Hasanamba Temple: ಹಾಸನಾಂಬೆ ದರ್ಶನಕ್ಕೆ ಅವಕಾಶ ಸಿಗದೇ ಬಿಜೆಪಿ ಎಂಎಲ್ಎ ವಾಪಸ್

Hasanamba Temple: ಹಾಸನಾಂಬೆ ದರ್ಶನಕ್ಕೆ ಅವಕಾಶ ಸಿಗದೇ ಬಿಜೆಪಿ ಎಂಎಲ್ಎ ವಾಪಸ್

TV9 Web
| Updated By: Rakesh Nayak Manchi

Updated on:Oct 23, 2022 | 7:20 PM

ಹಾಸನಾಂಬ ದೇವಿಯ ದರ್ಶನಕ್ಕೆ ಅವಕಾಶ ಸಿಗದ ಹಿನ್ನೆಲೆ ಬಿಜೆಪಿ ಶಾಸಕ ನಾಗೇಂದ್ರ ಅವರು ವಾಪಸ್ಸಾದ ಘಟನೆ ನಡೆದಿದೆ. ಇದೇ ವೇಳೆ ಎಸ್​ಪಿ ಎಂ.ಕೆ.ತಮ್ಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಾಸನ: ತಮ್ಮ ಬೆಂಬಲಿರ ಜೊತೆ ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಮೈಸೂರು ಜಿಲ್ಲೆ ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಅವರಿಗೆ ದೇವಾಲಯದ ಒಳಗೆ ಪ್ರವೇಶಕ್ಕೆ ಅವಕಾಶ ಸಿಗದೆ ಪರದಾಡುವಂತಾಯಿತು. ಸುಮಾರು ಒಂದು ಗಂಟೆ ಕಾದರೂ ದೇವಾಲಯ ಒಳಗೆ ತೆರಳಲಾಗದದ ಅವರು ಬಳಿಕ ವಾಪಸ್ಸಾದರು. ಈ ವೇಳೆ ಶಾಸಕರು ಎಎಸ್​ಪಿ ಎಂ.ಕೆ.ತಮ್ಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಾಸಕರೊಂದಿಗೆ ಹತ್ತಾರು ಬೆಂಬಲಿಗರು ಬಂದಿದ್ದರಿಂದ ಪ್ರವೇಶ ನಿರಾಕರಿಸಿದ ಎಸ್​ಪಿ, ನಿಮ್ಮ ಜೊತೆ ನಾಲ್ಕು ಜನ ಮಾತ್ರ ಬನ್ನಿ ಎಂದು ಶಾಸಕರಿಗೆ ಹೇಳಿದ್ದಾರೆ. ಕೂಡಲೇ ಗೃಹ ಇಲಾಖೆಗೆ ಕರೆ ಮಾಡಿದ ಶಾಸಕರು, ನೋಡಿ ನಾನೊಬ್ಬ ಶಾಸಕ ಬಂದಿದ್ದೇನೆ. ನನ್ನ ಜೊತೆ ಒಳ ಹೋಗುವಾಗ 25 ಜನ ನಿಂತಿದ್ದಾರೆ. ಅವನು ಬಂದು ಶಾಸಕರಾದರೆ ನೀವೊಬ್ಬರೇ ಬನ್ನಿ ಅಂತಾನೆ. ನೋಡಿ ಅವನಿಗೆ ಡೈರೆಕ್ಷನ್ ಕೊಡಿ, ನಾನು ಬರುತ್ತೇನೆ. ಗೃಹಸಚಿವರಲ್ಲಿಇ ಮಾತನಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಣೆ ಮಾಡಲು ಇಲ್ಲಿ ಕ್ಲಿಕ್ ಮಾಡಿ

Published on: Oct 23, 2022 07:15 PM