Banaras: ಶಾರುಖ್​ ಅಥವಾ ಸಲ್ಮಾನ್​.. ಇಬ್ಬರಲ್ಲಿ ಝೈದ್​ ಖಾನ್​ಗೆ ಹೆಚ್ಚು ಇಷ್ಟ ಯಾರು? ಉತ್ತರಿಸಿದ ಜಮೀರ್​ ಪುತ್ರ

Banaras: ಶಾರುಖ್​ ಅಥವಾ ಸಲ್ಮಾನ್​.. ಇಬ್ಬರಲ್ಲಿ ಝೈದ್​ ಖಾನ್​ಗೆ ಹೆಚ್ಚು ಇಷ್ಟ ಯಾರು? ಉತ್ತರಿಸಿದ ಜಮೀರ್​ ಪುತ್ರ

TV9 Web
| Updated By: ಮದನ್​ ಕುಮಾರ್​

Updated on:Sep 27, 2022 | 9:28 AM

Zaid Khan: ‘ಬನಾರಸ್​’ ಟ್ರೇಲರ್​ ಬಿಡುಗಡೆ ಆಗಿದೆ. ಈ ಚಿತ್ರದ ಹೀರೋ ಝೈದ್​ ಖಾನ್​ ಅವರಿಗೆ ಸಲ್ಮಾನ್​ ಖಾನ್​ ಕುಟುಂಬದ ಬೆಂಬಲ ಮತ್ತು ಪ್ರೋತ್ಸಾಹ ಇದೆ.

ಜಮೀರ್​ ಅಹ್ಮದ್​ ಅವರ ಪುತ್ರ ಝೈದ್​ ಖಾನ್​ (Zaid Khan) ಅವರು ರಾಜಕೀಯದ ಹಾದಿಯನ್ನು ಆಯ್ಕೆ ಮಾಡಿಕೊಂಡಿಲ್ಲ. ಬದಲಿಗೆ ಅವರು ಸಿನಿಮಾದ ಕಡೆಗೆ ಆಸಕ್ತಿ ತೋರಿಸಿದ್ದಾರೆ. ಝೈದ್​ ಖಾನ್​ ನಟಿಸಿರುವ ಮೊದಲ ಸಿನಿಮಾ ‘ಬನಾರಸ್​’ ಟ್ರೇಲರ್​ ಲಾಂಚ್​ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಸಲ್ಮಾನ್​ ಖಾನ್​ (Salman Khan) ಅವರ ಸಹೋದರ ಅರ್ಬಾಜ್​ ಖಾನ್​ ಮುಖ್ಯ ಅತಿಥಿಯಾಗಿ ಬಂದಿದ್ದರು. ಈ ವೇಳೆ ‘ಶಾರುಖ್​ ಖಾನ್​ (Shah Rukh Khan) ಮತ್ತು ಸಲ್ಮಾನ್​ ಖಾನ್​.. ಇವರಿಬ್ಬರಲ್ಲಿ ನೀವು ಯಾರನ್ನು ಫಾಲೋ ಮಾಡ್ತೀರಿ’ ಎಂದು ಝೈದ್​ ಖಾನ್​ಗೆ ಪ್ರಶ್ನೆ ಎದುರಾಯಿತು. ‘ನನಗೆ ಇಬ್ಬರ ಮೇಲೂ ಅಭಿಮಾನ ಇದೆ. ಆದರೆ ಸಲ್ಮಾನ್​ ಖಾನ್​ಗೆ ನಾನು ದೊಡ್ಡ ಅಭಿಮಾನಿ’ ಎಂದು ಅವರು ಉತ್ತರ ನೀಡಿದ್ದಾರೆ. ಕನ್ನಡ, ತಮಿಳು, ಹಿಂದಿ, ಮಲಯಾಳಂ ಹಾಗೂ ತೆಲುಗು ಭಾಷೆಯಲ್ಲಿ ‘ಬನಾರಸ್​ ಟ್ರೇಲರ್​ ರಿಲೀಸ್​ ಆಗಿದೆ.

 

Published on: Sep 27, 2022 09:28 AM