BBK9: ಬಿಗ್ ಬಾಸ್ ನಾಮಿನೇಷನ್ಗೆ ಹೊಸ ವಿಧಾನ; ಕಷ್ಟಕ್ಕೆ ಸಿಲುಕಿದ ಸ್ಪರ್ಧಿಗಳು
Bigg Boss Kannada: ಬಿಗ್ ಬಾಸ್ನಲ್ಲಿ 10ನೇ ವಾರದ ನಾಮಿನೇಷನ್ಗೆ ಬೇರೆ ವಿಧಾನವನ್ನು ಸೂಚಿಸಲಾಗಿದೆ. ಆ ಮೂಲಕ ಹೊಸ ಟ್ವಿಸ್ಟ್ ನೀಡಲಾಗಿದೆ.
ಜನಪ್ರಿಯ ‘ಬಿಗ್ ಬಾಸ್ ಕನ್ನಡ ಸೀಸನ್ 9’ (Bigg Boss Kannada Season 9) ಶೋನಲ್ಲಿ ಪ್ರತಿ ವಾರ ಎಲಿಮಿನೇಷನ್ಗೆ ಸ್ಪರ್ಧಿಗಳನ್ನು ನಾಮಿನೇಟ್ ಮಾಡುವ ಪ್ರಕ್ರಿಯೆ ನಡೆಯುತ್ತವೆ. ಕೆಲವೊಮ್ಮೆ ಸೀಕ್ರೆಟ್ ಆಗಿ, ಇನ್ನೂ ಕೆಲವೊಮ್ಮೆ ಬಹಿರಂಗವಾಗಿ ಸ್ಪರ್ಧಿಗಳನ್ನು ನಾಮಿನೇಟ್ ಮಾಡಬೇಕಾಗುತ್ತದೆ. 10ನೇ ವಾರದ ನಾಮಿನೇಷನ್ಗೆ (Bigg Boss Nomination) ಬಿಗ್ ಬಾಸ್ ಬೇರೆ ವಿಧಾನವನ್ನು ಸೂಚಿಸಿದ್ದಾರೆ. ಇಬ್ಬರು ಏಕಕಾಲಕ್ಕೆ ಬೇರೆ ಬೇರೆ ರೂಮಿನಲ್ಲಿ ಇರಬೇಕು. ಇಬ್ಬರೂ ಸೇಮ್ ಫೋಟೋ ತೋರಿಸಿದರೆ ಆ ಫೋಟೋದಲ್ಲಿನ ಸ್ಪರ್ಧಿ ಸೇಫ್ ಆಗ್ತಾರೆ. ಬೇರೆ ಬೇರೆ ಫೋಟೋ ತೋರಿಸಿದರೆ ಇಬ್ಬರೂ ನಾಮಿನೇಟ್ ಆಗ್ತಾರೆ ಎಂಬ ನಿಮಯದಲ್ಲಿ ಈ ವಾರದ ನಾಮಿನೇಷನ್ ಮಾಡಲಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Nov 28, 2022 04:45 PM
Latest Videos