Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರ್ಷ-ಭುವಿನ ಬೇರೆ ಮಾಡೋಕೆ ಮಾಸ್ಟರ್​ ಪ್ಲ್ಯಾನ್ ಮಾಡಿದ ವರುಧಿನಿ

ಹರ್ಷ ಒಂದೇ ಸಮನೆ ಕಣ್ಣೀರು ಹಾಕುತ್ತಿದ್ದಾನೆ. ಅಮ್ಮನನ್ನು ಕಳೆದುಕೊಂಡು ಆತನಿಗೆ ದಿಕ್ಕೇ ತೋಚದಂತೆ ಆಗಿದೆ. ಪುರೋಹಿತರು ರತ್ನಮಾಲಾ ಮೃತದೇಹಕ್ಕೆ ಶವ ಎಂದು ಹೇಳಿದ್ದಕ್ಕೆ ಆತ ಕೋಪಗೊಂಡಿದ್ದಾನೆ.

ಹರ್ಷ-ಭುವಿನ ಬೇರೆ ಮಾಡೋಕೆ ಮಾಸ್ಟರ್​ ಪ್ಲ್ಯಾನ್ ಮಾಡಿದ ವರುಧಿನಿ
ಭುವಿ-ಹರ್ಷ
Follow us
TV9 Web
| Updated By: ಮದನ್​ ಕುಮಾರ್​

Updated on: Nov 11, 2022 | 9:39 AM

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
Image
‘ಕನ್ನಡತಿ’ ಧಾರಾವಾಹಿಯಲ್ಲಿ ಕೊನೆಯಾಗಲಿದೆ ರತ್ನಮಾಲಾ ಪಾತ್ರ? ಅನುಮಾನ ಹುಟ್ಟಿಸಿತು ಆ ಒಂದು ಘಟನೆ
Image
ರತ್ನಮಾಲಾ ಚಿಂತೆಗೆ ಕಾರಣವಾಗಿದ್ದು ಸಾನಿಯಾ ಅಲ್ಲ ಹರ್ಷ; ಬೇಸರ ತೋಡಿಕೊಂಡ ಅಮ್ಮಮ್ಮ
Image
ಏಕವಚನದಲ್ಲಿ ಬೈಸಿಕೊಂಡು, ಆಸ್ಪತ್ರೆಯಲ್ಲಿ ನಿದ್ರಿಸಿದ ಸಾನಿಯಾ; ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಾ ರತ್ನಮಾಲಾ ಸೊಸೆ?
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ರತ್ನಮಾಲಾ ನಿಧನ ಹೊಂದಿದ್ದಾಳೆ. ಶವವನ್ನು ಅಂತ್ಯಸಂಸ್ಕಾರ ಮಾಡುವ ಜಾಗಕ್ಕೆ ತೆಗೆದುಕೊಂಡು ಹೋಗಲಾಗುತ್ತಿದೆ. ಎಲ್ಲರೂ ಕಣ್ಣೀರು ಹಾಕುತ್ತಿದ್ದಾರೆ. ಮುಂದೇನು ಎನ್ನುವ ಬಗ್ಗೆ ಯಾರಿಗೂ ಉತ್ತರ ಸಿಗುತ್ತಿಲ್ಲ. ಎಲ್ಲರೂ ಸದ್ಯ ಶೋಕದಲ್ಲಿದ್ದಾರೆ. ಈ ಮಧ್ಯೆ ವರುಧಿನಿ ಹಾಗೂ ಸಾನಿಯಾ ತಮಗೆ ಬೇಕಾದ್ದನ್ನು  ಪಡೆದುಕೊಳ್ಳಲು ಮಾಸ್ಟರ್​ ಪ್ಲ್ಯಾನ್ ರೂಪಿಸುತ್ತಾ ಇದ್ದಾರೆ.

ಹರ್ಷನ ಕಣ್ಣೀರು

ಹರ್ಷ ಒಂದೇ ಸಮನೆ ಕಣ್ಣೀರು ಹಾಕುತ್ತಿದ್ದಾನೆ. ಅಮ್ಮನನ್ನು ಕಳೆದುಕೊಂಡು ಆತನಿಗೆ ದಿಕ್ಕೇ ತೋಚದಂತೆ ಆಗಿದೆ. ಪುರೋಹಿತರು ರತ್ನಮಾಲಾ ಮೃತದೇಹಕ್ಕೆ ಶವ ಎಂದು ಹೇಳಿದ್ದಕ್ಕೆ ಆತ ಕೋಪಗೊಂಡಿದ್ದಾನೆ. ‘ಅಮ್ಮಮ್ಮ ಈಗತಾನೇ ಮಾತನಾಡುತ್ತಿದ್ದಳು. ನೀವು ಈಗ ಬಂದು ಇದಕ್ಕೆ ಶವ ಎಂದರೆ ಹೇಗೆ. ಆಕೆ ಮರಳಿ ಬರಬಹುದು, ಆಕೆ ನಿದ್ರೆ ಮಾಡಿರಬಹುದು’ ಎಂದೆಲ್ಲ ಹರ್ಷ ಹೇಳಿದ್ದಾನೆ.

‘ಅಮ್ಮಮ್ಮ ಮಲಗಿರಬಹುದು ಅಲ್ಲವಾ ಭುವಿ. ಆಕೆ ನಿದ್ರೆ ಮಾಡುತ್ತಿದ್ದಾಳೆ. ಆಕೆಗೆ ಏನೂ ಆಗಿಲ್ಲ’ ಎಂದು ಹರ್ಷ ಪದೇಪದೇ ಹೇಳಿದ್ದಾನೆ. ಆತ ಈ ಕಟು ಸತ್ಯವನ್ನು ಒಪ್ಪಿಕೊಳ್ಳೋಕೆ ರೆಡಿ ಇಲ್ಲ. ಇದಕ್ಕೆ ಆಕೆ ಬೇಸರಗೊಂಡಿದ್ದಾಳೆ. ‘ಹರ್ಷ ಅವರೇ ರತ್ನಮಾಲಾ ನಮ್ಮನ್ನು ಬಿಟ್ಟು ಹೋಗಿದ್ದಾಳೆ. ಈ ಸತ್ಯವನ್ನು ನಾವು ಒಪ್ಪಿಕೊಳ್ಳಲೇಬೇಕಿದೆ. ದಯವಿಟ್ಟು ವಾಸ್ತವಕ್ಕೆ ಬನ್ನಿ’ ಎಂದು ಅಂಗಲಾಚಿದ್ದಾಳೆ. ಆದರೆ, ಅಮ್ಮಮ್ಮ ಇಲ್ಲ ಎಂಬಸತ್ಯವನ್ನು ಆತನಿಗೆ ಒಪ್ಪಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ.

ವರುಧಿನಿ ಮಾಸ್ಟರ್​ ಪ್ಲ್ಯಾನ್

ಹರ್ಷನನ್ನು ವರುಧಿನಿ ಪ್ರೀತಿಸುತ್ತಿದ್ದಳು. ಈ ವಿಚಾರವನ್ನು ಆಕೆ ಸಾಕಷ್ಟು ಬಾರಿ ಹೇಳಿದ್ದಾಳೆ. ಆದರೆ, ಹರ್ಷ ಇದನ್ನು ಕಿವಿಮೇಲೆ ಹಾಕಿಕೊಂಡಿಲ್ಲ. ಆಕೆಯನ್ನು ದ್ವೆಷಿಸೋಕೆ ಶುರು ಮಾಡಿದ್ದ. ಭುವಿಗೆ ಹತ್ತಿರವಾದಂತೆಲ್ಲ ವರುಧಿನಿಯಿಂದ ದೂರವಾಗಿದ್ದ ಹರ್ಷ. ಈ ವಿಚಾರದಲ್ಲಿ ಆಕೆಗೆ ಬೇಸರ ಇದೆ. ಈಗ ಹರ್ಷ ಹಾಗೂ ಭುವಿಯನ್ನು ದೂರ ಮಾಡಿ ತಾನೇ ಹರ್ಷನ ಪತ್ನಿ ಆಗಬೇಕು ಎನ್ನುವ ಆಲೋಚನೆ ವರುಧಿನಿಯನ್ನು ಕಾಡುತ್ತಿದೆ.

ಭುವಿ ಹೆಸರಿಗೆ ರತ್ನಮಾಲಾ ವಿಲ್ ವಿಚಾರ ಬರೆದಿಟ್ಟಿದ್ದಾಳೆ. ಈ ವಿಚಾರ ವರುಧಿನಿಗೆ ಬಿಟ್ಟು ಬೇರಾರಿಗೂ ತಿಳಿದಿಲ್ಲ. ರತ್ನಮಾಲಾ ಸಾಯುವುದಕ್ಕೂ ಮುನ್ನ ಈ ವಿಚಾರವನ್ನು ರಿವೀಲ್ ಮಾಡಿದ್ದಳು. ಅನುಮಾನಗೊಂಡ ವರುಧಿನಿ ನೇರವಾಗಿ ಭುವಿಯ ಮನೆಗೆ ಹೋಗಿ ಹುಡುಕಾಡಿದ್ದಳು. ಆಗ ಅಸಲಿ ವಿಚಾರ ಗೊತ್ತಾಗಿತ್ತು. ಭುವಿ ಹೆಸರಿಗೆ ಸಂಪೂರ್ಣ ಆಸ್ತಿ ಇರುವ ವಿಚಾರ ಗೊತ್ತಾಗಿತ್ತು.

ಈಗ ಈ ವಿಚಾರವನ್ನೇ ಇಟ್ಟುಕೊಂಡು ಸೇಡು ತೀರಿಸಿಕೊಳ್ಳಲು ವರು ನಿರ್ಧರಿಸಿದ್ದಾಳೆ. ಹೇಗಾದರೂ ಮಾಡಿ ವಿಲ್ ವಿಚಾರವನ್ನು ರಿವೀಲ್ ಮಾಡದೇ ಲೀಕ್ ಮಾಡಿಸಬೇಕು ಎನ್ನುವ ಆಲೋಚನೆಯಲ್ಲಿದ್ದಾಳೆ. ಇದರಿಂದ ಭುವಿ ಹಾಗೂ ಹರ್ಷನ ಮಧ್ಯೆ ವೈಮನಸ್ಸು ಮೂಡಬೇಕು ಎಂಬುದು ವರುಧಿನಿ ಪ್ಲ್ಯಾನ್. ಇದು ಯಶಸ್ಸು ಕಾಣಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಸಾನಿಯಾಗೆ ಬಂತು ಅನುಮಾನ

ರತ್ನಮಾಲಾ ಸಾಯುವುದಕ್ಕೂ ಮುನ್ನ ವರುಧಿನಿಯ ಬಳಿ ಮಾತನಾಡಿದ್ದಳು. ಏನನ್ನೋ ಹೇಳಬೇಕು ಎಂದುಕೊಂಡಿದ್ದಳು. ಆದರೆ, ಇದು ಸಾಧ್ಯವಾಗಲೇ ಇಲ್ಲ. ಆದರೆ, ವಿಲ್ ವಿಚಾರವನ್ನು ವರುಧಿನಿ ಬಳಿ ಹೇಳಿದ್ದಳು. ಈ ಬಗ್ಗೆ ಸಾನಿಯಾಗೆ ಅನುಮಾನ ಕಾಡಿದೆ. ‘ರತ್ನಮಾಲಾ ಕೊನೆಯದಾಗಿ ಹೇಳಿದ್ದೇನು?’ ಎಂದು ಪ್ರಶ್ನೆ ಮಾಡಿದ್ದಾಳೆ ಸಾನಿಯಾ. ‘ಏನೋ ಹೇಳಿದ್ದಾರೆ. ಇನ್ಮೇಲೇನಿದ್ರು ಅದರದ್ದೇ ಚರ್ಚೆ. ಅದನ್ನೇ ಈಗೇ ಹೇಳಲ್ಲ’ ಎಂದು ವರು ಹೇಳಿದ್ದಾಳೆ. ಈ ಮಾತಿನಿಂದ ಸಾನಿಯಾಗೆ ಮತ್ತಷ್ಟು ಅನುಮಾನ ಹೆಚ್ಚಿದೆ. ರತ್ನಮಾಲಾ ಸಾಯುವುದಕ್ಕೂ ಮೊದಲು ವರು ಬಳಿ ಯಾವುದೋ ವಿಚಾರ ಹೇಳಿದ್ದಂತೂ ನಿಜ ಎಂಬುದು ಸಾನಿಯಾಗೆ ಗೊತ್ತಾಗಿದೆ. ಆದರೆ, ಆ ವಿಚಾರ ಆಸ್ತಿ ಬಗೆಗಿನದ್ದು ಎನ್ನುವುದು ಗೊತ್ತಿಲ್ಲ.

ಶ್ರೀಲಕ್ಷ್ಮಿ ಎಚ್.