ಜಿಯೋ ಸಿನಿಮಾದ ಪ್ಲ್ಯಾನ್ಗಳಲ್ಲಿ ಯಾವುದು ಬೆಸ್ಟ್? ಏನೆಲ್ಲ ಆಫರ್ಗಳಿವೆ?
Jio Cinema Plans: 89 ರೂಪಾಯಿ ಪ್ಲ್ಯಾನ್ ಕೂಡ ತಿಂಗಳ ಪ್ಲ್ಯಾನ್ ಆಗಿದೆ. ಇದು ಕೂಡ 29 ರೂಪಾಯಿ ಪ್ಲ್ಯಾನ್ನ ಬೆನಿಫಿಟ್ಗಳನ್ನು ನೀಡಲಿದೆ. ಇದರ ಜೊತೆಗೆ ಏಕಕಾಲಕ್ಕೆ ನಾಲ್ಕು ಡಿವೈಸ್ಗಳಲ್ಲಿ ವೀಕ್ಷಣೆ ಮಾಡಬಹುದು. ಇಲ್ಲಿಯೂ ಐಪಿಎಲ್, ಲೈವ್ ಚಾನೆಲ್ ನೋಡುವಾಗ ಜಾಹೀರಾತು ಪ್ರಸಾರ ಆಗಲಿದೆ.
ಜಿಯೋ ಸಿನಿಮಾ (Jio Cinema) ಇತ್ತೀಚೆಗೆ ಪ್ರೀಮಿಯಂ ಸಬ್ಸ್ಕ್ರಿಪ್ಶನ್ ಘೋಷಣೆ ಮಾಡಿದೆ. ಇದರ ಅನುಸಾರ ಪ್ರತಿ ತಿಂಗಳಿಗೆ 29 ರೂಪಾಯಿ ಹಾಗೂ 89 ರೂಪಾಯಿ ಪ್ಲ್ಯಾನ್ ಘೋಷಣೆ ಮಾಡಿದೆ. ಎರಡೂ ಪ್ಲ್ಯಾನ್ಗಳು ಬೇರೆ ಬೇರೆ ಬೆನಿಫಿಟ್ಗಳನ್ನು ಹೊಂದಿವೆ. ಜಾಹೀರಾತಿನಿಂದ ಮುಕ್ತಿ ಪಡೆಯಲು ಈ ಪ್ಲ್ಯಾನ್ ಸಹಕಾರಿ ಆಗಲಿದೆ. ಬೇಸರದ ವಿಚಾರ ಎಂದರೆ ಕ್ರೀಡೆ ಹಾಗೂ ಲೈವ್ ಚಾನೆಲ್ನಲ್ಲಿ ಜಾಹೀರಾತಿನಿಂದ ಮುಕ್ತಿ ಇಲ್ಲ.
29 ರೂಪಾಯಿ ಪ್ರೀಮಿಯಂ ಪ್ಲ್ಯಾನ್ ಹಲವು ವಿಧಧ ಬೆನಿಫಿಟ್ಗಳನ್ನು ನೀಡುತ್ತದೆ. 4K ಕಂಟೆಂಟ್, ಜಾಹೀರಾತು ರಹಿತ ವೀಕ್ಷಣೆ, ಆಫ್ಲೈನ್ ವೀಕ್ಷಣೆ, ಎಕ್ಸ್ಕ್ಲೂಸಿವ್ ಸೀರಿಸ್, ಸಿನಿಮಾ, ಹಾಲಿವುಡ್ ಸಿನಿಮಾಗಳು ಹಾಗೂ ಟಿವಿ ಎಂಟರ್ಟೇನ್ಮೆಂಟ್ಗಳನ್ನು ವೀಕ್ಷಿಸಬಹುದು. ಲೈವ್ ಟಿವಿ ಹಾಗೂ ಕ್ರೀಡೆಗಳಲ್ಲಿ ಜಾಹೀರಾತು ಬರಲಿದೆ. 29 ರೂಪಾಯಿ ಪ್ಲ್ಯಾನ್ನಲ್ಲಿ ಒಮ್ಮೆಗೆ ಒಂದು ಡಿವೈಸ್ನಲ್ಲಿ ಮಾತ್ರ ನೋಡಬಹುದು.
89 ರೂಪಾಯಿ ಪ್ಲ್ಯಾನ್ ಕೂಡ ತಿಂಗಳ ಪ್ಲ್ಯಾನ್ ಆಗಿದೆ. ಇದು ಕೂಡ 29 ರೂಪಾಯಿ ಪ್ಲ್ಯಾನ್ನ ಬೆನಿಫಿಟ್ಗಳನ್ನು ನೀಡಲಿದೆ. ಇದರ ಜೊತೆಗೆ ಏಕಕಾಲಕ್ಕೆ ನಾಲ್ಕು ಡಿವೈಸ್ಗಳಲ್ಲಿ ವೀಕ್ಷಣೆ ಮಾಡಬಹುದು. ಇಲ್ಲಿಯೂ ಐಪಿಎಲ್, ಲೈವ್ ಚಾನೆಲ್ ನೋಡುವಾಗ ಜಾಹೀರಾತು ಪ್ರಸಾರ ಆಗಲಿದೆ.
ಇದನ್ನೂ ಓದಿ: Jio Cinema: ‘ಇನ್ಮುಂದೆ ಜಾಹೀರಾತು ಇರಲ್ಲ’; ಹೊಸ ಘೋಷಣೆ ಮಾಡಿದ ಜಿಯೋ ಸಿನಿಮಾ
ನೀವೊಬ್ಬರೇ ವೀಕ್ಷಿಸೋದು ಎಂದಾದೆ 29 ರೂಪಾಯಿ ಪ್ಲ್ಯಾನ್ ಸಹಕಾರಿ ಆಗಲಿದೆ. 89 ರೂಪಾಯಿ ಪ್ಲ್ಯಾನ್ ಪಡೆದರೆ ನಿಮ್ಮ ಜೊತೆ ನಿಮ್ಮ ಗೆಳೆಯರು, ಕುಟುಂಬದವರು ಕೂಡ ವೀಕ್ಷಿಸಬಹುದು. 29 ರೂಪಾಯಿ ಪ್ಲ್ಯಾನ್ನ ನಾಲ್ಕು ಬಾರಿ ಪಡೆದರೆ 120 ರೂಪಾಯಿ ಆಗಲಿದೆ. ಇಡೀ ಕುಟುಂಬವೇ ವೀಕ್ಷಣೆ ಮಾಡುತ್ತದೆ ಎಂದರೆ 89 ರೂಪಾಯಿ ಪ್ಲ್ಯಾನ್ ಉತ್ತಮ. ಉಳಿದ ಒಟಿಟಿ ಪ್ಲ್ಯಾಟ್ಫಾರ್ಮ್ಗಳಿಗೆ ಹೋಲಿಸಿದರೆ ಜಿಯೋ ಸಿನಿಮಾ ಕಡಿಮೆ ಬೆಲೆಯಲ್ಲಿ ಪ್ಲ್ಯಾನ್ಗಳನ್ನು ನೀಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.