ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿದ ಧ್ರುವ ಸರ್ಜಾ; ಇದನ್ನು ನಡೆಸಿಕೊಡ್ತಾರಾ ಫ್ಯಾನ್ಸ್?
ಕೆ. ಮಂಜು ಪುತ್ರ ಶ್ರೇಯಸ್ ಅಭಿನಯದ ‘ರಾಣ’ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಧ್ರುವ ಆಗಮಿಸಿದ್ದರು. ಈ ವೇಳೆ ಅವರು ಟ್ರೇಲರ್ ಬಿಡುಗಡೆ ಮಾಡಿ ತಂಡದವರಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಧ್ರುವ ಸರ್ಜಾ (Dhruva Sarja) ಅವರು ಕನ್ನಡದ ಅನೇಕ ಸಿನಿಮಾಗಳಿಗೆ ಬೆಂಬಲ ನೀಡಿದ್ದಾರೆ. ಈಗ ಕೆ. ಮಂಜು (K. Manju) ಪುತ್ರ ಶ್ರೇಯಸ್ ಅಭಿನಯದ ‘ರಾಣ’ ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಧ್ರುವ ಆಗಮಿಸಿದ್ದರು. ಈ ವೇಳೆ ಅವರು ಟ್ರೇಲರ್ ಬಿಡುಗಡೆ ಮಾಡಿ ತಂಡದವರಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಧ್ರುವ ಅವರು ಈ ಸಂದರ್ಭದಲ್ಲಿ ವಿಶೇಷ ಮನವಿ ಮಾಡಿದ್ದಾರೆ. ‘ನಾನು ಈ ನಟನ ಫ್ಯಾನ್ ಅವರ ಸಿನಿಮಾ ನೋಡಲ್ಲ ಎಂದು ಹೇಳಬೇಡಿ. ಎಲ್ಲರೂ ಕನ್ನಡ ಸಿನಿಮಾ ನೋಡಿ’ ಎಂದು ಕೋರಿದ್ದಾರೆ.
Published on: Oct 24, 2022 03:01 PM
Latest Videos