ಕನ್ನಡ ಸಿನಿಮಾದಲ್ಲಿ ನಟಿಸ್ತಾರಾ ಆಮಿರ್ ಖಾನ್? ನೀಡಿದ ಉತ್ತರವೇನು?

Aamir Khan: ನಟ ಆಮಿರ್ ಖಾನ್​ಗೆ ಬೆಂಗಳೂರಿನೊಟ್ಟಿಗೆ ಉತ್ತಮ ಬಂಧವಿದೆ. ಕನ್ನಡದಲ್ಲಿ ನಟಿಸುವ ಅವಕಾಶ ಸಿಕ್ಕರೆ ನಟಿಸುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದಾರೆ ಆಮಿರ್ ಖಾನ್.

ಕನ್ನಡ ಸಿನಿಮಾದಲ್ಲಿ ನಟಿಸ್ತಾರಾ ಆಮಿರ್ ಖಾನ್? ನೀಡಿದ ಉತ್ತರವೇನು?
Follow us
ಮಂಜುನಾಥ ಸಿ.
|

Updated on: Feb 13, 2024 | 10:38 PM

ಬಾಲಿವುಡ್ ಸ್ಟಾರ್ ನಟ ಆಮಿರ್ ಖಾನ್ (Aamir Khan) ಬೆಂಗಳೂರಿಗೆ ಬಂದಿದ್ದಾರೆ. ಅವರ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನ ಮಾಡಿರುವ ತಮ್ಮ ನಿರ್ಮಾಣ ಸಂಸ್ಥೆ ಮೂಲಕ ನಿರ್ಮಾಣವಾಗಿರುವ ‘ಲಾಪತಾ ಲೇಡೀಸ್’ ಸಿನಿಮಾದ ಪ್ರೀಮಿಯರ್ ಶೋಗಾಗಿ ಅವರು ನಗರಕ್ಕೆ ಬಂದಿದ್ದರು. ಸಿನಿಮಾದ ಪ್ರೀಮಿಯರ್ ಶೋ ಬಳಿಕ ಮಾಧ್ಯಮಗಳೊಟ್ಟಿಗೆ ಪ್ರಶ್ನೋತ್ತರ ಸೆಷನ್ ಅನ್ನೂ ಸಹ ಆಮಿರ್ ಖಾನ್ ನಡೆಸಿದರು. ಈ ವೇಳೆ ಆಮಿರ್ ಖಾನ್​ಗೆ ಕನ್ನಡ ಚಿತ್ರರಂಗ, ಬೆಂಗಳೂರಿನೊಟ್ಟಿಗೆ ನಂಟು ಹೀಗೆ ಹಲವು ವಿಷಯಗಳ ಬಗ್ಗೆ ಕೇಳಲಾಯ್ತು.

ಆಮಿರ್ ಖಾನ್​ಗೂ ಬೆಂಗಳೂರಿಗೂ ವಿಶೇಷ ನಂಟಿದೆ. ಆಮಿರ್ ಖಾನ್ ವೃತ್ತಿ ಜೀವನದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾಗಿರುವ ‘3 ಇಡಿಯಟ್ಸ್’ ಚಿತ್ರೀಕರಣ ನಡೆದಿರುವುದು ಬೆಂಗಳೂರಿನ ಐಐಎಂನಲ್ಲಿ. ಅದರ ಜೊತೆಗೆ ಬೆಂಗಳೂರಿನಲ್ಲಿ ಸಾಕಷ್ಟು ಗೆಳೆಯರನ್ನೂ ಸಹ ಆಮಿರ್ ಖಾನ್ ಹೊಂದಿದ್ದಾರೆ. ಕನ್ನಡ ಚಿತ್ರರಂಗದ ಬಗ್ಗೆಯೂ ಸಾಕಷ್ಟು ಮಾಹಿತಿ ಆಮಿರ್ ಖಾನ್ ಬಳಿ ಇದೆ.

ಅವಕಾಶ ಸಿಕ್ಕರೆ ಕನ್ನಡ ಸಿನಿಮಾದಲ್ಲಿ ನಟಿಸುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಆಮಿರ್ ಖಾನ್, ‘ಕನ್ನಡ ಸಿನಿಮಾಗಳ ಅವಕಾಶ ಬಂದರೆ ನಟಿಸುವೆ ಆದರೆ ನನ್ನದೊಂದು ಸಮಸ್ಯೆ ಇದೆ, ನನಗೆ ಯಾವ ಭಾಷೆ ಬರುತ್ತದೆಯೋ ಆ ಭಾಷೆಯಲ್ಲಿ ಮಾತ್ರ ನಟಿಸಲು ಕಂಫರ್ಟ್ ಅನಿಸುತ್ತದೆ. ನನಗೆ ಹಿಂದಿ, ಇಂಗ್ಲೀಷ್ ಹಾಗೂ ಮರಾಠಿ ಚೆನ್ನಾಗಿ ಬರುತ್ತದೆ. ಆದರೆ ಕನ್ನಡ ಭಾಷೆ ಬರುವುದಿಲ್ಲ. ಅವಕಾಶ ಸಿಕ್ಕರೆ ನೋಡೋಣ’ ಎಂದಿದ್ದಾರೆ.

ಇದನ್ನೂ ಓದಿ:ಮುಗಿಯಿತು ಮಗಳ ಮದುವೆ ಸಂಭ್ರಮ; ಮಗನ ಚಿತ್ರಕ್ಕಾಗಿ ಜಪಾನ್​ಗೆ ತೆರಳಲಿದ್ದಾರೆ ಆಮಿರ್ ಖಾನ್?

ಬೆಂಗಳೂರಿನ ಐಐಎಂ ಬಗ್ಗೆ ಮಾತನಾಡಿರುವ ಆಮಿರ್ ಖಾನ್, ‘ಐಐಎಂ ಜೊತೆಗೆ ನನಗೆ ಬಹಳ ಹಳೆಯ ನಂಟಿದೆ. ಬೆಂಗಳೂರಿನಲ್ಲಿ ನಮ್ಮ ಸಿನಿಮಾದ ಪ್ರೀಮಿಯರ್ ಮಾಡೋಣ ಅಂದುಕೊಂಡಾಗ ನನಗೆ ಮೊದಲು ನೆನಪು ಬಂದಿದ್ದು ಐಐಎಂ. ನಮ್ಮದು ಸಣ್ಣ ಸಿನಿಮಾ, ಬಾಯಿ ಪ್ರಚಾರವೇ ನಮ್ಮ ಸಿನಿಮಾಕ್ಕೆ ಒಳ್ಳೆಯ ಪ್ರಚಾರ ಎಂದು ಭಾವಿಸಿ ನಾವು ನಗರದಿಂದ ನಗರಕ್ಕೆ ಪಯಣಿಸುತ್ತಾ ನಮ್ಮ ಸಿನಿಮಾ ಪ್ರದರ್ಶಿಸುತ್ತಿದ್ದೇವೆ, ಹಾಗೆ ಬೆಂಗಳೂರಿನಲ್ಲಿ ಐಐಎಂ ನಲ್ಲಿ ನಾವು ಸಿನಿಮಾ ಪ್ರದರ್ಶಿಸಿದ್ದೇವೆ’ ಎಂದರು ಆಮಿರ್ ಖಾನ್.

ಆಮಿರ್ ಖಾನ್, ಕಿರಣ್ ರಾವ್ ಹಾಗೂ ಜೋತಿ ದೇಶಪಾಂಡೆ ಒಟ್ಟಿಗೆ ಸೇರಿ ‘ಲಾಪತಾ ಲೇಡೀಸ್’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ಯುವಕನ ಪತ್ನಿಯೊಬ್ಬಳು ನಾಪತ್ತೆಯಾಗಿ ಆ ಸ್ಥಾನಕ್ಕೆ ಬೇರೊಬ್ಬ ಯುವತಿ ಬಂದಿದ್ದಾಳೆ. ಈಗ ಕಳೆದು ಹೋಗಿರುವ ಪತ್ನಿಯನ್ನು ಯುವಕ ಹೇಗೆ ಹುಡುಕುತ್ತಾನೆ. ಜೊತೆಗೆ ಬಂದಿರುವ ಬೇರೆ ಪತ್ನಿ ಯಾರು? ಇದು ಕಥೆಯ ಎಳೆ. ಸಿನಿಮಾ ಪ್ರೀಮಿಯರ್ ಶೋಗಳು ನಡೆದಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ