ಅದ್ದೂರಿಯಾಗಿ ನಡೆಯಿತು ನಾಮಕರಣ ಶಾಸ್ತ್ರ; ಅವಳಿ ಮಕ್ಕಳ ಹೆಸರು ರಿವೀಲ್ ಮಾಡಿದ ನಟಿ ಅಮೂಲ್ಯ
ನಾಮಕರಣ ಕಾರ್ಯಕ್ರಮ ಸಾಕಷ್ಟು ಅದ್ದೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಆಗಮಿಸಿ ಶುಭಕೋರಿದ್ದಾರೆ.
ನಟಿ ಅಮೂಲ್ಯ (Amulya) ಅವರಿಗೆ ಅವಳಿ ಮಕ್ಕಳು ಜನಿಸಿದ್ದರು. ಈ ವಿಚಾರವನ್ನು ಅವರು ಈ ಮೊದಲು ಘೋಷಣೆ ಮಾಡಿದ್ದರು. ಈ ಮೊದಲು ಮಕ್ಕಳ ಹಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಈಗ ಅಮೂಲ್ಯ ಅವರು ಮಕ್ಕಳ ಹೆಸರನ್ನು ರಿವೀಲ್ ಮಾಡಿದ್ದಾರೆ. ವಿಶೇಷ ವಿಡಿಯೋ ಹಂಚಿಕೊಂಡಿರುವ ಅಮೂಲ್ಯ ಅವರು ಮಕ್ಕಳಿಗೆ ಇಟ್ಟ ಹೆಸರನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಅದ್ದೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಅವಳಿ ಮಕ್ಕಳಿಗೆ ಹೆಸರು ಇಡಲಾಗಿದೆ.
ಅಮೂಲ್ಯ ಅವರಿಗೆ ಅವಳಿ ಮಕ್ಕಳು ಜನಿಸಿರುವ ಬಗ್ಗೆ ಅವರ ಪತಿ ಜಗದೀಶ್ ಅವರು ಮೊದಲ ಬಾರಿಗೆ ರಿವೀಲ್ ಮಾಡಿದರು. ತಾಯಿ ಹಾಗೂ ಮಕ್ಕಳು ಇಬ್ಬರೂ ಆರೋಗ್ಯವಾಗಿದ್ದಾರೆ ಎಂಬ ವಿಚಾರವನ್ನು ತಿಳಿಸಿದರು. ನಂತರ ಕೆಲವೇ ವಾರಗಳಲ್ಲಿ ಮಕ್ಕಳ ಮುಖವನ್ನು ಅಮೂಲ್ಯ ರಿವೀಲ್ ಮಾಡಿದರು. ಮಕ್ಕಳ ಹಲವು ಫೋಟೋಗಳನ್ನು ಅಮೂಲ್ಯ ಹಂಚಿಕೊಂಡಿದ್ದಾರೆ. ಈಗ ಮಕ್ಕಳಿಗೆ ಅಥರ್ವ್ ಹಾಗೂ ಆದವ್ ಎಂದು ನಾಮಕರಣ ಮಾಡಿದ್ದಾರೆ.
ನಾಮಕರಣ ಕಾರ್ಯಕ್ರಮ ಸಾಕಷ್ಟು ಅದ್ದೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮಕ್ಕೆ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಆಗಮಿಸಿ ಶುಭಕೋರಿದ್ದಾರೆ. ಧ್ರುವ ಸರ್ಜಾ ಮೊದಲಾದವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಅಮೂಲ್ಯ ಹಂಚಿಕೊಂಡಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
View this post on Instagram
ಇದನ್ನೂ ಓದಿ: ಅದ್ದೂರಿಯಾಗಿ ನಡೆಯಿತು ನಾಮಕರಣ ಶಾಸ್ತ್ರ; ಅವಳಿ ಮಕ್ಕಳ ಹೆಸರು ರಿವೀಲ್ ಮಾಡಿದ ನಟಿ ಅಮೂಲ್ಯ ಅಮೂಲ್ಯ ಅವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಬಾಲ ಕಲಾವಿದೆಯಾಗಿ ಅವರು ಚಿತ್ರರಂಗಕ್ಕೆ ಪರಿಚಯ ಆದರು. ಮೊದಲ ಬಾರಿಗೆ ‘ಚೆಲುವಿನ ಚಿತ್ತಾರ’ ಸಿನಿಮಾದಲ್ಲಿ ನಾಯಕಿ ಆಗಿ ಕಾಣಿಸಿಕೊಂಡರು. ಗಣೇಶ್ ಅವರು ಈ ಚಿತ್ರದ ಹೀರೋ ಆಗಿದ್ದರು. ಈ ಚಿತ್ರದಿಂದ ಅಮೂಲ್ಯ ಜನಪ್ರಿಯತೆ ಹೆಚ್ಚಿತು. ಯಶ್ ಸೇರಿ ಅನೇಕರ ಜತೆ ಅವರು ತೆರೆ ಹಂಚಿಕೊಂಡಿದ್ದಾರೆ. ಕಳೆದ ಐದು ವರ್ಷಗಳಿಂದ ಅಮೂಲ್ಯ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಅವರು ಕುಟುಂಬದ ಮೇಲೆ ಸಂಪೂರ್ಣ ಗಮನ ಹರಿಸಿದ್ದಾರೆ. ಸದ್ಯ ಅವಳಿ ಮಕ್ಕಳ ಆರೈಕೆಯಲ್ಲಿ ಅಮೂಲ್ಯ ತೊಡಗಿಕೊಂಡಿದ್ದಾರೆ.
Published On - 2:53 pm, Fri, 11 November 22