ಸೋಲಿನ ಸುಳಿಯಿಂದ ಹೊರಬರಲು ದಕ್ಷಿಣ ಭಾರತ ನಿರ್ದೇಶಕನ ಮೊರೆ ಹೋದ ಸಲ್ಮಾನ್ ಖಾನ್
Salman Khan: ಬ್ಲಾಕ್ ಬಸ್ಟರ್ ಸಿನಿಮಾದ ನಿರೀಕ್ಷೆಯಲ್ಲಿರುವ ಸಲ್ಮಾನ್ ಖಾನ್ ಇದೀಗ ದಕ್ಷಿಣ ಭಾರತದ ಸಿನಿಮಾ ನಿರ್ದೇಶಕರೊಟ್ಟಿಗೆ ಕೈ ಜೋಡಿಸಿದ್ದಾರೆ.
ಸೋಲಿನ ಸುಳಿಯಲ್ಲಿದ್ದ ಶಾರುಖ್ ಖಾನ್ (Shah Rukh Khan) ತಮ್ಮ ಸೂಪರ್ ಸ್ಟಾರ್ ಪಟ್ಟವನ್ನು ಮರಳಿ ಪಡೆದುಕೊಂಡಿದ್ದಾರೆ. ರಣ್ಬೀರ್ ಕಪೂರ್ ಅಂತೂ ತಮ್ಮ ವೃತ್ತಿ ಜೀವನದಲ್ಲಿಯೇ ಅತಿ ದೊಡ್ಡ ಹಿಟ್ ಸಿನಿಮಾ ನೀಡಿದ್ದಾರೆ. ಬಾಲಿವುಡ್ನ ಟಾಪ್ ನಟರುಗಳು ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ. ಸಲ್ಮಾನ್ ಖಾನ್ ಸಹ ಭಾರಿ ದೊಡ್ಡ ಸಿನಿಮಾ ಒಂದಕ್ಕಾಗಿ ನಿರೀಕ್ಷೆಯಿಂದ ಕಾಯುತ್ತಿದ್ದು, ಇದಕ್ಕಾಗಿ ಸಲ್ಮಾನ್ ಖಾನ್ ಸಹ ದಕ್ಷಿಣ ಭಾರತದ ಸಿನಿಮಾ ನಿರ್ದೇಶಕರ ಮೊರೆ ಹೋಗಿದ್ದಾರೆ.
ಸಲ್ಮಾನ್ ಖಾನ್ರ ಈ ಹಿಂದಿನ ಸಿನಿಮಾ ‘ಟೈಗರ್ 3’ ಹಿಟ್ ಎನಿಸಿಕೊಂಡಿತಾದರೂ ಅವರ ವಾರಗೆಯ ನಟ ಶಾರುಖ್ ಖಾನ್ರ ‘ಜವಾನ್’, ‘ಪಠಾಣ್’ ರೀತಿ ಭಾರಿ ಹಿಟ್ ಎನಿಸಿಕೊಳ್ಳಲಿಲ್ಲ. ರಣ್ಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾವನ್ನು ಸಹ ‘ಟೈಗರ್ 3’ಗೆ ಮಣಿಸಲಾಗಿರಲಿಲ್ಲ. ‘ಟೈಗರ್ 3’ ಸಿನಿಮಾದ ಹಿಂದೆ ಬಂದಿದ್ದ ಸಲ್ಮಾನ್ ಖಾನ್ರ ಸಿನಿಮಾಗಳು ‘ಸಾಧಾರಣ’ ಪ್ರದರ್ಶನವನ್ನಷ್ಟೆ ಬಾಕ್ಸ್ ಆಫೀಸ್ನಲ್ಲಿ ತೋರಿದ್ದವು. ಇದೀಗ ದೊಡ್ಡ ಹಿಟ್ ಸಿನಿಮಾಕ್ಕಾಗಿ ಸಲ್ಮಾನ್ ಖಾನ್, ದಕ್ಷಿಣ ಭಾರತದ ಸಿನಿಮಾ ನಿರ್ದೇಶಕರೊಟ್ಟಿಗೆ ಕೈ ಮಿಲಾಯಿಸಿದ್ದಾರೆ.
ಇದನ್ನೂ ಓದಿ:Salman Khan: ಸಲ್ಮಾನ್ ಖಾನ್ ಹೆಸರಲ್ಲಿ ವಂಚನೆ; ಎಚ್ಚರಿಕೆ ಕೊಟ್ಟ ಭಾಯಿಜಾನ್
ತಮಿಳಿನಲ್ಲಿ ‘ಗಜಿನಿ’, ‘ತುಪ್ಪಾಕಿ’, ‘7ತ್ ಸೆನ್ಸ್’, ‘ಕತ್ತಿ’, ತೆಲುಗಿನಲ್ಲಿ ಚಿರಂಜೀವಿ ನಟನೆಯ ‘ಸ್ಟಾಲಿನ್’, ಮಹೇಶ್ ಬಾಬು ನಟನೆಯ ‘ಸ್ಪೈಡರ್’ ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಎಆರ್ ಮುರುಗದಾಸ್, ಸಲ್ಮಾನ್ ಖಾನ್ರ ಮುಂದಿನ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಕತೆ ಈಗಾಗಲೇ ಫೈನಲ್ ಆಗಿದ್ದು, ಲೊಕೇಶನ್, ಇತರೆ ಪಾತ್ರವರ್ಗಗಳ ಆಯ್ಕೆ ಚಾಲ್ತಿಯಲ್ಲಿದೆ. ಸಲ್ಮಾನ್ ಖಾನ್ರ ಆತ್ಮೀಯ ಸ್ನೇಹಿತ್ ಸಾಜಿದ್ ನಾಡಿಯಾವಾಲಾ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಭಾರಿ ಬಜೆಟ್ ಅನ್ನು ಸಿನಿಮಾಕ್ಕೆ ಸುರಿಯಲಿದ್ದಾರೆ.
ಸಿನಿಮಾದ ಚಿತ್ರೀಕರಣ ಪೋರ್ಚುಗಲ್, ಕೆಲವು ಯೂರೋಪ್ ದೇಶಗಳಲ್ಲಿ ನಡೆಯಲಿದೆ. ಕೆಲವು ಭಾಗಗಳ ಚಿತ್ರೀಕರಣ ಭಾರತದಲ್ಲಿಯೂ ನಡೆಯಲಿದೆ. ಸಿನಿಮಾಕ್ಕೆ ಸುಮಾರು 500 ಕೋಟಿ ಬಜೆಟ್ ಆಗಲಿದೆ ಎಂದು ಅಂದಾಜಿಸಲಾಗಿದ್ದು, ಕೆಲವು ದೊಡ್ಡ ನಟ-ನಟಿಯರು ಈ ಸಿನಿಮಾದಲ್ಲಿ ಇರಲಿದ್ದಾರೆ. ಸಾಜಿದ್ ನಾಡಿಯಾವಾಲಾ ಹಾಗೂ ಸಲ್ಮಾನ್ ಖಾನ್ ಒಟ್ಟಿಗೆ ಮಾಡಿರುವ ಪ್ರಾಜೆಕ್ಟ್ಗಳು ಸೋತಿರುವುದು ಬಹಳ ವಿರಳ. ಈ ಸಿನಿಮಾ ಸಹ ದೊಡ್ಡ ಹಿಟ್ ಆಗಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಲಾಗಿದೆ. 2014ರಲ್ಲಿ ಬಿಡುಗಡೆ ಆಗಿದ್ದ ‘ಕಿಕ್’ ಸಿನಿಮಾದ ಬಳಿಕ ಈ ಜೋಡಿ ಒಟ್ಟಿಗೆ ಕೆಲಸ ಮಾಡಿರಲಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ