ಹರ್ಷನ ಸುಳ್ಳಿನಿಂದ ನೊಂದುಕೊಂಡ ಭುವಿ; ಕೋಟಿ ಕೋಟಿ ಒಡತಿಗೆ ಈಗ ಹಲವು ಅಡೆತಡೆ

ವರುಧಿನಿಗೆ ಹರ್ಷ ಹಾಗೂ ಭುವಿಯನ್ನು ಬೇರೆ ಮಾಡಬೇಕು ಎನ್ನುವ ಉದ್ದೇಶ ಇದೆ. ಇದಕ್ಕಾಗಿ ಆಕೆ ಸಾಕಷ್ಟು ಬಾರಿ ಪ್ರಯತ್ನಪಟ್ಟಿದ್ದಾಳೆ. ಆದರೆ, ಯಾವ ಪ್ಲ್ಯಾನ್ ಕೂಡ ಯಶಸ್ವಿ ಆಗಿಲ್ಲ.

ಹರ್ಷನ ಸುಳ್ಳಿನಿಂದ ನೊಂದುಕೊಂಡ ಭುವಿ; ಕೋಟಿ ಕೋಟಿ ಒಡತಿಗೆ ಈಗ ಹಲವು ಅಡೆತಡೆ
ಭುವಿ-ಹರ್ಷ
TV9kannada Web Team

| Edited By: Rajesh Duggumane

Nov 25, 2022 | 8:24 AM

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ರತ್ನಮಾಲಾ ತನ್ನ ಎಲ್ಲಾ ಆಸ್ತಿಯನ್ನು ಭುವಿ ಹೆಸರಿಗೆ ಬರೆದಿದ್ದಾಳೆ ಎಂಬ ವಿಚಾರ ಹರ್ಷನಿಗೆ ಗೊತ್ತಾಗಿದೆ. ಇದನ್ನು ಕೇಳಿ ಹರ್ಷನಿಗೆ ಏನು ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ. ಆತನಿಗೆ ಈ ವಿಚಾರ ಶಾಕ್ ತಂದಿದೆ. ಇದರ ಲಾಭವನ್ನು ಪಡೆಯಲು ವರುಧಿನಿ ಮುಂದಾಗಿದ್ದಾಳೆ. ಆಕೆ ಹಲವು ಪ್ಲ್ಯಾನ್​​ಗಳನ್ನು ಮಾಡುತ್ತಿದ್ದಾಳೆ. ಈ ಪ್ಲ್ಯಾನ್​ನಿಂದ ಹರ್ಷ ಹಾಗೂ ಭುವಿ ಮಧ್ಯೆ ವೈಮನಸ್ಸು ಮೂಡಬಹುದು ಎನ್ನುವ ಸೂಚನೆ ಸಿಕ್ಕಿದೆ.

ಹರ್ಷನ ಸುಳ್ಳು

ವರುಧಿನಿಗೆ ಹರ್ಷ ಹಾಗೂ ಭುವಿಯನ್ನು ಬೇರೆ ಮಾಡಬೇಕು ಎನ್ನುವ ಉದ್ದೇಶ ಇದೆ. ಇದಕ್ಕಾಗಿ ಆಕೆ ಸಾಕಷ್ಟು ಬಾರಿ ಪ್ರಯತ್ನಪಟ್ಟಿದ್ದಾಳೆ. ಆದರೆ, ಯಾವ ಪ್ಲ್ಯಾನ್ ಕೂಡ ಯಶಸ್ವಿ ಆಗಿಲ್ಲ. ಹರ್ಷನ ಬಿಟ್ಟುಕೊಡುವಂತೆ ಭುವಿ ಬಳಿ ಮದುವೆಯಂದು ವರು ಕೇಳಿದ್ದಳು. ಆದರೆ, ವರ್ಕೌಟ್ ಆಗಿಲ್ಲ. ಈಗ ಮದುವೆ ಆದ ನಂತರವೂ ವರುಧಿನಿ ಪ್ರಯತ್ನ ನಿಲ್ಲಿಸಿಲ್ಲ. ಈಗ ಆಕೆ ಹೊಸ ಅಸ್ತ್ರದೊಂದಿಗೆ ಬಂದಿದ್ದಾಳೆ.

‘ಹರ್ಷನಿಗೆ ಆಸ್ತಿ ವಿಚಾರ ಮೊದಲೇ ಗೊತ್ತಿತ್ತು. ರತ್ನಮಾಲಾ ಈ ವಿಚಾರವನ್ನು ಹರ್ಷನಿಗೆ ಮೊದಲೇ ಹೇಳಿದ್ದಳು’ ಎಂಬುದನ್ನು ಭುವಿ ಬಳಿ ವರುಧಿನಿ ಹೇಳಿದ್ದಳು. ಆದರೆ, ಇದನ್ನು ಭುವಿ ನಂಬಿಲ್ಲ. ವರುಧಿನಿ ಸುಳ್ಳು ಹೇಳುತ್ತಿದ್ದಾಳೆ ಎಂದು ಭುವಿಗೆ ಅನಿಸುತ್ತಲೇ ಇದೆ. ಈ ವಿಚಾರದಲ್ಲಿ ಸ್ಪಷ್ಟನೆ ಕೇಳಲು ಭುವಿ ಹರ್ಷನ ಬಳಿ ತೆರಳಿದ್ದಳು.

‘ಹರ್ಷ ಅವರೇ ನಿಜವಾಗಿ ಹೇಳಿ. ನಿಮಗೆ ರತ್ನಮಾಲಾ ನನ್ನ ಹೆಸರಿಗೆ ಆಸ್ತಿ ಬರೆದಿಟ್ಟ ವಿಚಾರ ಮೊದಲೇ ಗೊತ್ತಿತ್ತೇ’ ಎಂದು ಕೇಳಿದ್ದಾಳೆ ಭುವಿ. ಇದಕ್ಕೆ ಹರ್ಷ ‘ಇಲ್ಲ’ ಎನ್ನುವ ಉತ್ತರ ಹೇಳಬೇಕಿತ್ತು. ಆದರೆ, ಹರ್ಷ ಸುಳ್ಳು ಹೇಳಿದ್ದಾನೆ. ಇದಕ್ಕೆ ಹೌದು ಎನ್ನುವ ಉತ್ತರ ಅವನ ಕಡೆಯಿಂದ ಬಂದಿದೆ.

ವರ್ಕ್ ಆಗುತ್ತಿದೆ ವರುಧಿನಿ ಪ್ಲ್ಯಾನ್

ಭುವಿಯನ್ನು ಹರ್ಷ ಆಸ್ತಿಗೋಸ್ಕರ ಮದುವೆ ಆಗಿದ್ದಾನೆ ಎಂದು ಅರ್ಥ ಬರುವ ರೀತಿಯಲ್ಲಿ ಬಿಂಬಿಸಿದ್ದಳು ವರುಧಿನಿ. ಈಗ ಹರ್ಷ ಹೇಳಿದ ಸುಳ್ಳು ವರುಧಿನಿ ಹೇಳಿದ ಸುಳ್ಳು ತಾಳೆ ಆಗಿದೆ. ಇದರಿಂದ ಭುವಿ ಗೊಂದಲಕ್ಕೆ ಒಳಗಾಗಿದ್ದಾಳೆ. ಹರ್ಷ ತನಗೆ ಮೋಸ ಮಾಡಿದ್ದಾನೆ ಎಂದು ಆಕೆಗೆ ಅನಿಸಿದೆ.

ರತ್ನಮಾಲಾ ಮಾತು

ಭುವಿಗೆ ರತ್ನಮಾಲಾ ಜತೆ ಒಳ್ಳೆಯ ಒಡನಾಟ ಇತ್ತು. ಈಗ ಬಿಟ್ಟು ಹೋದ ನಂತರವೂ ರತ್ನಮಾಲಾ ನೆನಪು ಕಾಡುತ್ತಿದೆ. ಮನೆಯಲ್ಲಿ ಧೂಪ ಹಾಕಲು ಭುವಿ ಬಂದಿದ್ದಳು. ಆಗ ಆಕೆಗೆ ರತ್ನಮಾಲಾ ಬಂದಂತೆ ಅನಿಸಿದೆ. ‘ಭುವಿ, ಯಾಕಮ್ಮ ಬೇಸರದಲ್ಲಿ ಇದ್ದೀಯಾ? ನನ್ನ ಮಗ ಮೋಸ ಮಾಡಿದ್ದಾನೆ ಎಂದು ನಿನಗೆ ಅನಿಸಿದೆಯಾ? ನನ್ನ ಮಗ ಯಾರಿಗೂ ಮೋಸ ಮಾಡಿಲ್ಲ. ಅವನನ್ನು ನಿನಗೆ ವಹಿಸಿದ್ದು ನಾನು. ಅಂದರೆ ನಾನು ಮೋಸ ಮಾಡುತ್ತಿದ್ದೀನಿ ಅಂತ ಅರ್ಥನಾ? ಈ ರೀತಿಯ ಗೊಂದಲ ಸ್ಥಿತಿಯಲ್ಲಿ ಕೊಂಚ ಆಲೋಚಿಸುವುದು ಒಳ್ಳೆಯದು. ಏಕಾಏಕಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಭುವಿ’ ಎಂದು ರತ್ನಮಾಲಾ ಹೇಳಿದಂತೆ ಅನಿಸಿದೆ. ಕಣ್ತೆರೆದು ನೋಡುವಾಗ ರತ್ನಮಾಲಾ ಮಾಯವಾಗಿದ್ದಳು.

ಸಾನಿಯಾ ಪೇಚಾಟ

ಎಂಡಿ ಪಟ್ಟ ಕಳೆದುಕೊಂಡು ಸಾನಿಯಾಗೆ ಪೇಚಾಟ ಶುರುವಾಗಿದೆ. ಅವಳನ್ನು ಎಂಡಿಪಟ್ಟದಿಂದ ತೆಗೆದ ನಂತರದಲ್ಲಿ ಬಾಲ ಸುಟ್ಟ ಬೆಕ್ಕಿನಂತೆ ಆಗಿದ್ದಾಳೆ. ಈ ವಿಚಾರದಲ್ಲಿ ಕೋರ್ಟ್​ಗೆ ಹೋಗಲು ನಿರ್ಧರಿಸಿದ್ದಾಳೆ. ಇದರಲ್ಲಿ ಸಾನಿಯಾ ಯಶಸ್ಸು ಕಾಣಬಹುದು. ಇಡೀ ಆಸ್ತಿ ಭುವಿ ಹೆಸರಲ್ಲಿದೆ. ಹೀಗಾಗಿ, ಸಾನಿಯಾಳನ್ನು ಎಂಡಿ ಪಟ್ಟದಿಂದ ತೆಗೆಯುವ ಹಕ್ಕು ಇರುವುದು ಭುವಿಗೆ. ಹೀಗಾಗಿ, ಸಾನಿಯಾ ಪ್ರಯತ್ನ ಯಶಸ್ಸು ಕೊಡಬಹುದು.

ಇದನ್ನೂ ಓದಿ

ಶ್ರೀಲಕ್ಷ್ಮಿ ಎಚ್.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada