ಕಲಬುರಗಿ: ಮಸೀದಿಯಲ್ಲಿರೋ ಕೆಲ ಮುಸ್ಲಿಂರು ಕಳ್ಳತನ ಮಾಡ್ತಾಯಿದ್ದಾರೆ ಅಂತ ಆರೋಪಿಸಿ ಗ್ರಾಮದ ಜನರು ಮಸೀದಿಗೆ ಮುತ್ತಿಗೆ ಹಾಕಿದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಆನೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಸೀದಿಯಲ್ಲಿದ್ದ ಕೆಲ ಮುಸ್ಲಿಂರು, ಕಳ್ಳತನ ಮಾಡೋದು, ನಂತರ ಮಸೀದಿಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಅಂತ ಮಸೀದಿಗೆ ಮುತ್ತಿಗೆ ಹಾಕಿದ್ದರು. ಮಾಹಿತಿ ತಿಳಿದ ಅಫಜಲಪುರ ಠಾಣೆಯ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ, ಮಸೀದಿಯಲ್ಲಿದ್ದ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.