ವಿಷ ಇರುವ ಪಾಯಸ ಕುಡಿದು ಆಸ್ಪತ್ರೆ ಸೇರಿದ ಸಂಜು; ಅನುಗೆ ಸಂಕಟ

ಸಂಜು ಆಸ್ಪತ್ರೆ ಸೇರಿರುವ ವಿಚಾರ ತಿಳಿದು ಆರಾಧನಾ ಆಸ್ಪತ್ರೆಗೆ ಬಂದಿದ್ದಾಳೆ. ಇದು ಆತ್ಮಹತ್ಯೆ ಪ್ರಯತ್ನ ಇರಬಹುದು ಎಂದು ವೈದ್ಯರು ಅನುಮಾನ ವ್ಯಕ್ತಪಡಿಸಿದರು. ಇದನ್ನು ಕೇಳಿ ಆರಾಧನಾಗೆ ಶಾಕ್ ಆಗಿದೆ.

ವಿಷ ಇರುವ ಪಾಯಸ ಕುಡಿದು ಆಸ್ಪತ್ರೆ ಸೇರಿದ ಸಂಜು; ಅನುಗೆ ಸಂಕಟ
ಜೊತೆ ಜೊತೆಯಲಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 29, 2022 | 8:55 AM

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ನಿರ್ದೇಶನ: ಆರೂರು ಜಗದೀಶ

ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು

ಸಮಯ: ರಾತ್ರಿ: 9.30

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಅನು ಸಿರಿಮನೆ ಹಾಗೂ ಸಂಜು ಮಾಡಿದ ರಾದ್ಧಾಂತದಿಂದ ರಮ್ಯಾಳ ಎಂಗೇಜ್​ಮೆಂಟ್​ ಮುರಿದು ಬಿದ್ದಿದೆ. ಈ ವಿಚಾರದಲ್ಲಿ ಆಕೆಗೆ ಬೇಸರ ಇದೆ. ಅನು ವಿರುದ್ಧ ರಮ್ಯಾಳ ತಾಯಿ ರಜನಿ ಸಿಡುಕಿದ್ದಾಳೆ. ಆಕೆಗೆ ಅನುನ ಕಂಡರೆ ಕೋಪ ಬರುತ್ತಿದೆ. ಆಕೆಯಿಂದಲೇ ಮಗಳ ಎಂಗೇಜ್​ಮೆಂಟ್ ಮುರಿದುಬಿತ್ತು ಎಂದು ನಂಬಿದ್ದಾಳೆ. ಈ ಕಾರಣಕ್ಕೆ ಆಕೆ ದ್ವೇಷ ಸಾಧಿಸಲು ಮುಂದಾಗಿದ್ದಳು. ಪಾಯಸದಲ್ಲಿ ವಿಷ ಹಾಕಿ ಅನುಗೆ ನೀಡುವಂತೆ ರಮ್ಯಾಳ ಬಳಿ ನೀಡಿದ್ದಳು. ಇದನ್ನು ಅರಿಯದ ರಮ್ಯಾಳು ಹೋಗಿ ಅನುಗೆ ಪಾಯಸ ನೀಡಿದ್ದಾಳೆ.

ಆಸ್ಪತ್ರೆ ಸೇರಿದ ಸಂಜು

ರಜನಿ ಪಾಯಸಕ್ಕೆ ವಿಷ ಹಾಕುವುದನ್ನು ಸಂಜು ನೋಡಿದ್ದಾನೆ. ಈ ಕಾರಣಕ್ಕೆ ಪಾಯಸದಲ್ಲಿ ವಿಷ ಇದೆ ಎಂದು ಪದೇಪದೇ ಹೇಳಿದ್ದಾನೆ. ಆದರೆ, ಅನು ಇದನ್ನು ನಂಬಿಲ್ಲ. ರಜನಿ ಈ ರೀತಿ ಮಾಡುವವಳಲ್ಲ ಎಂದು ಪದೇಪದೇ ಹೇಳಿದ್ದಾಳೆ. ಆದರೆ, ಇದು ಸುಳ್ಳಾಗಿದೆ. ಪಾಯಸದಲ್ಲಿ ನಿಜಕ್ಕೂ ವಿಷ ಹಾಕಲಾಗಿತ್ತು. ಅನುಗೆ ಪಾಯಸ ಕುಡಿಯಲು ಕೊಡದೇ ತಾನೇ ಅದನ್ನು ಕುಡಿದಿದ್ದಾನೆ ಸಂಜು. ಎಲ್ಲರ ಜತೆ ಮಾತನಾಡುತ್ತಲೇ ಕುಸಿದು ಬಿದ್ದಿದ್ದಾನೆ ಆತ. ಇದನ್ನು ನೋಡಿ ಅನುಗೆ ಶಾಕ್ ಆಗಿದೆ. ತಕ್ಷಣಕ್ಕೆ ಸಂಜುನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಆರಾಧನಾಗೆ ಬೇಸರ

ಸಂಜು ಆಸ್ಪತ್ರೆ ಸೇರಿರುವ ವಿಚಾರ ತಿಳಿದು ಆರಾಧನಾ ಆಸ್ಪತ್ರೆಗೆ ಬಂದಿದ್ದಾಳೆ. ಇದು ಆತ್ಮಹತ್ಯೆ ಪ್ರಯತ್ನ ಇರಬಹುದು ಎಂದು ವೈದ್ಯರು ಅನುಮಾನ ವ್ಯಕ್ತಪಡಿಸಿದರು. ಇದನ್ನು ಕೇಳಿ ಆರಾಧನಾಗೆ ಶಾಕ್ ಆಗಿದೆ. ಈ ಮೊದಲು ಸಂಜು (ವಿಶ್ವ) ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಈಗಲೂ ಅದೇ ಆಗಿದೆ ಎಂಬ ಅನುಮಾನ ಆರಾಧನಾಗೆ ಕಾಡಿದೆ. ಇದನ್ನು ಕೇಳಿ ಆಕೆ ಸಾಕಷ್ಟು ಬೇಸರ ಮಾಡಿಕೊಂಡಿದ್ದಾಳೆ.

ಆರಾಧನಾ ಅಮೆರಿಕದಲ್ಲಿ ಇದ್ದಳು. ಸಂಜುನ ಮರಳಿ ಕರೆದುಕೊಂಡು ಹೋಗುವಂತೆ ಆಕೆಗೆ ಹೇಳಿದ್ದಳು. ಆದರೆ, ಇಲ್ಲಿಗೆ ಮರಳಿದ ನಂತರದಲ್ಲಿ ಆರಾಧನಾ ಕೈಗೆ ಸಂಜು ಸಿಗುತ್ತಿಲ್ಲ. ಈ ಮಧ್ಯೆ ಆತನಿಗೆ ವಿಷ ಪ್ರಾಸನ ಆಗಿರುವುದು ಸಾಕಷ್ಟು ಅನುಮಾನ ಹುಟ್ಟಿಸಿದೆ.

ತಪ್ಪಾಗಿ ಭಾವಿಸಿದ ಪ್ರಿಯದರ್ಶಿನಿ

ಸಂಜು ದೇಹಕ್ಕೆ ವಿಷ ಸೇರಿದೆ ಎಂಬ ವಿಚಾರ ತಿಳಿದ ಪ್ರಿಯದರ್ಶಿನಿ ತಪ್ಪಾಗಿ ಭಾವಿಸಿದ್ದಾಳೆ. ಅನುನಿಂದ ಆರ್ಯನಿಗೆ ಅಪಾಯ ಇದೆ ಎಂದು ಝೇಂಡೆ ಹೇಳಿದ್ದ. ಈಗ ಸಂಜುನೇ ಆರ್ಯ ಎಂಬ ವಿಚಾರ ಅನುಗೆ ಗೊತ್ತಾಗಿದೆ. ಆಕೆಯೇ ವಿಷ ಉಣಿಸಿದ್ದಾಳೆ ಎಂಬ ಅನುಮಾನ ಆಕೆಗೆ ಕಾಡಿದೆ. ಇದರಿಂದ ಆಕೆಯ ಅನುಮಾನ ಹೆಚ್ಚಾಗಿದೆ.

ಮೀರಾಗೆ ಗೊತ್ತಾಯ್ತು ಅಸಲಿ ವಿಚಾರ

ಆರ್ಯವರ್ಧನ್ ಇದ್ದಾಗ ಮೀರಾ ಹೆಗಡೆ ಹಾಯಾಗಿದ್ದಳು. ಆದರೆ, ಈಗ ಆರ್ಯ ಇಲ್ಲ ಎಂಬ ನೋವು ಆಕೆಯನ್ನು ಬಲವಾಗಿ ಕಾಡುತ್ತಿದೆ. ಕಂಪನಿಯಲ್ಲಿ ತನಗೆ ಸರಿಯಾದ ಗೌರವ ಸಿಗುತ್ತಿಲ್ಲ ಎನ್ನುವ ಬೇಸರವೂ ಆಕೆಯನ್ನು ಕಾಡುತ್ತಿದೆ. ಈ ಕಾರಣಕ್ಕೆ ಆಕೆ ಕಂಪನಿ ಬಿಡಲು ನಿರ್ಧರಿಸಿದ್ದಳು. ಆ ಸಮಯಕ್ಕೆ ಸರಿಯಾಗಿ ಮೀರಾಗೆ ಎದುರಾಗಿದ್ದು ಝೇಂಡೆ. ‘ಆರ್ಯವರ್ಧನ್ ಬದುಕಿದ್ದಾನೆ. ಆತ ಏನು ಮಾಡುತ್ತಿದ್ದಾನೆ, ಹೇಗಿದ್ದಾನೆ ಎಂಬ ವಿಚಾರವನ್ನು ನಾನು ಹೇಳಲ್ಲ. ನನಗೆ ಹಾಗೂ ನಿಮಗೆ ಮಾತ್ರ ಈ ವಿಚಾರ ಗೊತ್ತಿದೆ. ಇದನ್ನು ಯಾರ ಜೊತೆಗೂ ಹೇಳೋಕೆ ಹೋಗಬೇಡಿ’ ಎಂದು ಹೇಳಿದ್ದಾನೆ ಝೇಂಡೆ. ಈ ವಿಚಾರ ಕೇಳಿ ಮೀರಾಗೆ ಖುಷಿ ಆಗಿದೆ. ಏನೋ ಹೊಸ ಕ್ರಾಂತಿ ಆಗುವ ಸೂಚನೆ ಆಕೆಗೆ ಸಿಕ್ಕಿದೆ.

ಶ್ರೀಲಕ್ಷ್ಮಿ ಎಚ್.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ