- Kannada News Photo gallery Kichcha Sudeep laughs after listening Aryavardhan Guruji words in Bigg Boss Kannada Season 9
BBK9: ಆರ್ಯವರ್ಧನ್ ಗುರೂಜಿ ಆಡಿದ ಮಾತುಗಳಿಗೆ ಈ ಪರಿ ರಿಯಾಕ್ಷನ್ ಕೊಟ್ರು ಕಿಚ್ಚ ಸುದೀಪ್
Kichcha Sudeep | Aryavardhan Guruji: ಆರ್ಯವರ್ಧನ್ ಅವರು ನುಡಿಯುವ ಭವಿಷ್ಯವೇ ಬೇರೆ, ಅಸಲಿಗೆ ನಡೆಯುವುದೇ ಬೇರೆ. ಅನೇಕ ಸಂದರ್ಭಗಳಲ್ಲಿ ಹೀಗಾಗಿದೆ. ಇದರಿಂದ ಅವರು ಆಗಾಗ ಟ್ರೋಲ್ ಆಗುತ್ತಾರೆ.
Updated on: Nov 06, 2022 | 3:35 PM

Kichcha Sudeep laughs after listening Aryavardhan Guruji words in Bigg Boss Kannada Season 9

Kichcha Sudeep laughs after listening Aryavardhan Guruji words in Bigg Boss Kannada Season 9

ಬಿಗ್ ಬಾಸ್ ಮನೆಗೆ ಕಾಲಿಡುವುದಕ್ಕೂ ಮುನ್ನವೇ ಆರ್ಯವರ್ಧನ್ ಗುರೂಜಿ ಅವರು ಸಖತ್ ಟ್ರೋಲ್ ಆಗಿದ್ದರು. ಅವರು ನುಡಿಯುವ ಭವಿಷ್ಯವೇ ಬೇರೆ, ಅಸಲಿಗೆ ನಡೆಯುವುದೇ ಬೇರೆ. ಅನೇಕ ಸಂದರ್ಭಗಳಲ್ಲಿ ಹೀಗಾಗಿದ್ದುಂಟು.

ಟ್ರೋಲ್ ಆದರೂ ಕೂಡ ಆರ್ಯವರ್ಧನ್ ಅವರು ತಮ್ಮ ಸಂಖ್ಯಾಶಾಸ್ತ್ರ ಮತ್ತು ಜೋತಿಷ್ಯದ ಬಗ್ಗೆ ಆಗಾಗ ಮಾತನಾಡುತ್ತಲೇ ಇರುತ್ತಾರೆ. ‘ಸೂಪರ್ ಸಂಡೇ ವಿತ್ ಸುದೀಪ’ ಸಂಚಿಕೆಯಲ್ಲೂ ಅದು ಮುಂದುವರಿದಿದೆ.

‘ಆಗಾಗ ನನ್ನನ್ನು ನವಗ್ರಹಗಳು ಮಾತಾಡಿಸುತ್ತವೆ. ನಾನು ಹೇಳಿದ್ದೆಲ್ಲವೂ ನಿಜವಾಗಲಿ ಅಂತ ಕೇಳಿಕೊಳ್ಳುತ್ತೇನೆ’ ಎಂದು ಆರ್ಯವರ್ಧನ್ ಹೇಳಿದ್ದು ಕೇಳಿ ಇಡೀ ಮನೆಮಂದಿ ನಕ್ಕಿದ್ದಾರೆ. ಸುದೀಪ್ ಅವರಂತೂ ನಗು ತಡೆಯಲಾಗದೆ ನೆಲದ ಮೇಲೆ ಕುಳಿತಿದ್ದಾರೆ.




