Belakina Kavithe: 3 ಮಿಲಿಯನ್ ವೀಕ್ಷಣೆ ಕಂಡ ‘ಬೆಳಕಿನ ಕವಿತೆ’; ಝೈದ್ ಖಾನ್-ಸೋನಲ್ ರೊಮ್ಯಾನ್ಸ್ಗೆ ಫ್ಯಾನ್ಸ್ ಫಿದಾ
Banaras Movie Songs: ‘ಬನಾರಸ್’ ಚಿತ್ರದ ಹಾಡುಗಳಿಗೆ ಈ ಪರಿ ಮೆಚ್ಚುಗೆ ಸಿಕ್ಕಿರುವುದು ಚಿತ್ರತಂಡದ ಸಂತಸಕ್ಕೆ ಕಾರಣ ಆಗಿದೆ. ಸಿನಿಪ್ರಿಯರಲ್ಲಿ ‘ಬೆಳಕಿನ ಕವಿತೆ..’ ಸಾಂಗ್ ಒಂದು ಬಗೆಯ ಸೆನ್ಸೇಷನ್ ಸೃಷ್ಟಿ ಮಾಡಿದೆ.
ಹೊಸ ಹೀರೋ ಝೈದ್ ಖಾನ್ (Zaid Khan) ಅಭಿನಯಿಸಿರುವ ‘ಬನಾರಸ್’ ಸಿನಿಮಾ ನವೆಂಬರ್ 4ರಂದು ಬಿಡುಗಡೆಯಾಗಿ ಉತ್ತಮ ವಿಮರ್ಶೆ ಪಡೆದುಕೊಂಡಿದೆ. ಸಿನಿಪ್ರಿಯರು ಝೈದ್ ಖಾನ್ ನಟನೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ, ಈ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ. ‘ಬನಾರಸ್’ (Banaras) ಚಿತ್ರಕ್ಕೆ ಅಜನೀಶ್ ಬಿ. ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಮೆಲೋಡಿ ಸಾಂಗ್ಸ್ ನೀಡುವಲ್ಲಿ ಫೇಮಸ್ ಆಗಿರುವ ಅವರು ‘ಮಾಯಗಂಗೆ..’ ಮತ್ತು ‘ಬೆಳಕಿನ ಕವಿತೆ..’ (Belakina Kavithe) ಹಾಡುಗಳ ಮೂಲಕ ‘ಬನಾರಸ್’ ಸಿನಿಮಾದ ಮೆರುಗು ಹೆಚ್ಚಿಸಿದ್ದಾರೆ. ಈ ಸಿನಿಮಾದ ಹಾಡುಗಳು ಮಿಲಿಯನ್ಗಟ್ಟಲೆ ವೀವ್ಸ್ ಪಡೆದು ಮುನ್ನುಗ್ಗುತ್ತಿವೆ. ಇದರಿಂದ ಚಿತ್ರದ ಮೈಲೇಜ್ ಹೆಚ್ಚಲು ಸಹಕಾರಿ ಆಗಿದೆ. ಝೈದ್ ಖಾನ್ ಮತ್ತು ಸೋನಲ್ ಮಾಂಥೆರೋ ಅವರ ಕೆಮಿಸ್ಟ್ರಿ ಕೂಡ ಚೆನ್ನಾಗಿ ಮೂಡಿಬಂದಿದೆ.
ಮೊದಲು ಬಿಡುಗಡೆಯಾದ ‘ಮಾಯಗಂಗೆ..’ ಹಾಡು ಕನ್ನಡ ವರ್ಷನ್ನಲ್ಲಿ ಈವರೆಗೆ 4.5 ಮಿಲಿಯನ್ ಬಾರಿ ವೀಕ್ಷಣೆ ಕಂಡಿದೆ. ಅದೇ ರೀತಿ, ‘ಬೆಳಕಿನ ಕವಿತೆ..’ ಹಾಡಿಗೆ 3 ಮಿಲಿಯನ್ ವೀವ್ಸ್ ಆಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಎಲ್ಲ ಭಾಷೆಯಲ್ಲಿಯೂ ಹಾಡುಗಳನ್ನು ರಿಲೀಸ್ ಮಾಡಲಾಗಿದೆ. ‘ಬೆಳಕಿನ ಕವಿತೆ..’ ಹಾಡಿನ ಎಲ್ಲ ಭಾಷೆಯ ವರ್ಷನ್ಗಳನ್ನು ಸೇರಿಸಿದರೆ 7 ಮಿಲಿಯನ್ಗಿಂತಲೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.
‘ಬನಾರಸ್’ ಹಾಡುಗಳಿಗೆ ಈ ಪರಿ ಮೆಚ್ಚುಗೆ ಸಿಕ್ಕಿರುವುದು ಚಿತ್ರತಂಡದ ಸಂತಸಕ್ಕೆ ಕಾರಣ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ‘ಬೆಳಕಿನ ಕವಿತೆ..’ ಒಂದು ಬಗೆಯ ಸೆನ್ಸೇಷನ್ ಸೃಷ್ಟಿ ಮಾಡಿದೆ. ಎಲ್ಲರ ರೀಲ್ಸ್ನಲ್ಲಿ ಈ ಹಾಡು ರಾರಾಜಿಸುತ್ತಿದೆ. ತುಂಬ ರೊಮ್ಯಾಂಟಿಕ್ ಆಗಿ ಈ ಗೀತೆ ಮೂಡಿಬಂದಿದೆ. ಸೋನಲ್ ಮಾಂಥೆರೋ ಹಾಗೂ ಝೈದ್ ಖಾನ್ ಕಾಂಬಿನೇಷನ್ ಕಂಡು ಸಿನಿಪ್ರಿಯರು ವಾವ್ ಎಂದಿದ್ದಾರೆ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಮೂಲಕ ಅಜನೀಶ್ ಲೋಕನಾಥ್ ಅವರು ಶೈನ್ ಆಗುತ್ತಿದ್ದಾರೆ. ಅವರ ಸೂಪರ್ ಹಿಟ್ ಆಲ್ಬಂಗಳ ಸಾಲಿಗೆ ‘ಬನಾರಸ್’ ಕೂಡ ಸೇರಿಕೊಂಡಿದೆ. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ, ಎ. ಹರ್ಷ ಕೊರಿಯೋಗ್ರಫಿ, ಅರುಣ್ ಸಾಗರ್ ಅವರ ಕಲಾ ನಿರ್ದೇಶನದ ಸಂಗಮದಿಂದಾಗಿ ಈ ಹಾಡಿನ ಮೆರುಗು ಇನ್ನಷ್ಟು ಹೆಚ್ಚಿದೆ.
ಸಂಚಿತ್ ಹೆಗಡೆ, ಸಂಗೀತಾ ರವೀಂದ್ರನಾಥ್ ಅವರು ‘ಬೆಳಕಿನ ಕವಿತೆ..’ ಹಾಡಿಗೆ ಧ್ವನಿ ನೀಡಿದ್ದಾರೆ. ಯೂಟ್ಯೂಬ್ನಲ್ಲಿ ಹಾಡು ನೋಡಿದ ಸಾವಿರಾರು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಎಲ್ಲರಿಂದಲೂ ಪಾಸಿಟಿವ್ ಮಾತುಗಳು ಕೇಳಿಬಂದಿವೆ. ಈ ಚಿತ್ರಕ್ಕೆ ಜಯತೀರ್ಥ ನಿರ್ದೇಶನ ಮಾಡಿದ್ದು, ತಿಲಕ್ ರಾಜ್ ಬಲ್ಲಾಳ್ ಬಂಡವಾಳ ಹೂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:53 pm, Fri, 11 November 22