Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳ​ ಕುಟುಂಬದವರು; ಹೇಗಿತ್ತು ಸ್ಪರ್ಧಿಗಳ ರಿಯಾಕ್ಷನ್?

ಈ ಬಾರಿ ಪ್ರತೀ ಸ್ಪರ್ಧಿಗಳ ಕುಟುಂಬ ಸದಸ್ಯರು ಮನೆ ಒಳಗೆ ಬರೋಕೆ ಅವಕಾಶ ನೀಡಲಾಗಿತ್ತು. ದಿವ್ಯಾ ಉರುಡುಗ ಅವರ ಅಮ್ಮ, ರಾಕೇಶ್ ಅಡಿಗ ಅವರ ತಾಯಿ ಬಂದಿರುವ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳ​ ಕುಟುಂಬದವರು; ಹೇಗಿತ್ತು ಸ್ಪರ್ಧಿಗಳ ರಿಯಾಕ್ಷನ್?
ಬಿಗ್ ಬಾಸ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 29, 2022 | 1:01 PM

‘ಬಿಗ್ ಬಾಸ್​’ (Bigg Boss) ಮನೆಗೆ ಎಂಟ್ರಿಕೊಟ್ಟ ನಂತರದಲ್ಲಿ ಹೊರ ಜಗತ್ತಿನ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳುತ್ತದೆ. ಕುಟುಂಬದವರ ಜತೆ ಮಾತನಾಡಲೂ ಸ್ಪರ್ಧಿಗಳಿಗೆ ಅವಕಾಶ ಇರುವುದಿಲ್ಲ. ಆದರೆ, ಕೆಲವೊಮ್ಮೆ ಬಿಗ್ ಬಾಸ್ ಕರುಣೆ ತೋರುತ್ತಾರೆ. ಸ್ಪರ್ಧಿಗಳ ಕುಟುಂಬದವರು ಮನೆ ಒಳಗೆ ಬರೋಕೆ ಅಥವಾ ಕುಟುಂಬದವರ ಧ್ವನಿ ಕೇಳೋಕೆ ಅವಕಾಶ ಸಿಗುತ್ತದೆ. ಕನ್ನಡ ಬಿಗ್ ಬಾಸ್ ಸೀಸನ್​ 9ರಲ್ಲಿ (BBK 9) ಸ್ಪರ್ಧಿಗಳಿಗೆ ಅಂತಹ ಅವಕಾಶ ಸಿಕ್ಕಿದೆ. ಕಂಟೆಸ್ಟಂಟ್​​ಗಳ ಕುಟುಂಬದವರು ಮನೆ ಒಳಗೆ ಬಂದಿದ್ದಾರೆ. ಆ ಕ್ಷಣ ಬಿಗ್ ಬಾಸ್ ಸ್ಪರ್ಧಿಗಳಿಗೆ ತುಂಬಾನೇ ವಿಶೇಷ ಎನಿಸಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 9’ ಅರ್ಧದಾರಿ ಕ್ರಮಿಸಿ ಮುಂದೆ ಬಂದಿದೆ. ಎರಡು ತಿಂಗಳಿಗೂ ಹೆಚ್ಚು ಕಾಲ ಸ್ಪರ್ಧೆ ಪೂರ್ಣಗೊಂಡಿದ್ದು, ಇನ್ನೊಂದು ತಿಂಗಳಲ್ಲಿ ಈ ಆಟ ಕೊನೆಯಾಗಲಿದೆ. ಫಿನಾಲೆಯಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳನ್ನು ಕಾಡಿದೆ. ಸದ್ಯ ಮನೆಯಲ್ಲಿ 11 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಅವರಿಗೆ ಬಿಗ್ ಬಾಸ್ ಕಡೆಯಿಂದ ಸರ್​ಪ್ರೈಸ್ ಸಿಕ್ಕಿದೆ.

ಈ ಬಾರಿ ಪ್ರತೀ ಸ್ಪರ್ಧಿಗಳ ಕುಟುಂಬ ಸದಸ್ಯರು ಮನೆ ಒಳಗೆ ಬರೋಕೆ ಅವಕಾಶ ನೀಡಲಾಗಿತ್ತು. ದಿವ್ಯಾ ಉರುಡುಗ ಅವರ ಅಮ್ಮ, ರಾಕೇಶ್ ಅಡಿಗ ಅವರ ತಾಯಿ ಬಂದಿರುವ ಪ್ರೋಮೋವನ್ನು ಕಲರ್ಸ್​ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ತಾಯಿಯನ್ನು ನೋಡಿ ದಿವ್ಯಾ ಉರುಡುಗ ಕಣ್ಣೀರು ಹಾಕಿದ್ದಾರೆ. ತಾಯಿಯ ಧ್ವನಿಯಲ್ಲಿ ಹಾಡು ಕೇಳಬೇಕು ಎನ್ನುವುದು ಅವರ ಆಸೆ ಆಗಿತ್ತು. ಆದರೆ, ಅದು ನೆರವೇರಿಲ್ಲ. ಈ ವಿಚಾರದಲ್ಲಿ ಅವರು ಬೇಸರ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: ಬಿಗ್ ಬಾಸ್ ವೀಕೆಂಡ್​ ಎಲಿಮಿನೇಷನ್​ನಲ್ಲಿ ಈ ಬಾರಿಯೂ ಇರಲಿದೆ ದೊಡ್ಡ ಟ್ವಿಸ್ಟ್​?

ರಾಕೇಶ್ ಅಡಿಗ ಅವರು ಈ ವಾರ ಕ್ಯಾಪ್ಟನ್ ಆಗಿದ್ದಾರೆ. ಬಿಗ್ ಬಾಸ್ ಟಿವಿ ಸೀಸನ್​ನಲ್ಲಿ ಅವರು ಕ್ಯಾಪ್ಟನ್ ಆಗಿದ್ದು ಇದೇ ಮೊದಲು. ಇದೇ ವಿಶೇಷ ಸಂದರ್ಭದಲ್ಲಿ ಅವರ ತಾಯಿಯ ಆಗಮನ ಆಗಿದೆ. ಈ ಬಗ್ಗೆ ರಾಕೇಶ್ ಸಂತಸ ವ್ಯಕ್ತಪಡಿಸಿದ್ದಾರೆ. ಉಳಿದ ಸದಸ್ಯರ ಕುಟುಂಬದಿಂದ ಯಾರ್ಯಾರು ಬಂದಿದ್ದರು ಎಂಬುದು ಇನ್ನಷ್ಟೇ ರಿವೀಲ್ ಆಗಬೇಕಿದೆ.

ಇದನ್ನೂ ಓದಿ: ಬಿಗ್ ಬಾಸ್​​ನಿಂದ ವಿನೋದ್ ಗೊಬ್ಬರಗಾಲ ಔಟ್ ಆದ ಬೆನ್ನಲ್ಲೇ ಶುರುವಾಯ್ತು ಹೊಸ ಅಭಿಯಾನ

ಬಿಗ್ ಬಾಸ್ ಮನೆಯಲ್ಲಿ ಸದ್ಯ 11 ಸ್ಪರ್ಧಿಗಳಿದ್ದಾರೆ. ಅಮೂಲ್ಯ ಗೌಡ, ಅರುಣ್ ಸಾಗರ್, ಅನುಪಮಾ ಗೌಡ, ಆರ್ಯವರ್ಧನ್ ಗುರೂಜಿ, ಕಾವ್ಯಾ ಗೌಡ, ದೀಪಿಕಾ ದಾಸ್, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರ್ಗಿ, ದಿವ್ಯಾ ಉರುಡುಗ ಬಿಗ್ ಬಾಸ್ ಮನೆಯಲ್ಲಿ ತಮ್ಮ ಆಟ ಮುಂದುವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ