Lakshana Serial: ಮೌರ್ಯನಿಗೆ ಬಲೆ ಬೀಸಲು ನಕ್ಷತ್ರಳ ಹೊಸ ಪ್ಲಾನ್
ಮೌರ್ಯ ಶ್ವೇತಾಳಿಗೆ ಕಾಲ್ ಮಾಡಿ ನೀನೇನು ಮಾಡುತ್ತೀಯಾ ಗೊತ್ತಿಲ್ಲ ಆದರೆ ನಕ್ಷತ್ರ ಮನೆಯಿಂದ ಹೊರಗೆ ಬರಲೇಬೇಕು ಎಂದು ಹೇಳುತ್ತಿರುತ್ತಾನೆ. ಇವರ ಫೋನ್ ಕಾಲ್ ಮಾತುಕತೆಯನ್ನು ನಕ್ಷತ್ರ ಕೇಳಿಸಿಕೊಳ್ಳುತ್ತಾಳೆ. ಇವರಿಗೆ ಬುದ್ಧಿ ಕಲಿಸಬೇಕೆಂದು ಸ್ವತಃ ನಕ್ಷತ್ರಳೇ ಒಂದು ತಂತ್ರ ಹೂಡುತ್ತಾಳೆ.
ಧಾರಾವಾಹಿ : ಲಕ್ಷಣ (Lakshana)
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 8.30
ನಿರ್ದೇಶನ: ಶಿವರಾಮ್ ಮಾಗಡಿ
ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಮೌರ್ಯನ ದುಷ್ಟ ಕೆಲಸಕ್ಕೆ ಶ್ವೇತಾಳ ಬೆಂಬಲ ಕೂಡಾ ಇರುವಂತಹ ವಿಚಾರ ನಕ್ಷತ್ರಳಿಗೆ ಗೊತ್ತಾಗುತ್ತದೆ. ನನ್ನನ್ನು ದೇವಸ್ಥಾನಕ್ಕೆ ಹೋಗೋಣಾ ಅಂತ ಹೇಳಿದ್ದು ಇದೇ ಕಾರಣಕ್ಕೆ ಇರಬೇಕು. ಹೇಗಾದರೂ ನಾನು ಮನೆಯಿಂದ ಹೊರಬರಬೇಕೆಂದು ಅವರು ಮಾಡಿದ ಪ್ಲಾನ್ ಇರಬೇಕು ಎಂಬ ಕ್ಲಾರಿಟಿ ನಕ್ಷತ್ರಳಿಗೆ ಸಿಗುತ್ತದೆ.
ಮೌರ್ಯ ಶ್ವೇತಾಳಿಗೆ ಬುದ್ಧಿ ಕಲಿಸಲು ಹೊಸ ತಂತ್ರ ರೂಪಿಸಿದ ನಕ್ಷತ್ರ
ಮೌರ್ಯ ಶ್ವೇತಾಳಿಗೆ ಕಾಲ್ ಮಾಡಿ ನೀನೇನು ಮಾಡುತ್ತೀಯಾ ಗೊತ್ತಿಲ್ಲ ಆದರೆ ನಕ್ಷತ್ರ ಮನೆಯಿಂದ ಹೊರಗೆ ಬರಲೇಬೇಕು ಎಂದು ಹೇಳುತ್ತಿರುತ್ತಾನೆ. ಇವರ ಫೋನ್ ಕಾಲ್ ಮಾತುಕತೆಯನ್ನು ನಕ್ಷತ್ರ ಕೇಳಿಸಿಕೊಳ್ಳುತ್ತಾಳೆ. ಇವರಿಗೆ ಬುದ್ಧಿ ಕಲಿಸಬೇಕೆಂದು ಸ್ವತಃ ನಕ್ಷತ್ರಳೇ ಒಂದು ತಂತ್ರ ಹೂಡುತ್ತಾಳೆ. ಆಕೆ ಮಾಡಿದ ಪ್ಲಾನ್ ಪ್ರಕಾರ ಶ್ವೇತಾಳ ಬಳಿ ಬಂದು ಬೆಳಗ್ಗೆನೇ ದೇವಸ್ಥಾನಕ್ಕೆ ಹೊಗಬೇಕು ಅಂದ್ಯಲ್ಲಾ ಬೇಗ ರೆಡಿ ಆಗು. ನಾನು ಪೂಜೆಗೆ ಬೇಕಾದ ಸಾಮಾಗ್ರಿಗಳನ್ನು ತಯಾರು ಮಾಡುತ್ತೇನೆ. ಭೂಪತಿಯ ಕಣ್ಣಿಗೆ ಬೀಳುವ ಮುಂಚೆ ಹೋಗೋಣಾ ಎಂದು ನಕ್ಷತ್ರ ಹೇಳುತ್ತಾಳೆ. ನಕ್ಷತ್ರಳ ಮಾತನ್ನು ಕೇಳಿ ಶ್ವೇತಾಳಿಗೆ ಶಾಕ್ ಆಗಿ ಈಕೆ ಭೂಪತಿಯ ಮಾತನ್ನು ಮೀರಿ ಅದು ಹೇಗೆ ನನ್ನ ಜೊತೆ ಬರಲು ಒಪ್ಪಿದ್ದು ಎಂದು ಯೋಚನೆ ಮಾಡುತ್ತಾಳೆ. ನಂತರ ಏನು ಬೇಕಾದ್ರು ಮಾಡ್ಲಿ ಒಟ್ಟಾರೆಯಾಗಿ ಮನೆಯಿಂದ ಹೊರ ಬರುತ್ತಿದ್ದಾಳೆ ಅಲ್ವಾ ಅಷ್ಟೇ ಸಾಕು ಅಂತ ಅಂದುಕೊಳ್ಳುತ್ತಾಳೆ.
ಇವರಿಬ್ಬರು ರೆಡಿಯಾಗಿ ದೇವಸ್ಥಾನಕ್ಕೆ ಹೋಗಬೇಕೆಂದು ಬಾಗಿಲಿನ ಬಳಿ ಬರುವಾಗ ಭೂಪತಿಯ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ನನ್ನ ಮಾತನ್ನು ಮೀರಿ ನೀವಿಬ್ಬರು ಹೊರಗಡೆ ಹೋಗುತ್ತಿದ್ದೀರಾ ಎಂದು ಭೂಪತಿ ಪ್ರಶ್ನೆ ಮಾಡುತ್ತಾನೆ. ಅದಕ್ಕೆ ನಕ್ಷತ್ರ ಏನೋ ಒಂದು ಹೇಳಿ ತಪ್ಪಿಸಿಕೊಳ್ಳುತ್ತಾಳೆ. ಭೂಪತಿ ಮನೆಯ ಒಳಗಡೆ ಹೋಗುತ್ತಿದ್ದಂತೆ ನಕ್ಷತ್ರ ಹಾಗೂ ಶ್ವೇತಾ ಸೆಕ್ಯುರಿಟಿಯ ಕಣ್ಣಿಗೆ ಬೀಳದಂತೆ ಹಿತ್ತಲಿನಿಂದ ಹೋಗುತ್ತಾರೆ.
ನಕ್ಷತ್ರ ಇಷ್ಟೆಲ್ಲ ರಿಸ್ಕ್ ಯಾಕೆ ತೆಗೆದುಕೊಳ್ಳುತ್ತಿದ್ದಾಳೆ ಎನ್ನುವ ಅನುಮಾನ ಶ್ವೇತಾಳಿಗೆ ಈಗ ಪದೇ ಪದೇ ಕಾಡುತ್ತಿದೆ. ಆದರೂ ನಕ್ಷತ್ರ ಮನೆಯಿಂದ ಹೊರಗೆ ಬಂದಿರುವ ಸಮಧಾನವೂ ಅವಳಿಗಿದೆ. ಇವರು ಮನೆಯಿಂದ ಹೊರಟು ಸ್ವಲ್ಪ ಹೊತ್ತಿನ ಬಳಿಕ ಭೂಪತಿ ಮನೆ ಎಲ್ಲ ಹುಡುಕಿದರೂ ನಕ್ಷತ್ರ ಮತ್ತು ಶ್ವೇತಾಳ ಸುಳಿವು ಸಿಗುವುದಿಲ್ಲ. ಗಾಬರಿಗೊಂಡು ನಕ್ಷತ್ರಳಿಗೆ ಕಾಲ್ ಮಾಡಿದಾಗ ಕಾಲ್ ಕಟ್ ಮಾಡಿ ನಾನು ಹೊರಗೆ ಹೊಗುತ್ತಿದ್ದೇನೆ ಎಂದು ಮೆಸೇಜ್ ಹಾಕುತ್ತಾಳೆ. ಈಕೆ ಪೋನ್ ಪಿಕ್ ಮಾಡುತ್ತಿಲ್ಲವೆಂದು ಶ್ವೇತಾಗೆ ಕಾಲ್ ಮಾಡುತ್ತಾನೆ ಭೂಪತಿ. ಆಗ ನಕ್ಷತ್ರ ಫೋನ್ ಪಿಕ್ ಮಾಡಿ ಭೂಪತಿಯ ಜೊತೆ ಮಾತನಾಡುತ್ತಾ ನೀನೇನು ಗಾಬರಿಯಾಗಬೇಡ, ನಾನು ಸೇಫ್ ಆಗಿದ್ದೇನೆ, ಮನೆಗೆ ಆದಷ್ಟು ಬೇಗ ಬರುತ್ತೇನೆ. ಅಷ್ಟೇ ಅಲ್ಲದೆ ನನಗೆ ಟೈಟ್ ಸೆಕ್ಯುರಿಟಿ ಇದೆ ಅಂತ ಹೇಳಿ ಫೋನ್ ಕಟ್ ಮಾಡುತ್ತಾಳೆ. ನಕ್ಷತ್ರಳ ಬೇಜವಬ್ದಾರಿಯನ್ನು ಕಂಡು ಭೂಪತಿಗೆ ಎಲ್ಲಿಲ್ಲದ ಸಿಟ್ಟು ಬರುತ್ತದೆ.
ಇದನ್ನು ಓದಿ: ಮೌರ್ಯನ ತಾಳಕ್ಕೆ ತಕ್ಕ ಕುಣಿಯುತ್ತಿದ್ದಾಳೆ ಶ್ವೇತಾ, ಪ್ರಾಣ ಸಂಕಟದಲ್ಲಿ ನಕ್ಷತ್ರ
ಹೇಗೋ ನಕ್ಷತ್ರ ಹಾಗೂ ಶ್ವೇತಾ ಮೌರ್ಯ ಹೇಳಿದ ಸ್ಥಳಕ್ಕೆ ಬರುತ್ತಾರೆ. ಆಟೋದಿಂದ ಇಳಿದವಳೇ ಮೌರ್ಯ ಹೇಳಿದ ಸ್ಥಳ ಇದೇನಾ ಎಂದು ಶ್ವೇತಾಳಿಗೆ ನೇರವಾಗಿ ಪ್ರಶ್ನೆ ಮಾಡುತ್ತಾಳೆ ನಕ್ಷತ್ರ. ಈಕೆಯ ಮಾತನ್ನು ಕೇಳಿ ಶ್ವೇತಾಗೆ ಒಂದು ಸಲ ಗಾಬರಿಯಾಗುತ್ತದೆ. ಹೀಗೆ ಮಾತನಾಡುತ್ತಿರುವಾಗ ನಕ್ಷತ್ರ ತಾನು ಮೌರ್ಯನ್ನು ತಾನು ತೋಡಿದ ಕೆಡ್ಡಾಕ್ಕೆ ಬೀಳಲು ಮಾಡಿದ ಪ್ಲಾನ್‌ನ್ನು ನೆನಪಿಸಿಕೊಳ್ಳುತ್ತಾಳೆ. ಮೌರ್ಯನ ಅಟ್ಟಹಾಸ ಹಾಗೂ ಅದಕ್ಕೆ ಶ್ವೇತಾಳ ಸಪೋರ್ಟ್ನ್ನು ತೊಡೆದು ಹಾಕಲು ಒಂದು ಪ್ಲಾನ್ ಮಾಡಿ ಅದನ್ನು ಚಂದ್ರಶೇಖರ್ ಬಳಿ ಹೇಳುತ್ತಾಳೆ.
ಮೌರ್ಯನಿಂದ ಎಷ್ಟು ದಿನ ಅಂತ ಭಯದಿಂದ ಇರೋದು ಅಪ್ಪ, ಯಾವತ್ತಾದರೂ ಅವನ ಅಟ್ಟಹಾಸ ಕೊನೆಯಾಗಬೇಕು ಅಲ್ವ. ಅದು ಇವತ್ತೇ ಆಗಲಿ. ಶ್ವೇತಾ ಮೌರ್ಯನ ಜೊತೆ ಸೇರಿ ನನ್ನನ್ನು ಮನೆಯಿಂದ ಹೊರಗೆ ಕರೆತರುವ ಸ್ಕೆಚ್ ಹಾಕಿದ್ದಾರೆ. ಇದೇ ಒಳ್ಳೆಯ ಸಮಯ ಮೌರ್ಯನನ್ನು ಹಿಡಿಯಲು. ನಾನು ಹೇಳಿದ ಜಾಗಕ್ಕೆ ನೀವು ಬನ್ನಿ ಅಪ್ಪ ಎಂದು ಹೇಳುತ್ತಾಳೆ. ಇದಾಗಿತ್ತು ನಕ್ಷತ್ರ ಶ್ವೇತಾಳೊಂದಿಗೆ ಹೊರಗೆ ಬರಲು ಕಾರಣ. ಈ ಹಾವು ಏಣಿ ಆಟದಲ್ಲಿ ನಕ್ಷತ್ರ ಗೆಲ್ಲುತ್ತಾಳೋ ಅಥವಾ ಮೌರ್ಯ ಗೆಲ್ಲುತ್ತಾನೋ ಎನ್ನುವುದನ್ನು ಮುಂದೆ ನೋಡಬೇಕಾಗಿದೆ.
ಮಧುಶ್ರೀ ಅಂಚನ್
ಸಿನಿಮಾ ಸುದ್ದಿಗಳು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:13 am, Fri, 25 November 22