AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಂಗ್ ಹಿಡಿದು ಬಂದ ಶಿವರಾಜ್​ಕುಮಾರ್; ರಗಡ್ ಆಗಿದೆ ‘ವೇದ’ ಟೀಸರ್

ಈ ವರ್ಷ ಅವರ ನಟನೆಯ ‘ಬೈರಾಗಿ’ ಸಿನಿಮಾ ತೆರೆಗೆ ಬಂತು. ಈಗ ‘ವೇದ’ ಮೂಲಕ ಅಬ್ಬರಿಸಲು ಶಿವಣ್ಣ ರೆಡಿ ಆಗಿದ್ದಾರೆ.

ಲಾಂಗ್ ಹಿಡಿದು ಬಂದ ಶಿವರಾಜ್​ಕುಮಾರ್; ರಗಡ್ ಆಗಿದೆ ‘ವೇದ’ ಟೀಸರ್
ಶಿವಣ್ಣ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Nov 11, 2022 | 8:10 PM

Share

ಶಿವರಾಜ್​ಕುಮಾರ್ (Shivarajkumar) ನಟನೆಯ ‘ವೇದ’ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಹಿಟ್ ಕಾಂಬಿನೇಷನ್ ಎನಿಸಿಕೊಂಡಿರುವ ಶಿವರಾಜ್​ಕುಮಾರ್ ಹಾಗೂ ಎ. ಹರ್ಷ (A Harsha) ಅವರು ‘ವೇದ’ ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಚಿತ್ರದ ಟೀಸರ್ ಇಂದು (ನವೆಂಬರ್ 11) ರಿಲೀಸ್ ಆಗಿದೆ. ಶಿವಣ್ಣ ಅವರು ಈ ಚಿತ್ರದಲ್ಲಿ ಮಚ್ಚು ಹಿಡಿದು ಅಬ್ಬರಿಸಿದ್ದಾರೆ. ಚಿತ್ರದ ಟೀಸರ್ ಸಖತ್ ರಾ ಆಗಿದೆ.

ಪುನೀತ್ ರಾಜ್​ಕುಮಾರ್ ನಿಧನದ ನಂತರದಲ್ಲಿ ರಾಜ್ ಕುಟುಂಬದಲ್ಲಿ ದುಃಖ ಮನೆ ಮಾಡಿದೆ. ಪುನೀತ್ ನಿಧನದ ನಂತರ ಕೆಲ ತಿಂಗಳು ಶಿವಣ್ಣ ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದಿದ್ದರು. ಈಗ ಅವರು ಮತ್ತೆ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈ ವರ್ಷ ಅವರ ನಟನೆಯ ‘ಬೈರಾಗಿ’ ಸಿನಿಮಾ ತೆರೆಗೆ ಬಂತು. ಈಗ ‘ವೇದ’ ಮೂಲಕ ಅಬ್ಬರಿಸಲು ಶಿವಣ್ಣ ರೆಡಿ ಆಗಿದ್ದಾರೆ.

‘ವೆಪನ್ಸ್ ಆಫ್ ವೇದ’ ಹೆಸರಿನಲ್ಲಿ ಟೀಸರ್ ರಿಲೀಸ್ ಮಾಡಲಾಗಿದೆ. ಇದು ಶಿವರಾಜ್​ಕುಮಾರ್ ಅವರ 125ನೇ ಸಿನಿಮಾ ಎಂಬ ಕಾರಣಕ್ಕೂ ಅಭಿಮಾನಿಗಳ ಪಾಲಿಗೆ ಚಿತ್ರ ವಿಶೇಷ ಎನಿಸಿಕೊಂಡಿದೆ. ಟೀಸರ್​​ಗೆ ಕೊಟ್ಟ ಶೀರ್ಷಿಕೆಯೇ ಹೇಳುವಂತೆ ಕಲ್ಲು, ಮಚ್ಚು, ಲಾಂಗ್​​ ಮೊದಲಾದ ಆಯುಧಗಳನ್ನು ತೋರಿಸಲಾಗಿದೆ. ಈ ಟೀಸರ್​​ನಲ್ಲಿ ಶಿವಣ್ಣ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಕಥೆ 1960ರಲ್ಲಿ ಸಾಗಲಿದೆ ಎಂಬ ಸೂಚನೆಯೂ ಟೀಸರ್​ನಲ್ಲಿ ಸಿಕ್ಕಿದೆ.

ಎ.ಹರ್ಷ ಹಾಗೂ ಶಿವಣ್ಣ ಮೊದಲ ಬಾರಿಗೆ ಕೈ ಜೋಡಿಸಿದ್ದು 2013ರಲ್ಲಿ ತೆರೆಗೆ ಬಂದ ‘ಭಜರಂಗಿ’ ಚಿತ್ರದಲ್ಲಿ. ಈ ಚಿತ್ರ ಹಿಟ್ ಆಯಿತು. ಆ ಬಳಿಕ ‘ವಜ್ರಕಾಯ’ ಹಾಗೂ ‘ಭಜರಂಗಿ 2’ ಚಿತ್ರಗಳಲ್ಲಿ ಇವರು ಒಟ್ಟಾಗಿ ಕೆಲಸ ಮಾಡಿದರು. ಈಗ ‘ವೇದ’ ಚಿತ್ರದ ಮೂಲಕ ಇವರು ಮತ್ತೆ ಒಂದಾಗಿದ್ದಾರೆ. ಈ ಸಿನಿಮಾ ಕ್ರಿಸ್​ಮಸ್​ ಪ್ರಯುಕ್ತ ಈ ವರ್ಷ ಡಿಸೆಂಬರ್ 23ರಂದು ತೆರೆಗೆ ಬರಲಿದೆ.

ಈ ಚಿತ್ರದಲ್ಲಿ ಗಾನವಿ ಲಕ್ಷ್ಮಣ್, ಉಮಾಶ್ರೀ, ಶ್ವೇತಾ ಚಂಗಪ್ಪ ಮೊದಲಾದವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ, ಸ್ವಾಮಿ ಜೆ. ಗೌಡ ಛಾಯಾಗ್ರಹಣ ಇದೆ. ಈ ಚಿತ್ರವನ್ನು ಗೀತಾ ಶಿವರಾಜ್​ಕುಮಾರ್ ಹಾಗೂ ಜೀ ಸ್ಟುಡಿಯೋಸ್ ಒಟ್ಟಾಗಿ ನಿರ್ಮಿಸಿದೆ.

ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ