‘5 ವರ್ಷಗಳ ಕಾಲ ಆಸ್ತಿಯನ್ನು ಯಾರ ಹೆಸರಿಗೂ ಬರೆಯುವಂತಿಲ್ಲ’; ರತ್ನಮಾಲಾ ಕಂಡೀಷನ್ ನೋಡಿ ಭುವಿ ಕಂಗಾಲು

ಆಸ್ತಿ ವಿಚಾರದಲ್ಲಿ ಭುವಿಗೆ ತಲೆಬಿಸಿ ಶುರುವಾಗಿದೆ. ರತ್ನಮಾಲಾ ಬರೆದಿಟ್ಟ ಎಲ್ಲಾ ಆಸ್ತಿಯನ್ನು ಹರ್ಷನಿಗೆ ಬರೆಯಬೇಕು ಎಂದು ಆಕೆ ಆಲೋಚಿಸಿದ್ದಾಳೆ. ಆತನೇ ವಾರಸುದಾರ ಆಗಬೇಕು ಎಂಬುದು ಆಕೆಯ ಆಸೆ.

‘5 ವರ್ಷಗಳ ಕಾಲ ಆಸ್ತಿಯನ್ನು ಯಾರ ಹೆಸರಿಗೂ ಬರೆಯುವಂತಿಲ್ಲ’; ರತ್ನಮಾಲಾ ಕಂಡೀಷನ್ ನೋಡಿ ಭುವಿ ಕಂಗಾಲು
ರತ್ನಮಾಲಾ-ಭುವಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 29, 2022 | 8:15 AM

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
Image
ಹರ್ಷನ ಸುಳ್ಳಿನಿಂದ ನೊಂದುಕೊಂಡ ಭುವಿ; ಕೋಟಿ ಕೋಟಿ ಒಡತಿಗೆ ಈಗ ಹಲವು ಅಡೆತಡೆ
Image
ಉರಿಯುತ್ತಿರುವ ರತ್ನಮಾಲಾ ಚಿತೆ ಎದುರು ಹೊಸ ಪ್ರತಿಜ್ಞೆ ಮಾಡಿದ ವರು; ಹರ್ಷ-ಭುವಿಗೆ ಇನ್ನಿದೆ ಕಷ್ಟ
Image
ಹರ್ಷ-ಭುವಿನ ಬೇರೆ ಮಾಡೋಕೆ ಮಾಸ್ಟರ್​ ಪ್ಲ್ಯಾನ್ ಮಾಡಿದ ವರುಧಿನಿ
Image
ರತ್ನಮಾಲಾ ಅಂತ್ಯಸಂಸ್ಕಾರ: ಕುಸಿದ ಹೋದ ಹರ್ಷ; ವಿಲ್ ವಿಚಾರ ಹೇಳಲು ಮುಂದಾದ ವರುಧಿನಿ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಹರ್ಷ ಹಾಗೂ ಭುವಿ ಮಧ್ಯೆ ಅಂತರ ಮೂಡುವ ಸೂಚನೆ ಸಿಕ್ಕಿದೆ. ಇದಕ್ಕೆ ಕಾರಣ ಆಗಿದ್ದು ವರುಧಿನಿ ಪ್ಲ್ಯಾನ್. ಈ ದಂಪತಿಯನ್ನು ಕಂಡರೆ ಆತೆ ಸಾಕಷ್ಟು ಉರಿದುಕೊಳ್ಳುತ್ತಾಳೆ. ಇವರನ್ನು ಬೇರೆ ಮಾಡಲೇಬೇಕು ಎಂಬ ನಿರ್ಧಾರಕ್ಕೆ ಆಕೆ ಬಂದಿದ್ದಾಳೆ. ಈಗ ಹೊಸ ಪ್ಲ್ಯಾನ್​ನೊಂದಿಗೆ ಆಕೆ ಬಂದಿದ್ದಾಳೆ. ಇದು ಯಶಸ್ಸು ಕಾಣುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಅಸ್ಥಿ ವಿಸರ್ಜನೆ ವೇಳೆ ಡ್ರಾಮಾ

ರತ್ನಮಾಲಾ ಮೃತಪಟ್ಟ ಕೆಲವೇ ದಿನಕ್ಕೆ ದೊಡ್ಡ ಡ್ರಾಮಾ ಶುರುವಾಗಿದೆ. ಸುದರ್ಶನ್ ಆಸ್ತಿಯಲ್ಲಿ ಭಾಗ ಕೇಳಲು ಪ್ಲ್ಯಾನ್ ಮಾಡಿಕೊಂಡಿದ್ದಾನೆ. ಹರ್ಷನ ಅರೆಸ್ಟ್ ಮಾಡಿಸಲು ಸಾನಿಯಾ ಪ್ಲ್ಯಾನ್ ಮಾಡಿದ್ದಾಳೆ. ತನ್ನ ಮೇಲೆ ಕೊಲೆ ಪ್ರಯತ್ನಕ್ಕೆ ಹರ್ಷ ಮುಂದಾಗಿದ್ದಾನೆ ಎಂದು ಸಾನಿಯಾ ಈ ಮೊದಲಿನಿಂದಲೂ ಆರೋಪ ಮಾಡುತ್ತಲೇ ಬರುತ್ತಿದ್ದಾಳೆ. ಇದನ್ನೇ ಮುಂದಿಟ್ಟುಕೊಂಡು ಹರ್ಷನನ್ನು ಅರೆಸ್ಟ್ ಮಾಡಿಸಲು ಸಾನಿಯಾ ಯೋಚಿಸಿದ್ದಾಳೆ. ಶ್ರೀರಂಗಪಟ್ಟಣದಲ್ಲಿ ಅಸ್ಥಿ ಬಿಡುವ ಸಂದರ್ಭದಲ್ಲೇ ಭುವಿಯನ್ನು ಅರೆಸ್ಟ್​ ಮಾಡಿಸುವ ಆಲೋಚನೆ ಸಾನಿಯಾಗೆ ಇದೆ.

ಸುದರ್ಶನ್​ ಕೂಗಾಟ

ರತ್ನಮಾಲಾ ತಾನು ಮಾಡಿದ ಆಸ್ತಿಯನ್ನು ಭುವಿ ಹೆಸರಿಗೆ ಬರೆದು ಆಗಿದೆ. ಈ ವಿಚಾರ ಬಹುತೇಕರಿಗೆ ಗೊತ್ತಿಲ್ಲ. ಈ ವಿಚಾರ ತಿಳಿದುಕೊಂಡ ವರುಧಿನಿ ಸಾಕಷ್ಟು ಆತಂಕಗೊಂಡಿದ್ದಾಳೆ. ಈ ಮಧ್ಯೆ ಸುದರ್ಶನ್ ತಾನು ಆಸ್ತಿಯಲ್ಲಿ ಭಾಗ ಕೇಳಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾನೆ. ಸುದರ್ಶನ್ ಆಡುತ್ತಿದ್ದ ಮಾತುಗಳನ್ನು ಹರ್ಷ ಕೇಳಿಸಿಕೊಂಡಿದ್ದಾನೆ. ಇದು ಆತನಿಗೆ ಬೇಸರ ಮೂಡಿಸಿದೆ.

5 ವರ್ಷ ಆಸ್ತಿ ಹಸ್ತಾಂತರಿಸುವಂತಿಲ್ಲ

ಆಸ್ತಿ ವಿಚಾರದಲ್ಲಿ ಭುವಿಗೆ ತಲೆಬಿಸಿ ಶುರುವಾಗಿದೆ. ರತ್ನಮಾಲಾ ಬರೆದಿಟ್ಟ ಎಲ್ಲಾ ಆಸ್ತಿಯನ್ನು ಹರ್ಷನಿಗೆ ಬರೆಯಬೇಕು ಎಂದು ಆಕೆ ಆಲೋಚಿಸಿದ್ದಾಳೆ. ಆತನೇ ವಾರಸುದಾರ ಆಗಬೇಕು ಎಂಬುದು ಆಕೆಯ ಆಸೆ. ಭುವಿ ಹೆಸರಿಗೆ ಆಸ್ತಿ ಬರೆದರೆ ಆಕೆ ಇದೇ ರೀತಿ ಮಾಡುತ್ತಾಳೆ ಅನ್ನೋದು ರತ್ನಮಾಲಾಗೆ ಮೊದಲೇ ತಿಳಿದಂತಿತ್ತು. ಹೀಗಾಗಿ, ವಿಲ್​ನಲ್ಲಿ ಒಂದು ವಿಚಾರವನ್ನು ಸ್ಪಷ್ಟವಾಗಿ ಬರೆದಿದ್ದಳು.

ಭುವಿ ವಿಲ್​ನ ಹಿಡಿದುಕೊಂಡು ವಕೀಲರ ಬಳಿ ಬಂದಿದ್ದಾಳೆ. ಬಂದು ಈ ಆಸ್ತಿಯನ್ನು ಹರ್ಷನ ಹೆಸರಿಗೆ ಬರೆಯಬೇಕು ಎಂದುಕೊಂಡಿದ್ದೀನಿ ಎಂದು ಹೇಳಿದ್ದಾಳೆ. ‘ಮೇಡಂ, ನೀವು ವಿಲ್​ನಲ್ಲಿರುವ ವಿಚಾರವನ್ನು ಸರಿಯಾಗಿ ನೋಡಿಲ್ಲ ಅನಿಸುತ್ತದೆ. ನಿಮ್ಮ ಹೆಸರಲ್ಲಿರುವ ಆಸ್ತಿಯನ್ನು ಐದು ವರ್ಷ ಯಾರ ಹೆಸರಿಗೂ ಬದಲಾಯಿಸುವಂತಿಲ್ಲ ಎಂದು ಬರೆಯಲಾಗಿದೆ. ಹೀಗಾಗಿ ಯಾರ ಹೆಸರಿಗೂ ಅದನ್ನು ಬರೆಯುವಂತಿಲ್ಲ’ ಎಂದಿದ್ದಾರೆ ವಕೀಲರು. ವಿಲ್​ನಲ್ಲಿ ರತ್ನಮಾಲಾ ಹಾಕಿರುವ ಕಂಡೀಷನ್ ನೋಡಿ ಭುವಿಗೆ ಶಾಕ್ ಆಗಿದೆ.

ರತ್ನಮಾಲಾ ನಿರ್ಧಾರ ಒಪ್ಪಿಕೊಂಡ ಹರ್ಷ?

ಭುವಿ ಹೆಸರಿಗೆ ರತ್ನಮಾಲಾ ಆಸ್ತಿ ಬರೆಯುತ್ತಾಳೆ ಎಂದು ಹರ್ಷ ಊಹಿಸಿರಲಿಲ್ಲ. ಆಸ್ತಿ ಬರೆದ ವಿಚಾರ ಕೇಳಿ ಆತನಿಗೆ ಶಾಕ್ ಆಗಿದೆ. ಆದರೆ, ಇದನ್ನು ಆತ ಒಪ್ಪಿಕೊಳ್ಳುತ್ತಿದ್ದಾನೆ. ನೇರವಾಗಿ ಈ ವಿಚಾರ ಹೇಳದೆ ಇದ್ದರೂ ಪರೋಕ್ಷವಾಗಿ ಈ ವಿಚಾರವನ್ನು ಒಪ್ಪಿಕೊಂಡಂತಿದೆ. ಹರ್ಷನಿಗೆ ಆಸ್ತಿ ವಿಚಾರದಲ್ಲಿ ಚುಚ್ಚಿ ಚುಚ್ಚಿ ಮಾತನಾಡುವ ಕೆಲಸ ವರುಧಿನಿಯಿಂದ ಆಗಿತ್ತು. ಆದರೆ, ಅದು ಅಷ್ಟು ಪ್ರಭಾವ ಬೀರಿದಂತೆ ಕಾಣಲೇ ಇಲ್ಲ. ಇದನ್ನು ನೋಡಿ ವರುಧಿನಿಗೆ ಕೊಂಚ ಅಂಜಿಕೆ ಆಗಿದೆ.

ಸಾನಿಯಾ ಪ್ಲ್ಯಾನ್ ಫ್ಲಾಪ್

ಸಾನಿಯಾಳನ್ನು ಹರ್ಷ ಕೆಲಸದಿಂದ ತೆಗೆಸಿದ್ದ. ಈ ವಿಚಾರದಲ್ಲಿ ಆಕೆ ಠಾಣೆಯ ಮೆಟ್ಟಿಲೇರಿದ್ದಾಳೆ. ಹರ್ಷನನ್ನು ಅರೆಸ್ಟ್ ಮಾಡಲು ಸಾನಿಯಾ ಪ್ಲ್ಯಾನ್ ರೂಪಿಸಿರುವ ವಿಚಾರ ಭುವಿಗೆ ಗೊತ್ತಾಗಿದೆ. ಹೀಗಾಗಿ, ಸಾನಿಯಾ ಪ್ಲ್ಯಾನ್ ಫ್ಲಾಪ್ ಮಾಡಲು ಭುವಿ ಹೊಸ ಯೋಜನೆ ಹುಡುಕುತ್ತಿದ್ದಾಳೆ.

ಶ್ರೀಲಕ್ಷ್ಮಿ ಎಚ್.

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ