Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕ್ರೀಡೆಗೆ ಆಸಕ್ತಿ ಕಡಿಮೆ ಕೊಟ್ಟು, ಓದಿನ ಕಡೆ ಗಮನಹರಿಸು’ ಎಂದು ತಂದೆ ಬುದ್ದಿ ಹೇಳಿದಕ್ಕೆ ಮಗ ಆತ್ಮಹತ್ಯೆ

‘ಕ್ರೀಡೆಗೆ ಆಸಕ್ತಿ ಕಡಿಮೆ ಕೊಟ್ಟು, ಓದಿನ ಕಡೆ ಗಮನಹರಿಸು’ ಎಂದು ತಂದೆ ಬುದ್ದಿವಾದ ಹೇಳಿದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನನೊಂದ ಚೇತನ್ ಮನೆಯಿಂದ ನಾಪತ್ತೆಯಾಗಿದ್ದ. ಈಗ ಎರಡು ದಿನಗಳ ನಂತರ ಕೆಲಗೇರಿ ಕೆರೆಯಲ್ಲಿ ಚೇತನ್ ಶವ ಪತ್ತೆಯಾಗಿದೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕ್ರೀಡೆಗೆ ಆಸಕ್ತಿ ಕಡಿಮೆ ಕೊಟ್ಟು, ಓದಿನ ಕಡೆ ಗಮನಹರಿಸು’ ಎಂದು ತಂದೆ ಬುದ್ದಿ ಹೇಳಿದಕ್ಕೆ ಮಗ ಆತ್ಮಹತ್ಯೆ
ಚೇತನ್​​ ಕೊಂಡಿಹಾಳ
Follow us
TV9 Web
| Updated By: ಆಯೇಷಾ ಬಾನು

Updated on:Feb 07, 2024 | 12:51 PM

ಧಾರವಾಡ, ಫೆ.07: ತಂದೆ ಬುದ್ಧಿವಾದ ಹೇಳಿದಕ್ಕೆ ಮನನೊಂದ ಮಗ ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡ ನಗರದ ಸಾದನಕೇರಿ ಬಡಾವಣೆಯಲ್ಲಿ ನಡೆದಿದೆ. ಧಾರವಾಡ ನಗರದ ಕೆಲಗೇರಿ ಕೆರೆಗೆ ಹಾರಿ ಫುಟ್​​ಬಾಲ್​​ ಆಟಗಾರ ಚೇತನ್​​ ಕೊಂಡಿಹಾಳ (23) ಆತ್ಮಹತ್ಯೆ (Death) ಮಾಡಿಕೊಂಡಿದ್ದಾನೆ. ‘ಕ್ರೀಡೆಗೆ ಆಸಕ್ತಿ ಕಡಿಮೆ ಕೊಟ್ಟು, ಓದಿನ ಕಡೆ ಗಮನಹರಿಸು’ ಎಂದು ತಂದೆ ಬುದ್ದಿವಾದ ಹೇಳಿದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶರಣಪ್ಪ ಕೊಂಡಿಹಾಳ ಎಂಬುವರ ಮೃತ ಪುತ್ರ ಚೇತನ್​​ ಮೃತಪಟ್ಟಿದ್ದಾನೆ.

ಚೇತನ್​ಗೆ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಇತ್ತು. ಮಗನ ಆಸಕ್ತಿಯಿಂದಾಗಿ ಓದಿಗೆ ಸಮಸ್ಯೆ ಆಗಬಾರದೆಂದುಕೊಂಡ ಶರಣಪ್ಪ ಕೊಂಡಿಹಾಳ ಅವರು ತಮ್ಮ ಮಗನಿಗೆ ಬುದ್ಧಿ ಹೇಳಿದ್ದಾರೆ. ‘ಕ್ರೀಡೆಗೆ ಆಸಕ್ತಿ ಕಡಿಮೆ ಕೊಟ್ಟು, ಓದಿನ ಕಡೆ ಗಮನಹರಿಸು’ ಎಂದು ಹೇಳಿದ್ದಾರೆ. ಇಷ್ಟಕ್ಕೆ ಮನನೊಂದ ಚೇತನ್ ಮನೆಯಿಂದ ನಾಪತ್ತೆಯಾಗಿದ್ದ. ಈಗ ಎರಡು ದಿನಗಳ ನಂತರ ಕೆಲಗೇರಿ ಕೆರೆಯಲ್ಲಿ ಚೇತನ್ ಶವ ಪತ್ತೆಯಾಗಿದೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿಯಲ್ಲಿ ಖಾರದ ಪುಡಿ ಎರಚಿ ತಂದೆ-ಮಕ್ಕಳ ಮೇಲೆ ಹಲ್ಲೆ

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಿರನಕೋಡ ಗ್ರಾಮದಲ್ಲಿ ತಂದೆ ಮಕ್ಕಳ ಮೇಲೆ ಹಲ್ಲೆ ಮಾಡಲಾಗಿದೆ. ಮೂರು ಜಮೀನು ವಿಚಾರಕ್ಕೆ ತಂದೆ ಮಕ್ಕಳ ಮೇಲೆ ಮತ್ತೊಂದು ಕುಟುಂಬದವರು ಹಲ್ಲೆ ಮಾಡಿದ್ದಾರೆ ಅಂತಾ ಆರೋಪಿಸಿದ್ದಾರೆ.

ಇದನ್ನೂ ಓದಿ: Brain Health: ಟೂತ್​ಪೇಸ್ಟ್, ಲಿಪ್​ಸ್ಟಿಕ್​ನಿಂದಲೂ ಮೆದುಳಿನ ಆರೋಗ್ಯಕ್ಕೆ ಅಪಾಯ!

ಧಾರವಾಡದಲ್ಲಿ ಎಗ್‌ರೈಸ್ ಅಂಗಡಿಯಲ್ಲಿ ಭೀಕರ ಹತ್ಯೆ

ಧಾರವಾಡದ ಭೋವಿಗಲ್ಲಿಯಲ್ಲಿ ತಡರಾತ್ರಿ ಯುವಕನ ಹತ್ಯೆಯಾಗಿದೆ. ಕ್ಷುಲ್ಲಕ ಕಾರಣಕ್ಕೆ ಎಗ್​ರೈಸ್​ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಫಕ್ಕಿರೇಶ್ ಎಂಬಾತನನ್ನ ಕೊಲೆ ಮಾಡಲಾಗಿದೆ. ದಾಂಡೇಲಿ ಮೂಲದ ಕನ್ಯಯ್ಯ ಎಂಬಾತ ಹತ್ಯೆ ಮಾಡಿದ್ದು, ಆರೋಪಿಯನ್ನ ವಶಕ್ಕೆ ಪಡೆಯಲಾಗಿದೆ.

ಮೈಸೂರಲ್ಲಿ ತನ್ನ ಜೀವ ಉಳಿಸಿದ್ದ ಪತ್ನಿಯನ್ನೇ ಕೊಂದ ಪತಿ

ಮೈಸೂರಿನ ರಾಜೀವ್ ನಗರದಲ್ಲಿ ಪತ್ನಿಯನ್ನೇ ಪತಿರಾಯ ಹತ್ಯೆಗೈದಿದ್ದಾನೆ. ಈ ಹಿಂದೆ ಪತಿಗೆ ಹೃದಯಾಘಾತವಾದಾಗ ಪತ್ನಿ ತವರು ಮನೆಯವರ ನೆರವಿನಿಂದ ಪತಿಗೆ ಚಿಕಿತ್ಸೆ ಕೊಡಿಸಿದ್ಲು. ಪದೇ ಪದೆ ಸಾಲ ಮಾಡಿ ಪತ್ನಿ ಬಳಿ ಹಣಕ್ಕೆ ಪೀಡಿಸುತ್ತಿದ್ದ ಅಕ್ಬರ್ ಜಗಳ ತೆಗೆಯುತ್ತಿದ್ದ. ಹಣ ನೀಡದಿದ್ದಕ್ಕೆ ಪತ್ನಿಯನ್ನು ಕೊಲೆ ಮಾಡಿದ್ದಾನೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:47 pm, Wed, 7 February 24

ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್
ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ವಿಶ್ವಾಸ ಹೊಂದಿದೆ: ಎಂಬಿ ಪಾಟೀಲ್
ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ವಿಶ್ವಾಸ ಹೊಂದಿದೆ: ಎಂಬಿ ಪಾಟೀಲ್
ಘಟನೆ ವಿವರಿಸಿದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು
ಘಟನೆ ವಿವರಿಸಿದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು