Sanya Iyer: ಬಿಗ್​ ಬಾಸ್​ ಮನೆಯಿಂದ ಸಾನ್ಯಾ ಐಯ್ಯರ್​ ಔಟ್​: ಬಿಕ್ಕಿ ಬಿಕ್ಕಿ ಅತ್ತ ರೂಪೇಶ್​ ಶೆಟ್ಟಿ

Bigg Boss Elimination: ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರ ಸ್ಪರ್ಧಿ ಸಾನ್ಯಾ ಐಯ್ಯರ್​ ಅವರು 6ನೇ ವಾರದಲ್ಲೇ ಎಲಿಮಿನೇಟ್​ ಆಗಿದ್ದಾರೆ. ಕೊನೇ ಹಂತದಲ್ಲಿ ಪ್ರಶಾಂತ್​ ಸಂಬರ್ಗಿ ಅವರು ಸೇಫ್​ ಆಗಿದ್ದಾರೆ.

Sanya Iyer: ಬಿಗ್​ ಬಾಸ್​ ಮನೆಯಿಂದ ಸಾನ್ಯಾ ಐಯ್ಯರ್​ ಔಟ್​: ಬಿಕ್ಕಿ ಬಿಕ್ಕಿ ಅತ್ತ ರೂಪೇಶ್​ ಶೆಟ್ಟಿ
ಸಾನ್ಯಾ ಐಯ್ಯರ್
Follow us
TV9 Web
| Updated By: ಮದನ್​ ಕುಮಾರ್​

Updated on:Nov 06, 2022 | 10:06 PM

ಕಿರುತೆರೆ ನಟಿ ಸಾನ್ಯಾ ಐಯ್ಯರ್​ ಅವರ ಬಿಗ್​ ಬಾಸ್​ (Bigg Boss Kannada Season 9) ಆಟ ಅಂತ್ಯವಾಗಿದೆ. ಆರನೇ ವಾರದಲ್ಲಿ ಅವರು ಎಲಿಮಿನೇಟ್​ ಆಗಿದ್ದಾರೆ. ನವೆಂಬರ್​ 6ನೇ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಎಲಿಮಿನೇಷನ್​ ಘೋಷಿಸಿದರು. ‘ಬಿಗ್​ ಬಾಸ್​ ಒಟಿಟಿ’ ಸೀಸನ್​ನಲ್ಲೂ ಸಾನ್ಯಾ ಐಯ್ಯರ್​ ಸ್ಪರ್ಧಿಸಿದ್ದರು. ಅಲ್ಲಿ ಫಿನಾಲೆವರೆಗೂ ಉಳಿದುಕೊಂಡಿದ್ದ ಅವರಿಗೆ ಟಿವಿ ಸೀಸನ್​ನಲ್ಲಿ (BBK9) ಭಾಗವಹಿಸುವ ಅವಕಾಶ ಸಿಕ್ಕಿತ್ತು. ಆದರೆ ಟ್ರೋಫಿ ಗೆಲ್ಲುವ ಅವರ ಕನಸು ಭಗ್ನ ಆಗಿದೆ. ಈ ವಾರ ಸಾನ್ಯಾ ಐಯ್ಯರ್​ (Sanya Iyer) ಅವರು ಡಲ್​ ಆಗಿದ್ದರು. ಟಾಸ್ಕ್​ ವಿಚಾರದಲ್ಲಿ ಅವರು ಹಿಂದೆ ಬಿದ್ದರು. ಹಾಗಾಗಿ ಅವರಿಗೆ ವೀಕ್ಷಕರಿಂದ ಹೆಚ್ಚು ವೋಟ್​ ಬಂದಿಲ್ಲ.

ರೂಪೇಶ್​ ಶೆಟ್ಟಿ ಜೊತೆ ಸಾನ್ಯಾ ಐಯ್ಯರ್​ ಅವರು ಹೆಚ್ಚು ಕ್ಲೋಸ್​ ಆಗಿದ್ದರು. ಸದಾ ಕಾಲ ಅವರಿಬ್ಬರು ಹೆಚ್ಚಾಗಿ ಜೊತೆಯಲ್ಲಿ ಇರುತ್ತಿದ್ದರು. ಇಬ್ಬರ ನಡುವೆ ಸಿಕ್ಕಾಪಟ್ಟೆ ಆತ್ಮೀಯತೆ ಬೆಳೆದಿತ್ತು. ಹಾಗಾಗಿ ಸಾನ್ಯಾ ಐಯ್ಯರ್​ ಎಲಿಮಿನೇಟ್​ ಆದಾಗ ರೂಪೇಶ್​ ಶೆಟ್ಟಿ ಸಖತ್​ ಭಾವುಕರಾದರು. ಎಲ್ಲರ ಎದುರಲ್ಲೂ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅವರನ್ನು ಎಲ್ಲರೂ ಸಮಾಧಾನ ಮಾಡಿದ್ದಾರೆ. ದೊಡ್ಮನೆಯಿಂದ ಹೊರಡುವಾಗ ಸಾನ್ಯಾ ಐಯ್ಯರ್​ ಅವರು ರೂಪೇಶ್​ ಶೆಟ್ಟಿಗೆ ಒಂದು ಉಂಗುರು ನೀಡಿ ಬಂದಿದ್ದಾರೆ. ‘ನಾನು ಹೊರಗೆ ಬರುವವರೆಗೂ ನೀನು ಬದಲಾಗಬೇಡ’ ಎಂದು ರೂಪೇಶ್​ ಶೆಟ್ಟಿ ಮನವಿ ಮಾಡಿಕೊಂಡಿದ್ದಾರೆ.

ಕಿರುತೆರೆಯಿಂದ ಬಂದ ಸಾನ್ಯಾ ಐಯ್ಯರ್​ ಅವರು ‘ಪುಟ್ಟಗೌರಿ ಮದುವೆ’ ಧಾರಾವಾಹಿಯಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ಬಿಗ್​ ಬಾಸ್​ ವೇದಿಕೆಗೆ ಕಾಲಿಟ್ಟ ಬಳಿಕ ಅವರ ಚಾರ್ಮ್​ ಹೆಚ್ಚಿತು. ಅವರು 6ನೇ ವಾರದಲ್ಲೇ ಔಟ್​ ಆಗುತ್ತಾರೆ ಎಂದು ಬಹುತೇಕರು ಊಹಿಸಿರಲಿಲ್ಲ. ಕೊನೆಗೂ ನಿರೀಕ್ಷಿತ ಮಟ್ಟದಲ್ಲಿ ವೋಟ್​ ಪಡೆಯಲು ಸಾಧ್ಯವಾಗದೇ ಅವರು ಎಲಿಮಿನೇಟ್​ ಆಗಿದ್ದಾರೆ. ಕೊನೇ ಹಂತದಲ್ಲಿ ಪ್ರಶಾಂತ್​ ಸಂಬರ್ಗಿ ಅವರು ಎಲಿಮಿನೇಷನ್​ನಿಂದ ಸೇಫ್​ ಆಗಿದ್ದಾರೆ.

ಇದನ್ನೂ ಓದಿ
Image
Bigg Boss Elimination: ಬಿಗ್​ ಬಾಸ್​ನಲ್ಲಿ ದರ್ಶ್​ ಆಟ ಅಂತ್ಯ; 3ನೇ ವಾರದ ಎಲಿಮಿನೇಷನ್​ನಲ್ಲಿ ಮಯೂರಿ ಸೇಫ್​
Image
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
Image
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
Image
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ

ರೂಪೇಶ್​ ಶೆಟ್ಟಿ ಜೊತೆಗಿನ ಅತಿಯಾದ ಸ್ನೇಹದಿಂದಾಗಿ ಸಾನ್ಯಾ ಐಯ್ಯರ್​ ಅವರ ಆಟಕ್ಕೆ ತೊಂದರೆ ಆಗಿದೆ ಎಂಬ ಅಭಿಪ್ರಾಯ ಕೆಲವರದ್ದು. ‘ಆದರೆ ನನಗೆ ರೂಪೇಶ್​ ಜೊತೆಗಿನ ಒಡನಾಟದಿಂದ ಎಂದೂ ಸಮಸ್ಯೆ ಆಗಿಲ್ಲ. ಎಲ್ಲವೂ ನನಗೆ ಪಾಸಿಟಿವ್​ ಆಗಿದೆ’ ಎಂದು ಸುದೀಪ್​ ಎದುರಲ್ಲಿ ಸಾನ್ಯಾ ಐಯ್ಯರ್​ ಹೇಳಿದ್ದಾರೆ.

ಕಿಚ್ಚನ ಚಪ್ಪಾಳೆ ಪಡೆದ ವಿನೋದ್​ ಗೊಬ್ಬರಗಾಲ:

ಈ ವಾರ ಕಿಚ್ಚ ಸುದೀಪ್​ ಅವರ ಮೆಚ್ಚುಗೆಯನ್ನು ವಿನೋದ್​ ಗೊಬ್ಬರಗಾಲ ಪಡೆದುಕೊಂಡಿದ್ದಾರೆ. ಆರೋಗ್ಯ ಕೈ ಕೊಟ್ಟರೂ ಕೂಡ ಬೇಗ ಚೇತರಿಸಿಕೊಂಡು, 6ನೇ ವಾರದ ಎಲ್ಲ ಟಾಸ್ಕ್​ನಲ್ಲಿ ಚೆನ್ನಾಗಿ ಆಡಿದ ಅವರು ‘ಕಿಚ್ಚನ ಚಪ್ಪಾಳೆ’ ಗಿಟ್ಟಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:06 pm, Sun, 6 November 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್