AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾನು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹೊರಿಸಿದ ವಿನೋದ್​ ಗೊಬ್ಬರಗಾಲ: ಪಾಠ ಹೇಳಿದ ಕಿಚ್ಚ ಸುದೀಪ್​​ 

ಆಟದಲ್ಲಿ ಆರ್ಯವರ್ಧನ್ ಗುರೂಜಿಗೆ ಪ್ರತಿ ಸ್ಫರ್ಧಿಯಾಗಿ ಆಡಿದವರು ವಿನೋದ್​ ಗೊಬ್ಬರಗಾಲ. ಇವರಿಗೆ ಆಟದ ನಿಮಯ ಚೆನ್ನಾಗಿ ಗೊತ್ತಿದ್ದರು ಕೂಡ ಆರ್ಯವರ್ಧನ್ ಗುರೂಜಿ ಮಾಡಿದ ತಪ್ಪನ್ನೇ ಇವರು ಮಾಡುತ್ತಾರೆ.

ತಾನು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹೊರಿಸಿದ ವಿನೋದ್​ ಗೊಬ್ಬರಗಾಲ: ಪಾಠ ಹೇಳಿದ ಕಿಚ್ಚ ಸುದೀಪ್​​ 
ವಿನೋದ್​ ಗೊಬ್ಬರಗಾಲ, ಕಿಚ್ಚ ಸುದೀಪ್​​ 
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Nov 26, 2022 | 11:06 PM

Share

ಬಿಗ್​ ಬಾಸ್ ಮನೆಯಲ್ಲಿ​​ ದಿನಕಳೆದಂತೆ ಆಟ ಕಠಿಣ ಆಗುತ್ತಿದೆ. ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಕಾವು ಹೆಚ್ಚಾಗುತ್ತಿದೆ. ಈ ವಾರ ಬಿಗ್​ ಬಾಸ್​ ಮನೆಯ ಎಲ್ಲಾ ಸ್ಪರ್ಧಿಗಳು ನಾಮಿನೇಟ್​ ಆಗಿದ್ದರು. ಜೊತೆಗೆ ಮನೆಗೆ ಕ್ಯಾಪ್ಟನ್​ ಕೂಡ ಇರಲಿಲ್ಲ. ಹಾಗಾಗಿ ತಮ್ಮನ್ನು ತಾವು ಕಾಪಾಡಿಕೊಳ್ಳಲು ಸ್ಪರ್ಧಿಗಳು ಹಲವು ಸರ್ಕಸ್​ ಮಾಡಿದ್ದಾರೆ. ಈ ವಾರ ಬಿಗ್ ಬಾಸ್​ ಮನೆ ಮಂದಿಗೆಲ್ಲ ಒಂದು ವಿಚಿತ್ರ ಟಾಸ್ಕ್ ನೀಡಿದ್ದರು. ಅದುವೇ ಕಾಡಿನ ಟಾಸ್ಕ್. ಈ ಟಾಸ್ಕ್ ವೇಳೆ ಆರ್ಯವರ್ಧನ್ ಗುರೂಜಿ (Aryavardhan Guruji) ಅವರು ಆಡಿದ ರೀತಿಗೆ ಬಿಗ್ ಬಾಸ್ (Bigg Boss) ಕಠಿಣ ಶಿಕ್ಷೆ ನೀಡಿದ್ದರು.

ಟಾಸ್ಕ್​ನ ಅನುಸಾರ ನೀರಿನಲ್ಲಿ ಮರದ ಪಂಜರ ಒಂದನ್ನು ಇಡಲಾಗಿತ್ತು. ಅದಕ್ಕೆ 12 ನಟ್​ಗಳನ್ನು ಜೋಡಿಸಲಾಗಿತ್ತು. ಅದನ್ನು ಆಟ ಆಡುವ ಸ್ಪರ್ಧಿಗಳು ಬರಿಗೈನಲ್ಲಿ ಬಿಚ್ಚಬೇಕಿತ್ತು. ಈ ಆದೇಶ ಬಂದ ಹೊರತಾಗಿಯೂ ಆರ್ಯವರ್ಧನ್​ ಬಟ್ಟೆ​​ ಸಹಾಯದಿಂದ ನಟ್ ಬಿಚ್ಚಿದ್ದರು ಇದು ಬಿಗ್​ ಬಾಸ್​ ಮನೆಯ ಇತರೆ ಸ್ಪರ್ಧಿಗಳ ಕೆಂಗೆಣ್ಣಿಗೆ ಗುರಿಯಾಗಿತ್ತು. ಏಕೆಂದರೆ ಮನೆಗೆ ಬರಬೇಕಿದ್ದ ಸೌಕರ್ಯವನ್ನು ಕಳೆದುಕೊಳ್ಳಬೇಕಾಯಿತು.

ಇದೇ ಆಟದಲ್ಲಿ ಆರ್ಯವರ್ಧನ್ ಗುರೂಜಿಗೆ ಜೊತೆ ಆಡಿದವರು ವಿನೋದ್​ ಗೊಬ್ಬರಗಾಲ. ಇವರಿಗೆ ಆಟದ ನಿಮಯ ಚೆನ್ನಾಗಿ ಗೊತ್ತಿದ್ದರು ಕೂಡ ಆರ್ಯವರ್ಧನ್ ಗುರೂಜಿ ಮಾಡಿದ ತಪ್ಪನ್ನೇ ಇವರು ಮಾಡುತ್ತಾರೆ. ಆದರೆ ತಮ್ಮ ತಪ್ಪನ್ನು ಮುಚ್ಚಿಟ್ಟು ಆರ್ಯವರ್ಧನ್ ಗುರೂಜಿ ಅವರ ಮೇಲೆ ಹಾಕುತ್ತಾರೆ. ಇದೇ ವಿಚಾರವಾಗಿ ಶನಿವಾರ (ನ.26) ನಡೆದ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಚರ್ಚೆ ಆಗಿದೆ.

ನಟ ಕಿಚ್ಚ ಸುದೀಪ್​ ಅವರು ಈ ಟಾಸ್ಕ್​ನ ಕುರಿತಾಗಿ ವಿನೋದ್​ ಗೊಬ್ಬರಗಾಲ ಅವರನ್ನು ಪ್ರಶ್ನಿಸಿದ್ದಾರೆ. ನೀವು ಕೂಡ ಪ್ಯಾಂಟ್ ಬಳಸಿ ನಟ್ ಬಿಚ್ಚಿವುದಕ್ಕೆ ಪ್ರಯತ್ನಿಸಿದ್ರಾ ಇಲ್ವಾ ಎಂದು ಪ್ರಶ್ನಿಸಿದರು. ಇದಕ್ಕೆ ವಿನೋದ್ ಅವರು ಟ್ರೈ ಮಾಡಿದೆ ಎಂದು ಉತ್ತರಿಸಿದ್ದಾರೆ. ಬಳಿಕ ಸುದೀಪ್ ನಿಮ್ಮಿಂದ ಎರಡು ತಪ್ಪುಗಳಾಗಿವೆ. ಒಂದು ಟಾಸ್ಕ್​​ನ ಸರಿಯಾಗಿ ಕೇಳಿಸಿಕೊಳ್ಳದೇ ಅದನ್ನ ತಪ್ಪಾಗಿ ಮಾಡಿರುವುದು. ಇನ್ನೊಂದು ಮಾಡಿರುವ ತಪ್ಪನ್ನು ಬೇರೆಯವರ ಮೇಲೆ ಹಾಕುವುದು ಎಂದರು.

ಕನ್ನಡಿ ಇದೆ ಸರ್, ಒಂದು ಆ್ಯಂಗಲ್​ನಲ್ಲಿ ನಿಂತರೆ, ಬೇರೆಯವರು ಕಾಣುತ್ತಾರೆ. ಅದೇ ಎದುರಿಗೆ ನಿಂತರೆ, ನಾವೇ ಕಾಣುವುದು ಎಂದರು. ಅಲ್ಲಿಗೆ ನಮ್ಮ ತಪ್ಪನ್ನು ಮುಚ್ಚಿಟ್ಟು ಬೇರೆಯವರ ತಪ್ಪನ್ನು ಸಂಭ್ರಮಿಸುವುದು ಸರಿ ಅಲ್ಲ ಎಂದು ಕನ್ನಡಿ ಉದಾಹರಣೆಯೊಂದಿಗೆ ಸುದೀಪ್​ ತಿಳಿಹೇಳಿದರು.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.               

Published On - 10:53 pm, Sat, 26 November 22