AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anirudh Jatkar: ‘ಜೊತೆ ಜೊತೆಯಲಿ’ ತಂಡದೊಂದಿಗೆ ಕಾಣಿಸಿಕೊಂಡ ಅನಿರುದ್ಧ; ಏನು ಈ ಭೇಟಿಯ ಉದ್ದೇಶ?

Jothe Jotheyali Kannada Serial: ‘ತುಂಬಾ ದಿನಗಳ ನಂತರ ಭೇಟಿ ಮಾಡಿದ ಕ್ಷಣ’ ಎಂದು ಅನಿರುದ್ಧ್​ ಅವರು ಈ ಚಂದದ ಫೋಟೋಗೆ ಕ್ಯಾಪ್ಷನ್​ ನೀಡಿದ್ದಾರೆ. ಹಲವಾರು ಅಭಿಮಾನಿಗಳು ಇದಕ್ಕೆ ಕಮೆಂಟ್​ ಮಾಡಿದ್ದಾರೆ.

Anirudh Jatkar: ‘ಜೊತೆ ಜೊತೆಯಲಿ’ ತಂಡದೊಂದಿಗೆ ಕಾಣಿಸಿಕೊಂಡ ಅನಿರುದ್ಧ; ಏನು ಈ ಭೇಟಿಯ ಉದ್ದೇಶ?
‘ಜೊತೆ ಜೊತೆಯಲಿ’ ತಂಡದೊಂದಿಗೆ ಅನಿರುದ್ಧ, ಕೀರ್ತಿ
TV9 Web
| Updated By: ಮದನ್​ ಕುಮಾರ್​|

Updated on:Nov 07, 2022 | 3:48 PM

Share

ನಟ ಅನಿರುದ್ಧ್​ ಜತ್ಕರ್​ (Anirudh Jatkar) ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಅವರು ಖ್ಯಾತಿ ಹೊಂದಿದ್ದಾರೆ. ನಟನೆ ಮಾತ್ರವಲ್ಲದೇ, ಸಾಮಾಜಿಕ ಕಳಕಳಿ ಮೂಲಕವೂ ಅನಿರುದ್ಧ್ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ಅವರನ್ನು ಕಂಡರೆ ವಿಶೇಷ ಪ್ರೀತಿ. ‘ಜೊತೆ ಜೊತೆಯಲಿ’ ಸೀರಿಯಲ್​ ಮೂಲಕ ಅನಿರುದ್ಧ್​ ಅವರು ಇಡೀ ಕರುನಾಡಿನ ಪ್ರೇಕ್ಷಕರನ್ನು ರಂಜಿಸಿದರು. ಆದರೆ ಈಗ ಅವರು ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಆ ಬಗ್ಗೆ ಅಭಿಮಾನಿಗಳಿಗೆ ಬೇಸರ ಇದೆ. ಇತ್ತೀಚೆಗೆ ಅವರು ‘ಜೊತೆ ಜೊತೆಯಲಿ’ ಧಾರಾವಾಹಿ (Jothe Jotheyali Serial) ತಂಡದ ಕಲಾವಿದರನ್ನು ಭೇಟಿ ಆಗಿದ್ದಾರೆ. ಆ ಸಂದರ್ಭದ ಫೋಟೋ ಕೂಡ ವೈರಲ್​ ಆಗಿದೆ. ಈ ಭೇಟಿಯ ಕಾರಣ ಏನು? ಇಲ್ಲಿದೆ ಉತ್ತರ..

ಅನಿರುದ್ಧ್ ಅವರು ಏಕಾಏಕಿ ‘ಜೊತೆ ಜೊತೆಯಲಿ’ ಟೀಮ್ ಕಲಾವಿದರೊಂದಿಗೆ ಕಾಣಿಸಿಕೊಂಡಿದ್ದು ಅಭಿಮಾನಿಗಳು ಅಚ್ಚರಿ ಮೂಡಿಸಿದೆ. ಮತ್ತೆ ಅವರು ಧಾರಾವಾಹಿ ಬಳಗವನ್ನು ಸೇರಿಕೊಂಡಿರಬಹುದೇ ಅಂತ ಹಲವರು ಊಹಿಸಿದ್ದಾರೆ. ಆದರೆ ಅಸಲಿ ವಿಚಾರ ಅದಲ್ಲ. ಇದೊಂದು ಸಹಜ ಭೇಟಿ. ಎಲ್ಲ ಕಲಾವಿದರನ್ನು ಭೇಟಿ ಆಗಲು ಕಾರಣ ಆಗಿದ್ದು ಒಂದು ಶುಭ ಸಮಾರಂಭ.

ಇದನ್ನೂ ಓದಿ
Image
‘ಹೀಗೆ ಎಂದೆಂದಿಗೂ ಜೊತೆ ಜೊತೆಯಲಿ ಇರೋಣ’; ಫ್ಯಾನ್ಸ್​ಗೋಸ್ಕರ ಅನಿರುದ್ಧ್​ ಭಾವನಾತ್ಮಕ ಪೋಸ್ಟ್
Image
Aniruddh Jatkar: ಅನಿರುದ್ಧ್​ ಪರ ನಿಂತ ಮಹಿಳಾ ಅಭಿಮಾನಿಗಳು; ‘ಜೊತೆ ಜೊತೆಯಲಿ’ ನಿರ್ಮಾಪಕರ ವಿರುದ್ಧ ಫ್ಯಾನ್ಸ್​ ಗರಂ
Image
‘ಜೊತೆ ಜೊತೆಯಲಿ’ ತಂಡ ಮಾಡಿದ ಆರೋಪಗಳಿಗೆ ಸುದ್ದಿಗೋಷ್ಠಿಯಲ್ಲಿ ಅನಿರುದ್ಧ್​ ತಿರುಗೇಟು
Image
ಮನೆಯಲ್ಲಿದ್ದರೂ ಸುಮ್ಮನೆ ಕೂತಿಲ್ಲ ‘ಜೊತೆ ಜೊತೆಯಲಿ’ ಅನಿರುದ್ಧ್​​; ಸಂಕಷ್ಟದ ಸಮಯದಲ್ಲಿ ಅಳಿಲು ಸೇವೆ

‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಮೀರಾ ಎಂಬ ಪಾತ್ರವನ್ನು ನಟಿ ಮಾನಸಾ ಮನೋಹರ್​ ನಿಭಾಯಿಸುತ್ತಿದ್ದಾರೆ. ಅವರ ಸಹೋದರನ ನಿಶ್ಚಿತಾರ್ಥ ಭಾನುವಾರ (ನ.6) ನೆರವೇರಿತು. ಆ ಶುಭ ಕಾರ್ಯಕ್ಕೆ ಅನೇಕ ಕಲಾವಿದರು ಸಾಕ್ಷಿ ಆದರು. ನಟ ಅನಿರುದ್ಧ್​ ಮತ್ತು ಅವರ ಪತ್ನಿ ಕೀರ್ತಿ ಕೂಡ ಈ ಸಮಾರಂಭದಲ್ಲಿ ಭಾಗಿ ಆಗಿದ್ದರು. ಈ ವೇಳೆ ‘ಜೊತೆ ಜೊತೆಯಲಿ’ ತಂಡದ ಕಲಾವಿದರು ಕೂಡ ಹಾಜರಿದ್ದರು. ಆಗ ಎಲ್ಲರೂ ಜೊತೆ ಸೇರಿ ಈ ಗ್ರೂಪ್​ ಫೋಟೋಗೆ ಪೋಸ್​ ನೀಡಿದರು.

ಈ ಫೋಟೋವನ್ನು ಅನಿರುದ್ಧ್​ ಅವರು ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ‘ತುಂಬಾ ದಿನಗಳ ನಂತರ ನಿನ್ನೆ ಭೇಟಿ ಮಾಡಿದ ಕ್ಷಣ’ ಎಂದು ಅವರು ಈ ಚಂದದ ಫೋಟೋಗೆ ಕ್ಯಾಪ್ಷನ್​ ನೀಡಿದ್ದಾರೆ. ಹಲವಾರು ಅಭಿಮಾನಿಗಳು ಇದಕ್ಕೆ ಕಮೆಂಟ್​ ಮಾಡಿದ್ದಾರೆ. ‘ನಿಮ್ಮೆಲ್ಲರನ್ನೂ ಒಂದೇ ಫ್ರೇಮ್​ನಲ್ಲಿ ನೋಡಿ ನಮಗೂ ಖುಷಿ ಆಯ್ತು’ ಎಂದು ಫ್ಯಾನ್ಸ್​ ಹೇಳಿದ್ದಾರೆ. ‘ನೀವು ಇಲ್ಲದ ಜೊತೆ ಜೊತೆಯಲಿ ಸೀರಿಯಲ್​, ರಾಜನಿಲ್ಲದ ರಾಜ್ಯದಂತೆ’ ಎಂದು ಕೂಡ ಕಮೆಂಟ್​ ಮಾಡುವ ಮೂಲಕ ಅಭಿಮಾನಿಯೊಬ್ಬರು ಪ್ರೀತಿ ತೋರಿಸಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಅನಿರುದ್ಧ್​ ಅವರು ಆ್ಯಕ್ಟೀವ್​ ಆಗಿದ್ದಾರೆ. ಪರಿಸರದ ಕಾಳಜಿ ಇರುವಂತಹ ಅನೇಕ ಪೋಸ್ಟ್​ಗಳನ್ನು ಅವರು ಮಾಡುತ್ತಾ ಇರುತ್ತಾರೆ. ಬೆಂಗಳೂರಿನ ರಸ್ತೆಗಳ ಪರಿಸ್ಥಿತಿ ಮತ್ತು ನೈರ್ಮಲ್ಯದ ಬಗ್ಗೆ ಆಗಾಗ ಮಾಹಿತಿ ಹಂಚಿಕೊಳ್ಳುತ್ತಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:48 pm, Mon, 7 November 22