ನಾಗ ಚೈತನ್ಯ ಮಾಡಿದ ಪರಸ್ತ್ರೀ ಸಹವಾಸದಿಂದಲೇ ಸಮಂತಾ ವಿಚ್ಛೇದನ? ವೈರಲ್​ ವಿಡಿಯೋ ಸಾಕ್ಷಿ

ಆ ವಿಚಾರವನ್ನು ನಾಗ ಚೈತನ್ಯ ಅವರು ನೇರವಾಗಿ ಒಪ್ಪಿಕೊಂಡಿದ್ದರು. ಆಗಿನ್ನೂ ಸಮಂತಾಗೆ ಅವರು ವಿಚ್ಛೇದನ ನೀಡಿರಲಿಲ್ಲ. ‘ನಾನು ಎಲ್ಲ ಅನುಭವ ಪಡೆದಿದ್ದೇನೆ’ ಎಂದು ಅವರು ಹೇಳಿದ್ದರು. ಆ ವಿಡಿಯೋವನ್ನು ಈಗ ಸೋಶಿಯಲ್​ ಮೀಡಿಯಾದಲ್ಲಿ ಕೆಲವರು ಹಂಚಿಕೊಂಡಿದ್ದಾರೆ. ವಿಚ್ಛೇದನಕ್ಕೆ ನಾಗ ಚೈತನ್ಯ ಅವರ ಈ ವರ್ತನೆಯೇ ಕಾರಣ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

ನಾಗ ಚೈತನ್ಯ ಮಾಡಿದ ಪರಸ್ತ್ರೀ ಸಹವಾಸದಿಂದಲೇ ಸಮಂತಾ ವಿಚ್ಛೇದನ? ವೈರಲ್​ ವಿಡಿಯೋ ಸಾಕ್ಷಿ
ನಾಗ ಚೈತನ್ಯ, ಸಮಂತಾ
Follow us
ಮದನ್​ ಕುಮಾರ್​
|

Updated on:Apr 30, 2024 | 10:54 PM

ಟಾಲಿವುಡ್​ನ ಸ್ಟಾರ್​ ಕಪಲ್​ ಆಗಿದ್ದ ನಾಗ ಚೈತನ್ಯ ಮತ್ತು ಸಮಂತಾ ರುತ್​ ಪ್ರಭು (Samantha Ruth Prabhu) ಅವರು ವಿಚ್ಛೇದನ ಪಡೆದ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೆ ಶಾಕ್​ ಆಗಿತ್ತು. ಪರಸ್ಪರ ಪ್ರೀತಿಸಿ ಮದುವೆ ಆದ ಅವರು ಏಕಾಏಕಿ ಡಿವೋರ್ಸ್​ (Divorce) ಪಡೆದುಕೊಂಡಿದ್ದರಿಂದ ಫ್ಯಾನ್ಸ್​ಗೆ ಬೇಸರ ಆಗಿದ್ದು ನಿಜ. ಅವರಿಬ್ಬರ ವಿಚ್ಛೇದನಕ್ಕೆ ಕಾರಣ ಏನು ಎಂಬುದು ಇಲ್ಲಿಯವರೆಗೂ ಬಹಿರಂಗ ಆಗಿಲ್ಲ. ಆದರೆ ಅನೇಕ ಅಂಕೆ-ಕಂತೆಗಳು ಇಂದಿಗೂ ಹರಿದಾಡುತ್ತಿವೆ. ದಾಂಪತ್ಯದಲ್ಲಿ ಸಮಂತಾಗೆ ನಾಗ ಚೈತನ್ಯ (Naga Chaitanya) ಮೋಸ ಮಾಡಿರಬಹುದು ಎಂಬುದು ಹಲವರ ಅನುಮಾನ. ಅದಕ್ಕೆ ಪೂರಕ ಆಗಿರುವಂತಹ ಒಂದು ವಿಡಿಯೋ ಈಗ ವೈರಲ್​ ಆಗಿದೆ.

ನಾಗ ಚೈತನ್ಯ ಅವರು 2018ರಲ್ಲಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆಲವು ವಿಚಾರಗಳನ್ನು ಮಾತನಾಡಿದ್ದರು. ಅನು ಇಮ್ಯಾನ್ಯುಯಲ್​ ಮತ್ತು ನಾಗ ಚೈತನ್ಯ ಅವರು ಒಟ್ಟಿಗೆ ಸಂದರ್ಶನ ನೀಡಿದ್ದರು. ‘ಸಂಬಂಧದಲ್ಲಿ ಯಾವಾಗಲಾದ್ರೂ ಮೋಸ ಮಾಡಿದ್ದೀರಾ’ ಎಂದು ಕೇಳಿದಕ್ಕೆ ಅನು ಅವರು ‘ನೋ’ ಎಂದಿದ್ದರು. ಆದರೆ ನಾಗ ಚೈತನ್ಯ ‘ಹೌದು’ ಎಂದು ಒಪ್ಪಿಕೊಂಡಿದ್ದರು.

‘ಜೀವನದಲ್ಲಿ ಎಲ್ಲರೂ ಎಲ್ಲದರ ಅನುಭವ ಪಡೆಯಬೇಕು. ಆಗಲೇ ನೀವು ಬೆಳೆಯುವುದು. ಅರ್ಥ ಮಾಡಿಕೊಳ್ಳುವುದು. ನಾನು ಎಲ್ಲ ಅನುಭವ ಪಡೆದಿದ್ದೇನೆ. ಆದರೆ ಈಗ ಸೆಟಲ್​ ಆಗುವ ಸಮಯ’ ಎಂದು ನಾಗ ಚೈತನ್ಯ ಹೇಳಿದ್ದರು. ಆ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ನಾಗ ಚೈತನ್ಯ ಅವರ ಈ ವ್ಯಕ್ತಿತ್ವದಿಂದಲೇ ಸಮಂತಾ ವಿಚ್ಛೇದನ ನೀಡಿರಬಹುದು ಎಂದು ಅನೇಕರು ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಮಾಜಿ ದಂಪತಿ ಸಮಂತಾ-ನಾಗ ಚೈತನ್ಯ? ಆದರೆ ಒಂದು ಟ್ವಿಸ್ಟ್​

2017ರಲ್ಲಿ ಸಮಂತಾ ಮತ್ತು ನಾಗ ಚೈತನ್ಯ ಅವರ ಮದುವೆ ಅದ್ದೂರಿಯಾಗಿ ನಡೆದಿತ್ತು. ಆದರೆ ಅವರು ಹೆಚ್ಚು ಕಾಲ ಸುಖವಾಗಿ ಸಂಸಾರ ಮಾಡಲಿಲ್ಲ. ಮದುವೆ ಆಗಿ ಕೆಲವೇ ವರ್ಷಗಳು ಕಳೆಯುವುದರೊಳಗೆ ಕಿರಿಕ್​ ಶುರುವಾಯಿತು. ಇಬ್ಬರೂ ಬೇರೆ ಬೇರೆ ವಾಸಿಸಲು ಶುರು ಮಾಡಿದರು. ನಾಗ ಚೈತನ್ಯ ಅವರ ಫ್ಯಾಮಿಲಿ ಫಂಕ್ಷನ್​ಗಳಲ್ಲಿ ಸಮಂತಾ ಕಾಣಿಸಿಕೊಳ್ಳುವುದು ಕಡಿಮೆ ಆಯಿತು.

ವೈರಲ್​ ವಿಡಿಯೋ:

Naga Chaitanya admits to Cheating in the past, says “Everyone should experience everything!” byu/Significant-Neat-142 inBollyBlindsNGossip

ಅಂತಿಮವಾಗಿ 2021ರಲ್ಲಿ ಅವರು ವಿಚ್ಛೇದನ ಘೋಷಿಸಿದರು. ಆ ಬಳಿಕ ಸಮಂತಾ ಅವರ ವೃತ್ತಿಜೀವನ ಬದಲಾಯಿತು. ಅವರ ಸಿನಿಮಾ ಆಯ್ಕೆಗಳಲ್ಲಿ ಭಾರಿ ವ್ಯತ್ಯಾಸ ಕಾಣಿಸಲು ಆರಂಭ ಆಯಿತು. ಈಗ ಅವರು ಅನೇಕ ಪ್ರಾಜೆಕ್ಟ್​ಗಳಲ್ಲಿ ತೊಡಗಿಕೊಂಡಿದ್ದಾರೆ. ನಾಗ ಚೈತನ್ಯ ಕೂಡ ಸಿನಿಮಾ ಮತ್ತು ವೆಬ್​ ಸಿರೀಸ್​ಗಳಲ್ಲಿ ಬ್ಯುಸಿ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:50 pm, Tue, 30 April 24

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು