ಮುಖ್ಯಮಂತ್ರಿಯಾಗುವ ಅವಕಾಶವಿದ್ದ ಸಂದರ್ಭದಲ್ಲಿ ಕೊರಟಗೆರೆ ಜನ ನನ್ನ ಕೈಬಿಟ್ಟರು: ಡಾ ಜಿ ಪರಮೇಶ್ವರ್
ಕೊರಟಗೆರೆ ಕ್ಷೇತ್ರದ ಜನ ತಮ್ಮನ್ನು ಎರಡು ಬಾರಿ ಗೆಲ್ಲಿಸಿರುವುದು ನಿಜವಾದರೂ ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲ ಅವಕಾಶಗಳಿದ್ದ 2013 ರಲ್ಲಿ ಸೋಲಿಸಿಬಿಟ್ಟರು ಎಂದು ಪರಮೇಶ್ವರ್ ವಿಷಾದದಿಂದ ಹೇಳಿದರು.
ತುಮಕೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಾ ಜಿ ಪರಮೇಶ್ವರ್ (Dr G Parmeshwar) ಅವರಿಗೆ 2013ರ ವಿಧಾನ ಸಭಾ ಚುನಾವಣೆಯಲ್ಲಿ ಅನುಭವಿಸಿದ ಸೋಲು ಈಗಲೂ ಕಾಡುತ್ತಿದೆ. ತಾವು ಪ್ರತಿನಿಧಿಸುವ ಕೊರಟಗೆರೆ (Koratagere) ಕ್ಷೇತ್ರದ ಜನ ತಮ್ಮನ್ನು ಎರಡು ಬಾರಿ ಗೆಲ್ಲಿಸಿರುವುದು ನಿಜವಾದರೂ ರಾಜ್ಯದ ಮುಖ್ಯಮಂತ್ರಿಯಾಗುವ (chief minister) ಎಲ್ಲ ಅವಕಾಶಗಳಿದ್ದ 2013 ರಲ್ಲಿ ತಮ್ಮನ್ನು ಸೋಲಿಸಿಬಿಟ್ಟರು ಎಂದು ವಿಷಾದದಿಂದ ಹೇಳಿದ ಅವರು, ಸೋಲಿನ ಹೊರತಾಗಿಯೂ ಕ್ಷೇತ್ರದ ಅಭಿವೃದ್ಧಿಗಾಗಿ ಶಕ್ತಿಮೀರಿ ಶ್ರಮಿಸಿರುವುದಾಗಿ ಹೇಳಿದರು. ಕೊರಟಗೆರೆಯ ತೋವಿನಕೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತಾಡುತ್ತಿದ್ದರು.
Latest Videos