AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lakshana Serial: ಭೂಪತಿ ನಕ್ಷತ್ರ ಜೋಡಿ ಜೊತೆಯಾಗಿರುವುದನ್ನು ಸಹಿಸುವುದಿಲ್ಲ ಶ್ವೇತಾ

ನನ್ನ ಭೂಪತಿಗೇ ಹತ್ತಿರ ಆಗಲು ಪ್ರಯತ್ನ ಮಾಡುತ್ತೀಯಾ, ನೀನು ಅವನಿಗೆ ಹತ್ತಿರ ಆದಷ್ಟು ನಾನು ನಿನ್ನನ್ನು ಅವನಿಂದ ದೂರ ಮಾಡಲು ಅಷ್ಟೇ ಪ್ರಯತ್ನ ಪಡುತ್ತೇನೆ. ಇವತ್ತು ತುಂಬಾ ಖುಷಿಯಾಗಿದ್ದೀಯಾ ಅಲ್ವಾ, ಖುಷಿ ಪಡು ಮನೆಗೆ ಬಂದ ಮೇಲೆ ನಿನಗೆ ಮಾರಿಹಬ್ಬ ಮಾಡಿಸುತ್ತೇನೆ ಎಂದ ಶ್ವೇತಾ.

Lakshana Serial: ಭೂಪತಿ ನಕ್ಷತ್ರ ಜೋಡಿ ಜೊತೆಯಾಗಿರುವುದನ್ನು ಸಹಿಸುವುದಿಲ್ಲ ಶ್ವೇತಾ
Lakshana Serial
TV9 Web
| Edited By: |

Updated on: Nov 11, 2022 | 12:00 PM

Share

ಧಾರಾವಾಹಿ: ಲಕ್ಷಣ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 8.30

ನಿರ್ದೇಶನ: ಶಿವರಾಮ್ ಮಾಗಡಿ

ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ನಕ್ಷತ್ರಳ ಆಸೆಯಂತೆ ಹಳೆ ಮಿಸ್ಟ್ರಿಮುನಿಯಪ್ಪ ಹಾಗೂ ಖಾಲಿ ಡಬ್ಬಿ ಗೆಟಪ್‌ನಲ್ಲಿ ರೆಡಿಯಾಗಿ ನಕ್ಷತ್ರ ಮತ್ತು ಭೂಪತಿ ಅವರು ಹಿಂದೆ ಇದ್ದ ಸಂತೃಪ್ತಿ ಹೋಟೆಲ್‌ಗೆ ಹೋಗುತ್ತಾರೆ. ಈ ನೆಪದಲ್ಲಾದರೂ ಅವರನ್ನು ಒಂದು ಮಾಡಲು ಮಯೂರಿ, ಶೆರ್ಲಿ ಕೂಡಾ ಆ ಹೋಟೆಲ್‌ಗೆ ಬಂದು ಏನೇನೋ ಪ್ಲಾನ್ ಮಾಡಿ ಭೂಪತಿಯಿಂದ ಕ್ಯಾರೆಟ್ ಹಲ್ವ ಮಾಡಿಸುವಂತೆ ನಕ್ಷತ್ರಳಿಗೆ ಸೂಚನೆ ಕೊಡುತ್ತಾರೆ. ಅದರ ಪ್ರಕಾರ ಕ್ಯಾರೆಟ್ ಹಲ್ವ ಮಾಡಿಕೊಡಬೇಕೆಂದು ಭೂಪತಿಗೆ ಹೇಳುತ್ತಾಳೆ.

ಭೂಪತಿ- ನಕ್ಷತ್ರ ಲವ್ ಸ್ಟೋರಿ ಶುರು

ನಕ್ಷತ್ರಳ ಕಾಟ ತಡೆಯಲಾರದೆ ಕ್ಯಾರೆಟ್ ಹಲ್ವಾ ಮಾಡಿ ಕೊಡುತ್ತಾನೆ ಭೂಪತಿ. ಇದರಲ್ಲೂ ಕೂಡಾ ನಕ್ಷತ್ರಳ ಕಂಡಿಷನ್ಸ್ ತಪ್ಪಿದ್ದಲ್ಲ. ಹಿಂದೆ ಇದ್ದ ಭೂಪತಿಯ ಹಾಗೆ ನಗುತ್ತಾ ಪ್ರೀತಿಯಿಂದ ಹಲ್ವಾ ಬಡಿಸಿಕೊಡಬೇಕೆಂದು ನಕ್ಷತ್ರ ಕಂಡೀಷನ್ ಹಾಕುತ್ತಾಳೆ. ತನಗೆ ಕಷ್ಟವಾದರೂ ನಕ್ಷತ್ರಳ ಮಾತಿಗೆ ಕಟ್ಟು ಬಿದ್ದು ನಗುತ್ತಾ ಹಲ್ವಾ ಬಡಿಸಿಕೊಡುತ್ತಾನೆ ಭೂಪತಿ. ನಕ್ಷತ್ರಳ ಕೊಡುವ ಕಾಟವನ್ನು ತಡೆಯಲಾರದೆ ಇನ್ನೇನಾದರೂ ಆಸೆ ಇದ್ದರೆ ಇವತ್ತೇ ಹೇಳಿ ಬಿಡು. ಇಂದೇ ಎಲ್ಲವನ್ನು ತೀರಿಸಿ ಬಿಡುತ್ತೇನೆ ಎಂದು ಭೂಪತಿ ಹೇಳಿದಾಗ ಕೇಳಿ ಹೇಳುತ್ತೇನೆ ಅಂತ ನಕ್ಷತ್ರ ಹೇಳುತ್ತಾಳೆ. ಈಕೆಯ ಈ ಮಾತನ್ನು ಕೇಳಿದ ಭೂಪತಿಗೆ ಏನೋ ಮಿಸ್ ಹೊಡಿತಿದೆ ಎನ್ನುವ ಭಾವನೆ ಮೂಡುತ್ತದೆ. ಆದರೆ ಮಯೂರಿನೇ ಈ ಪ್ಲಾನ್ ಮಾಡಿದ್ದು ಎಂದು ತಿಳಿದಿರುವುದಿಲ್ಲ. ಮಯೂರಿ, ಶೆರ್ಲಿಯ ಜೊತೆಗೆ ಮಾತನಾಡಿದ ನಂತರ ನನಗೆ ಪಾನಿಪೂರಿ ತಿನ್ನುವ ಆಸೆ ಆಗುತ್ತಿದೆ ಎಂದು ತನ್ನ ಆಸೆಯನ್ನು ಭೂಪತಿಗೆ ಹೇಳುತ್ತಾಳೆ ನಕ್ಷತ್ರ.

ಈ ಹೊತ್ತಿಗೆ ಪಾನಿಪೂರಿ ಬೇಕಾ ಅಂತ ಭೂಪತಿ ಕೇಳಿದರೂ ಹಟ ಮಾಡಿ ಪಾನಿಪೂರಿ ಕೊಡಿಸುವಂತೆ ಹಟ ಮಾಡುತ್ತಾಳೆ. ಇವಳ ಈ ಆಸೆಯನ್ನು ಕೂಡಾ ತೀರಿಸಿ ಬಿಡುವ ಅಂತಾ ಮನಸ್ಸಿನಲ್ಲೇ ಗೊಣಗಾಡುತ್ತಾ ಭೂಪತಿ ಪಾನಿಪೂರಿ ಅಡ್ಡಕ್ಕೆ ಕರೆದುಕೊಂಡು ಹೋಗುತ್ತಾನೆ. ಇನ್ನೇನು ಪಾನಿಪೂರಿ ಅಂಗಡಿ ಬಂತೆನ್ನುವಾಗ ಬೈಕ್ ನಿಲ್ಲಿಸಿ ನನಗೆ ಗೋರಂಟಿ ಹಾಕಿಸಿಕೊಳ್ಳಬೇಕು ಅಂತ ಹೇಳಿ ಭೂಪತಿಯನ್ನು ಅಂಗಡಿಯೊಂದರೊಳಗೆ ನಕ್ಷತ್ರ ಎಳೆದುಕೊಂಡು ಹೋಗುತ್ತಾಳೆ. ಅಲ್ಲೂ ಕೂಡಾ ಭೂಪತಿಗೆ ಕಾಟ ಕೊಡೋದನ್ನು ತಪ್ಪಿಸುವುದಿಲ್ಲ ತರ್ಲೆ ನಕ್ಷತ್ರ. ಯಾವ ಡಿಸೈನ್ ಹಾಕಿಸಲಿ, ಇದು ಚೆನ್ನಾಗಿದೆಯಾ ಎಂದು ಹೇಳಿ, ಹೇಳಿ ಭೂಪತಿಯ ತಲೆ ತಿನ್ನುತ್ತಾಳೆ.

ಇದನ್ನು ಓದಿLakshana Serial: ಮತ್ತೆ ಹಳೆಯ ಮಿಸ್ಟ್ರಿಮುನಿಯಪ್ಪ, ಖಾಲಿ ಡಬ್ಬಿಯಾದ ಭೂಪತಿ ನಕ್ಷತ್ರ ಜೋಡಿ

ಗೊರಂಟಿ ಹಾಕಿಸಿಕೊಂಡು ಹೊರ ಬಂದ ಮೇಲೆ ನನಗೆ ಪಾನಿಪೂರಿ ತಿನ್ನಿಸು ಎಂದು ಮತ್ತೆ ಭೂಪತಿಯನ್ನು ಸತಾಯಿಸುತ್ತಾಳೆ. ನಕ್ಷತ್ರ ಕೈಗೆ ಗೋರಂಟಿ ಹಾಕಿರುವುದರಿಂದ ಸ್ವತಃ ಭೂಪತಿನೇ ಆಕೆಗೆ ಪಾನಿಪೂರಿ ತಿನ್ನಿಸುತ್ತಾನೆ. ಇದನ್ನು ದೂರದಿಂದಲೇ ನೋಡುತ್ತಿದ್ದ ಶೆರ್ಲಿ ಮತ್ತು ಮಯೂರಿ ಇವರು ಯಾವಾಗಲೂ ಇದೇ ರೀತಿ ಜೊತೆಯಾಗಿ ಇರಬೇಕು ಎಂದು ಹೇಳುವಷ್ಟರಲ್ಲಿ ಶ್ವೇತಾ ಫೋನ್ ಮಾಡಿ ಅವರನ್ನು ವಿಚಾರಿಸುತ್ತಾಳೆ. ನಕ್ಷತ್ರ ಭೂಪತಿ ಸಂತೋಷದಿಂದ ಕಾಲ ಕಳೆಯುತ್ತಿದ್ದಾರೆ ಎಂದು ಮಯೂರಿ ಹೇಳುತ್ತಾಳೆ. ಈ ಮಾತನ್ನು ಕೇಳಿಸಿಕೊಂಡ ಬಿಳಿ ಜಿರಳೆ ಶ್ವೇತಾಗೆ ಹೊಟ್ಟೆ ಉರಿ ಉಂಟಾಗುತ್ತದೆ.

ನನ್ನ ಭೂಪತಿಗೇ ಹತ್ತಿರ ಆಗಲು ಪ್ರಯತ್ನ ಮಾಡುತ್ತೀಯಾ, ನೀನು ಅವನಿಗೆ ಹತ್ತಿರ ಆದಷ್ಟು ನಾನು ನಿನ್ನನ್ನು ಅವನಿಂದ ದೂರ ಮಾಡಲು ಅಷ್ಟೇ ಪ್ರಯತ್ನ ಪಡುತ್ತೇನೆ. ಇವತ್ತು ತುಂಬಾ ಖುಷಿಯಾಗಿದ್ದೀಯಾ ಅಲ್ವಾ, ಖುಷಿ ಪಡು ಮನೆಗೆ ಬಂದ ಮೇಲೆ ನಿನಗೆ ಮಾರಿಹಬ್ಬ ಮಾಡಿಸುತ್ತೇನೆ ಎಂದು ಶ್ವೇತಾ ತನ್ನಲ್ಲಿಯೇ ಮಾತನಾಡಿಕೊಳ್ಳುತ್ತಾಳೆ. ಈಕೆ ನಕ್ಷತ್ರಳ ಬಾಳಲ್ಲಿ ಇನ್ನೇನು ತಂದಿಟ್ಟು ತಮಾಷೆ ನೋಡುತ್ತಾಳೆ ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ನೋಡಬೇಕಾಗಿದೆ. ಮಧುಶ್ರೀ