Lakshana Serial: ಮತ್ತೆ ಹಳೆಯ ಮಿಸ್ಟ್ರಿಮುನಿಯಪ್ಪ, ಖಾಲಿ ಡಬ್ಬಿಯಾದ ಭೂಪತಿ ನಕ್ಷತ್ರ ಜೋಡಿ

ಭೂಪತಿ ಮಿಸ್ಟಿ ಮುನಿಯಪ್ಪನ ವೇಷ ಭೂಷಣ ಧರಿಸಿ ಬರುತ್ತಾನೆ. ಆದರೆ ನಕ್ಷತ್ರಳಿಗೆ ಇವನು ಈಕೆಯ ಮಾತನ್ನು ನೆರವೇರಿಸುತ್ತಾನೆ ಎಂದು ಯಾವ ನಂಬಿಕೆ ಕೂಡಾ ಇರಲಿಲ್ಲ. ಆದರೆ ಅದನ್ನು ಭೂಪತಿ ಸುಳ್ಳು ಮಾಡಿದ್ದಾನೆ.

Lakshana Serial: ಮತ್ತೆ ಹಳೆಯ ಮಿಸ್ಟ್ರಿಮುನಿಯಪ್ಪ, ಖಾಲಿ ಡಬ್ಬಿಯಾದ ಭೂಪತಿ ನಕ್ಷತ್ರ ಜೋಡಿ
Lakshana Serial
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 10, 2022 | 5:01 PM

ಧಾರಾವಾಹಿ: ಲಕ್ಷಣ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 8.30

ನಿರ್ದೇಶನ: ಶಿವರಾಮ್ ಮಾಗಡಿ

ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಶ್ವೇತಾ ತಾನು ಮಾಡಿದ ತಪ್ಪನ್ನು ನಕ್ಷತ್ರಳ ಮೇಲೆ ಎತ್ತಿ ಕಟ್ಟಿದ್ದಳು. ಅದಕ್ಕೆ ನಕ್ಷತ್ರ ಸರಿಯಾಗಿ ತಿರುಗುಬಾಣವನ್ನು ಕೂಡಾ ಬಿಟ್ಟಿದ್ದಳು. ಇದಾದ ಬಳಿಕ ಭೂಪತಿ ಮೊದಲೇ ನಕ್ಷತ್ರಳಿಗೆ ಒಂದು ಮಾತು ಕೊಟ್ಟಿದ್ದ. ಅದು ಏನೆಂದರೆ ನೀನು ಏನು ಹೇಳಿದರೂ ಮಾಡುತ್ತೇನೆ ಎಂದು. ಅದರ ಪ್ರಕಾರ ನಕ್ಷತ್ರ ನಾವು ಒಂದು ದಿನದ ಮಟ್ಟಿಗೆ ಹಳೆಯ ಮಿಸ್ಟಿ ಮುನಿಯಪ್ಪ, ಖಾಲಿಡಬ್ಬಿಯಾಗಬೇಕು. ಆದರೆ ಗಂಡ ಹೆಂಡತಿಯಾಗಿ ಅಲ್ಲ, ಅದೇ ಹಳೆಯ ಬೆಸ್ಟ್ ಫ್ರೆಂಡ್​​ಗಳಾಗಿ ಒಂದು ದಿನ ಕಾಲ ಕಳೆಯಬೇಕು ಎಂದು ಹೇಳುತ್ತಾಳೆ.

ಮತ್ತೆ ಹಳೆಯ ಮಿಸ್ಟ್ರಿ ಮುನಿಯಪ್ಪನ ವೇಷದಲ್ಲಿ ಭೂಪತಿ

ನಿನ್ನೆ ರಾತ್ರಿ ಹೇಳಿದ ಮಾತಿನ ಪ್ರಕಾರ ಭೂಪತಿ ಮಿಸ್ಟ್ರಿ ಮುನಿಯಪ್ಪನ ವೇಷ ಭೂಷಣ ಧರಿಸಿ ಬರುತ್ತಾನೆ. ಆದರೆ ನಕ್ಷತ್ರಳಿಗೆ ಇವನು ಈಕೆಯ ಮಾತನ್ನು ನೆರವೇರಿಸುತ್ತಾನೆ ಎಂದು ಯಾವ ನಂಬಿಕೆ ಕೂಡಾ ಇರಲಿಲ್ಲ. ಹಾಗೆ ಅವನಿಗೆ ಬೆಳಗ್ಗೆ ಕಾಫಿ ಕೊಡುವ ಎಂದು ನಕ್ಷತ್ರ ಹೋಗುವಾಗ ಭೂಪತಿಯ ಹಳೆಯ ರೂಪ ನೋಡಿ ಆಕೆಗೆ ಎಲ್ಲಿಲ್ಲದ ಸಂತೋಷ ಆಗುತ್ತದೆ. ನೀನು ನನ್ನ ಮಾತಿಗೆ ಒಪ್ಪಿಗೆ ನೀಡಿದ್ದೀಯಾ ಎಂದು ತುಂಬಾ ಖುಷಿ ಪಡುತ್ತಾಳೆ. ನಕ್ಷತ್ರ ಕೂಡಾ ಅದೇ ಹಿಂದಿನ ಖಾಲಿ ಡಬ್ಬಿಯ ವೇಷಭೂಷಣ ಧರಿಸಿ ಬರುತ್ತಾಳೆ. ಆಕೆಯನ್ನು ನೋಡಿದ ಮಯೂರಿ ಮತ್ತು ಶೆರ್ಲಿ ತುಂಬಾ ಮುದ್ದಾಗಿ ಕಾಣಿಸುತ್ತೀಯ ಎಂದು ಹೇಳಿ ಆಕೆ ಕಾಲು ಮುರಿದು ಭೂಪತಿಯ ಮನೆಗೆ ಬಂದಿದ್ದ ಹಳೆಯ ದಿನಗಳನ್ನು ಮೆಲುಕು ಹಾಕುತ್ತಾರೆ.

ಹೀಗೆ ಸ್ವಲ್ಪ ಹೊತ್ತು ಮಾತನಾಡಿ ಭೂಪತಿ ನಕ್ಷತ್ರ ಅವರು ಕೆಲಸ ಮಾಡುತ್ತಿದ್ದ ಸಂತೃಪ್ತಿ ಹೋಟೆಲ್‌ಗೆ ಹೊರಡುತ್ತಾರೆ. ಹೋಗುವಾಗ ಮನೆಯಲ್ಲಿ ನಕ್ಷತ್ರಳಿಗೆ ಶ್ವೇತಾ ಸಿಗುತ್ತಾಳೆ. ನೀನು ಹಾಳಾಗುವುದಲ್ಲದೆ ಭೂಪತಿಯನ್ನು ಯಾಕೆ ಜಾತ್ರೆ ಮಾಡುತ್ತೀಯಾ, ಅವನು ರಾಜ ಎಂದು ಶ್ವೇತಾ ಹೇಳಿದಾಗ ಅವನು ನನ್ನ ಗಂಡ, ನನಗೆ ಮಾತ್ರ ರಾಜ ಎಂದು ಹೇಳಿ ಹೋಗುತ್ತಾಳೆ.

ಹೀಗೆ ಬೈಕ್‌ನಲ್ಲಿ ಭೂಪತಿ ನಕ್ಷತ್ರ ಸಂತೃಪ್ತಿ ಹೋಟೆಲ್‌ಗೆ ಹೋಗುತ್ತಿರುವಾಗ ಮಯೂರಿ ಕಾಲ್ ಮಾಡಿ ಹೋಟೆಲ್ ವಿಳಾಸ ತಿಳಿದುಕೊಂಡು ನಾನು ಮತ್ತು ಶೆರ್ಲಿ ಕೂಡಾ ಅಲ್ಲಿಗೆ ಬರುತ್ತೇವೆ. ನಿಮ್ಮಿಬ್ಬರನ್ನು ಒಂದು ಮಾಡಲು ಏನೋ ಒಂದು ಪ್ಲಾನ್ ಮಾಡಿದ್ದೇವೆ. ಆದರೆ ಭೂಪತಿಗೆ ಈ ವಿಷಯ ಗೊತ್ತಾಗಬಾರದು ಎಂದು ಹೇಳಿ ಫೋನ್ ಕಟ್ ಮಾಡುತ್ತಾಳೆ.

ಹಾಗೋ ಹೀಗೋ ನಕ್ಷತ್ರಳ ತರ್ಲೆ ಆಟಗಳನ್ನು ಸಹಿಸುತ್ತಾ ಇಬ್ಬರೂ ಸಂತೃಪ್ತಿ ಹೋಟೆಲ್‌ಗೆ ತಲುಪುತ್ತಾರೆ. ಹೋಟೆಲ್ ನೋಡುತ್ತಿದ್ದಂತೆ ತಮ್ಮ ಹಿಂದಿನ ದಿನಗಳು ಅವರಿಗೆ ನೆನಪಿಗೆ ಬರುತ್ತದೆ. ಹೋಟೆಲ್ ಒಳಗಡೆ ಹೋಗಿ ಎಲ್ಲರೊಂದಿಗೂ ಚೆನ್ನಾಗಿ ಮಾತನಾಡಿ, ಮಯೂರಿ ಮಾಡಿದ ಪ್ಲಾನ್ ಪ್ರಕಾರ ನಕ್ಷತ್ರ ನನಗೆ ಕ್ಯಾರೆಟ್ ಹಲ್ವಾ ಮಾಡಿಕೊಡು ಎಂದು ಭೂಪತಿಗೆ ಕೇಳುತ್ತಾಳೆ. ಅದಕ್ಕೆ ಅವನು ಒಪ್ಪಿಗೆ ನೀಡುವುದಿಲ್ಲ. ಆಗ ಹಳೆಯ ಭೂಪತಿಯಾಗಿದ್ದರೆ ನಾನು ಕೇಳಿದ ತಕ್ಷಣ ಏನು ಬೇಕಾದರೂ ಮಾಡುತ್ತಿದ್ದ ಎಂದು ಹೇಳುವ ಮೂಲಕ ಹೊಸ ವರಸೆ ಆರಂಭಿಸುತ್ತಾಳೆ ನಕ್ಷತ್ರ.

ಅವಳ ಕೀಟಲೆ ತಡೆಯಲಾಗದೆ ಅಮ್ಮ ತಾಯಿ ಅಂತ ಕೈ ಮುಗಿದು ಕ್ಯಾರೆಟ್ ಹಲ್ವಾ ಮಾಡಲು ಒಪ್ಪಿಗೆ ನೀಡುತ್ತಾನೆ. ಕ್ಯಾರೆಟ್ ಹಲ್ವಾ ಮಾಡಲು ಬೇಕಾದ ಸಾಮಾಗ್ರಿಗಳನ್ನು ಎತ್ತಿ ಇಡುವಾಗ ಅಲ್ಲೇ ಇದ್ದ ಹಿಟ್ಟಿನ ಡಬ್ಬ ಭೂಪತಿ ಮತ್ತು ನಕ್ಷತ್ರಳ ಮೇಲೆ ಬಿದ್ದು ಅವರು ಜೋಕರ್ ತರ ಕಾಣಿಸುತ್ತಿರುತ್ತಾರೆ. ಒಬ್ಬರ ಮುಖ ಒಬ್ಬರು ನೋಡುತ್ತಾ ನಗುತ್ತಾ ಅದೇ ಹಿಟ್ಟಿನ್ನು ಮೈಮೇಲೆ ಎರಚುತ್ತಾ ಆಡುತ್ತಾರೆ. ಇನ್ನಾದರೂ ಅವರಿಬ್ಬರು ಒಂದಾಗುತ್ತಾರಾ ಎಂದು ಕಾದು ನೋಡಬೇಕಾಗಿದೆ.

ಮಧುಶ್ರೀ

Published On - 12:55 pm, Thu, 10 November 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ