AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK9: ದಿವ್ಯಾ ಉರುಡುಗ ಅಳುವಂತೆ ಚುಚ್ಚಿ ಮಾತಾಡಿದ ರೂಪೇಶ್​ ರಾಜಣ್ಣ; ಇಬ್ಬರ ನಡುವಿನ ಮಾತುಕತೆ ಏನು?

Bigg Boss Kannada Season 9: ರೂಪೇಶ್​ ರಾಜಣ್ಣ ಹೇಳಿದ ಮಾತಿನಿಂದ ದಿವ್ಯಾ ಉರುಡುಗ ಅವರಿಗೆ ನೋವಾಗಿದೆ. ಅವರು ಬಳಸಿದ ಭಾಷೆ ಕೂಡ ದಿವ್ಯಾಗೆ ಹಿಡಿಸಿಲ್ಲ. ಇದರಿಂದ ಅವರು ಗಳಗಳನೆ ಅತ್ತಿದ್ದಾರೆ.

BBK9: ದಿವ್ಯಾ ಉರುಡುಗ ಅಳುವಂತೆ ಚುಚ್ಚಿ ಮಾತಾಡಿದ ರೂಪೇಶ್​ ರಾಜಣ್ಣ; ಇಬ್ಬರ ನಡುವಿನ ಮಾತುಕತೆ ಏನು?
ರೂಪೇಶ್ ರಾಜಣ್ಣ, ದಿವ್ಯಾ ಉರುಡುಗ
TV9 Web
| Edited By: |

Updated on: Nov 08, 2022 | 12:46 PM

Share

ಕಳೆದ ಸೀಸನ್​ನಲ್ಲಿ ನಟಿ ದಿವ್ಯಾ ಉರುಡುಗ (Divya Uruduga) ಅವರು ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡಿದ್ದರು. ಆದರೆ ಟ್ರೋಫಿ ಗೆಲ್ಲಲು ಅವರಿಗೆ ಸಾಧ್ಯವಾಗಿರಲಿಲ್ಲ. ಈ ಬಾರಿ ವಿನ್ನರ್​ ಆಗಬೇಕು ಎಂಬ ಹಂಬಲದೊಂದಿಗೆ ಅವರು ಮತ್ತೆ ಬಿಗ್​ ಬಾಸ್​ನಲ್ಲಿ (Bigg Boss Kannada) ಸ್ಪರ್ಧಿಸುತ್ತಿದ್ದಾರೆ. ಅವರು ಹಳೇ ಸ್ಪರ್ಧಿ ಆಗಿರುವುದರಿಂದ ಅನುಭವ ಇದೆ. ಹಾಕಿದ್ದರೂ ಕೂಡ ಅವರು ದೊಡ್ಮನೆಯೊಳಗೆ ಕಣ್ಣೀರು ಹಾಕಬೇಕಾದ ಪ್ರಸಂಗ ಎದುರಾಗಿದೆ. ಹೊಸ ಸ್ಪರ್ಧಿ ರೂಪೇಶ್​ ರಾಜಣ್ಣ (Rupesh Rajanna) ಆಡಿದ ಮಾತಿನಿಂದಾಗಿ ದಿವ್ಯಾ ಉರುಡುಗ ಗಳಗಳನೆ ಅತ್ತಿದ್ದಾರೆ. ಈ ಎಲ್ಲ ಘಟನೆಗಳಿಂದಾಗಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ವೀಕ್ಷಕರ ಗಮನ ಸೆಳೆಯುತ್ತಿದೆ.

ಬಿಗ್​ ಬಾಸ್​ ಒಂದು ಗೇಮ್​. ಅದರಲ್ಲಿ ಮೈಂಡ್​ ಗೇಮ್​ ಕೂಡ ಇರುತ್ತದೆ. ಕೆಲವರು ನಿಜ ವ್ಯಕ್ತಿತ್ವವನ್ನು ಮರೆಮಾಚಿ ಬೇರೆಯದೇ ರೀತಿ ಕಾಣಿಸಿಕೊಳ್ಳುತ್ತಾರೆ. ಇನ್ನೂ ಕೆಲವರು ನೇರ ನಡೆ-ನುಡಿಯಿಂದ ಗುರುತಿಸಿಕೊಳ್ಳುತ್ತಾರೆ. ಈ ಆಟದಲ್ಲಿ ಯಾರು ರಿಯಲ್​? ಯಾರು ಫೇಕ್​ ಎಂಬ ಪ್ರಶ್ನೆ ಸದಾ ಎದುರಾಗುತ್ತಲೇ ಇರುತ್ತದೆ. ಈ ವಿಚಾರವಾಗಿ ದೊಡ್ಮನೆಯಲ್ಲಿ ಚರ್ಚೆ ನಡೆದಿದೆ. ಈ ವೇಳೆ ‘ದಿವ್ಯಾ ಉರುಡುಗ ಫೇಕ್​’ ಎಂದು ರೂಪೇಶ್​ ರಾಜಣ್ಣ ಅವರು ನೇರವಾಗಿ ಹೇಳಿದ್ದಾರೆ.

ಇದನ್ನೂ ಓದಿ
Image
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ರೂಪೇಶ್​ ರಾಜಣ್ಣ ಹೇಳಿದ ಮಾತಿನಿಂದ ದಿವ್ಯಾ ಉರುಡುಗ ಅವರಿಗೆ ನೋವಾಗಿದೆ. ಅವರು ಬಳಸಿದ ಭಾಷೆ ಕೂಡ ದಿವ್ಯಾಗೆ ಹಿಡಿಸಿಲ್ಲ. ಇದರಿಂದ ಅವರು ಗಳಗಳನೆ ಅತ್ತಿದ್ದಾರೆ. ರೂಪೇಶ್​ ಮಾಡಿದ ಆರೋಪಗಳನ್ನು ದಿವ್ಯಾ ಅಲ್ಲಗಳೆದಿದ್ದಾರೆ. ಜೋರಾಗಿ ಅಳುತ್ತಿದ್ದ ಅವರನ್ನು ಎಲ್ಲರೂ ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ.

ರೂಪೇಶ್​ ರಾಜಣ್ಣ ಮಾಡಿದ ಆರೋಪ ಏನು?

‘ದಿವ್ಯಾ ಉರುಡುಗ ಫೇಕ್​. ಒಂದು ಹಾಡು ಮಾಡಿದ್ವಿ. ಇದು ರೂಪೇಶ್​ ರಾಜಣ್ಣ ಮಾಡಿದ್ದು ಅಂತ ಒಮ್ಮೆಯೂ ದಿವ್ಯಾ ಬಾಯಿ ಬಿಟ್ಟು ಹೇಳಲಿಲ್ಲ. ಇದನ್ನು ತಾವೇ ಮಾಡಿದ್ದು ಅಂತ ಬಿಂಬಿಸಲು ಪ್ರಯತ್ನಪಡುತ್ತಾರೆ. ತಮ್ಮ ತಪ್ಪು ಮುಚ್ಕೊಂಡು ನಾಟಕ ಆಡ್ತಾರೆ’ ಎಂದು ರೂಪೇಶ್​ ರಾಜಣ್ಣ ಹೇಳಿದ್ದಾರೆ. ‘ಮನಸ್ಸಿನಲ್ಲಿ ಇಷ್ಟೆಲ್ಲ ಇಟ್ಟುಕೊಂಡು ನನ್ನ ಜೊತೆ ನಗುನಗುತ್ತಾ ಇರುವ ಅವರು ಫೇಕಾ ಅಥವಾ ನಾನು ಫೇಕಾ’ ಅಂತ ದಿವ್ಯಾ ಉರುಡುಗ ಮರುಪ್ರಶ್ನೆ ಹಾಕಿದ್ದಾರೆ.

ಈ ಘಟನೆಗೆ ಸಂಬಂಧಿಸಿದ ಫ್ರೋಮೋವನ್ನು ‘ಕಲರ್ಸ್​ ಕನ್ನಡ’ ವಾಹಿನಿ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ಈ ಸಂಚಿಕೆ ನವೆಂಬರ್​ 8ರ ರಾತ್ರಿ ಪ್ರಸಾರ ಆಗಲಿದೆ. 6ನೇ ವಾರ ಸಾನ್ಯಾ ಐಯ್ಯರ್​ ಎಲಿಮಿನೇಟ್​ ಆದರು. 7ನೇ ವಾರದಲ್ಲಿ ಯಾರ ಆಟ ಅಂತ್ಯ ಆಗಲಿದೆ ಎಂಬ ಕೌತುಕ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ