AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಜವಾಯ್ತು ಪ್ರೇಕ್ಷಕರ ಊಹೆ; ಕೊನೆಯಾಗೇ ಹೋಯ್ತು ರತ್ನಮಾಲಾ ಪಾತ್ರ

ರತ್ನಮಾಲಾಗೆ ಕಳೆದ ಕೆಲ ದಿನಗಳಿಂದ ಅನಾರೋಗ್ಯ ಕಾಡಿತ್ತು. ಅವಳ ಪಾತ್ರ ಕೊನೆಯಾಗಬಹುದು ಎಂದು ಎಲ್ಲರಲ್ಲೂ ಅನುಮಾನ ಮೂಡಿತ್ತು. ಈಗ ಹಾಗೆಯೇ ಆಗಿದೆ. ರತ್ನಮಾಲಾ ಪಾತ್ರ ಕೊನೆಯಾಗಿದೆ.

ನಿಜವಾಯ್ತು ಪ್ರೇಕ್ಷಕರ ಊಹೆ; ಕೊನೆಯಾಗೇ ಹೋಯ್ತು ರತ್ನಮಾಲಾ ಪಾತ್ರ
ರತ್ನಮಾಲಾ
TV9 Web
| Edited By: |

Updated on: Nov 07, 2022 | 6:35 PM

Share

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್, ಚಿತ್ಕಲಾ ಬೀರಾದಾರ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ರತ್ನಮಾಲಾ ಕೋಮಾಗೆ ಹೋಗಿದ್ದಳು. ಹೀಗಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಿಂದ ಆಕೆ ಡಿಸ್ಚಾರ್ಜ್ ಆಗಿದ್ದಾಳೆ. ಮರಳಿ ಆಕೆಯನ್ನು ಮನೆಗೆ ಕರೆದು ತರಲಾಗಿದೆ. ಅತ್ತ ವರುಧಿನಿಗೆ ಸಾಕಷ್ಟು ಭಯ ಕಾಡಿದೆ. ಆಕೆ ರತ್ನಮಾಲಾ ಬರೆದಿಟ್ಟ ವಿಲ್ ಪತ್ರ ತೆಗೆದು ಓದುವ ಹಂತದಲ್ಲಿ ಇದ್ದಳು. ಆಕೆಯ ಕೈ ನಡುಗುತ್ತಿತ್ತು.

ಹಾರಿ ಹೋಯ್ತು ರತ್ನಮಾಲಾ ಪ್ರಾಣ

ರತ್ನಮಾಲಾಗೆ ಕಳೆದ ಕೆಲ ದಿನಗಳಿಂದ ಅನಾರೋಗ್ಯ ಕಾಡಿತ್ತು. ಅವಳ ಪಾತ್ರ ಕೊನೆಯಾಗಬಹುದು ಎಂದು ಎಲ್ಲರಲ್ಲೂ ಅನುಮಾನ ಮೂಡಿತ್ತು. ಈಗ ಹಾಗೆಯೇ ಆಗಿದೆ. ರತ್ನಮಾಲಾ ಪಾತ್ರ ಕೊನೆಯಾಗಿದೆ. ಆಕೆಯ ಉಸಿರು ಗಾಳಿಯಲ್ಲಿ ಲೀನವಾಗಿದೆ. ಈ ಮೂಲಕ ರತ್ನಮಾಲಾ ಪಾತ್ರ ಪೂರ್ಣಗೊಂಡಿದೆ. ಇದರಿಂದ ಧಾರಾವಾಹಿಗೆ ದೊಡ್ಡ ಟ್ವಿಸ್ಟ್ ಸಿಗುವ ಸೂಚನೆಯನ್ನು ನಿರ್ದೇಶಕರು ನೀಡಿದ್ದಾರೆ. ಮುಂದೆ ಕಥೆ ಏನಾಗಬಹುದು ಎಂಬ ಕುತೂಹಲ ಹಾಗೂ ಅನುಮಾನ ಎಲ್ಲರಲ್ಲೂ ಕಾಡಿದೆ.

ಸಾವನ್ನು ನಂಬಲಿಲ್ಲ ಹರ್ಷ

ರತ್ನಮಾಲಾಳನ್ನು ಆಸ್ಪತ್ರೆಯಿಂದ ಕರೆತರಲಾಯಿತು. ಆಕೆ ಎಲ್ಲರ ಜತೆ ಚೆನ್ನಾಗಿ ಮಾತನಾಡಿಕೊಂಡಿದ್ದಳು. ಈ ವೇಳೆ ರತ್ನಮಾಲಾಗೆ ಹಳೆಯ ನೆನಪು ಕಾಡಿದೆ. ಭುವಿಯನ್ನು ನೋಡಿ ಆಕೆ ಭಾವುಕಳಾಗಿದ್ದಾಳೆ. ‘ಭುವಿ ಸಿಕ್ಕ ಮರುಕ್ಷಣವೇ ಆಕೆಯ ಮೇಲೆ ನನಗೆ ನಂಬಿಕೆ ಬಂತು. ಆಕೆ ಎಲ್ಲವನ್ನೂ ನಿರ್ವಹಿಸಿಕೊಂಡು ಹೋಗುತ್ತಾಳೆ ಎಂಬ ನಂಬಿಕೆ ಬಂತು. ಹೀಗಾಗಿ, ಆಕೆಗೆ ಸಂಪೂರ್ಣ ಆಸ್ತಿಯನ್ನು ಬರೆದೆ. ಆಕೆಗೆ ಎಲ್ಲವನ್ನೂ ವಹಿಸಿದೆ. ಈಗ ನಾನು ಹೋಗುವ ಸಮಯ ಬಂದಿದೆ. ಆಕೆಯೇ ಇನ್ನುಮುಂದೆ ಎಲ್ಲವನ್ನೂ ನೋಡಿಕೊಳ್ಳುತ್ತಾಳೆ’ ಎಂದು ರತ್ನಮಾಲಾ ಭಾವುಕಳಾಗಿದ್ದಾಳೆ. ಇದನ್ನು ಯೋಚನೆ ಮಾಡುವಾಗಲೇ ಆಕೆಯ ಉಸಿರು ಹೋಗಿದೆ.

ಆಕೆ ಮೃತಪಟ್ಟ ವಿಚಾರವನ್ನು ರತ್ನಮಾಲಾ ಮನೆಯಲ್ಲಿರುವ ಆದಿ ಖಚಿತಪಡಿಸಿದ್ದಾನೆ. ಆದಿ ವೃತ್ತಿಯಲ್ಲಿ ವೈದ್ಯ. ರತ್ನಮಾಲಾ ಮೃತಪಟ್ಟಳು ಎಂದು ಆತ ಹೇಳಿದರೂ ಅದನ್ನು ನಂಬುವ ಸ್ಥಿತಿಯಲ್ಲಿ ಹರ್ಷ ಇರಲಿಲ್ಲ. ಆದಿ ಸುಳ್ಳು ಹೇಳುತ್ತಿದ್ದಾನೆ ಎಂಬ ಆರೋಪವನ್ನು ಹರ್ಷ ಮಾಡಿದನು. ಆದರೆ, ರತ್ನಮಾಲಾ ಉಸಿರಾಡುತ್ತಿಲ್ಲ ಎನ್ನುವ ವಿಚಾರ ಗೊತ್ತಾದಾಗ ಆತ ಶಾಕ್ ಆಗಿದ್ದಾನೆ. ಆದರೆ, ಇದನ್ನು ನಂಬಲಿಲ್ಲ.

ವಿಲ್ ಓದಿದ ವರುಧಿನಿ

ವರುಧಿನಿ ಭುವಿ ಮನೆಗೆ ನುಗ್ಗಿದ್ದಳು. ರತ್ನಮಾಲಾಳು ಭುವಿ ಹೆಸರಿಗೆ ಎಲ್ಲವನ್ನೂ ಬರೆದು ಇಟ್ಟಿದ್ದಾಳೆ. ಈ ವಿಚಾರ ರತ್ನಮಾಲಾಗೆ ಮಾತ್ರ ಗೊತ್ತಿತ್ತು. ಈಗ ಈ ವಿಚಾರ ವರುಧಿನಿಗೆ ಗೊತ್ತಾಗಿದೆ. ಆಕೆ ಭುವಿ ಮನೆಗೆ ನುಗ್ಗಿ ವಿಲ್ ಪತ್ರಕ್ಕಾಗಿ ಹುಡುಕಾಡಿದ್ದಾಳೆ. ಆಗ ಆಕೆಗೆ ಆಸ್ತಿಪತ್ರ ಸಿಕ್ಕಿದೆ. ರತ್ನಮಾಲಾಳು ತನ್ನ ಸಂಪೂರ್ಣ ಆಸ್ತಿಯನ್ನು ಭುವಿ ಹೆಸರಿಗೆ ಬರೆದಿರುವ ಬಗ್ಗೆ ವಿಲ್​ನಲ್ಲಿ ಉಲ್ಲೇಖಿಸಿದ್ದಳು. ಅಷ್ಟೇ ಅಲ್ಲ ವಿಲ್​ನಲ್ಲಿ ತಾವು ಯಾವುದೇ ಒತ್ತಡದಿಂದ ಈ ಕೆಲಸ ಮಾಡಿಲ್ಲ ಎಂಬುದು ಸ್ಪಷ್ಟವಾಗಿ ಬರೆದಿದ್ದಳು.

ಮುಂದಾಗಲಿದೆ ಕಲಹ?

ರತ್ನಮಾಲಾ ಬರೆದಿಟ್ಟ ವಿಲ್​ನಿಂದ ಇಡೀ ಮನೆ ಹೊತ್ತಿ ಉರಿಯಬಹುದು. ರತ್ನಮಾಲಾ ಮಾಡಿಟ್ಟ ಆಸ್ತಿಗೆ ತಾನೇ ವಾರಸುದಾರ ಎಂದು ಹರ್ಷ ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಆದರೆ, ಭುವಿ ಹೆಸರಿಗೆ ರತ್ನಮಾಲಾ ಆಸ್ತಿ ಬರೆದಿಟ್ಟಿದ್ದಾಳೆ ಎನ್ನುವ ವಿಚಾರ ಗೊತ್ತಾದರೆ ಆತನಿಗೆ ಶಾಕ್ ಆಗೋದು ಗ್ಯಾರಂಟಿ.

ರತ್ನಮಾಲಾ ತೆಗೆದುಕೊಂಡ ನಿರ್ಧಾರದಿಂದ ಮುಂದೆ ಇಡೀ ಮನೆಯಲ್ಲಿ ಕಲಹ ಉಂಟಾಗಬಹುದು. ಯಾರು ಯಾರ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಹೇಳುವುದೂ ಕಷ್ಟ ಆಗಬಹುದು. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ಟ್ವಿಸ್ಟ್​ನಿಂದ ಕೆಲವರಿಗೆ ಬೇಸರ ಆಗಿದೆ.

ಶ್ರೀಲಕ್ಷ್ಮಿ ಎಚ್.

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ