ರೂಪೇಶ್ ರಾಜಣ್ಣ ಮಾಡಿದ ನೋವಿಗೆ ಭಿನ್ನವಾಗಿ ಸೇಡು ತೀರಿಸಿಕೊಂಡ ದಿವ್ಯಾ ಉರುಡುಗ

ಕಳೆದ ವಾರ ದಿವ್ಯಾ ಹಾಗೂ ರೂಪೇಶ್ ರಾಜಣ್ಣ ಇಬ್ಬರೂ ಸೇರಿ ಹಾಡು ಮಾಡಿದ್ದರು. ಈ ಹಾಡಿಗೆ ಮನೆ ಮಂದಿ ಮೆಚ್ಚುಗೆ ಸೂಚಿಸಿದ್ದರು. ರೂಪೇಶ್ ರಾಜಣ್ಣ ಅವರು ಈ ಹಾಡನ್ನು ಹಾಡಿದ ವಿಚಾರಕ್ಕೆ ಈ ವಾರ ಕೊಂಕು ತೆಗೆದಿದ್ದಾರೆ. ದಿವ್ಯಾ ವಿರುದ್ಧ ಅವರು ತಿರುಗಿ ಬಿದ್ದಿದ್ದಾರೆ.

ರೂಪೇಶ್ ರಾಜಣ್ಣ ಮಾಡಿದ ನೋವಿಗೆ ಭಿನ್ನವಾಗಿ ಸೇಡು ತೀರಿಸಿಕೊಂಡ ದಿವ್ಯಾ ಉರುಡುಗ
ದಿವ್ಯಾ-ರೂಪೇಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 09, 2022 | 10:13 PM

ದಿವ್ಯಾ ಉರುಡುಗ (Divya Uruduga) ಅವರು ಬಿಗ್ ಬಾಸ್​ ಮನೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಕಳೆದ ಸೀಸನ್​​ನಲ್ಲಿ ಇದ್ದಷ್ಟು ಚಾರ್ಮ್ ​ಅನ್ನು ಈ ಬಾರಿ ಅವರು ಉಳಿಸಿಕೊಂಡಿಲ್ಲ ಎಂಬ ಮಾತು ವೀಕ್ಷಕರ ವಲಯದಲ್ಲಿದೆ. ದಿವ್ಯಾ ಉರುಡುಗ ಅವರು ರೂಪೇಶ್ ರಾಜಣ್ಣ (Roopesh Rajanna) ವಿರುದ್ಧ ಈಗ ಸೇಡು ತೀರಿಸಿಕೊಂಡಿದ್ದಾರೆ. ಅದೂ ಭಿನ್ನ ರೀತಿಯಲ್ಲಿ. ಇದಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ದಿವ್ಯಾ ಅವರು ಸೇಡು ತೀರಿಸಿಕೊಂಡ ನಂತರ ಕಣ್ಣೀರು ಹಾಕಿದ್ದಾರೆ.

ಕಳೆದ ವಾರ ದಿವ್ಯಾ ಹಾಗೂ ರೂಪೇಶ್ ರಾಜಣ್ಣ ಇಬ್ಬರೂ ಸೇರಿ ಹಾಡು ಮಾಡಿದ್ದರು. ಈ ಹಾಡಿಗೆ ಮನೆ ಮಂದಿ ಮೆಚ್ಚುಗೆ ಸೂಚಿಸಿದ್ದರು. ರೂಪೇಶ್ ರಾಜಣ್ಣ ಅವರು ಈ ಹಾಡನ್ನು ಹಾಡಿದ ವಿಚಾರಕ್ಕೆ ಈ ವಾರ ಕೊಂಕು ತೆಗೆದಿದ್ದಾರೆ. ದಿವ್ಯಾ ವಿರುದ್ಧ ಅವರು ತಿರುಗಿ ಬಿದ್ದಿದ್ದಾರೆ.

ಈ ವಾರ ಫೇಕ್ ಹಾಗೂ ರಿಯಲ್ ಎಂಬ ಹಣೆಪಟ್ಟಿಯನ್ನು ನೀಡಬೇಕಿತ್ತು. ದಿವ್ಯಾ ಉರುಡುಗ ಅವರಿಗೆ ರೂಪೇಶ್ ರಾಜಣ್ಣ ಫೇಕ್ ಎಂಬ ಹಣೆಪಟ್ಟಿ ನೀಡಿದರು. ಅಲ್ಲದೆ, ಇದಕ್ಕೆ ಅವರು ಕಾರಣವನ್ನೂ ವಿವರಿಸಿದರು. ‘ಕಳೆದ ವಾರ ನಾನು ಸಾಂಗ್ ಬರೆದು ಟ್ಯೂನ್ ಹಾಕಿದೆ. ಇದನ್ನು ಇಬ್ಬರೂ ಒಟ್ಟಾಗಿ ಹಾಡಿದೆವು. ಆದರೆ, ಎಲ್ಲಿಯೂ ನೀನು ಅದನ್ನು ರೂಪೇಶ್ ರಾಜಣ್ಣ ಬರೆದ ಹಾಡು ಎಂದು ಹೇಳಲೇ ಇಲ್ಲ. ಇದಕ್ಕಾಗಿ ಫೇಕ್ ಕೊಟ್ಟೆ’ ಎಂಬ ಮಾತನ್ನು ರೂಪೇಶ್ ರಾಜಣ್ಣ ಹೇಳಿದರು.

ಇದನ್ನೂ ಓದಿ
Image
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ಈ ಮಾತಿನಿಂದ ದಿವ್ಯಾ ಉರುಡಗ ಅವರು ಬೇಸರಗೊಂಡಿದ್ದಾರೆ. ‘ರೂಪೇಶ್ ರಾಜಣ್ಣ ಹಾಡು ಬರೆದಿದ್ದರು ಎಂಬುದನ್ನು ನಾನು ಎಲ್ಲ ಕಡೆ ಹೇಳಿದ್ದೇನೆ. ಆದರೆ, ಅವರು ಇಷ್ಟು ಕಠೋರವಾಗಿ ಅದನ್ನು ಹೇಳುತ್ತಾರೆ ಎಂದು ನಾನು ಅಂದುಕೊಂಡಿರಲಿಲ್ಲ’ ಎಂದು ದಿವ್ಯಾ ಕಣ್ಣೀರು ಹಾಕಿದ್ದರು.

ಇದನ್ನೂ ಓದಿ: BBK9: ದಿವ್ಯಾ ಉರುಡುಗ ಅಳುವಂತೆ ಚುಚ್ಚಿ ಮಾತಾಡಿದ ರೂಪೇಶ್​ ರಾಜಣ್ಣ; ಇಬ್ಬರ ನಡುವಿನ ಮಾತುಕತೆ ಏನು?

ಈಗ ರೂಪೇಶ್ ರಾಜಣ್ಣ ಅವರು ಮಾಡಿದ ನೋವಿಗೆ ದಿವ್ಯಾ ಸೇಡು ತೀರಿಸಿಕೊಂಡಿದ್ದಾರೆ. ಒಂದು ಸಾಂಗ್ ಬರೆದು ಅದನ್ನು ಹಾಡಿದ್ದಾರೆ. ಈ ಹಾಡಿನಲ್ಲಿರುವ ಪ್ರತಿ ಸಾಲುಗಳು ರೂಪೇಶ್ ರಾಜಣ್ಣ ಮಾಡಿದ ನೋವಿನ ಬಗ್ಗೆಯೇ ಇತ್ತು ಅನ್ನೋದು ವಿಶೇಷ. ಜತೆಗೆ ರೂಪೇಶ್ ರಾಜಣ್ಣ ಅವರ ಮಾತುಗಳನ್ನು ಪ್ರಶ್ನಿಸುವಂತಿತ್ತು. ಈ ಹಾಡನ್ನು ಹಾಡಿದ ನಂತರ ದಿವ್ಯಾ ಕಣ್ಣೀರು ಹಾಕಿದ್ದಾರೆ.

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್