Lakshana Serial: ಮೌರ್ಯನ ಸಾವಿನ ಸುದ್ದಿಯಿಂದ ಭೂಪತಿಗೆ ಆಘಾತ, ತಂದೆಗೆ ಶಿಕ್ಷೆ ನೀಡಿದ ನಕ್ಷತ್ರ
ಸ್ವತಃ ಚಂದ್ರಶೇಖರ್ ತನ್ನ ಪತ್ನಿ ಆರತಿಗೆ ಫೋನ್ ಮಾಡಿ ಮೌರ್ಯನನ್ನು ಮುಗಿಸಿರುವ ಸುದ್ದಿಯನ್ನು ಹೇಳುತ್ತಾರೆ. ಈ ಸುದ್ದಿಯನ್ನು ಕೇಳಿ ಆರತಿಗೆ ನನ್ನ ಗಂಡ ಈ ರೀತಿ ಮಾಡಿದ್ದಾರೆ ಎಂಬುವುದನ್ನು ಅರಗಿಸಿಕೊಳ್ಳಲಾಗುವುದಿಲ್ಲ. ಯಾಕೆ ನೀವು ಹೀಗೆ ಮಾಡಿದ್ದು, ನಿಮ್ಮಿಂದ ನಾನು ಇದನ್ನು ನಿರೀಕ್ಷಿಸಿರಲಿಲ್ಲ.
ಧಾರಾವಾಹಿ: ಲಕ್ಷಣ (Lakshana)
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 8.30
ನಿರ್ದೇಶನ: ಶಿವರಾಮ್ ಮಾಗಡಿ
ಪಾತ್ರವರ್ಗ: ಜಗನ್.ಸಿ, ವಿಜಯಲಕ್ಷ್ಮೀ, ಸುಕೃತ ನಾಗ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಮೌರ್ಯನಿಂದ ತನ್ನ ಮಗಳನ್ನು ರಕ್ಷಿಸುವ ಸಲುವಾಗಿ ಒಂದು ಕ್ಷಣವೂ ಯೋಚಿಸದೆ ನಕ್ಷತ್ರಳ ಕಣ್ಣೆದುರೇ ಚಂದ್ರಶೇಖರ್ ಮೌರ್ಯನಿಗೆ ಶೂಟ್ ಮಾಡುತ್ತಾರೆ. ಇದನ್ನು ನೋಡಿದ ನಕ್ಷತ್ರಳಿಗೆ ತನ್ನ ತಂದೆ ಈ ಕೆಲಸ ಮಾಡಿದ್ದಾರೆ ಎಂದು ನಂಬಲ ಅಸಾಧ್ಯ ಎಂದು ಅಂದುಕೊಳ್ಳುತ್ತಾಳೆ.
ಕುಸಿದು ಬಿದ್ದ ಶಕುಂತಳಾದೇವಿ
ಸ್ವತಃ ಚಂದ್ರಶೇಖರ್ ತನ್ನ ಪತ್ನಿ ಆರತಿಗೆ ಫೋನ್ ಮಾಡಿ ಮೌರ್ಯನನ್ನು ಮುಗಿಸಿರುವ ಸುದ್ದಿಯನ್ನು ಹೇಳುತ್ತಾರೆ. ಈ ಸುದ್ದಿಯನ್ನು ಕೇಳಿ ಆರತಿಗೆ ನನ್ನ ಗಂಡ ಈ ರೀತಿ ಮಾಡಿದ್ದಾರೆ ಎಂಬುವುದನ್ನು ಅರಗಿಸಿಕೊಳ್ಳಲಾಗುವುದಿಲ್ಲ. ಯಾಕೆ ನೀವು ಹೀಗೆ ಮಾಡಿದ್ದು, ನಿಮ್ಮಿಂದ ನಾನು ಇದನ್ನು ನಿರೀಕ್ಷಿಸಿರಲಿಲ್ಲ. ಪೊಲೀಸ್ ಕೇಸ್ ಆದರೆ ಏನು ಮಾಡೊದು ಎಂದು ಆರತಿ ಹೇಳಿದಾಗ ನನ್ನ ಮಗಳ ಸುರಕ್ಷತೆಯ ದೃಷ್ಟಿಯಿಂದ ಈ ಕೆಸ ಮಾಡದೆ ನನಗೆ ಬೇರೆ ವಿಧಿ ಇರಲಿಲ್ಲ. ಮೌರ್ಯನ ಮೇಲೆ ಶೂಟ್ ಮಾಡಲೇ ಬೇಕಾಯಿತು. ಅದೇ ಸರಿ. ನೀನೇನು ಯೋಚನೆ ಮಾಡಬೇಡ ಪೊಲೀಸ್ ಕೇಸ್ ಆದರೆ ಅದನ್ನು ನಾನು ಹ್ಯಾಂಡಲ್ ಮಾಡುತ್ತೇನೆ ಅಂತ ಹೇಳಿ ಚಂದ್ರಶೇಖರ್ ಫೋನ್ ಕಟ್ ಮಾಡುತ್ತಾನೆ.
ಗಂಡನ ಮಾತನ್ನು ಕೇಳಿ ದಿಕ್ಕು ದೋಚದಂತಾದ ಆರತಿ ನೇರವಾಗಿ ಭಾರ್ಗವಿಗೆ ಕಾಲ್ ಮಾಡಿ ನಡೆದ ಘಟನೆಯನ್ನು ಹೇಳುತ್ತಾಳೆ. ಎಲ್ಲವೂ ಗೊತ್ತಿದ್ದ ಭಾರ್ಗವಿ ಆರತಿಗೆ ಸಮಧಾನ ಮಾಡುವ ನಾಟಕವನ್ನಾಡುತ್ತಾಳೆ. ಸಿ.ಎಸ್ ಇರುವ ಸ್ಥಳಕ್ಕೆ ಹೋಗೋಣಾ ಎಂದು ಹೇಳುತ್ತಾಳೆ. ಆರತಿಯ ನರಳಾಟವನ್ನು ನೋಡಿದ ಭಾರ್ಗವಿಗೆ ಅತ್ಯಂತ ಸಂತೋಷವಾಗುತ್ತದೆ.
ಈ ಕಡೆ ನಕ್ಷತ್ರಳ ಬರುವಿಕೆಗಾಗಿ ಕಾಯುತ್ತಿದ್ದ ಭೂಪತಿಗೆ ಚಂದ್ರಶೇಖರ್ ಕಾಲ್ ಮಾಡಿ ಮೌರ್ಯನ ಸಾವಿನ ಬಗ್ಗೆ ಹೇಳುತ್ತಾರೆ. ಮಗಳ ರಕ್ಷಣೆಯ ದೃಷ್ಟಿಯಿಂದ ನಾನು ಈ ಕೆಲಸ ಮಾಡಲೇಬೇಕಾಯಿತು. ನನ್ನನ್ನು ಕ್ಷಮಿಸಿ ಬಿಡು ಭೂಪತಿ. ನಿನ್ನ ತಾಯಿಗೂ ಈ ವಿಷಯ ತಿಳಿಸಿ ಬಿಡು ಅಂತ ಹೇಳುತ್ತಾರೆ. ಸಿ.ಎಸ್ ಮಾತು ಕೇಳಿದ ಭೂಪತಿಗೆ ಹೃದಯ ಹೊಡೆದು ಹೋದಂತಾಗುತ್ತದೆ. ಈ ಮಾತನ್ನು ಅರಗಿಸಿಕೊಳ್ಳಲಾಗದೆ ಜೋರಾಗಿ ಚೀರುತ್ತಾನೆ. ಈತನ ಚೀರಾಟವನ್ನು ಕೇಳಿ ಗಾಬರಿಯಿಂದ ಓಡಿ ಬಂದ ಮನೆಯವರೆಲ್ಲರು ಏನಾಯಿತೆಂದು ಕೇಳುತ್ತಾರೆ. ಆಗ ದುಃಖದಲ್ಲಿ ನಡುಗುತ್ತಾ ಮೌರ್ಯ ಮೌರ್ಯ ಎಂದು ಮಾತನಾಡುತ್ತಾನೆ.
ಭಯದಿಂದ ಶಕುಂತಳಾದೇವಿ ಮೌರ್ಯನಿಗೆ ಏನಾಯಿತು. ಯಾಕೆ ಇಷ್ಟು ಹೆದರಿದ್ದೀಯಾ ಅಂತ ಕೇಳಿದಾಗ ಮೌರ್ಯನ ಸಾವಾಗಿದೆ ಎಂದು ಭೂಪತಿ ಹೇಳುತ್ತಾನೆ. ಭೂಪತಿಯ ಈ ಒಂದು ಮಾತು ಮನೆಯವರೆಲ್ಲರಿಗೂ ಸಿಡಿಲು ಬಡಿದಂತಾಗುತ್ತದೆ. ಭೂಪತಿಯ ಕಪಾಳಕ್ಕೆ ಒಂದು ಬಾರಿಸಿ ನೀನು ಏನು ಹೇಳುತ್ತಿದ್ದೀಯಾ ಎಂಬ ಪರಿಜ್ಞಾನ ನಿನಗಿದೆಯಾ ಎಂದು ಶಕುಂತಳಾದೇವಿ ಹೇಳುತ್ತಾರೆ.
ಇದನ್ನು ಓದಿ: ಮಗಳ ಕಣ್ಣೆದುರೇ ಮೌರ್ಯನಿಗೆ ಗುಂಡಿಟ್ಟ ಚಂದ್ರಶೇಖರ್, ಡೆವಿಲ್ ಅಂದುಕೊಂಡಂತೆ ಎಲ್ಲವೂ ನಡೆಯುತ್ತಿದೆ
ನಾನು ಹೇಲುತ್ತಿರುವುದೆಲ್ಲವೂ ನಿಜ. ಆ ಸಿ.ಎಸ್ ಮೌರ್ಯನನ್ನು ಪೋಲಿಸರಿಗೆ ಒಪ್ಪಿಸುವ ಬದಲು ಶೂಟ್ ಮಾಡಿ ಸಾಯಿಸಿದ್ದಾನೆ ಅಂತ ಹೇಳುತ್ತಾ ಜೋರಾಗಿ ಅಳುತ್ತಾ ನಿಲ್ಲುತ್ತಾನೆ. ಆಗಲೇ ಭೂಪತಿಯ ಮೊಬೈಲ್‌ಗೆ ಮೌರ್ಯನ ಫೋಟೊ ಬರುತ್ತದೆ. ಅದನ್ನು ನೋಡಿದ ಶಕುಂತಳಾದೇವಿ ಕುಸಿದು ಬೀಳುತ್ತಾರೆ. ಮನೆಯವರೆಲ್ಲರೂ ಮೌರ್ಯನ ಸ್ಥಿತಿಯನ್ನು ಕಂಡು ಮರುಗುತ್ತಾರೆ. ಮತ್ತೊಂದು ಕಡೆ ಪ್ರಜ್ಞೆ ತಪ್ಪಿ ಬಿದ್ದ ಶಕುಂತಳಾದೇವಿಯನ್ನು ಎಚ್ಚರಗೊಳಿಸುತ್ತಾರೆ. ಒಟ್ಟಾರೆಯಾಗಿ ಮೌರ್ಯನ ಸಾವಿನ ಸುದ್ದಿ ಭೂಪತಿ ಮನೆತವರಿಗೆ ಅರಗಿಸಿಕೊಳ್ಳಲಾಗದ ಘಟನೆಯಾಗಿದೆ.
ಇತ್ತ ಕಡೆ ತಂದೆ ಮಾಡಿರುವ ಮಹಾಪರಾಧಕ್ಕೆ ತಕ್ಕ ಶಿಕ್ಷೆಯಾಗಬೇಕೆಂದು ಪೋಲಿಸರಿಗೆ ಕರೆ ಮಾಡಿ ನಡೆದ ಘಟನೆಯನ್ನು ಹೇಳುತ್ತಾಳೆ ನಕ್ಷತ್ರ. ತಂದೆಯ ಬಗ್ಗೆ ಅಸಮಾಧಾನದಿಂದ ಯಾಕಾಗಿ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಕಿತ್ತು. ನೀವು ಮಾಡಿರುವ ತಪ್ಪಿಗೆ ಸರಿಯಾದ ಶಿಕ್ಷೆ ಆಗಲೇಬೇಕು ಅಪ್ಪ. ನೀವು ಜೈಲಿಗೆ ಹೋಗಲೇಬೇಕು ಎಂದು ನಕ್ಷತ್ರ ಹೇಳುತ್ತಾಳೆ. ಮೌರ್ಯನ ಸಾವಿನಿಂದ ಶಕುಂತಳಾದೇವಿ ಸುಮ್ಮನಿರುತ್ತಾರಾ ಅಥವಾ ಭೂಪತಿ ಸುಮ್ಮನಿರುತ್ತಾನಾ. ಈ ಘಟನೆಯ ಪರಿಣಾಮ ಹೇಗಿರುತ್ತೋ ಎಂಬುವುದನ್ನು ಮುಂದೆ ನೋಡಬೇಕಾಗಿದೆ.
ಮಧುಶ್ರೀ ಅಂಚನ್