AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಯಮ ಮುರಿದ ಆರ್ಯವರ್ಧನ್ ಗುರೂಜಿ; ಮನೆ ಮಂದಿಗೆ ಕಠಿಣ ಶಿಕ್ಷೆ ಕೊಟ್ಟ ಬಿಗ್ ಬಾಸ್

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಫೈಟ್ ನಡೆಯೋದು ಕಾಮನ್. ಈಗಲೂ ಅದೇ ರೀತಿ ಆಗಿದೆ. ಕಳೆದ ವಾರ ಅನುಪಮಾ ಗೌಡ ಅವರು ಕಳಪೆ ಪಟ್ಟ ಪಡೆದು ಜೈಲಿನಲ್ಲಿದ್ದರು. ಆಗ ಎಡವಟ್ಟು ಸಂಭವಿಸಿದೆ.

ನಿಯಮ ಮುರಿದ ಆರ್ಯವರ್ಧನ್ ಗುರೂಜಿ; ಮನೆ ಮಂದಿಗೆ ಕಠಿಣ ಶಿಕ್ಷೆ ಕೊಟ್ಟ ಬಿಗ್ ಬಾಸ್
ಆರ್ಯವರ್ಧನ್-ರೂಪೇಶ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Nov 07, 2022 | 3:38 PM

Share

ಬಿಗ್ ಬಾಸ್ (Bigg Boss) ಮನೆಯಲ್ಲಿ ಈಗಾಗಲೇ ಹಲವು ಸ್ಪರ್ಧಿಗಳು ಎಲಿಮಿನೇಟ್ ಆಗಿ ಹೋಗಿದ್ದಾರೆ. ನವೆಂಬರ್ 6ರ ಎಪಿಸೋಡ್​ನಲ್ಲಿ ಸಾನ್ಯಾ ಐಯ್ಯರ್ ಅವರು ಮನೆಯಿಂದ ಔಟ್ ಆದರು. ಇದರಿಂದ ರೂಪೇಶ್ ಶೆಟ್ಟಿಗೆ (Roopesh Shetty) ಒಂಟಿತನ ಕಾಡುತ್ತಿದೆ. ಸಾನ್ಯಾ ಐಯ್ಯರ್ ಔಟ್ ಆದ ಎಪಿಸೋಡ್​ ಮುಗಿಯುತ್ತಿದಂತೆ ಬಿಗ್ ಬಾಸ್ ಮನೆ ರಣರಂಗವಾಗಿದೆ. ಮನೆ ಮಂದಿ ಕಿತ್ತಾಟ ಆರಂಭಿಸಿದ್ದಾರೆ. ಇದಕ್ಕೆ ಕಾರಣವಾಗಿದ್ದು ಆರ್ಯವರ್ಧನ್ ಅವರು ನಿಯಮ ಮುರಿದಿದ್ದು. ಈ ಕಾರಣಕ್ಕೆ ಬಿಗ್ ಬಾಸ್ ಮನೆ ಮಂದಿಗೆ ಕಠಿಣ ಶಿಕ್ಷೆ ಒಂದನ್ನು ನೀಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಫೈಟ್ ನಡೆಯೋದು ಕಾಮನ್. ಈಗಲೂ ಅದೇ ರೀತಿ ಆಗಿದೆ. ಕಳೆದ ವಾರ ಅನುಪಮಾ ಗೌಡ ಅವರು ಕಳಪೆ ಪಟ್ಟ ಪಡೆದು ಜೈಲಿನಲ್ಲಿದ್ದರು. ಬಿಗ್ ಬಾಸ್ ನಿಯಮಗಳ ಪ್ರಕಾರ ಜೈಲಿನಲ್ಲಿರುವ ವ್ಯಕ್ತಿಗಳೇ ಮನೆಯಲ್ಲಿ ತರಕಾರಿ ಕತ್ತರಿಸಬೇಕು. ಒಂದೊಮ್ಮೆ ನಿಯಮ ಮುರಿದು ಮನೆ ಮಂದಿ ತರಕಾರಿ ಕತ್ತರಿಸಿದರೆ ಅದಕ್ಕೆ ಶಿಕ್ಷೆ ನೀಡಲಾಗುತ್ತದೆ. ಅನುಪಮಾಗೆ ಈರುಳ್ಳಿ ಕತ್ತರಿಸಲು ಕೊಡದೆ ಆರ್ಯವರ್ಧನ್​ ಅವರೇ ಈ ಕೆಲಸ ಮಾಡಿದ್ದಾರೆ.

ಆರ್ಯವರ್ಧನ್ ಈರುಳ್ಳಿ ಕತ್ತರಿಸುವುದನ್ನು ಬಿಗ್ ಬಾಸ್ ಗಮನಿಸಿದ್ದಾರೆ. ಹೀಗಾಗಿ, ಈರುಳ್ಳಿ, ಕೊತ್ತುಂಬರಿ ಸೊಪ್ಪು ಮೊದಲಾದ ತರಕಾರಿಗಳನ್ನು ಸ್ಟೋರೂಂಗೆ ಮರಳಿಸುವಂತೆ ಆದೇಶ ಬಂದಿದೆ. ಇದರಿಂದ ಮನೆ ಮಂದಿ ಕಂಗಾಲಾಗಿದ್ದಾರೆ. ‘ರೂಪೇಶ್ ರಾಜಣ್ಣ ಅವರು ಆಮ್ಲೆಟ್​ಗೆ ಈರುಳ್ಳಿ ಬೇಕೆ ಬೇಕು ಎಂದು ಪಟ್ಟು ಹಿಡಿದರು. ಅದಕ್ಕಾಗಿ ನಾನು ಈರುಳ್ಳಿ ಕತ್ತರಿಸಿದೆ. ಹಾಗಾಗಿ ಈ ರೀತಿ ಆಯಿತು. ನೀವು ಮಾಡಿದ ತಪ್ಪಿಗೆ ನಾನು ಶಿಕ್ಷೆ ಅನುಭವಿಸುತ್ತಿದ್ದೇನೆ’ ಎಂದು ಆರ್ಯವರ್ಧನ್ ಸಿಟ್ಟಾದರು.

ಇದನ್ನೂ ಓದಿ: Sanya Iyer: ಬಿಗ್​ ಬಾಸ್​ ಮನೆಯಿಂದ ಸಾನ್ಯಾ ಐಯ್ಯರ್​ ಔಟ್​: ಬಿಕ್ಕಿ ಬಿಕ್ಕಿ ಅತ್ತ ರೂಪೇಶ್​ ಶೆಟ್ಟಿ

ಆಗ ಮಧ್ಯದಲ್ಲಿ ಬಂದ ರೂಪೇಶ್ ರಾಜಣ್ಣ ಅವರು ಸಿಟ್ಟಾಗಿದ್ದಾರೆ. ‘ನಾನು ಇಲ್ಲಿಗೆ ಹೊಸಬ. ನನಗೆ ಇಲ್ಲಿನ ನಿಯಮ ಗೊತ್ತಿರಲಿಲ್ಲ’ ಎಂದು ಸಮಜಾಯಿಶಿ’ ನೀಡಲು ಬಂದರು. ಇದಕ್ಕೆ ಅರುಣ್ ಸಾಗರ್ ಅವರು ಸಿಟ್ಟಾದರು. ‘ಆರು ವಾರ ಕಳೆದ ಮೇಲೆ ಇಲ್ಲಿರುವ ಸ್ಪರ್ಧಿಗಳಿಗೆ ಯಾರೂ ಹೊಸಬ ಅಂತ ಹೇಳಲ್ಲ’ ಎಂದು ಸಿಟ್ಟಾದರು.