AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಮ್​ನಲ್ಲಿ ಕುಸಿದು ಬಿದ್ದು ಮೃತಪಟ್ಟ ಖ್ಯಾತ ಕಿರುತೆರೆ ಹೀರೋ ಸಿದ್ಧಾಂತ್​ ಸೂರ್ಯವಂಶಿ

Siddhaanth Vir Surryavanshi Death: ಸಿದ್ಧಾಂತ್ ವೀರ್ ಸುರ್ಯವಂಶಿ ಅವರು ಅಕಾಲಿಕ ಮರಣ ಹೊಂದಿದ್ದಾರೆ. ಅವರು ಜಿಮ್​ನಲ್ಲಿ ವರ್ಕೌಟ್ ಮಾಡುವಾಗ ಕುಸಿದು ಬಿದ್ದರು. ನಂತರ ಅವರು ಮೃತಪಟ್ಟರು ಎಂದು ವರದಿ ಆಗಿದೆ.

ಜಿಮ್​ನಲ್ಲಿ ಕುಸಿದು ಬಿದ್ದು ಮೃತಪಟ್ಟ ಖ್ಯಾತ ಕಿರುತೆರೆ ಹೀರೋ ಸಿದ್ಧಾಂತ್​ ಸೂರ್ಯವಂಶಿ
TV9 Web
| Edited By: |

Updated on:Nov 11, 2022 | 5:24 PM

Share

ಜಿಮ್ (Gym)ಮಾಡುವಾಗ ಕುಸಿದು ಬಿದ್ದು ಮೃತಪಟ್ಟ ಘಟನೆಗಳು ಇತ್ತೀಚೆಗೆ ಹೆಚ್ಚುತ್ತಿದೆ. ಚಿತ್ರರಂಗದ ಅನೇಕರು ಇದೇ ರೀತಿಯಲ್ಲಿ ಮೃತಪಟ್ಟಿದ್ದಾರೆ. ಈಗ ಹಿಂದಿ ಕಿರುತೆರೆ ನಟ ಸಿದ್ಧಾಂತ್ ವೀರ್ ಸೂರ್ಯವಂಶಿ (Siddhaanth Vir Surryavanshi) ಅವರು ಅಕಾಲಿಕ ಮರಣ ಹೊಂದಿದ್ದಾರೆ. ಅವರು ಜಿಮ್​ನಲ್ಲಿ ವರ್ಕೌಟ್ ಮಾಡುವಾಗ ಕುಸಿದು ಬಿದ್ದರು. ನಂತರ ಅವರು ಮೃತಪಟ್ಟರು ಎಂದು ವರದಿ ಆಗಿದೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಕಿರುತೆರೆ ಹಾಗೂ ಹಿರಿತೆರೆಯ ಅನೇಕರು ಸಂತಾಪ ಸೂಚಿಸುತ್ತಿದ್ದಾರೆ. ಚಿತ್ರರಂಗದ ಅನೇಕರು ಅಕಾಲಿಕ ಮರಣ ಹೊಂದುತ್ತಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಸಿದ್ಧಾಂತ್ ಅವರು ಮುಂಬೈನ ಜಿಮ್ ಒಂದರಲ್ಲಿ ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಯಾವುದೇ ಪ್ರಯೋಜನ ಆಗಿಲ್ಲ. ಅವರ ನಿಧನದ ವಿಚಾರವನ್ನು ಆಪ್ತರು ಹಾಗೂ ಕುಟುಂಬದವರು ಖಚಿತಪಡಿಸಿದ್ದಾರೆ. ಸಿದ್ಧಾಂತ್ ಸಾವಿನಿಂದ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

ಸಿದ್ಧಾಂತ್ ಅವರು ಪತ್ನಿ ಅಲೇಸಿಯಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅಲೇಸಿಯಾ ಅವರು ಮಾಡೆಲಿಂಗ್ ಜಗತ್ತಿನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಪತಿಯ ಅಕಾಲಿಕ ಮರಣ ಸುದ್ದಿ ಅವರಿಗೆ ಶಾಕ್ ನೀಡಿದೆ. ಅಲೇಸಿಯಾ ರಷ್ಯಾ ಮೂಲದವರು. ಅವರಿಗೆ ಇದು ಎರಡನೇ ಮದುವೆ ಆಗಿತ್ತು. 2017ರಲ್ಲಿ ಅಲೇಸಿಯಾ ಹಾಗೂ ಸಿದ್ಧಾಂತ್ ಮದುವೆ ಆದರು. 2000-2015ರವರೆಗೆ ಇರಾ ಎಂಬುವವರ ಜತೆ ಸಿದ್ಧಾಂತ್ ಸಂಸಾರ ನಡೆಸಿದ್ದರು.

2001ರಿಂದ ಸಿದ್ಧಾಂತ್ ಅವರು ಕಿರುತೆರೆ ಲೋಕದ ನಂಟು ಹೊಂದಿದ್ದಾರೆ. ‘ಕಸೌಟಿ ಜಿಂದಗಿ ಕೇ’. ‘ಮಮತಾ’, ಸೇರಿ ಸಾಕಷ್ಟು ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ.

ಇದನ್ನೂ ಓದಿ: ಅದ್ದೂರಿಯಾಗಿ ನಡೆಯಿತು ನಾಮಕರಣ ಶಾಸ್ತ್ರ; ಅವಳಿ ಮಕ್ಕಳ ಹೆಸರು ರಿವೀಲ್ ಮಾಡಿದ ನಟಿ ಅಮೂಲ್ಯ

ಸಿದ್ಧಾಂತ್ ಅವರನ್ನು ಕಳೆದುಕೊಂಡ ಕಿರುತೆರೆ ಲೋಕ ಬಡವಾಗಿದೆ. ಕಿರುತೆರೆ ಲೋಕದ ಸಾಕಷ್ಟು ಮಂದಿ ಸಿದ್ಧಾಂತ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ‘ಬಹುಬೇಗನೆ ನೀವು ನಮ್ಮನ್ನು ಬಿಟ್ಟು ಹೋದಿರಿ’ ಎಂದು ಅನೇಕರು ಬರೆದುಕೊಂಡಿದ್ದಾರೆ.

Published On - 3:37 pm, Fri, 11 November 22