Honganasu Serial: ಕೊನೆಗೂ ಮಗನನ್ನು ಮಾತಾಡಿಸಿದ ಮಹೇಂದ್ರ; ತನ್ನ ನಿರ್ಧಾರ ಬದಲಾಯಿಸಿಕೊಳ್ತಾನಾ ರಿಷಿ?
Honganasu Serial Update: ಜಗತಿ ಮತ್ತು ಮಹೇಂದ್ರ ಇದ್ದ ಮನೆಗೆ ದೇವಯಾನಿ ದಿಢೀರ್ ಎಂಟ್ರಿ ಕೊಟ್ಟಳು. ದೇವಯಾನಿ ನೋಡಿ ಇಬ್ಬರೂ ಶಾಕ್ ಆದರು.
ಧಾರಾವಾಹಿ: ಹೊಂಗನಸು
ಪ್ರಸಾರ: ಸ್ಟಾರ್ ಸುವರ್ಣ
ಸಮಯ: ಮಧ್ಯಾಹ್ನ 1.30
ನಿರ್ದೇಶನ: ಅನಿಲ್ ಆನಂದ್, ಕುಮಾರ್
ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು.
ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?
ಅಪ್ಪನನ್ನು ಮನೆಗೆ ಕರೆದುಕೊಂಡು ಬರಲು ರಿಷಿ ಹರಸಾಹಸ ಮಾಡುತ್ತಿದ್ದಾನೆ. ಮಗ ತೆಗೆದುಕೊಂಡ ನಿರ್ಧಾರದಿಂದ ಕೋಪಕೊಂಡಿರುವ ಮಹೇಂದ್ರ ಮತ್ತೆ ಮನೆಗೆ ಹೊಗಲು ಒಪ್ಪುತ್ತಿಲ್ಲ. ಜಗತಿ ಎಷ್ಟೇ ಹೇಳಿದ್ರು ಮಹೇಂದ್ರ ವಾಪಾಸ್ ಹೋಗಲು ತಯಾರಿಲ್ಲ. ಮಗನಿಗೆ ತಪ್ಪಿನ ಅರಿವಾಗುವವರೆಗೂ ಮನೆಗೆ ಹೋಗಲ್ಲ ಎಂದು ಪಟ್ಟುಹಿಡಿದಿದ್ದಾನೆ. ರಿಷಿ ತಂದೆಯನ್ನು ಮನೆಗೆ ಕರೆಸಿಕೊಳ್ಳಲು ವಸು ಸಹಾಯ ಕೇಳಿದ್ದಾನೆ.
ರಿಷಿ ಕ್ಯಾನ್ಸಲ್ ಮಾಡಿರುವ ಪ್ರಾಜೆಕ್ಟ್ ಆನ್ನು ಸರ್ಕಾರದ ಅಡಿಯಲ್ಲಿ ಮುನ್ನಡೆಸಲು ಜಗತಿ ಮತ್ತು ಮಹೇಂದ್ರ ಪ್ಲಾನ್ ಮಾಡಿದ್ದಾರೆ. ಈ ವಿಚಾರವಾಗಿ ಮಾತನಾಡಲು ಜಗತಿ ಮತ್ತು ಮಹೇಂದ್ರ ಇಬ್ಬರೂ ಎಜುಕೇಶನ್ ಮಿನಿಸ್ಟರ್‌ನನ್ನು ಭೇಟಿಯಾದರು. ಆದರೆ ಇಷ್ಟು ಒಳ್ಳೆಯ ಪ್ರಾಜೆಕ್ಟ್ ಯಾಕೆ ಕ್ಯಾನ್ಸಲ್ ಮಾಡಿದ್ದು ಎಂದು ಮಿನಿಸ್ಟರ್ ಪ್ರಶ್ನೆ ಮಾಡಿದರು. ಮಹೇಂದ್ರ ಮತ್ತು ಜಗತಿ ಇಬ್ಬರಿಗೂ ಯಾಕೆಂದು ಗೊತ್ತಿದ್ರೂ ಇಲ್ಲ ಅಂತ ಹೇಳಿದರು. ‘ಈ ಪ್ರಾಜೆಕ್ಟ್ ನಿಮ್ಮ ಕಾಲೇಜಿನ ಅಡಿಯಲ್ಲಿ ಮುಂದುವರೆಯಬೇಕು, ಇದರಲ್ಲಿ ಜಗತಿ ಮತ್ತು ರಿಷಿ ಇಬ್ಬರೂ ಇರಬೇಕು’ ಎಂದು ಮಿನಿಸ್ಟರ್ ಹೇಳಿದರು.
ಮನೆಬಿಟ್ಟು ಬಂದ ಬಳಿಕ ಮಹೇಂದ್ರ ಕೊನೆಗೂ ಮಗನನ್ನು ಭೇಟಿಯಾದ. ಯಾಕೆ ಮನೆ ಬಿಟ್ಟು ಹೋಗಿದ್ದು ಎಂದು ರಿಷಿ ಮಹೇಂದ್ರನಿಗೆ ಪ್ರಶ್ನೆ ಮಾಡಿದ. ‘ಒಂದೇ ಮನೆಯಲ್ಲಿ ಇದ್ದರೂ ನಮ್ಮಿಬ್ಬರ ನಡುವೆ ಬಾಂಧವ್ಯ ಇರಲಿಲ್ಲ, ಒಂಟಿತನ ಕಾಡುತ್ತಿತ್ತು ಹಾಗಾಗಿ ಮನೆ ಬಿಟ್ಟು ಬಂದೆ’ ಎಂದು ಮಹೇಂದ್ರ ವಿವರಿಸಿದ. ಮನೆಗೆ ಬರಲ್ವಾ ಎಂದು ರಿಷಿ ಕೇಳಿದ. ಬರಲ್ಲ ಎಂದು ಮಹೇಂದ್ರ ಖಡಕ್ ಆಗಿ ಹೇಳಿ ಹೊರಟ. ಮನೆಗೆ ಬಂದ ಮಹೇಂದ್ರ ಮಗನ ಮಾತು ನೆನೆದು ಕಣ್ಣೀರು ಹಾಕಿದ. ಅಷ್ಟರಲ್ಲೇ ವಸು ಎಂಟ್ರಿ ಕೊಟ್ಟಳು. ವಸು ಮನೆಗೆ ಬರುತ್ತಿದ್ದಂತೆ ರಿಷಿ ಕಾಲ್ ಮಾಡಿ ಬರಲು ಹೇಳಿದ. ರಿಷಿ ಫೋನ್ ಬರುತ್ತಿದ್ದಂತೆ ವಸು ಓಡೋಡಿ ಹೋದಳು. ರಿಷಿ ಮತ್ತು ವಸು ಇಬ್ಬರೂ ಮಿನಿಸ್ಟರ್ ಮನೆಗೆ ಹೋದರು.
ಪ್ರಾಜೆಕ್ಟ್ ಯಾಕೆ ಕ್ಯಾನ್ಸಲ್ ಮಾಡಿದ್ದು ಎಂದು ಮಿನಿಸ್ಟರ್ ಪ್ರಶ್ನೆ ಮಾಡಿದರು. ರಿಷಿಗೆ ಒಂದಿಷ್ಟು ಕಿವಿಮಾತು ಹೇಳಿದರು. ಮತ್ತೇನಾದರೂ ಸಹಾಯ ಬೇಕಾದರೆ ತಮ್ಮ ಇಲಾಖೆ ಸಹಾಯ ಕೇಳಿ ಎಂದು ಮಿನಿಸ್ಟರ್ ಹೇಳಿದರು. ಆದರೆ ರಿಷಿ ಯಾವುದೇ ಕಾರಣಕ್ಕೂ ನನ್ನ ನಿರ್ಧಾರ ಬದಲಾಯಿಸಲ್ಲ ಎಂದು ಕಡ್ಡಿ ತುಂಡಾಗುವ ಹಾಗೆ ಹೇಳಿ ಹೊರಟ.
ಜಗತಿ ಮತ್ತು ಮಹೇಂದ್ರ ಇದ್ದ ಮನೆಗೆ ದೇವಯಾನಿ ದಿಢೀರ್ ಎಂಟ್ರಿ ಕೊಟ್ಟಳು. ದೇವಯಾನಿ ನೋಡಿ ಇಬ್ಬರೂ ಶಾಕ್ ಆದರು. ಟಾಂಗ್ ಕೊಡುತ್ತಲೇ ಜಗತಿ ಮನೆಯೊಳಗೆ ಎಂಟ್ರಿ ಕೊಟ್ಟಳು ದೇವಯಾನಿ. ರಿಷಿ ಹಿಂದೆ ವಸುಧರಾಳನ್ನು ಯಾಕೆ ಬಿಟ್ಟಿದ್ದೀರಾ ಎಂದು ದೇವಯಾನಿ ಪ್ರಶ್ನೆ ಮಾಡಿದಳು. ಅವಳನ್ನು ಹದ್ದುಬಸ್ತಿನಲ್ಲಿ ಇಡೋದು ಬಿಟ್ಟು ಯಾಕೆ ಅವನ ಹಿಂದೆ ತಿರುಗೋಕೆ ಬಿಟ್ಟಿದ್ದೀಯಾ ಅಂತ ಕೇಳಿದಳು. ‘ಇಬ್ಬರೂ ಒಟ್ಟಿಗೆ ಇದ್ರೆ ಇರಲಿ, ಒಟ್ಟಿಗೆ ಓಡಾಡಲಿ ಇಬ್ಬರೂ ಏನು ಚಿಕ್ಕವರಲ್ಲ’ ಎಂದು ಜಗತಿ ಸರಿಯಾಗಿ ತಿರುಗೇಟು ನೀಡಿದಳು. ‘ಈ ಎಲ್ಲಾ ಪ್ರಶ್ನೆಗಳನ್ನು ರಿಷಿ ಬಳಿಯೇ ಕೇಳಿ ನನ್ನ ಬಳಿ ಯಾಕೆ ಕೇಳ್ತಿದ್ದೀರಾ’ ಎಂದು ದೇವಯಾನಿಗೆ ಜಗತಿ ಹೇಳಿದಳು. ಜಗತಿ ಮಾತಿನಿಂದ ಮತ್ತಷ್ಟು ಉರ್ಕೊಂಡ ದೇವಯಾನಿ ಮನೆಯಿಂದ ಹೊರಟು ಹೋದಳು. ಜಗತಿಯಿಂದ ದೂರ ಆಗಿರುವ ರಿಷಿ ಈಗ ಮಹೇಂದ್ರನಿಂದನೂ ದೂರ ಆಗ್ತಾನಾ? ಅಥವಾ ಎಲ್ಲರ ಮಾತಿಗೂ ಮಣಿದು ಪ್ರಾಜೆಕ್ಟ್ ಮತ್ತೆ ಪ್ರಾರಂಭ ಮಾಡುತ್ತಾನಾ? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.