AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BJP-JDS ಮೈತ್ರಿ ಗೊಂದಲಕ್ಕೆ ಶೀಘ್ರವೇ ಇತಿಶ್ರೀ: ಸಮನ್ವಯ ಸಭೆಗೆ ನಾಯಕರ ನಿರ್ಧಾರ

ಬಿಜೆಪಿ ಮತ್ತು ಜೆಡಿಎಸ್ ನಾಯಕರು ಬೆಂಗಳೂರಿನಲ್ಲಿ ಸಮನ್ವಯ ಸಭೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆ ಸೇರಿದಂತೆ ಮೈತ್ರಿ ವಿಚಾರದಲ್ಲಿ ಉಂಟಾಗಿರುವ ಗೊಂದಲಗಳನ್ನು ಬಗೆಹರಿಸುವುದು ಇದರ ಮುಖ್ಯ ಉದ್ದೇಶ. ಕುಮಾರಸ್ವಾಮಿ, ಆರ್. ಅಶೋಕ್, ಬಿ.ವೈ. ವಿಜಯೇಂದ್ರರಂತಹ ಪ್ರಮುಖ ನಾಯಕರ ನೇತೃತ್ವದಲ್ಲಿ ಮೀಟಿಂಗ್​​ ನಡೆಯಲಿದೆ ಎನ್ನಲಾಗಿದೆ.

BJP-JDS ಮೈತ್ರಿ ಗೊಂದಲಕ್ಕೆ ಶೀಘ್ರವೇ ಇತಿಶ್ರೀ: ಸಮನ್ವಯ ಸಭೆಗೆ ನಾಯಕರ ನಿರ್ಧಾರ
ಸಾಂದರ್ಭಿಕ ಚಿತ್ರImage Credit source: Google
Sunil MH
| Edited By: |

Updated on:Feb 19, 2026 | 11:58 AM

Share

ಬೆಂಗಳೂರು, ಫೆಬ್ರವರಿ 19: ಮೈತ್ರಿ ನಡುವೆ ಸ್ಥಳೀಯ ಸಂಸ್ಥೆ ಚುನಾವಣೆ ವಿಚಾರ ಸೇರಿ ಕೆಲ ವಿಷಯಗಳಲ್ಲಿ ಉಂಟಾಗಿರುವ ಗೊಂದಲಗಳಿಗೆ ಮದ್ದರೆಯಲು BJP ಮತ್ತು JDS ನಾಯಕರು ಮುಂದಾಗಿದ್ದಾರೆ. ಕುಮಾರಸ್ವಾಮಿ, ಆರ್.ಅಶೋಕ್, ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಶೀಘ್ರವೇ ಬೆಂಗಳೂರಿನಲ್ಲಿ ಮೈತ್ರಿ ನಾಯಕರ ಸಮನ್ವಯ ಸಭೆ ನಡೆಸಲು ಸಿದ್ಧತೆ ನಡೆದಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ವಿಚಾರವಾಗಿ ನಾಯಕರ ಗೊಂದಲದ ಹೇಳಿಕೆ ಹಿನ್ನೆಲೆ ಸಭೆ ನಡೆಸಲು ಉದ್ದೇಶಿಸಿರುವ ಮಾಹಿತಿ ಇದೆ.

ಉಭಯ ಪಕ್ಷಗಳ ನಾಯಕರು ಒಂದೊಂದು ರೀತಿ ಹೇಳಿಕೆ ನೀಡುತ್ತಿರೋದು ಕಾಂಗ್ರೆಸ್ ನಾಯಕರಿಗೆ ಅಸ್ತ್ರವಾಗುವ ಸಾಧ್ಯತೆ ಇದೆ. ಅಲ್ಲದೆ ಸ್ಥಳೀಯ ಸಂಸ್ಥೆ ಚುನಾವಣೆಯ ಮೇಲೂ ಇದು ಪರಿಣಾಮ ಬೀರಬುದಾದ ಹಿನ್ನೆಲೆ ಮೈತ್ರಿ ನಾಯಕರಲ್ಲಿ ಏನೇ ಮನಸ್ತಾಪ, ಗೊಂದಲಗಳಿದ್ದರೂ ಅದನ್ನು ಬಗೆಹರಿಸಲು ನಾಯಕರು ತೀರ್ಮಾನಿಸಿದ್ದಾರೆ. ಜಿಬಿಎ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್​ ಹೊಂದಾಣಿಕೆ ವಿಚಾರ ಸಂಬಂಧ ನಿನ್ನೆಯಷ್ಟೇ ಪ್ರತಿಕ್ರಿಯಿಸಿದ್ದ ವಿಪಕ್ಷ ನಾಯಕ ಆರ್​. ಅಶೋಕ್​​, ಕೇಂದ್ರ ಸಚಿವ ಹೆಚ್​. ಡಿ. ಕುಮಾರಸ್ವಾಮಿ ಜತೆ ಮಾತಾಡಿದ್ದು, ಸುಲಲಿತವಾಗಿ ಜೆಡಿಎಸ್ ಜತೆ ಹೊಂದಾಣಿಕೆ ಆಗಲಿದೆ. ಆದಷ್ಟು ಬೇಗ ಸಣ್ಣಪುಟ್ಟ ಗೊಂದಲಗಳನ್ನು ಬಗೆಹರಿಸಿಕೊಳ್ಳುತ್ತೇವೆ. ನಮ್ಮ‌ ನಡುವೆ ಯಾವುದೇ ದೊಡ್ಡ ದೊಡ್ಡ ಸಮಸ್ಯೆಗಳು ಇಲ್ಲ. ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಹೈಕಮಾಂಡ್ ‌ತೀರ್ಮಾನ ಅಂತಿಮ ಎಂದು ಹೇಳಿದ್ದರು.

ಇದನ್ನೂ ಓದಿ: ದೋಸ್ತಿ ನಾಯಕರ ನಡುವೆ ದಂಗಲ್​; ಜಿಬಿಎ ಎಲೆಕ್ಷನ್​​ಗೆ ಜೆಡಿಎಸ್ ಪ್ರತ್ಯೇಕ ಸ್ಪರ್ಧೆ?

ಅತ್ತ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಕೂಡ ಈ ಬಗ್ಗೆ ಅದಾಗಲೇ ಮಾತನಾಡಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಯಾವುದೇ ಸಮಸ್ಯೆ ಮತ್ತು ಲೋಪಗಳಿಲ್ಲ. ವೈಯಕ್ತಿಕವಾಗಿ ಮಾತಾಡುವುದಕ್ಕೆ ಪ್ರಾಮುಖ್ಯತೆ ಕೊಡುವ ಅವಶ್ಯಕತೆಯಿಲ್ಲ. ರಾಷ್ಟ್ರಮಟ್ಟದಲ್ಲಿ ನಾವು NDA ಸೇರಿರುವುದರಿಂದ ಬೇರೆ ವಿಚಾರ ಬರೋದಿಲ್ಲ. ನಾನು ನೂರಾರು ಬಾರಿ ಹೇಳಿದ್ದೀನಿ, ಜನ ಮುಂದಿನ ಸಿಎಂ ಎಂದು ಕೂಗ್ತಾರೆ. ಜನ ಮುಂದಿನ ಸಿಎಂ ಎಂದು ಕೂಗ್ತಾರೆಂದು ಭ್ರಮೆಯಲ್ಲಿ ಹೋಗಬಾರದು. ಜನ ನಮ್ಮ ಮೇಲಿನ ಪ್ರೀತಿಯಿಂದ ಮಾತಾಡ್ತಾರೆ. ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ್ರು ಅನ್ನುವಂತಾಗಬಾರದು. ಸಿಎಂ ಆಗುತ್ತೇನೆ ಎಂದು ನಾನು ಕನಸು ಕಾಣಲು ಆಗುತ್ತಾ? ನಾನು 2 ಬಾರಿ ಸಿಎಂ ಆಗಿದ್ದೆ. ಯಾರ ಹಣೆಯಲ್ಲಿ ಏನೇನ್ ಬರೆದಿರುತ್ತೋ ಹಾಗೆಯೇ ಆಗುತ್ತದೆ. ನನ್ನ ಮೊದಲ ಆದ್ಯತೆ ರಾಜ್ಯದಲ್ಲಿರುವ ಕೆಟ್ಟ ಸರ್ಕಾರವನ್ನು ತೆಗೆಯುವುದು. ಕೆಟ್ಟ ಸರ್ಕಾರ ತೆಗೆಯಲು ಬಿಜೆಪಿ, ಜೆಡಿಎಸ್ ಮೈತ್ರಿ ಮುಂದುವರಿಯಬೇಕು ಎಂದು ಹೇಳಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:30 am, Thu, 19 February 26