AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Honganasu: ಮಧ್ಯರಾತ್ರಿಲಿ, ಹೈವೇ ರಸ್ತೆಲಿ ರಿಷಿ ಜತೆ ಪ್ರೀತಿಯಲ್ಲಿ ಕಳೆದುಹೋದ ವಸು

Honganasu Serial Update: ಮಿಷನ್ ಎಜುಕೇಶನ್ ಪ್ರಾಜೆಕ್ಟ್‌ ನೀವೇ ನೋಡಿಕೊಳ್ಳಬೇಕು ಎಂದು ರಿಷಿ ಕೈ ಹಿಡಿದು ವಸು ಕೇಳಿಕೊಂಡಳು. ರಿಷಿ ರೊಮ್ಯಾಂಟಿಕ್ ಮೂಡ್‌ಗೆ ಜಾರಿದ.

Honganasu: ಮಧ್ಯರಾತ್ರಿಲಿ, ಹೈವೇ ರಸ್ತೆಲಿ ರಿಷಿ ಜತೆ ಪ್ರೀತಿಯಲ್ಲಿ ಕಳೆದುಹೋದ ವಸು
ಹೊಂಗನಸು ಸೀರಿಯಲ್
TV9 Web
| Edited By: |

Updated on: Nov 10, 2022 | 12:54 PM

Share

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್​ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು.

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ಮಿಷಿನ್ ಎಜುಕೇಶನ್ ಪ್ರಾಜೆಕ್ಟ್ ಅನ್ನು ಸರ್ಕಾರಕ್ಕೆ ನೀಡಿ ಜಗತಿ ಮತ್ತು ಮಹೇಂದ್ರನನ್ನು ಡೈರೆಕ್ಟರ್ ಆಗಿ ನೇಮಕ ಮಾಡಿದ ರಿಷಿ. ಈ ನಿರ್ಧಾರ ಎಲ್ಲರ ಖುಷಿಗೆ ಕಾರಣವಾಯಿತು. ಆದರೆ ಪ್ರಾಜೆಕ್ಟ್​ನಿಂದ ಆತ ಸಂಪೂರ್ಣ ಹಿಂದೆ ಸರಿದಿದ್ದಾನೆ. ರಿಷಿ ಇಲ್ಲದೆ ಈ ಪ್ರಾಜೆಕ್ಟ್ ಹೇಗೆ ಮಾಡುವುದು ಎಂದು ಜಗತಿ ಮತ್ತು ಮಹೇಂದ್ರನಿಗೆ ಚಿಂತೆಯಾಗಿದೆ.

ಜಗತಿ ಮತ್ತು ಮಹೇಂದ್ರ ಇಬ್ಬರೂ ಪ್ರಾಜೆಕ್ಟ್‌ಗೆ ಸಂಬಂಧ ಪಟ್ಟ ಫೈಲ್‌ಗಳನ್ನು ರೆಡಿ ಮಾಡಿ ರಿಷಿಗೆ ನೋಡುವಂತೆ ಹೇಳು ಎಂದು ವಸು ಬಳಿ ಕಳುಹಿಸಿದರು. ಒಬ್ಬನೇ ಚೆಸ್ ಆಡುತ್ತಾ ಕುಳಿತಿದ್ದ ರಿಷಿ ‘ಫೈಲ್ ನೋಡಲು ಸಮಯವಿಲ್ಲ, ಹಾಗೆ ಕೊಡು’ ಎಂದು ವಸುಗೆ ಹೇಳಿದ. ಬಳಿಕ ಚೆಸ್ ಆಡುತ್ತೀಯಾ ಎಂದು ವಸುಗೆ ಕೇಳಿದ. ವಸು ಒಂದು ಕಂಡೀಷನ್ ಹಾಕಿ ಒಪ್ಪಿಕೊಂಡಳು. ಯಾರು ಸೋಲುತ್ತಾರೋ ಅವರು ಗೆದ್ದವರ ಒಂದು ಮಾತನ್ನು ನಡೆಸಿಕೊಡಬೇಕೆಂದು ವಸು ಹೇಳಿದಳು. ಒಪ್ಪಿಕೊಂಡ ರಿಷಿ ಚೆಸ್ ಆಡಲು ಮುಂದಾದ. ತಾನು ಗೆಲ್ಲುವ ಸ್ಥಿತಿಯಲ್ಲಿದ್ದರೂ ವಸುಧರಾ ಗೆಲ್ಲುವಂತೆ ಮಾಡಿದ. ಬಳಿಕ ವಸು ತನ್ನ ಕಂಡೀಷನ್ ಏನೆಂದು ಹೇಳಿದಳು.

ಯಾವ ಫೈಲ್‌ಗಳನ್ನು ನೋಡಲ್ಲ ಅಂತ ರಿಷಿ ಹೇಳಿದ್ದನೋ ಅದನ್ನು ನೋಡಿ ಕೊಡುವಂತೆ ವಸು ಕೇಳಿಕೊಂಡಳು. ಫೈಲ್‌ಗಳನ್ನು ನೋಡಲು ಹೀಗೆಲ್ಲಾ ಮಾಡಬೇಕಿತ್ತಾ ಎಂದು ರಿಷಿ ಕೇಳಿದ. ಆದರೆ ಜಗತಿಗಾಗಿ ವಸು ಏನು ಬೇಕಾದರೂ ಮಾಡಲು ಸಿದ್ಧ. ಹಾಗಾಗಿ ರಿಷಿ ಬಳಿ ಉಪಾಯದಿಂದ ಕೆಲಸ ಮಾಡಿಸಿಕೊಂಡಳು. ಕಾಲೇಜು ಮುಗಿಸಿ ರೆಸ್ಟೋರೆಂಟ್ ಕೆಲಸಕ್ಕೆ ತೆರಳಿದ ವಸು, ರಿಷಿಗಾಗಿ ಕಾಯುತ್ತಿದ್ದಳು. ಪ್ರತಿದಿನ ರೆಸ್ಟೋರೆಂಟ್‌ಗೆ ಬರುತ್ತಿದ್ದ ರಿಷಿ ಇನ್ನೂ ಯಾಕೆ ಬಂದಿಲ್ಲ ಎಂದು ಯೋಚಿಸುತ್ತಾ ಫೋನ್ ಮಾಡಿದಳು. ಆದರೆ ರಿಷಿ ಫೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ವಸು ರಿಷಿಯ ಅತ್ತಿಗೆ ಧರಣಿಗೆ ಕಾಲ್ ಮಾಡಿದಳು. ಆದರೆ ಧರಣಿ ಫೋನ್ ರಿಸೀವ್ ಮಾಡುವ ಮೊದಲೇ ದೇವಯಾನಿ ಫೋನ್ ತೆಗೆದುಕೊಂಡಳು. ವಸು ಫೋನ್ ಮಾಡುತ್ತಿರುವುದನ್ನು ನೋಡಿ ಶಾಕ್ ಆದಳು. ಯಾಕೆ ಕಾಲ್ ಮಾಡಿದ್ದು ಅಂತ ಕೇಳಿ ವ್ಯಂಗ್ಯವಾಡಿದಳು. ಬೇರೆಯವರ ಫೋನ್ ತೆಗೆದುಕೊಳ್ಳುವುದು ತಪ್ಪಲ್ವಾ ಅಂತ ಪ್ರಶ್ನೆ ವಸು ಮಾಡಿದಳು. ವಸು ಮಾತಿನಿಂದ ಸಿಟ್ಟಾದ ದೇವಯಾನಿ ಫೋನ್ ಕಟ್ ಮಾಡಿದಳು.

ದೇವಯಾನಿ ಮಾತನಾಡಿದ್ದನ್ನು ಕೇಳಿಕೊಂಡ ರಿಷಿ ಸೀದ ರೆಸ್ಟೋರೆಂಟ್ ಬಳಿ ತೆರಳಿದ. ಇನ್ನೇನು ಕೆಲಸ ಮುಗಿಸಿ ವಸು ಮನೆಗೆ ಹೊರಟಿದ್ದಳು. ರಿಷಿ ಬಂದಿದ್ದು ನೋಡಿ ಸಂತಸಗೊಂಡಳು. ರಿಷಿ ಕಾರು ಇಳಿದು ಬರುತ್ತಿದ್ದಂತೆ ‘ಏನಾದರೂ ಮಾತಾಡಬೇಕು ಅಂತ ಇದ್ದರೆ ತನಗೆ ಕಾಲ್ ಮಾಡು, ಅದು ಬಿಟ್ಟು ದೊಡ್ಡಮ್ಮನಿಗೆ ಯಾಕೆ ಕಾಲ್ ಮಾಡಿದ್ದು’ ಅಂತ ಕೇಳಿದ. ‘ನಿಮ್ಮ ಫೋನ್ ಸ್ವಿಚ್ ಆಫ್ ಆಗಿತ್ತು. ಹಾಗಾಗಿ’ ಎಂದು ವಸು ಹೇಳಿದರೂ ರಿಷಿ ತನ್ನ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧನಾಗಿಲ್ಲ. ಬಳಿಕ ಇಬ್ಬರೂ ಕಾರಿನಲ್ಲಿ ಹೊರಟರು. ರಾತ್ರಿ ರಸ್ತೆಯಲ್ಲಿ ಕಾರು ನಿಲ್ಲಿಸಿ ವಸು ಜೊತೆ ಮಾತಿಗಿಳಿದ ರಿಷಿ. ‘ಏನೋ ಹೇಳಬೇಕು ಅಂದಿದ್ದೆಯಲ್ಲಾ, ಏನದು’ ಅಂತ ಕೇಳಿದ. ಮಿಷನ್ ಎಜುಕೇಶನ್ ಪ್ರಾಜೆಕ್ಟ್‌ ನೀವೇ ನೋಡಿಕೊಳ್ಳಬೇಕು ಎಂದು ವಸು ರಿಷಿ ಕೈ ಹಿಡಿದು ಕೇಳಿಕೊಂಡಳು. ರಿಷಿ ರೊಮ್ಯಾಂಟಿಕ್ ಮೂಡ್‌ಗೆ ಜಾರಿದ.

ಮರುದಿನ ಬೆಳಗ್ಗೆ ಕಾಲೇಜಿಗೆ ಬಂದ ರಿಷಿ ತನ್ನ ತಂದೆ ಮಹೇಂದ್ರ ಬಂದಿದ್ದು ನೋಡಿದರೂ ಸಹ ಹಾಗೆಯೇ ಹೋದ. ಮಹೇಂದ್ರನೇ ಮಗನನ್ನು ಕರೆದು ಮಾತನಾಡಿಸಿದರೂ ಸರಿಯಾಗಿ ಮಾತನಾಡದೆ ಹೊರಟ ರಿಷಿ. ಮಹೇಂದ್ರನಿಗೆ ಮಗನನ್ನು ಬಿಟ್ಟು ಇರಲು ಸಾಧ್ಯವಾಗುತ್ತಿಲ್ಲ. ರಿಷಿ ಬಳಿ ಹೇಳಿಕೊಳ್ಳದಿದ್ದರೂ ಮನಸ್ಸಲೇ ಕೊರಗುತ್ತಿದ್ದಾನೆ ಮಹೇಂದ್ರ. ತಂದೆಯ ಮನಸ್ಸು ರಿಷಿಗೆ ಅರ್ಥವಾಗುತ್ತಾ? ಮಹೇಂದ್ರ ಮತ್ತೆ ಮನೆಗೆ ವಾಪಾಸ್ ಆಗ್ತಾನಾ? ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ