Kannadathi Serial: ಸೌಪರ್ಣಿಕಾ ಹೆಸರಿನ ಚರ್ಚೆಯಿಂದ ಬೇಸರಗೊಂಡ ಭುವಿ; ಹರ್ಷನ ಬಗ್ಗೆ ಬಂತು ಕೋಪ
ಹರ್ಷ ಹಾಗೂ ಭುವಿನ ಬೇರೆ ಮಾಡಬೇಕು ಎಂಬುದು ವರುಧಿನಿ ಪ್ಲ್ಯಾನ್. ಇದಕ್ಕೆ ಆಕೆ ಸಾಕಷ್ಟು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾಳೆ. ಆದರೆ, ಅದು ಯಶಸ್ಸು ಕಂಡಿಲ್ಲ. ಈಗ ರತ್ನಮಾಲಾ ಬರೆದ ವಿಲ್ ಅಸ್ತ್ರವನ್ನು ಪ್ರಯೋಗ ಮಾಡಿದ್ದಾಳೆ ವರು.
ಧಾರಾವಾಹಿ: ಕನ್ನಡತಿ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 7.30
ನಿರ್ದೇಶನ: ಯಶ್ವಂತ್ ಪಾಂಡು
ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ರತ್ನಮಾಲಾಳ ಅಸ್ಥಿ ಬಿಡಲು ಎಲ್ಲರೂ ಶ್ರೀರಂಗಪಟ್ಟಣಕ್ಕೆ ಹೊರಡಲು ರೆಡಿ ಆಗಿದ್ದರು. ಅಸ್ಥಿ ಬಿಡುವ ಸಂದರ್ಭದಲ್ಲಿ ಸುದರ್ಶನ್ ಆಸ್ತಿಯಲ್ಲಿ ಪಾಲು ಕೇಳುವ ನಿರ್ಧಾರಕ್ಕೆ ಬಂದಿದ್ದಾನೆ. ಅಸಲಿ ವಿಚಾರ ಏನೆಂದರೆ ರತ್ನಮಾಲಾ ಬರೆದಿಟ್ಟ ಆಸ್ತಿಯನ್ನು ಮುಂದಿನ ಐದು ವರ್ಷಗಳ ಕಾಲ ಯಾರ ಹೆಸರಿಗೂ ವರ್ಗಾಯಿಸಲು ಸಾಧ್ಯವಿಲ್ಲ. ರತ್ನಮಾಲಾ ಹೀಗೊಂದು ವಿಲ್ ಬರೆದಿಟ್ಟಿದ್ದಾಳೆ. ಈ ವಿಚಾರ ತಿಳಿದರೆ ಎಲ್ಲರಿಗೂ ಶಾಕ್ ಆಗೋದು ಗ್ಯಾರಂಟಿ.
ವರುಧಿನಿಗೆ ಚಾಡಿ ಹೇಳುವ ಕೆಲಸ
ಹರ್ಷನ ಬಳಿ ಹೋಗಿ ವರುಧಿನಿ ಚಾಡಿ ಹೇಳುವ ಕೆಲಸ ಮಾಡುತ್ತಿದ್ದಾಳೆ. ರತ್ನಮಾಲಾ ಆಸ್ತಿಗೆ ಹರ್ಷ ಒಡೆಯನಾಗಬೇಕಿತ್ತು. ಆದರೆ, ಈ ಆಸ್ತಿ ಸೇರಿದ್ದು ಭುವಿಗೆ. ಈ ವಿಚಾರದಲ್ಲಿ ವರುಧಿನಿಗೆ ಬೇಸರ ಇದೆ. ಆಕೆ ಹೇಗಾದರೂ ಮಾಡಿ ಈ ವಿಚಾರವನ್ನು ಹರ್ಷನಿಗೆ ತಿಳಿಸಿ ತನ್ನ ಕಡೆ ಆತನನ್ನು ಒಲಿಸಿಕೊಳ್ಳಬೇಕು ಎಂದು ಪ್ಲ್ಯಾನ್ ಮಾಡಿದ್ದಳು. ಆದರೆ, ಈ ಪ್ಲ್ಯಾನ್ ವರ್ಕೌಟ್ ಆಗುವ ಸೂಚನೆ ಸಿಗುತ್ತಿಲ್ಲ. ಹರ್ಷ ಸಂಪೂರ್ಣವಾಗಿ ಲಾಜಿಕ್ ಉಪಯೋಗಿಸಿ ಮಾತನಾಡುತ್ತಿದ್ದಾನೆ. ಇದು ವರುಧಿನಿಗೆ ಶಾಕ್ ತಂದಿದೆ. ಹರ್ಷ ಹಾಗೂ ಭುವಿ ಬೇರೆ ಆಗೋದು ಅನುಮಾನ ಎಂದು ವರುಧಿನಿಗೆ ಅನಿಸುತ್ತಿದೆ.
ಹರ್ಷ ಹಾಗೂ ಭುವಿನ ಬೇರೆ ಮಾಡಬೇಕು ಎಂಬುದು ವರುಧಿನಿ ಪ್ಲ್ಯಾನ್. ಇದಕ್ಕೆ ಆಕೆ ಸಾಕಷ್ಟು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾಳೆ. ಆದರೆ, ಅದು ಯಶಸ್ಸು ಕಂಡಿಲ್ಲ. ಈಗ ರತ್ನಮಾಲಾ ಬರೆದ ವಿಲ್ ಅಸ್ತ್ರವನ್ನು ಪ್ರಯೋಗ ಮಾಡಿದ್ದಾಳೆ ವರು. ಇದು ಯಶಸ್ಸು ಕಾಣುವ ಸೂಚನೆ ಸಿಗುವಾಗಲೇ ಹರ್ಷ ಉಲ್ಟಾ ಹೊಡೆದಿದ್ದಾನೆ. ‘ನೀವು ರತ್ನಮಾಲಾ ಬಳಿ ಹೇಗೆ ಹೋಗಿದ್ರಿ? ಅಲ್ಲಿ ಯಾರನ್ನೂ ಬಿಡುತ್ತಿರಲಿಲ್ಲವಲ್ಲ. ರತ್ನಮಾಲಾ ಹೇಳಿದ್ದನ್ನು ನೀವು ತಿರುಚಿ ಹೇಳುತ್ತಿದ್ದೀರಿ ಎಂದು ನನಗೆ ಅನಿಸುತ್ತಿದೆ’ ಎಂಬಿತ್ಯಾದಿ ಮಾತನ್ನು ಹರ್ಷ ಹೇಳಿದ್ದಾನೆ. ಇದನ್ನು ಕೇಳಿ ಭುವಿ ಶಾಕ್ ಆಗಿದ್ದಾಳೆ.
ಭುವಿ ಬೇಸರ
ಶ್ರೀರಂಗಪಟ್ಟಣಕ್ಕೆ ತೆರಳುವ ಸಂದರ್ಭದಲ್ಲಿ ಭುವಿ ಹಾಗೂ ಸಾನಿಯಾ ಒಂದೇ ಕಾರಿನಲ್ಲಿ ಇದ್ದರು. ಈ ವೇಳೆ ಆಕೆಗೆ ಸೌಪರ್ಣಿಕಾ ಕಾಣಿಸಿದ್ದಾಳೆ. ಅವಳು ಕೂಡ ಕಾರು ಏರಿದ್ದಾಳೆ. ಕಾರಿನಲ್ಲಿ ಸಾಗುವಾಗ ಹರ್ಷನ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾತನಾಡಿದ್ದಾಳೆ ಸೌಪರ್ಣಿಕಾ. ಇದನ್ನು ಕೇಳಿ ಭುವಿಗೆ ಬೇಸರವಾಗಿದೆ.
ಭುವಿಯ ಮತ್ತೊಂದು ಹೆಸರು ಸೌಪರ್ಣಿಕಾ. ದಾಖಲೆಗಳಲ್ಲಿ ಆಕೆಯ ಹೆಸರು ಸೌಪರ್ಣಿಕಾ ಎಂದೇ ಇದೆ. ಸೌಪರ್ಣಿಕಾ ಎನ್ನುವ ಹೆಸರು ಇದ್ದಿದ್ದರಿಂದಲೇ ಹರ್ಷ ತನ್ನನ್ನು ಮದುವೆ ಆದ ಎಂದು ಅನುಮಾನ ಬರುವ ರೀತಿಯಲ್ಲಿ ಎಲ್ಲರೂ ಬಿಂಬಿಸುತ್ತಿದ್ದಾರೆ. ಇತ್ತೀಚೆಗೆ ಭುವಿಗೆ ಕೂಡ ಇದು ಹೌದು ಅನಿಸೋಕೆ ಶುರುವಾಗಿದೆ. ಈಗ ಕಾರು ಏರಿರುವ ಮತ್ತೊಂದು ಸೌಪರ್ಣಿಕಾ ಕೂಡ ಇದೇ ರೀತಿಯ ಅಭಿಪ್ರಾಯ ನೀಡಿದ್ದಾಳೆ. ಇದರಿಂದ ಸಹಜವಾಗಿ ಭುವಿ ಬೇಸರಗೊಂಡಿದ್ದಾಳೆ. ಹರ್ಷನ ಬಗ್ಗೆ ಆಕೆಗೆ ಅನುಮಾನ ಹಾಗೂ ಬೇಸರ ಎರಡೂ ಒಟ್ಟೊಟ್ಟಿಗೆ ಆಗಿದೆ.
ಸೌಪರ್ಣಿಕಾಳ ಕೊಲ್ಲಿಸೋಕೆ ಮುಂದಾಗಿದ್ದು ಸಾನಿಯಾ
ಕಾರಿನ ಹಿಂಭಾಗದಲ್ಲಿ ಕುಳಿತ ಸೌಪರ್ಣಿಕಾಳನ್ನು ಕೊಲ್ಲೋಕೆ ಪ್ರಯತ್ನ ಮಾಡಿದ್ದು ಇದೇ ಸಾನಿಯಾ. ಆದರೆ, ಆರೋಪ ಮಾತ್ರ ಹರ್ಷನ ಮೇಲೆ ಬಂದಿತ್ತು. ಈಗ ಸೌಪರ್ಣಿಕಾ ಹಾಗೂ ಸಾನಿಯಾ ಒಂದೇ ಕಾರಿನಲ್ಲಿ ಸಾಗುತ್ತಿದ್ದಾರೆ. ಈ ಸೌಪರ್ಣಿಕಾ ವಿಚಾರ ಮತ್ತೇಕೆ ಮುನ್ನೆಲೆಗೆ ಬರುತ್ತಿದೆ ಎಂಬ ವಿಚಾರ ಸಾನಿಯಾಗೆ ತಿಳಿಯುತ್ತಿಲ್ಲ. ತನ್ನನ್ನು ಕೊಲ್ಲೋಕೆ ಪ್ರಯತ್ನಿಸಿದ್ದು ಇದೇ ಸಾನಿಯಾ, ಹರ್ಷ ಬದುಕಿಸಲು ಪ್ರಯತ್ನಿಸಿದ ಎಂಬ ವಿಚಾರ ಗೊತ್ತಾದರೆ ಆಕೆ ಮನಸ್ಸು ಬದಲಿಸಬಹುದು. ಸದ್ಯ ಈ ಸೌಪರ್ಣಿಕಾ ವರುಧಿನಿಯ ಕೈಗೊಂಬೆ ಆಗಿದ್ದಾಳೆ. ಆಕೆ ಹೇಳಿದಂತೆ ಕೇಳುವ ಕೆಲಸ ಮಾಡುತ್ತಿದ್ದಾಳೆ.
ಶ್ರೀಲಕ್ಷ್ಮಿ ಎಚ್.