Orata Prashanth: ‘ಕೋರ’ ಚಿತ್ರದ ಟೀಸರ್ ನೋಡಿ ಅಭಿಪ್ರಾಯ ಹಂಚಿಕೊಂಡ ‘ಒರಟ’ ಪ್ರಶಾಂತ್
Kora Kannada Movie teaser: ‘ಕನ್ನಡದಲ್ಲಿ ಈಗ ಹೊಸ ಅಲೆ ಶುರುವಾಗಿದೆ. ಅಂಥ ಚಿತ್ರಗಳ ಸಾಲಿಗೆ ‘ಕೋರ’ ಕೂಡ ಸೇರ್ಪಡೆ ಆಗಲಿದೆ’ ಎಂದು ‘ಒರಟ’ ಪ್ರಶಾಂತ್ ಭವಿಷ್ಯ ನುಡಿದಿದ್ದಾರೆ.
ನಟ ಸುನಾಮಿ ಕಿಟ್ಟಿ ಅಭಿನಯದ ‘ಕೋರ’ ಸಿನಿಮಾದ ಟೀಸರ್ (Kora Kannada Movie teaser) ಬಿಡುಗಡೆ ಆಗಿದೆ. ಇತ್ತೀಚೆಗೆ ನಡೆದ ಟೀಸರ್ ರಿಲೀಸ್ ಸಮಾರಂಭಕ್ಕೆ ಚಿತ್ರರಂಗದ ಅನೇಕ ಗಣ್ಯರು ಹಾಜರಿ ಹಾಕಿದ್ದರು. ನಟ ಧ್ರುವ ಸರ್ಜಾ ಅವರು ‘ಕೋರ’ ಟೀಸರ್ ಅನಾವರಣ ಮಾಡಿದರು. ವೇದಿಕೆ ಏರಿದ ‘ಒರಟ’ ಪ್ರಶಾಂತ್ (Orata Prashanth) ಅವರು ತಮ್ಮ ಅನಿಸಿಕೆ ಹಂಚಿಕೊಂಡರು. ‘ಕನ್ನಡ ಚಿತ್ರರಂಗದಲ್ಲಿ (Kannada Film Industry) ಈಗ ಹೊಸ ಅಲೆ ಶುರುವಾಗಿದೆ. ಅಂಥ ಚಿತ್ರಗಳ ಸಾಲಿಗೆ ‘ಕೋರ’ ಕೂಡ ಸೇರ್ಪಡೆ ಆಗಲಿದೆ’ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಈ ಚಿತ್ರಕ್ಕೆ ‘ಒರಟ’ ಶ್ರೀ ನಿರ್ದೇಶನ ಮಾಡಿದ್ದಾರೆ.
Published on: Nov 11, 2022 02:45 PM
Latest Videos