‘ನಿನ್ನ ಹೆಸರಿಗೆ ಆಸ್ತಿ ಇರುವ ವಿಚಾರ ಹರ್ಷನಿಗೆ ಒಪ್ಪಿಕೊಳ್ಳಲು ಆಗುತ್ತಿಲ್ಲ’; ಭುವಿಯ ದಾರಿ ತಪ್ಪಿಸಿದ ವರು
ಭುವಿ ಬಗ್ಗೆ ಹರ್ಷ ಸಾಕಷ್ಟು ಕಾಳಜಿ ತೋರಿಸುತ್ತಿದ್ದಾನೆ. ಆಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದಾನೆ. ಆದರೆ, ಭುವಿಗೆ ಅನುಮಾನ ಎಂಬುದು ತಲೆಯಲ್ಲಿ ಹೊಕ್ಕಿದೆ. ಎಲ್ಲವನ್ನೂ ಆಕೆ ಅನುಮಾನ ದೃಷ್ಟಿಯಲ್ಲೇ ನೋಡುತ್ತಿದ್ದಾಳೆ.
ಧಾರಾವಾಹಿ: ಕನ್ನಡತಿ
ಪ್ರಸಾರ: ಕಲರ್ಸ್ ಕನ್ನಡ
ಸಮಯ: ರಾತ್ರಿ 7.30
ನಿರ್ದೇಶನ: ಯಶ್ವಂತ್ ಪಾಂಡು
ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು
ಹಿಂದಿನ ಎಪಿಸೋಡ್ನಲ್ಲಿ ಏನಾಗಿತ್ತು?
ಆಸ್ತಿ ವಿಚಾರದಲ್ಲಿ ಭುವಿ ಟೆನ್ಷನ್ ಆಗಿದ್ದಾಳೆ. ಹೇಗಾದರೂ ಮಾಡಿ ಆಸ್ತಿಯನ್ನು ಹರ್ಷನ ಹೆಸರಿಗೆ ವರ್ಗಾವಣೆ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದಳು ಭುವಿ. ಆದರೆ, ವಿಲ್ನಲ್ಲಿ ಇದಕ್ಕೆ ಅವಕಾಶ ಇಲ್ಲ. ಈ ವಿಚಾರ ಕೇಳಿ ಆಕೆಗೆ ಬೇಸರ ಆಗಿದೆ. ಮತ್ತೊಂದು ಕಡೆ ಸೌಪರ್ಣಿಕಾ ಹೆಸರಿನ ಚರ್ಚೆಯಿಂದ ಆಕೆ ಬೇಸರಕ್ಕೆ ಒಳಗಾಗಿದ್ದಾಳೆ. ವರುಧಿನಿ ಹರ್ಷ ಹಾಗೂ ಭುವಿಯನ್ನು ಬೇರೆ ಮಾಡಲು ಪ್ರಯತ್ನ ಮಾಡುತ್ತಿದ್ದಾಳೆ.
ಹರ್ಷನ ಕಾಳಜಿ
ಭುವಿ ಬಗ್ಗೆ ಹರ್ಷ ಸಾಕಷ್ಟು ಕಾಳಜಿ ತೋರಿಸುತ್ತಿದ್ದಾನೆ. ಆಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದಾನೆ. ಆದರೆ, ಭುವಿಗೆ ಅನುಮಾನ ಎಂಬುದು ತಲೆಯಲ್ಲಿ ಹೊಕ್ಕಿದೆ. ಎಲ್ಲವನ್ನೂ ಆಕೆ ಅನುಮಾನ ದೃಷ್ಟಿಯಲ್ಲೇ ನೋಡುತ್ತಿದ್ದಾಳೆ. ಈ ವಿಚಾರ ಹರ್ಷನಿಗೆ ತಿಳಿದು ಹೋಗಿದೆ. ಈ ಕಾರಣಕ್ಕೆ ಭುವಿ ಎದುರು ನೇರವಾಗಿ ಪ್ರಶ್ನೆ ಮಾಡಿದ್ದಾನೆ ಹರ್ಷ.
ಹರ್ಷ ಹಾಗೂ ಭುವಿ ಇಬ್ಬರೂ ಆಟೋದಲ್ಲಿ ಸಾಗಿದ್ದಾರೆ. ಈ ವೇಳೆ ಹರ್ಷನಿಗೆ ಕೆಲ ನೇರ ಪ್ರಶ್ನೆಗಳನ್ನು ಭುವಿ ಕೇಳಿದ್ದಾಳೆ. ‘ನಿಮಗೆ ರತ್ನಮಾಲಾ ಆಸ್ತಿ ಬರೆದಿಟ್ಟ ವಿಚಾರ ಮೊದಲೇ ಗೊತ್ತಿತ್ತೇ?’ ಎಂದು ಹರ್ಷನಿಗೆ ಪ್ರಶ್ನೆ ಮಾಡಿದ್ದಾಳೆ ಭುವಿ. ಇದಕ್ಕೆ ಹರ್ಷ ಇಲ್ಲ ಎನ್ನುವ ಉತ್ತರ ಹೇಳಿದ್ದಾನೆ. ‘ಹೊರ ಜಗತ್ತಲ್ಲಿ ಸೌಪರ್ಣಿಕಾ ಹೆಸರಲ್ಲಿ ದೊಡ್ಡ ಯುದ್ಧವೇ ನಡೆಯುತ್ತಿದೆ. ಆದರೆ, ನೀವಿಲ್ಲಿ ಹಾಯಾಗಿದ್ದೀರಿ ಎಂಬ ಮಾತನ್ನು ಆದಿನ ನೀವು ಹೇಳಿದ್ದಿರಿ. ಈ ಮಾತನ್ನು ಯಾಕೆ ಹೇಳಿದಿರಿ’ ಎಂಬ ಪ್ರಶ್ನೆ ಕೇಳಿದ್ದಾಳೆ ಭುವಿ. ಇದಕ್ಕೆ ಉತ್ತರ ಹೇಳುವ ಮೊದಲೇ ಭುವಿ ಅಲ್ಲಿಂದ ಮಾಯವಾಗಿದ್ದಾಳೆ. ಆಕೆಯನ್ನು ಹುಡುಕಿ ಹೊರಟಿದ್ದಾನೆ ಹರ್ಷ.
ಭುವಿ ಹೈಜಾಕ್ ಮಾಡಿದ ವರು
ಹರ್ಷ ಹಾಗೂ ಭುವಿ ಜತೆಯಲ್ಲೇ ಇದ್ದರೆ ಸಮಸ್ಯೆ ಆಗುತ್ತದೆ ಅನ್ನೋದು ವರುಧಿನಿಗೆ ತಿಳಿದು ಹೋಗಿದೆ. ಈ ಕಾರಣಕ್ಕೆ ಇಬ್ಬರೂ ಒಟ್ಟಿಗೆ ಇರಲು ವರುಧಿನಿ ಬಿಡುತ್ತಿಲ್ಲ. ಹರ್ಷ ಹಾಗೂ ಭುವಿ ನಿಂತಿರುವಾಗ ವರುಧಿನಿಯೇ ಅಲ್ಲಿಗೆ ಬಂದು ಭುವಿಯನ್ನು ಎಳೆದುಕೊಂಡು ಹೋಗಿದ್ದಾಳೆ. ಆಕೆಯ ಕಿವಿಯಲ್ಲಿ ಸುಳ್ಳುಗಳನ್ನು ಹೇಳಿದ್ದಾಳೆ. ‘ನಿನ್ನ ಹೆಸರಿಗೆ ಆಸ್ತಿ ಬರೆದಿರುವ ವಿಚಾರವನ್ನು ಹರ್ಷನಿಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನು ಅವರೇ ಹೇಳಿದ್ದಾರೆ’ ಎಂಬ ಸುಳ್ಳನ್ನು ವರುಧಿನಿ ಹೇಳಿದ್ದಾಳೆ. ಈ ಮೂಲಕ ಭುವಿ ದಾರಿ ತಪ್ಪಿಸುವ ಕೆಲಸ ನಡೆದಿದೆ.
ಹರ್ಷನ ಅರೆಸ್ಟ್?
ಸಾನಿಯಾ ಮೇಲೆ ಹರ್ಷ ಬುಲೆಟ್ ಹಾರಿಸಲು ಪ್ರಯತ್ನಿಸಿದ್ದ. ಇದನ್ನು ವಿಡಿಯೋ ಮಾಡಿಟ್ಟುಕೊಳ್ಳಲಾಗಿದೆ. ಈ ವಿಡಿಯೋವನ್ನು ಸಾನಿಯಾ ತರಿಸಿಕೊಂಡಿದ್ದಾಳೆ. ಈ ಪ್ರಕರಣದಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ರತ್ನಮಾಲಾ ಅಸ್ಥಿ ಬಿಡಲು ಶ್ರೀರಂಗಪಟ್ಟಣಕ್ಕೆ ಹರ್ಷ ಬಂದಿದ್ದಾನೆ. ಅಲ್ಲಿಗೆ ಸಾನಿಯಾ ಕೂಡ ವಕೀಲರು ಹಾಗೂ ಪೊಲೀಸರ ಜತೆ ಬಂದಿದ್ದಾಳೆ. ಇದೇ ಸರಿಯಾದ ಸಮಯ ಎಂದು ಭಾವಿಸಿದ ಸಾನಿಯಾ ಹರ್ಷನನ್ನು ಅರೆಸ್ಟ್ ಮಾಡಿಸಲು ಪೊಲೀಸರನ್ನು ಕರೆಸಿದ್ದಾಳೆ. ಹರ್ಷನನ್ನು ಅರೆಸ್ಟ್ ಮಾಡಲು ಸಾನಿಯಾ ಪ್ಲ್ಯಾನ್ ಮಾಡಿರುವ ವಿಚಾರ ಭುವಿಗೆ ಈ ಮೊದಲೇ ತಿಳಿದಿದೆ. ಹೀಗಾಗಿ, ಹರ್ಷನ ಅರೆಸ್ಟ್ ಆಗದೇ ಇರಲು ಭುವಿ ಹೊಸ ಪ್ಲ್ಯಾನ್ ಮಾಡಬಹುದು. ಈ ಸಮಸ್ಯೆಯಿಂದ ಆತ ಹೇಗೆ ಹೊರಬರುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.
ಹರ್ಷನ ಸಮಾಧಾನ
ಹರ್ಷನ ಕುಟುಂಬದ ಎಲ್ಲರೂ ದುಃಖದಲ್ಲಿದ್ದಾರೆ. ರತ್ನಮಾಲಾಳನ್ನು ಕಳೆದುಕೊಂಡ ಎಲ್ಲರಿಗೂ ಏನು ಮಾಡಬೇಕು ಎನ್ನುವುದೇ ತಿಳಿಯುತ್ತಿಲ್ಲ. ಅವರೆಲ್ಲರಿಗೂ ಹರ್ಷ ಸಮಾಧಾನ ಮಾಡುವ ಕೆಲಸ ಮಾಡಿದ್ದಾನೆ. ಆದರೆ, ಯಾರಿಗೂ ದುಃಖವನ್ನು ನಿಯಂತ್ರಣ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಶ್ರೀಲಕ್ಷ್ಮಿ ಎಚ್.