AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಂಜುನ ಮುಗಿಸಬೇಕು, ಇಲ್ಲದಿದ್ದರೆ ಉಳಿಗಾಲ ಇಲ್ಲ; ಝೇಂಡೆಗೆ ಶುರುವಾಯ್ತು ಟೆನ್ಷನ್

ವರ್ಧನ್ ಕಂಪೆನಿಯಲ್ಲಿ ಝೇಂಡೆ ಸಾಕಷ್ಟು ಅಕ್ರಮ ಮಾಡಿದ್ದ. ಈ ವಿಚಾರ ಅನೇಕರಿಗೆ ಗೊತ್ತಿಲ್ಲ. ಕಂಪೆನಿಯ ದುಡ್ಡನ್ನು ಬೇರೆಡೆ ಕಳಿಸುವ ಕೆಲಸ ಆಗುತ್ತಿತ್ತು. ಈ ವಿಚಾರವನ್ನು ಸಂಜು ಹೊರಗೆ ತೆಗೆದಿದ್ದ. ಕಂಪನಿಗೆ ಬಂದ ಮೊದಲ ದಿನವೇ ಆತ ಈ ಕೆಲಸ ಮಾಡಿದ್ದ. ಈ ವಿಚಾರ ಈಗ ಝೇಂಡೆಗೆ ಗೊತ್ತಾಗಿದೆ.

‘ಸಂಜುನ ಮುಗಿಸಬೇಕು, ಇಲ್ಲದಿದ್ದರೆ ಉಳಿಗಾಲ ಇಲ್ಲ; ಝೇಂಡೆಗೆ ಶುರುವಾಯ್ತು ಟೆನ್ಷನ್
‘ಜೊತೆ ಜೊತೆಯಲಿ’ ಧಾರಾವಾಹಿ
TV9 Web
| Edited By: |

Updated on: Nov 10, 2022 | 9:55 AM

Share

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ನಿರ್ದೇಶನ: ಆರೂರು ಜಗದೀಶ

ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು

ಸಮಯ: ರಾತ್ರಿ: 9.30

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಅನು ಜತೆ ಕ್ಲೋಸ್ ಆಗಬೇಕು ಎಂದು ಸಂಜು ಯೋಚಿಸುತ್ತಿದ್ದ. ಆದರೆ, ಅಲ್ಲಿ ಆಗಿದ್ದೇ ಬೇರೆ. ಸಂಜು ಹಾಗೂ ಆತನ ಪತ್ನಿ ಆರಾಧನಾಳನ್ನು ಒಂದು ಮಾಡಲು ಅನು ಪ್ಲ್ಯಾನ್ ರೂಪಿಸಿದ್ದಳು. ಆರಾಧನಾಳನ್ನು ಮನೆಗೆ ಕರೆದುಕೊಂಡು ಬಂದಿದ್ದಳು. ಇದರಿಂದ ಸಂಜು ಸಿಕ್ಕಾಪಟ್ಟೆ ಟೆನ್ಷನ್​​ಗೆ ಒಳಗಾಗಿದ್ದಾನೆ. ಆತನಿಗೆ ಏನು ಹೇಳಬೇಕು ಎಂಬುದೇ ತೋಚುತ್ತಿಲ್ಲ.

ಝೇಂಡೆಗೆ ಟೆನ್ಷನ್

ವರ್ಧನ್ ಕಂಪೆನಿಯಲ್ಲಿ ಝೇಂಡೆ ಸಾಕಷ್ಟು ಅಕ್ರಮ ಮಾಡಿದ್ದ. ಈ ವಿಚಾರ ಅನೇಕರಿಗೆ ಗೊತ್ತಿಲ್ಲ. ಕಂಪೆನಿಯ ದುಡ್ಡನ್ನು ಬೇರೆಡೆ ಕಳಿಸುವ ಕೆಲಸ ಆಗುತ್ತಿತ್ತು. ಈ ವಿಚಾರವನ್ನು ಸಂಜು ಹೊರಗೆ ತೆಗೆದಿದ್ದ. ಕಂಪನಿಗೆ ಬಂದ ಮೊದಲ ದಿನವೇ ಆತ ಈ ಕೆಲಸ ಮಾಡಿದ್ದ. ಈ ವಿಚಾರ ಈಗ ಝೇಂಡೆಗೆ ಗೊತ್ತಾಗಿದೆ. ತಡವಾಗಿ ಈ ವಿಚಾರ ಆತನಿಗೆ ಗೊತ್ತಾದರೂ ಈ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು ಎನ್ನುವ ನಿರ್ಧಾರಕ್ಕೆ ಝೇಂಡೆ ಬಂದಿದ್ದಾನೆ.

ಮೀರಾಳನ್ನು ಭೇಟಿ ಮಾಡಲು ಝೇಂಡೆ ತೆರಳಿದ್ದ. ‘ಸಂಜು ಎಂದು ಹೇಳಿಕೊಂಡು ಬಂದ ವ್ಯಕ್ತಿ ಈಗಾಗಲೇ ಸತ್ತು ಹೋಗಿದ್ದಾನೆ. ಆತನ ಹೆಸರಲ್ಲಿ ಬೇರೆ ಯಾರೋ ಬಂದಿದ್ದಾರೆ. ಅದು ಯಾರು ಎಂದು ನಾವು ಪತ್ತೆಹಚ್ಚಬೇಕು’ ಎಂದು ಮೀರಾ ಬಳಿ ಹೇಳಿದ್ದಾನೆ ಝೇಂಡೆ. ಇದನ್ನು ಕೇಳಿ ಮೀರಾಗೆ ಶಾಕ್ ಆಗಿದೆ. ಇದೇವೇಳೆ ಮೀರಾಳಿಗೆ ಬೆಣ್ಣೆ ಹಚ್ಚುವ ಕೆಲಸವನ್ನು ಝೇಂಡೆ ಮಾಡಿದ್ದಾನೆ.

‘ಆರ್ಯವರ್ಧನ್​ನ ಬಿಟ್ಟರೆ ಆ ಸ್ಥಾನಕ್ಕೆ ಸೂಕ್ತವಾದ ವ್ಯಕ್ತಿ ಎಂದರೆ ಅದು ನೀನು ಮಾತ್ರ. ಆ ಸ್ಥಾನವನ್ನು ಬೇರೆ ಯಾರಿಗೋ ನೀಡಿದರೆ ಸರಿ ಆಗುವುದಿಲ್ಲ. ಆರ್ಯವರ್ಧನ್​ನ ಹೆಂಡತಿ ಎಂದ ಮಾತ್ರಕ್ಕೆ ಎಲ್ಲವನ್ನೂ ಅನು ವಹಿಸಿಕೊಳ್ಳೋಕೆ ಆಗುತ್ತಾ?’ ಎಂದು ಝೇಂಡೆ ಪ್ರಶ್ನೆ ಮಾಡಿದ್ದಾನೆ. ಇದು ಮೀರಾಗೂ ಸರಿ ಎನಿಸಿದೆ.

ಈ ಸಂದರ್ಭದಲ್ಲಿ ಕಂಪನಿಯಲ್ಲಿ ನಡೆದ ಅಕ್ರಮದ ಬಗ್ಗೆ ಮೀರಾ ಮಾತನಾಡಿದ್ದಾಳೆ. ‘ಸಂಜು ಸಾಮಾನ್ಯದವನಲ್ಲ. ನೀವು ಮಾಡಿದ ಅಕ್ರಮವನ್ನು ಸಂಜು ಕೇವಲ ಒಂದೇ ಒಂದು ದಿನದಲ್ಲಿ ಪತ್ತೆ ಹಚ್ಚಿದ್ದಾನೆ’ ಎಂದು ಮೀರಾ ಹೇಳಿದ್ದಾಳೆ. ಇದನ್ನು ಕೇಳಿ ಝೇಂಡೆಗೆ ನಡುಕ ಶುರುವಾಗಿದೆ.

‘ನಾನು ಮಾಡಿದ ಅಕ್ರಮಗಳು ನನ್ನ ಜತೆ ಸೇರಿ ಮಾಡಿದವರಿಗೆ ಮಾತ್ರ ಗೊತ್ತಿತ್ತು. ಆದರೆ, ಇದನ್ನು ಸಂಜು ಕಂಡು ಹಿಡಿದಿದ್ದಾನೆ ಎಂದರೆ ಏನು ಅರ್ಥ? ಅದೂ ಒಂದೇ ದಿನದಲ್ಲಿ. ಈ ಸಂಜು ಸಾಮಾನ್ಯದವನಲ್ಲ. ಆತ ಬಂದಿರುವುದರ ಹಿಂದೆ ಏನೋ ಮಾಸ್ಟರ್ ಪ್ಲ್ಯಾನ್ ಇದೆ. ಆತನನ್ನು ಮುಗಿಸಬೇಕು. ಇಲ್ಲದಿದ್ದರೆ ಉಳಿಗಾಲ ಇಲ್ಲ’ ಎಂದು ಝೇಂಡೆ ತನಗೆ ತಾನೇ ಹೇಳಿಕೊಂಡಿದ್ದಾನೆ.

ಸಂಜುಗೆ ಬಂತು ಸಿಟ್ಟು

ಆರಾಧನಾಳನ್ನು ರಾಜ ನಂದಿನಿ ವಿಲಾಸಕ್ಕೆ ಕರೆದುಕೊಂಡು ಬಂದ ವಿಚಾರದಲ್ಲಿ ಸಂಜುಗೆ ಸಿಟ್ಟಿದೆ. ಅನು ಜತೆ ಸಂಜು ಕ್ಲೋಸ್ ಆಗಬೇಕು ಎಂದು ಬಯಸುತ್ತಿದ್ದಾನೆ. ಆದರೆ, ಇದಕ್ಕೆ ಅನು ಟ್ವಿಸ್ಟ್​ ನೀಡಿದ್ದಾಳೆ. ಸಂಜುನ ಹೆಂಡತಿ ಆಗಿದ್ದ ಆರಾಧನಾಳನ್ನು ಕರೆದುತಂದಿದ್ದಾಳೆ. ಇದರಿಂದ ಆತನಿಗೆ ಸಿಟ್ಟು ನೆತ್ತಿಗೇರಿದೆ. ಈ ವಿಚಾರವನ್ನು ಅನು ಎದುರು ಪ್ರಸ್ತಾಪಿಸಲು ಬಂದಿದ್ದಾನೆ. ಆ ಸಮಯಕ್ಕೆ ಸರಿಯಾಗಿ ಆರಾಧನಾ ಬಂದಿದ್ದಾಳೆ. ಹೀಗಾಗಿ ಈ ವಿಚಾರವನ್ನು ಮಾತನಾಡಲು ಸಾಧ್ಯವಾಗೇ ಇಲ್ಲ. ಅನು ಮಾಡಿದ ಕೆಲಸಕ್ಕೆ ಆತ ಕೋಪ ಮಾಡಿಕೊಂಡಿದ್ದಾನೆ. ಅನು ಈ ರೀತಿ ಮಾಡಬಾರದಿತ್ತು ಎಂದು ಆತನಿಗೆ ಅನಿಸಿದೆ. ಅಷ್ಟೇ ಅಲ್ಲ, ತನ್ನಿಂದ ದೂರ ಆಗಲು ಅನು ಈ ರೀತಿ ಮಾಡುತ್ತಿದ್ದಾಳೆ ಎಂಬುದು ಆತನ ಊಹೆ.

ಶ್ರೀಲಕ್ಷ್ಮಿ ಎಚ್.

ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು