‘ಎಲ್ಲೆಲ್ಲಿ ಯಾವ ತಿಂಡಿ ಸಿಗುತ್ತೆ ಅನ್ನೋದು ಅವರಿಗೆ ಗೊತ್ತಿತ್ತು’; ಅಪ್ಪು ಬಗ್ಗೆ ಡಾಲಿ ಮಾತು
‘ಅಪ್ಪು ಸರ್ಗೆ ಆಹಾರದ ಬಗ್ಗೆ ಸಾಕಷ್ಟು ಪ್ರೀತಿ ಇತ್ತು. ಎಲ್ಲೆಲ್ಲಿ ಯಾವ ತಿಂಡಿ ಸಿಗುತ್ತೆ ಅನ್ನೋದು ಅವರಿಗೆ ಗೊತ್ತಿತ್ತು’ ಎಂದು ಹೇಳಿದ್ದಾರೆ ಧನಂಜಯ್.
‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡು ಒಂದು ವರ್ಷ ಆಗುತ್ತಾ ಬಂದಿದೆ. ಅವರನ್ನು ಫ್ಯಾನ್ಸ್ ವಿವಿಧ ರೀತಿಯಲ್ಲಿ ನೆನಪಿಸಿಕೊಳ್ಳುತ್ತಿದ್ದಾರೆ. ಅನೇಕ ವೃತ್ತ, ಪಾರ್ಕ್ ಹಾಗೂ ರಸ್ತೆಗಳಿಗೆ ಪುನೀತ್ ಹೆಸರನ್ನು ಇಡಲಾಗಿದೆ. ಅವರ ಪುಣ್ಯಸ್ಮರಣೆ ಸಂದರ್ಭದಲ್ಲಿ ‘ಅಪ್ಪು ಫುಡ್ ಫೆಸ್ಟಿವಲ್’ ಮಾಡಲಾಗುತ್ತಿದೆ. ಇದಕ್ಕೆ ‘ಹೆಡ್ ಬುಷ್’ (Head Bush) ನಾಯಕ ಧನಂಜಯ್ ಆಗಮಿಸಿದ್ದಾರೆ. ಈ ವೇಳೆ ಅವರು ಅಪ್ಪು ಬಗ್ಗೆ ಮಾತನಾಡಿದ್ದಾರೆ. ‘ಅಪ್ಪು ಸರ್ಗೆ ಆಹಾರದ ಬಗ್ಗೆ ಸಾಕಷ್ಟು ಪ್ರೀತಿ ಇತ್ತು. ಎಲ್ಲೆಲ್ಲಿ ಯಾವ ತಿಂಡಿ ಸಿಗುತ್ತೆ ಅನ್ನೋದು ಅವರಿಗೆ ಗೊತ್ತಿತ್ತು’ ಎಂದು ಹೇಳಿದ್ದಾರೆ ಧನಂಜಯ್.
Latest Videos