ರತ್ನಮಾಲಾ ಅಂತ್ಯಸಂಸ್ಕಾರದಲ್ಲಿ ಸಾನಿಯಾಗೆ ಆಸ್ತಿ ಚಿಂತೆ; ಜೋರಾಗಿ ನಕ್ಕೇ ಬಿಟ್ಟಳು ವರುಧಿನಿ

TV9kannada Web Team

TV9kannada Web Team | Edited By: Rajesh Duggumane

Updated on: Nov 09, 2022 | 7:00 AM

ಹರ್ಷನನ್ನು ಪಡೆಯಲೇಬೇಕು ಎಂಬ ಹುಚ್ಚು ಆಸೆ ವರುಧಿನಿಯದ್ದು. ಇದಕ್ಕಾಗಿ ಆಕೆ ಏನು ಮಾಡಲೂ ರೆಡಿ ಇದ್ದಾಳೆ. ಮತ್ತೊಂದೆಡೆ ಆಕೆಗೆ ಭುವಿ ಮೇಲೆ ದ್ವೇಷ ಹುಟ್ಟುತ್ತಿದೆ.

ರತ್ನಮಾಲಾ ಅಂತ್ಯಸಂಸ್ಕಾರದಲ್ಲಿ ಸಾನಿಯಾಗೆ ಆಸ್ತಿ ಚಿಂತೆ; ಜೋರಾಗಿ ನಕ್ಕೇ ಬಿಟ್ಟಳು ವರುಧಿನಿ
ವರು-ಸಾನಿಯಾ

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ತಾಜಾ ಸುದ್ದಿ

ಸಮಯ: ರಾತ್ರಿ 7.30

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್, ಚಿತ್ಕಲಾ ಬೀರಾದಾರ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಮನೆಯ ಪಿಲ್ಲರ್​ನಂತಿದ್ದ ರತ್ನಮಾಲಾ ನಿಧನ ಹೊಂದಿದ್ದಾಳೆ. ಆಕೆಯ ಪಾತ್ರ ಕೊನೆಯಾಗಿರುವುದು ಸಾಕಷ್ಟು ಜನರಿಗೆ ಬೇಸರ ಮೂಡಿಸಿದೆ. ಈ ಟ್ವಿಸ್ಟ್​ನಿಂದ ಅನೇಕರಿಗೆ ಬೇಸರ ಆಗಿದೆ. ರತ್ನಮಾಲಾ ಮೃತಪಟ್ಟಿದ್ದು ಮನೆಯ ಕೆಲವರಿಗೆ ಬೇಸರ ಮೂಡಿಸಿದೆ. ಇನ್ನೂ ಕೆಲವರಿಗೆ ಆಸ್ತಿಯ ಬಗ್ಗೆ ಚಿಂತೆ ಶುರುವಾಗಿದೆ. ಮತ್ತೊಂದು ಕಡೆ ವರುಧಿನಿಗೆ ವಿಲ್ ಪತ್ರ ಸಿಕ್ಕಿದೆ. ಭುವಿ ಹೆಸರಿಗೆ ಆಸ್ತಿ ಹಸ್ತಾಂತರ ಆಗಿದೆ ಎಂಬ ವಿಚಾರ ಆಕೆಗೆ ಗೊತ್ತಾಗಿದೆ. ಇದರಿಂದ ವರುಗೆ ಶಾಕ್ ಆಗಿದೆ.

ರತ್ನಮಾಲಾ ಅಂತ್ಯ ಸಂಸ್ಕಾರ

ರತ್ನಮಾಲಾಳ ಅಂತ್ಯಸಂಸ್ಕಾರ ಮಾಡಲು ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಪುರೋಹಿತರು ಮನೆಗೆ ಬಂದಿದ್ದಾರೆ. ಏನೆಲ್ಲ ಸಿದ್ಧತೆ ಆಗಬೇಕು ಎಂದು ಅವರು ಹೇಳುತ್ತಿದ್ದಾರೆ. ಆದಿಗೆ ಯಾವ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಆತ ಒಂದೇ ಸಮನೆ ಕಣ್ಣೀರು ಹಾಕುತ್ತಿದ್ದಾನೆ. ರತ್ನಮಾಲಾಳನ್ನು ಕಳೆದುಕೊಂಡ ನೋವು ಹರ್ಷನಿಗೆ ಅತಿಯಾಗಿ ಕಾಡುತ್ತಿದೆ. ಆತ ದಿಕ್ಕು ತೋಚದೆ ಕುಳಿತಿದ್ದಾನೆ.

ವರುಧಿನಿ ಮಾಸ್ಟರ್​ ಪ್ಲ್ಯಾನ್

ಹರ್ಷನನ್ನು ಪಡೆಯಲೇಬೇಕು ಎಂಬ ಹುಚ್ಚು ಆಸೆ ವರುಧಿನಿಯದ್ದು. ಇದಕ್ಕಾಗಿ ಆಕೆ ಏನು ಮಾಡಲೂ ರೆಡಿ ಇದ್ದಾಳೆ. ಮತ್ತೊಂದೆಡೆ ಆಕೆಗೆ ಭುವಿ ಮೇಲೆ ದ್ವೇಷ ಹುಟ್ಟುತ್ತಿದೆ. ‘ಈಕೆ ಮೊದಲು ನನ್ನ ಹೀರೋನ ಕಿತ್ತುಕೊಂಡಳು. ಈಗ ಹೀರೋನ ಆಸ್ತಿ ಕೂಡ ಕಿತ್ತುಕೊಂಡಿದ್ದಾಳೆ. ಇದನ್ನು ನಾನು ಒಪ್ಪಲ್ಲ. ಆಕೆಯ ವಿರುದ್ಧ ಸೇಡು ತೀರಿಸಿಕೊಳ್ಳಲೇಬೇಕು’ ಎಂದು ವರುಧಿನಿ ನಿರ್ಧಾರ ಮಾಡಿದ್ದಾಳೆ.

ಹರ್ಷನ ಪಡೆಯೋಕೆ ವರುಧಿನಿ ಏನಾದರೂ ಒಂದು ಪ್ಲ್ಯಾನ್ ರೂಪಿಸುತ್ತಲೇ ಇರುತ್ತಾಳೆ. ಈ ಬಾರಿ ರತ್ನಮಾಲಾ ಕೂಡ ಮೃತಪಟ್ಟಿದ್ದಾಳೆ. ಹೀಗಾಗಿ, ಆಕೆ ಬೇರೆಯದೇ ರೀತಿಯ ಪ್ಲ್ಯಾನ್ ರೂಪಿಸುವ ಆಲೋಚನೆಯಲ್ಲಿ ಇದ್ದಾಳೆ. ಇದು ಯಾವ ರೀತಿಯಲ್ಲಿ ಕೆಲಸ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಹರ್ಷನಿಗೆ ಹತ್ತಿರ ಆಗುವ ಆಲೋಚನೆ

ಹರ್ಷ ಸದ್ಯ ಬೇಸರದಲ್ಲಿದ್ದಾನೆ. ಹೇಗಾದರೂ ಮಾಡಿ ಆತನಿಗೆ ಹತ್ತಿರ ಆಗಬೇಕು ಎಂಬ ಆಲೋಚನೆಯಲ್ಲಿ ವರುಧಿನಿ ಇದ್ದಾಳೆ. ರತ್ನಮಾಲಾಳನ್ನು ಕರೆತಂದ ಆ್ಯಂಬುಲೆನ್ಸ್​​ನಲ್ಲಿಯೇ ಹರ್ಷ ಕೂತಿದ್ದ. ಹರ್ಷ ತುಂಬಾನೇ ಬೇಸರದಲ್ಲಿದ್ದ. ಈ ಸಂದರ್ಭವನ್ನು ವರುಧಿನಿ ಸರಿಯಾಗಿ ಬಳಸಿಕೊಂಡಿದ್ದಾಳೆ. ಹರ್ಷನ ಸಮಾಧಾನ ಮಾಡುವ ನೆಪದಲ್ಲಿ ಆತನಿಗೆ ಹತ್ತಿರ ಆಗುವ ಪ್ರಯತ್ನ ಮಾಡಿದ್ದಾಳೆ. ವರುಧಿನಿಗೆ ತಾನು ಮಾಡುತ್ತಿರುವ ಪ್ಲ್ಯಾನ್ ವರ್ಕೌಟ್ ಆಗುವ ಸೂಚನೆ ಸಿಕ್ಕಿದೆ.

ಸಾನಿಯಾ ಪ್ಲ್ಯಾನ್

ಸಾನಿಯಾ ಹಾಗೂ ಅವಳ ಮಾವ ಸುದರ್ಶನ್​ ಇಬ್ಬರೂ ಸೇರಿ ಆಸ್ತಿ ಹೊಡೆಯುವ ಆಲೋಚನೆಯಲ್ಲಿ ಇದ್ದಾಳೆ. ಒಂದು ಕಡೆ ರತ್ನಮಾಲಾಳ ಅಂತ್ಯ ಸಂಸ್ಕಾರ ನಡೆಯುತ್ತಿದ್ದರೆ ಮತ್ತೊಂದು ಕಡೆಯಲ್ಲಿ ಹರ್ಷನಿಗೆ ಸೇರಿದ ಆಸ್ತಿಯಲ್ಲಿ ಹೇಗೆ ಪಾಲು ಕೇಳಬೇಕು ಎಂದು ಆಲೋಚಿಸುತ್ತಿದ್ದಾಳೆ. ಈ ಮಾತನ್ನು ಕೇಳಿ ವರುಧಿನಿ ಸಾಕಷ್ಟು ನಕ್ಕಿದ್ದಾಳೆ. ಹರ್ಷನ ಹೆಸರಲ್ಲಿ ಆಸ್ತಿ ಇಲ್ಲ ಎನ್ನುವ ವಿಚಾರ ವರುಧಿನಿಗೆ ಮಾತ್ರ ಗೊತ್ತಿದೆ. ರತ್ನಮಾಲಾ ಬರೆದಿಟ್ಟ ವಿಲ್ ಅನ್ನು ವರು ಓದಿದ್ದಾಳೆ. ಹೀಗಾಗಿ ಸಾನಿಯಾ ಮಾತು ಆಕೆಗೆ ನಗು ತರಿಸಿದೆ. ಹೀಗಾಗಿ ಜೋರಾಗಿ ನಕ್ಕೇ ಬಿಟ್ಟಿದ್ದಾಳೆ. ‘ಹರ್ಷನಿಗೆ ಸೇರಿರೋ ಆಸ್ತಿಯಲ್ಲಿ ಪಾಲು ತೆಗೆದುಕೊಳ್ಳಬೇಕು ಅಂತ ಆಲೋಚನೆ ಮಾಡುತ್ತಿದ್ದೀರಲ್ಲ. ಅದಕ್ಕೆ ನಗು ಬಂತು ಅಷ್ಟೇ’ ಎಂದು ವರುಧಿನಿ ನಕ್ಕಿದ್ದಾಳೆ. ಈ ನಗುವಿನ ಹಿಂದಿರುವ ಅರ್ಥವೇನು ಎಂಬುದು ಸಾನಿಯಾಗೆ ಅರ್ಥವಾಗಿಲ್ಲ. ಒಂದೊಮ್ಮೆ ಆಸ್ತಿಯೆಲ್ಲ ಭುವಿ ಹೆಸರಿಗೆ ಸೇರಿದೆ ಎಂದು ಗೊತ್ತಾದರೆ ಆಕೆ ಹೇಗೆ ಪ್ರತಿಕ್ರಿಯಿಸುತ್ತಾಳೆ ಅನ್ನೋದನ್ನು ನೋಡಬೇಕಿದೆ.

ಇದನ್ನೂ ಓದಿ

ಶ್ರೀಲಕ್ಷ್ಮಿ ಎಚ್.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada