್ ಇನ್ನೊಂದು ಮುಖದ ಪರಿಚಯ
ಸಿ.ಎಸ್ ಕಡೆಯವರು ಅವನ ಕೈ ಕಟ್ಟಿ ಸಿ.ಎಸ್ ಬಳಿ ಕರೆದುಕೊಂಡ ಮೌರ್ಯನಿಗೆ ಅವರ ಇನ್ನೊಂದು ರೂಪದ ಪರಿಚಯವನ್ನು ಮಾಡುತ್ತಾರೆ. ಮೌರ್ಯ ಎಷ್ಟೇ ಹಾರಾಡಿದರೂ, ನಿನ್ನ ವಯಸ್ಸಿನಲ್ಲಿ ನಾನು ಇದಲ್ಲೇ ಮಾಡಿ ಬಂದವನು. ನೀನು ನನ್ನ ನೆಮ್ಮದಿಯನ್ನು ಹಾಳು ಮಾಡುತ್ತೀಯಾ, ನರಕ ಎಂದರೆ ಏನು ಅಂತ ನಿನಗೆ ತೋರಿಸುತ್ತೇನೆ ಅಂತ ಮೌರ್ಯನಿಗೆ ತಮ್ಮ ಹಳೆಯ ದಾಟಿಯಲ್ಲೇ ಪಾಠ ಹೇಳುತ್ತಾರೆ ಸಿ.ಎಸ್. ಅಪ್ಪ ಮೌರ್ಯನನ್ನು ನೇರವಾಗಿ ಜೈಲಿಗೇನೆ ಕಳುಹಿಸುತ್ತಾರೆ ಅಂದುಕೊಂಡ ನಕ್ಷತ್ರ ತನ್ನ ಮನೆಗೆ ಹೊರಡುತ್ತಾಳೆ. ಹಾಗೂ ಭೂಪತಿಗೆ ಫೋನ್ ಮಾಡಿ ಮೌರ್ಯನನ್ನು ಹಿಡಿದು ಅಪ್ಪ ಜೈಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಅಂತ ಹೇಳುತ್ತಾಳೆ. ಆದರೆ ಸಿ.ಎಸ್ ಮೌರ್ಯನನ್ನು ಜೈಲಿಗೆ ಕಳುಹಿಸದೆ ಯಾವುದೋ ಒಂದು ಕತ್ತಲೆ ಕೋಣೆಯಲ್ಲಿ ಕಟ್ಟಿ ಹಾಕಿ ನಿನಗೆ ಜೈಲು ಶಿಕ್ಷೆ ಅಲ್ಲ, ನನ್ನ ಮಗಳ ತಂಟೆಗೆ ಬಂದ ನಿನಗೆ ನನ್ನ ರೀತಿಯಲ್ಲೇ ಶಿಕ್ಷೆ ಕೊಡುತ್ತೇನೆ ಅಂತ ಹೇಳುತ್ತಾರೆ. ಸಿ.ಎಸ್ ತಮ್ಮ ಕೋಪದ ಕೈಯಲ್ಲಿ ಬುದ್ಧಿ ಕೊಟ್ಟು ಮೌರ್ಯನ ಪ್ರಾಣಕ್ಕೆ ಕಂಟಕ ತಂದೊಡ್ಡುತ್ತಾರಾ ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ನೋಡಬೇಕಾಗಿದೆ.
ಮಧುಶ್ರೀ ಅಂಚನ್
Published On - 9:59 am, Sat, 26 November 22