Lakshana Serial: ಖಾಲಿ ಡಬ್ಬಿಗಾಗಿ ಸ್ಪೆಷಲ್ ಪ್ರೀತಿಯ ಮಳೆ ಸುರಿಸಿದ ಭೂಪತಿ
ಭೂಪತಿಯ ಈ ಮಾತಿಗೆ ಉತ್ತರಿಸುತ್ತಾ, ಎಲ್ಲ ಆಸೆನೂ ಈಡೇರಿಸಿದ್ದೀಯಾ, ಆದರೆ ಮಳೆ ಮಾತ್ರ ಮಿಸ್ಸಿಂಗ್ ಕಣೋ, ನನಗೆ ಮಳೆಯಲ್ಲಿ ಡಾನ್ಸ್ ಮಾಡಬೇಕು ಅಂತ ಆಸೆಯಾಗುತ್ತಿದೆ, ಈ ಆಸೆಯನ್ನು ನೆರವೇರಿಸು ಎಂದು ನಕ್ಷತ್ರ ಹೇಳುತ್ತಾಳೆ.
ಧಾರಾವಾಹಿ: ಲಕ್ಷಣ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 8.30
ನಿರ್ದೇಶನ: ಶಿವರಾಮ್ ಮಾಗಡಿ
ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ನಕ್ಷತ್ರಳ ಆಸೆಯಂತೆ ಭೂಪತಿ ಅವನ ಕೈಯಾರೆ ನಕ್ಷತ್ರಳಿಗೆ ಪಾನಿಪೂರಿಯನ್ನು ತಿನ್ನಿಸಿದ್ದಾನೆ. ಪ್ರತಿಕ್ಷಣ ಕ್ಷಣವು ನಕ್ಷತ್ರ – ಭೂಪತಿ ನಡುವೆ ಪ್ರೀತಿ ಹೆಚ್ಚಾಗುತ್ತಿದೆ.
ನಕ್ಷತ್ರಳ ಇನ್ನೊಂದು ಆಸೆಯನ್ನು ನೆರವೇರಿಸಿದ ಭೂಪತಿ
ನಕ್ಷತ್ರಳ ಇನ್ನೊಂದು ಆಸೆಯನ್ನು ನೆರವೇರಿಸುವ ಸಲುವಾಗಿ ಪ್ರೀತಿಯ ಮಳೆಯನ್ನೇ ಸುರಿಸಿದ್ದಾನೆ ಭೂಪತಿ. ಪಾನಿಪೂರಿ ತಿನ್ನೋವಾಗ ನಕ್ಷತ್ರಳ ಕಾಟ ತಡೆಯಲಾರದೆ ಆಕೆಗೆ ತುಂಬಾ ಖಾರವಿರುವ ಪಾನಿಪೂರಿ ತಿನ್ನಿಸುವ ಮೂಲಕ ಅವಳ ಮೇಲಿದ್ದ ಹುಸಿ ಮುನಿಸನ್ನು ತೀರಿಸಿದ್ದಾನೆ ಭೂಪತಿ. ಇವರಿಬ್ಬರ ಕೋಳಿ ಜಗಳವನ್ನು ನೋಡುತ್ತಾ ನಿಂತಿದ್ದ ಶೆರ್ಲಿ ಮತ್ತು ಮಯೂರಿ ಅದು ಹೇಗೋ ಭೂಪತಿಯ ಕಣ್ಣಿಗೆ ಬಿದ್ದು ಪಜೀತಿಗೆ ಸಿಲುಕುತ್ತಾರೆ. ಭೂಪತಿಗೆ ಏನೋ ಹೇಳಿ ಅವರು ಅಲ್ಲಿಂದ ಮೆಲ್ಲನೆ ಜಾಗ ಖಾಲಿ ಮಾಡುತ್ತಾರೆ. ನೀನೆ ಅವರನ್ನು ಕರೆಸಿದ್ದೀಯಾ ಎಂದು ನಕ್ಷತ್ರಳಿಗೆ ಕೇಳಿದಾಗ ಇಲ್ಲಪ್ಪ ನನಗೆ ಏನು ಗೊತ್ತಿಲ್ಲ ಎನ್ನುತ್ತ ಭೂಪತಿಯ ಗಮನವನ್ನು ಬೇರೆ ಕಡೆ ತಿರುಗಿಸುತ್ತಾಳೆ.
ಮಾತು ಮಾತಿಗೂ ನನ್ನ ಹಳೆಯ ಭೂಪತಿ ಹೀಗೆ ಇರಲಿಲ್ಲ, ನಾನು ಹೇಳಿದ ಕೆಲಸ ಎಲ್ಲ ಮಾಡುತ್ತಿದ್ದ. ಅದಲ್ಲದೆ ನನ್ನ ಹಳೆಯ ಭೂಪತಿ ನನಗೆ ಖಾರ ಇರುವ ಪಾನಿಪೂರಿ ಕೂಡಾ ತಿನ್ನಿಸುತ್ತಿರಲ್ಲಿಲ್ಲ ಎಂದು ಹೇಳುವಾಗ, ಇನ್ನೇನಾದರೂ ನಿನ್ನ ಆಸೆ ಇದ್ದರೆ ಇವತ್ತೇ ಹೇಳಿ ಬಿಡು ಅದನ್ನು ಕೂಡಾ ತೀರಿಸಿ ಬಿಡುತ್ತೇನೆ ಎಂದು ಹೇಳುತ್ತಾನೆ ಭೂಪತಿ.
ಭೂಪತಿಯ ಈ ಮಾತಿಗೆ ಉತ್ತರಿಸುತ್ತಾ, ಎಲ್ಲ ಆಸೆನೂ ಈಡೇರಿಸಿದ್ದೀಯಾ, ಆದರೆ ಮಳೆ ಮಾತ್ರ ಮಿಸ್ಸಿಂಗ್ ಕಣೋ, ನನಗೆ ಮಳೆಯಲ್ಲಿ ಡಾನ್ಸ್ ಮಾಡಬೇಕು ಅಂತ ಆಸೆಯಾಗುತ್ತಿದೆ, ಈ ಆಸೆಯನ್ನು ನೆರವೇರಿಸು ಎಂದು ನಕ್ಷತ್ರ ಹೇಳುತ್ತಾಳೆ. ನಕ್ಷತ್ರಳ ಈ ಮಾತನ್ನು ಕೇಳಿ ಇದ್ದಕ್ಕಿದ್ದಂತೆ ಮಳೆ ಎಂದರೆ ಹೇಗೆ ನಕ್ಷತ್ರ, ನೀನೇನು ಹುಡುಗಾಟ ಆಡುತ್ತಿದ್ದೀಯಾ, ದೇವರಲ್ಲಿ ಬೇಡಿದ ತಕ್ಷಣ ಈಗ ಮಳೆ ಬಂದು ಬಿಡುತ್ತಾ ಏನೇನು ಹುಚ್ಚು ಮಾತನಾಡಬೇಡ ಅಂತ ಭೂಪತಿ ಹೇಳುತ್ತಾನೆ.
ನಾನೇನು ನಿಜ ಮಳೆಯನ್ನು ಕೇಳಿಲ್ಲ ಮಿಸ್ಟ್ರಿ, ಈ ಸಿನಿಮಾಗಳಲ್ಲಿ ಎಲ್ಲ Artificial ಮಳೆ ಬರಿಸುತ್ತಾರಲ್ಲ, ಹಾಗೇ ನೀನು ಕೂಡಾ ಪೈಪ್ ಅಥವಾ ಇನ್ನೇನಾದರೂ ಮಾಡಿ ಮಳೆ ಬರಿಸೋ ಪ್ಲೀಸ್ ಭೂಪತಿ, ನೀನೆ ತಾನೆ ಹೇಳಿದ್ದು ಇನ್ನೇನಾದರೂ ಆಸೆ ಇದ್ದರೆ ಹೇಳಿ ಬಿಡು ಅಂತ. ಈಗ ಹೀಗೆ ಮಾಡೋದಾ ಹೋಗು ಭೂಪತಿ ಎಂದು ನಕ್ಷತ್ರ ಹೇಳುತ್ತಾಳೆ. ಭೂಪತಿಗೆ ಕೋಪ ಬಂದರೂ ಕೊಟ್ಟ ಮಾತಿಗೆ ತನ್ನ ಪರಿಚಯದ ಸಿನೆಮಾದವರ ಬಳಿ ಮಾತನಾಡಿ ಕೃತಕ ಮಳೆ ಬರಿಸುವ ಯಂತ್ರವನ್ನು ತರಿಸುತ್ತಾನೆ.
ಇದನ್ನು ಓದಿ: ಭೂಪತಿ ನಕ್ಷತ್ರ ಜೋಡಿ ಜೊತೆಯಾಗಿರುವುದನ್ನು ಸಹಿಸುವುದಿಲ್ಲ ಶ್ವೇತಾ
ಇದನ್ನೆಲ್ಲಾ ದೂರದಲ್ಲೇ ನಿಂತು ನೋಡುತ್ತಿದ್ದ ನಕ್ಷತ್ರ ಮಿಸ್ಟ್ರಿç ನನಗಾಗಿ ಎಷ್ಟು ಒದ್ದಾಡುತ್ತಿದ್ದಾನೆ ಅಲ್ವ, ಇದು ನಿಜವಾದ ಮಳೆ ಆಗದೇ ಇರಬಹುದು ಆದರೆ ಇದು ನೀನು ನನಗಾಗಿ ತರಿಸುತ್ತಿರುವ ಪ್ರೀತಿಯ ಮಳೆ. ಇದು ನನಗೆ ಯಾವಾಗಲೂ ಸ್ಪೆಷಲ್. ಇವತ್ತು ಒಂದು ದಿನಕ್ಕಾದರೂ ನನಗೆ ಹಳೆಯ ಭೂಪತಿ ವಾಪಸ್ ಸಿಕ್ಕಿದ್ದಾನೆ ಎನ್ನುತ್ತಾ ಮನದಲ್ಲೇ ತೃಪ್ತಿ ಪಡುತ್ತಾಳೆ.
ನೀರಿನ ವಾಹನ ತಂದು ಪೈಪ್‌ನಲ್ಲಿ ನೀರು ಬಿಡುತ್ತಾ, ಬೇಗ ಬಾ ನಕ್ಷತ್ರ ನೀರು ಖಾಲಿ ಆಗಿ ಬಿಡುತ್ತದೆ ಹೋಗಿ ಆಟ ಆಡು ಎಂದು ಹೇಳಿ ಕಳುಹಿಸಿಕೊಡುತ್ತಾನೆ. ನೀರಿನಲ್ಲಿ ಆಟವಾಡಲು ಓಡಿ ಹೋದ ನಕ್ಷತ್ರ ಮಳೆಯಲ್ಲಿ ಮೈ ಮರೆತು ಕುಣಿಯುತ್ತಿರುತ್ತಾಳೆ. ಅವಳನ್ನು ನೋಡುತ್ತಾ ನಿಂತ ಭೂಪತಿ, ಆ ಮೊದಲಿನ ದಿನಗಳೇ ಎಷ್ಟೋ ಚೆನ್ನಾಗಿದ್ದವು. ನೀನು ಅಳೋದು, ಅತ್ತಾಗ ನಿನ್ನನ್ನು ನಾನು ಸಮಾಧಾನ ಮಾಡೋದು, ಇವೆಲ್ಲವೂ ಎಷ್ಟು ಚೆನ್ನಾಗಿದ್ದವು. ಆ ದಿನಗಳನ್ನು ತುಂಬಾ ಮಿಸ್ ಮಾಡುತ್ತಿದ್ದೆ, ಇವತ್ತು ಹಳೆಯ ದಿನಗಳು ಮತ್ತೆ ಮರುಕಳಿಸಿದೆ ಎನ್ನುತ್ತಾ ಮನದಲ್ಲೇ ಮಾತಾಡುತ್ತಾನೆ.
ಅಷ್ಟರಲ್ಲೇ ನಕ್ಷತ್ರ ಬಂದು ಅವನನ್ನು ನೀರಲ್ಲಿ ಆಡಲು ಎಳೆದುಕೊಂಡು ಹೋಗುತ್ತಾಳೆ. ಫ್ರೆಂಡ್ಸ್ ಆಗಿ ಇದ್ದಾಗ ಮಳೆ ನೀರಲ್ಲಿ ಆಡಿದ ದಿನಗಳನ್ನು ನೆನೆಯುತ್ತಾ ಇಬ್ಬರೂ ಮನ ಬಿಚ್ಚಿ ನೀರಲ್ಲಿ ಆಟವಾಡುತ್ತಾರೆ. ಇನ್ನಾದರೂ ನಕ್ಷತ್ರಳ ಮೇಲೆ ಭೂಪತಿಗೆ ಒಲವು ಮುಡುತ್ತಾ ಎಂಬುದನ್ನು ಮುಂದೆ ನೋಡಬೇಕಾಗಿದೆ.
ಮಧುಶ್ರೀ ಅಂಚನ್