ಉರಿಯುತ್ತಿರುವ ರತ್ನಮಾಲಾ ಚಿತೆ ಎದುರು ಹೊಸ ಪ್ರತಿಜ್ಞೆ ಮಾಡಿದ ವರು; ಹರ್ಷ-ಭುವಿಗೆ ಇನ್ನಿದೆ ಕಷ್ಟ

TV9kannada Web Team

TV9kannada Web Team | Edited By: Rajesh Duggumane

Updated on: Nov 12, 2022 | 7:00 AM

ಶವ ಸಂಸ್ಕಾರ ಮಾಡಲು ಹರ್ಷ ಹಿಂದೇಟು ಹಾಕುತ್ತಿದ್ದ. ಆ ಸಂದರ್ಭದಲ್ಲಿ ಭುವಿ ಒಂದಷ್ಟು ಮಾತನ್ನು ಹರ್ಷನಿಗೆ ಹೇಳಿದ್ದಾಳೆ. ಈ ಮಾತುಗಳನ್ನು ಕೇಳುವಾಗ ಹರ್ಷನಿಗೆ ಅಮ್ಮಮ್ಮನೇ ಎದುರು ನಿಂತು ಹೇಳುತ್ತಿದ್ದಾಳೆ ಎಂದು ಅನಿಸಿದೆ.

ಉರಿಯುತ್ತಿರುವ ರತ್ನಮಾಲಾ ಚಿತೆ ಎದುರು ಹೊಸ ಪ್ರತಿಜ್ಞೆ ಮಾಡಿದ ವರು; ಹರ್ಷ-ಭುವಿಗೆ ಇನ್ನಿದೆ ಕಷ್ಟ
ಭುವಿ-ವರು-ಹರ್ಷ

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ತಾಜಾ ಸುದ್ದಿ

ಸಮಯ: ರಾತ್ರಿ 7.30

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ರತ್ನಮಾಲಾಳನ್ನು ಕಟ್ಟಿಗೆಯ ರಾಶಿಯ ಮೇಲೆ ಮಲಗಿಸಲಾಗಿದೆ. ಚಿತೆಗೆ ಬೆಂಕಿ ಇಡಲು ಸಾಧ್ಯವಾಗದೇ ಹರ್ಷ ಒದ್ದಾಡುತ್ತಿದ್ದ. ಆತನಿಗೆ ಧೈರ್ಯ ತುಂಬುವ ಕೆಲಸವನ್ನು ಭುವಿ ಮಾಡುತ್ತಿದ್ದಾಳೆ. ಆದರೆ, ಹರ್ಷ ಅದನ್ನು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆತ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾನೆ. ಮತ್ತೊಂದು ಕಡೆ ವರುಧಿನಿ ಹೊಸ ಹೊಸ ಪ್ಲ್ಯಾನ್ ರೂಪಿಸುತ್ತಿದ್ದಾಳೆ.

ನಡೆಯಿತು ರತ್ನಮಾಲಾ ಅಂತ್ಯಸಂಸ್ಕಾರ

ರತ್ನಮಾಲಾ ಅಂತ್ಯಸಂಸ್ಕಾರ ನಡೆಯುವುದಕ್ಕೂ ಮೊದಲು ಹರ್ಷ ತುಂಬಾನೇ ಕುಗ್ಗಿದ್ದ. ಆತನ ದೇಹದಲ್ಲಿ ಚಲನೆ ಕಾಣುತ್ತಿಲ್ಲ. ಕಾಲುಗಳು ನಡುಗುತ್ತಿದ್ದವು. ಅವನಿಗೆ ರತ್ನಮಾಲಾ ಆಡುತ್ತಿದ್ದ ಹಳೆಯ ಮಾತುಗಳು ನೆನಪಿಗೆ ಬರುತ್ತಿವೆ. ಇಷ್ಟು ಬೇಗ ಆಕೆ ತನ್ನನ್ನು ಏಕೆ ಬಿಟ್ಟು ಹೋದಳು ಎಂದು ಪದೇಪದೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾನೆ. ಆದರೆ, ಆತನಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಮ್ಮಮ್ಮ ಬಿಟ್ಟು ಹೋಗಿದ್ದಾಳೆ ಅನ್ನೋದನ್ನು ಒಪ್ಪಿಕೊಳ್ಳಲು ಆತನಿಗೆ ಸಾಧ್ಯವಾಗುತ್ತಿಲ್ಲ. ಇದೇ ನೋವಲ್ಲಿ ಆತ ರತ್ನಮಾಲಾಳ ಚಿತೆಗೆ ಬೆಂಕಿ ಇಟ್ಟಿದ್ದಾನೆ. ಈ ವೇಳೆ ಎಲ್ಲರೂ ಕಣ್ಣೀರು ಹಾಕಿದ್ದಾರೆ. ತಂದೆಯನ್ನು ಕಳೆದುಕೊಂಡಾಗ ಎಷ್ಟು ನೋವಾಗಿತ್ತೋ ಅದಕ್ಕಿಂತ ಹೆಚ್ಚಿನ ನೋವನ್ನು ಭುವಿ ಈಗ ಅನುಭವಿಸುತ್ತಿದ್ದಾಳೆ.

ಭುವಿಯಲ್ಲಿ ಅಮ್ಮಮ್ಮನ ಕಂಡ ಹರ್ಷ

ಭುವಿಗೂ ರತ್ನಮಾಲಾ ಪಾತ್ರಕ್ಕೂ ಸಾಕಷ್ಟು ಸಾಮ್ಯತೆ ಇದೆ. ಈ ವಿಚಾರವನ್ನು ವೀಕ್ಷಕರು ಕೂಡ ಒಪ್ಪಿಕೊಳ್ಳುತ್ತಾರೆ. ಇಬ್ಬರೂ ಬಾಯಿಗೆ ಬಂದಂತೆ ಮಾತನಾಡುವವರು ಅಲ್ಲವೇ ಅಲ್ಲ. ಇಬ್ಬರೂ ಯೋಚಿಸಿ ಮಾತನಾಡುತ್ತಾರೆ. ಮಾತನಾಡಿದ ನಂತರ ಆ ಮಾತನ್ನು ಹಿಂದಕ್ಕೆ ಪಡೆಯುವುದೇ ಇಲ್ಲ. ಈ ಕಾರಣಕ್ಕೆ ರತ್ನಮಾಲಾಗೆ ಭುವಿ ಇಷ್ಟವಾಗಿದ್ದಳು. ಇಬ್ಬರೂ ಹಸಿರುಪೇಟೆಯವರು ಅನ್ನೋದು ಮತ್ತೊಂದು ವಿಶೇಷ. ಭುವಿಯಲ್ಲಿ ರತ್ನಮಾಲಾಳನ್ನು ಹರ್ಷ ಈಗ ಕಾಣುತ್ತಿದ್ದಾನೆ.

ಶವ ಸಂಸ್ಕಾರ ಮಾಡಲು ಹರ್ಷ ಹಿಂದೇಟು ಹಾಕುತ್ತಿದ್ದ. ಆ ಸಂದರ್ಭದಲ್ಲಿ ಭುವಿ ಒಂದಷ್ಟು ಮಾತನ್ನು ಹರ್ಷನಿಗೆ ಹೇಳಿದ್ದಾಳೆ. ಈ ಮಾತುಗಳನ್ನು ಕೇಳುವಾಗ ಹರ್ಷನಿಗೆ ಅಮ್ಮಮ್ಮನೇ ಎದುರು ನಿಂತು ಹೇಳುತ್ತಿದ್ದಾಳೆ ಎಂದು ಅನಿಸಿದೆ. ಆತನಿಗೆ ಭುವಿಯಲ್ಲಿ ರತ್ನಮಾಲಾ ಕಾಣುತ್ತಿದ್ದಾಳೆ. ‘ರತ್ನಮಾಲಾ ಹೊರಟಾಗಿದೆ. ಅವಳ ಆತ್ಮಕ್ಕೆ ಶಾಂತಿ ಸಿಗಬೇಕು ಎಂದರೆ ಈ ಕೆಲಸವನ್ನು ಮಾಡಬೇಕು. ಬೇಸರ ಮಾಡಿಕೊಳ್ಳಬೇಡಿ’ ಎಂದು ಭುವಿ ಹೇಳಿದ್ದಾಳೆ. ಆಗ ಭುವಿಯ ಬದಲು ಹರ್ಷನಿಗೆ ರತ್ನಮಾಲಾ ಕಾಣಿಸಿದ್ದಾಳೆ.

ವರುಧಿನಿ ಶಪಥ

ಚಿತೆ ಉರಿಯುತ್ತಿತ್ತು. ಹರ್ಷ ಹಾಗೂ ಭುವಿ ದೂರ ನಿಂತಿದ್ದರು. ಅಲ್ಲಿಗೆ ಬಂದ ವರುಧಿನಿ ಇಬ್ಬರ ಕೈಯನ್ನು ಜೋಡಿಸಿದ್ದಾಳೆ. ‘ರತ್ನಮಾಲಾ ಮೇಡಂ, ನೀವು ಹೊರಟೇ ಬಿಟ್ರಿ. ನಿಮ್ಮ ಮಗನನ್ನು ನನಗೆ ಮದುವೆ ಮಾಡಿ ಕೊಡಬೇಕಿತ್ತು. ಆದರೆ, ಹರ್ಷ ಇನ್ಯಾರಿಗೋ ಪತಿ ಆಗಿದ್ದಾನೆ. ನಾನು ಇದನ್ನು ಸಹಿಸುವುದಿಲ್ಲ. ಇವರಿಬ್ಬರನ್ನು ಬೇರೆ ಮಾಡಿಯೇ ತೀರುತ್ತೇನೆ’ ಎಂದು ಚಿತೆಯ ಎದುರೇ ವರುಧಿನಿ ಶಪಥ ಮಾಡಿದ್ದಾಳೆ. ಹರ್ಷ ಹಾಗೂ ಭುವಿ ಬೇರೆ ಮಾಡಲು ಆಕೆ ಯಾವ ಪ್ಲ್ಯಾನ್ ಮಾಡುತ್ತಾಳೆ ಅನ್ನೋದು ಸದ್ಯದ ಕುತೂಹಲ.

ರಂಪಾಟ ನಡೆಸಿದ ಸಾನಿಯಾ

ಸಾನಿಯಾಗೆ ಮೊದಲಿನಿಂದಲೂ ಅಸಮಾಧಾನಗಳೇ ಜಾಸ್ತಿ. ಈಗ ರತ್ನಮಾಲಾ ಮೃತಪಟ್ಟ ಬೆನ್ನಲ್ಲೇ ರಂಪಾಟ ಆರಂಭಿಸಿದ್ದಾಳೆ. ರತ್ನಮಾಲಾ ಆಸ್ತಿಗೆ ಮುಂದಿನ ವಾರಸುದಾರ ಯಾರು ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಸಂಬಂಧಿಸಿ ಟಿವಿಯಲ್ಲಿ ಪ್ರಸಾರವಾದ ಸುದ್ದಿಗೆ ಸಾನಿಯಾ ಸಿಟ್ಟಾಗಿದ್ದಾಳೆ. ನನಗೆ ಯಾರೂ ಗೌರವವನ್ನೇ ನೀಡುತ್ತಿಲ್ಲ ಎಂದು ಸಾನಿಯಾ ಕೂಗಾಡಿದ್ದಾಳೆ. ಈಕೆಯ ಹಾರಾಟವನ್ನು ನಿಯಂತ್ರಿಸಲು ಹರ್ಷ ಕಠಿಣ ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ ಬಂದಿದ್ದಾನೆ.

ಇದನ್ನೂ ಓದಿ

ಶ್ರೀಲಕ್ಷ್ಮಿ ಎಚ್.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada