ಚಿತ್ರದುರ್ಗ | ಶ್ರೀರಾಮುಲು ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿರುವುದು ಅವರಿಗೆ ಕಾಣುತ್ತಿಲ್ಲ: ಡಿಕೆ ಶಿವಕುಮಾರ

ಚಿತ್ರದುರ್ಗ | ಶ್ರೀರಾಮುಲು ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿರುವುದು ಅವರಿಗೆ ಕಾಣುತ್ತಿಲ್ಲ: ಡಿಕೆ ಶಿವಕುಮಾರ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 28, 2022 | 3:56 PM

ಚಾಮರಾಜಪೇಟೆಯಲ್ಲಿ ರೌಡಿಯೊಬ್ಬನಿಗೆ ಬಿಜೆಪಿ ಟಿಕೆಟ್ ನೀಡುವ ಯೋಚನೆ ಮಾಡುತ್ತಿದೆ ಅನ್ನೋದನ್ನು ಅವರ ಗಮನಕ್ಕೆ ತಂದಾಗ, ಆ ಪಕ್ಷದ ಸಂಸ್ಕೃತಿ ಗೊತ್ತುಮಾಡಿಕೊಳ್ಳಲು ಅಷ್ಟು ಸಾಕು ಎಂದು ಹೇಳಿದರು.

ಚಿತ್ರದುರ್ಗ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ (Siddaramaiah) ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಕದನ ನಡೆಯುತ್ತಿದೆ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ಹೇಳಿದ್ದಕ್ಕೆ ತಿರುಗೇಟು ನೀಡಿದ್ದಾರೆ. ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಅವರು ರಾಮುಲು ಅಣ್ಣನ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದೆ, ಅದರ ಕಡೆ ಗಮನ ಹರಿಸುವುದು ಬಿಟ್ಟು ಬೇರೆಯವರ ತಟ್ಟೆಯಲ್ಲಿ ನೊಣ ಬಿದ್ದಿರುವುದನ್ನು ನೋಡುತ್ತಿದ್ದಾರೆ ಎಂದು ಹೇಳಿದರು. ಚಾಮರಾಜಪೇಟೆಯಲ್ಲಿ ರೌಡಿಯೊಬ್ಬನಿಗೆ ಬಿಜೆಪಿ ಟಿಕೆಟ್ ನೀಡುವ ಯೋಚನೆ ಮಾಡುತ್ತಿದೆ ಅನ್ನೋದನ್ನು ಅವರ ಗಮನಕ್ಕೆ ತಂದಾಗ, ಆ ಪಕ್ಷದ ಸಂಸ್ಕೃತಿ ಗೊತ್ತುಮಾಡಿಕೊಳ್ಳಲು ಅಷ್ಟು ಸಾಕು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ