AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ಮತ್ತು ನಟರ ನಡುವಿನ ಅಂತರ ಅಳಿದಿದೆ, ನಾವು ನಿವೃತ್ತರಾಗೆವು: ರವೀನಾ ಟಂಡನ್

Raveena Tandon: ಟಿವಿ9 ನೆಟ್​ವರ್ಕ್​ ಹಮ್ಮಿಕೊಂಡಿರುವ ‘ವಾಟ್ ಇಂಡಿಯಾ ಥಿಂಕ್ ಟುಡೆ’ ಕಾರ್ಯಕ್ರಮದಲ್ಲಿ ನಕ್ಷತ್ರ ಅವಾರ್ಡ್ ಪ್ರಶಸ್ತಿ ಪಡೆದು ಮಾತನಾಡಿದ ನಟಿ ರವೀನಾ ಟಂಡನ್, ಚಿತ್ರರಂಗದ ಭೂತ-ಭವಿಷ್ಯ ಹಾಗೂ ವರ್ತಮಾನದ ಮೇಲೆ ಬೆಳಕು ಚೆಲ್ಲಿದ್ದಾರೆ.

ನಟಿ ಮತ್ತು ನಟರ ನಡುವಿನ ಅಂತರ ಅಳಿದಿದೆ, ನಾವು ನಿವೃತ್ತರಾಗೆವು: ರವೀನಾ ಟಂಡನ್
Follow us
ಮಂಜುನಾಥ ಸಿ.
|

Updated on:Feb 25, 2024 | 7:32 PM

ಟಿವಿ9 ನೆಟ್​ವರ್ಕ್​ ಹಮ್ಮಿಕೊಂಡಿರುವ ‘ವಾಟ್ ಇಂಡಿಯಾ ಥಿಂಕ್ ಟುಡೆ’ ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತದ ಹಲವು ರಂಗಗಳ ಪ್ರಮುಖರು ಭಾಗವಹಿಸಿ ತಮ್ಮ-ತಮ್ಮ ಕ್ಷೇತ್ರಗಳ ಭೂತ-ವರ್ತಮಾನ-ಭವಿಷ್ಯದ ಬಗ್ಗೆ ಚರ್ಚಿಸಿದ್ದಾರೆ. ಭಾರತ ಎಲ್ಲ ರಂಗಗಳಲ್ಲಿಯೂ ಮುಂದಡಿ ಇಡಲು ನೀಲನಕ್ಷೆಯೊಂದನ್ನು ಸಿದ್ಧಪಡಿಸುವ ದೂರದೃಷ್ಟಿಯಿಂದ ರೂಪಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಹಲವು ರಂಗಗಳಲ್ಲಿ ಸಾಧನೆ ಮಾಡಿದವರಿಗೆ ‘ನಕ್ಷತ್ರ ಅವಾರ್ಡ್’ ಪ್ರಶಸ್ತಿಗಳನ್ನು ಸಹ ನೀಡಲಾಯ್ತು. ನಟಿ ರವೀನಾ ಟಂಡನ್ (Raveena Tandon) ನಕ್ಷತ್ರ ಅವಾರ್ಡ್ ಪಡೆದು ತಮ್ಮ ಸಿನಿಮಾ ಜೀವನದ ಬಗ್ಗೆ, ಸಿನಿಮಾ ರಂಗದ ಭೂತ-ವರ್ತಮಾನ ಹಾಗೂ ಭವಿಷ್ಯದ ಬಗ್ಗೆ ಮಾತನಾಡಿದರು.

‘ಒಂದು ಸಮಯವಿತ್ತು, ನಾಯಕಿಯರು ಚಿತ್ರರಂಗ ಪ್ರವೇಶಿಸಿ ಕೆಲ ವರ್ಷಗಳ ಬಳಿಕ ಅವರಿಗೆ ಅವಕಾಶಗಳು ಕಡಿಮೆಯಾಗುತ್ತಿತ್ತು, ಮದುವೆಯಾಗಿಬಿಟ್ಟರೆ ನಿವೃತ್ತಿಯೇ ಆಗಬೇಕಿರುತ್ತಿತ್ತು. ನಟಿಯರು ನಟನೆಯಲ್ಲಿ ಕೌಶಲ ಸಂಪಾದಿಸಿ ಇನ್ನೇನು ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳಬೇಕು, ತಮ್ಮ ನಟನಾ ಪ್ರತಿಭೆಯ ಪರಿಪೂರ್ಣ ಪ್ರದರ್ಶನ ಮಾಡಬೇಕು ಎನ್ನುವಷ್ಟರಲ್ಲಿ ಚಿತ್ರರಂಗದಿಂದಲೇ ನಿವೃತ್ತರಾಗಬೇಕಿತ್ತು. ಅದೇ ನಟರಿಗಾದರೆ ವೃತ್ತಿಯಲ್ಲಿ ಸಾಕಷ್ಟು ಸಮಯ ಸಿಗುತ್ತಿತ್ತು, ಭಿನ್ನ-ಭಿನ್ನ ಪಾತ್ರಗಳನ್ನು ಮಾಡಲು, ನಟನೆಯಲ್ಲಿ ಪ್ರಯೋಗಗಳನ್ನು ಮಾಡಲು ಅವಕಾಶ ಸಿಗುತ್ತಿತ್ತು. ಆದರೆ ಈಗ ಅದು ಬದಲಾಗಿದೆ’ ಎಂದರು ರವೀನಾ ಟಂಡನ್.

‘ಈಗ ಒಟಿಟಿಯಿಂದ, ಪ್ರೇಕ್ಷಕನ ಗ್ಲೋಬಲ್ ಸಿನಿಮಾ ಮನಸ್ಥಿತಿಯಿಂದ ಪರಿಸ್ಥಿತಿ ಬದಲಾಗಿದೆ. ಈಗ ಸಿನಿಮಾಗಳು ಕೇವಲ ‘ನಾಯಕ ಪ್ರಧಾನ’ಮಾತ್ರವೇ ಆಗಿರುವುದಿಲ್ಲ. ಒಟಿಟಿಗಳಂತೂ ನಟಿಯರಿಗೆ ಹೊಸ ಶಕ್ತಿ, ಹೊಸ ಸ್ವಾತಂತ್ರ್ಯವನ್ನು ನೀಡಿವೆ. ನಾವು ಈಗ ನಿವೃತ್ತರಾಗಬೇಕಿಲ್ಲ. ನಾವು ಭಿನ್ನತೆಗೆ ನಮ್ಮನ್ನು ಒಡ್ಡಿಕೊಳ್ಳಬಹುದು. ನಾವೂ ಸಹ ಕತೆಯ ಅಥವಾ ಸಿನಿಮಾದ ‘ನಾಯಕ’ರಾಗಬಹುದು’ ಎಂದಿದ್ದಾರೆ ರವೀನಾ.

ಇದನ್ನೂ ಓದಿ: ವಾಟ್ ಇಂಡಿಯಾ ಥಿಂಕ್ ಟುಡೆ

ಚಿತ್ರರಂಗದ ಭವಿಷ್ಯದ ಬಗ್ಗೆ ಮಾತನಾಡಿ, ‘ನಾವು ಈಗ ಹಾಲಿವುಡ್​ ಅನ್ನು ನಮ್ಮ ಸ್ಪರ್ಧಿ ಎಂದುಕೊಳ್ಳುವ ಮನಸ್ಥಿತಿಯಿಂದ ಹೊರಗೆ ಬರಬೇಕು. ‘ಬಾಹುಬಲಿ’, ‘ಆರ್​ಆರ್​ಆರ್’ ಸಿನಿಮಾಗಳು ಬಹುಷಃ ಹಲವಾರು ಹಾಲಿವುಡ್ ಸಿನಿಮಾಗಳಿಗಿಂತಲೂ ಹೆಚ್ಚಿನ ಬಜೆಟ್ ನಲ್ಲಿ ನಿರ್ಮಿಸಲಾಗಿವೆ ಮತ್ತು ಎಷ್ಟೋ ಹಾಲಿವುಡ್ ಸಿನಿಮಾಗಳಿಗಿಂತಲೂ ಹೆಚ್ಚಿನ ಕಲೆಕ್ಷನ್ ಮಾಡಿವೆ. ನಾವು ವಿಶ್ವದ ‘ಎರಡನೇ ದೊಡ್ಡ’ ಸಿನಿಮಾ ರಂಗ ಎನಿಸಿಕೊಂಡಿದ್ದು ಸಾಕು, ನಾವು ವಿಶ್ವದ ಅತ್ಯುತ್ತಮ ಸಿನಿಮಾರಂಗ ಎನಿಸಿಕೊಳ್ಳುವ ಸಮಯ ಬಂದಿದೆ. ಇದೆಲ್ಲದರ ಜೊತೆಗೆ ನಾವು ಮೊದಲು ‘ಬಾಲಿವುಡ್’ ಅಥವಾ ಯಾವುದೇ ‘ವುಡ್​’ಗಳೆಂದು ನಮ್ಮ ಚಿತ್ರರಂಗಗಳನ್ನು ವಿಂಗಡಿಸಿಕೊಳ್ಳದೆ ‘ಭಾರತೀಯ ಸಿನಿಮಾ’ ಎಂಬ ಏಕ ಗುರುತಿನಲ್ಲಿ ಮುಂದುವರೆಯಬೇಕಿದೆ’ ಎಂದರು.

ತಮ್ಮ ಸಿನಿಮಾ ಜರ್ನಿಯ ಬಗ್ಗೆಯೂ ಚುಟುಕಾಗಿ ಮಾತನಾಡಿದ ರವೀನಾ, ‘ನನ್ನನ್ನು ಅಪ್ಪ, ಮಗನಿಗೆ ಸಮಾನವಾಗಿ ಬೆಳೆಸಿದರು. ಚಿತ್ರರಂಗಕ್ಕೆ ಬರುವ ಮೊದಲಿನಿಂದಲೂ ನನಗೆ ಧೈರ್ಯವಿತ್ತು. ಇದೇ ಧೈರ್ಯ ಚಿತ್ರರಂಗದಲ್ಲಿ ಭಿನ್ನ ಹಾದಿ ತುಳಿಯಲು ನೆರವಾಯ್ತು. ಒಂದು ಹಂತದಲ್ಲಿ ನಾನು ಒಂದೇ ರೀತಿಯ ಪಾತ್ರಗಳನ್ನು ಮಾಡಲು ಆರಂಭಿಸಿದ್ದೆ. ಬಟ್ಟೆ ಹಾಗೂ ಲೊಕೇಶನ್ ಅಷ್ಟೆ ಬದಲಾಗುತ್ತಿತ್ತು. ಆಗಲೇ ನಾನು ಆ ಹಾದಿ ಬಿಟ್ಟು ಬೇರೆ ಹಾದಿ ಹಿಡಿದೆ. ಭಿನ್ನ ಸಿನಿಮಾಗಳನ್ನು ಒಪ್ಪಿಕೊಳ್ಳಲು ಆರಂಭಿಸಿದೆ. ಆಗ ಕೆಲವರು ನನ್ನ ಆಯ್ಕೆಯನ್ನು ಟೀಕಿಸಿದರು. ಆದರೆ ಅದು ನನ್ನ ಅತ್ಯುತ್ತಮ ಆಯ್ಕೆಯಾಗಿತ್ತು. ಅದೇ ಕಾರಣಕ್ಕೆ ಕೆಲವು ಅತ್ಯುತ್ತಮ ಸಿನಿಮಾಗಳನ್ನು ನಾವು ನೀಡಲು ಸಾಧ್ಯವಾಯ್ತು’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:23 pm, Sun, 25 February 24

ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು