‘ತಪ್ಪು ನನ್ನದೇ’: ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರದ ಸೋಲಿಗೆ ಕಾರಣ ತಿಳಿಸಿದ ಆಮಿರ್ ಖಾನ್​

ಸಿನಿಮಾ ಸೋತಾಗ ಅದರ ಹೊಣೆಯನ್ನು ಬೇರೆಯವರಿಗೆ ಹೊರಿಸುವವರೇ ಹೆಚ್ಚು. ಆದರೆ ಆಮಿರ್​ ಖಾನ್​ ಅವರು ಆ ರೀತಿ ಅಲ್ಲ. ತಮ್ಮ ಸಿನಿಮಾದ ಸೋಲಿನ ಹೊಣೆಯನ್ನು ತಾವೇ ಹೊತ್ತುಕೊಂಡಿದ್ದಾರೆ. ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದ ಸೋಲಿನ ಬಗ್ಗೆ ಆಮಿರ್​ ಖಾನ್​ ಅವರು ಮುಕ್ತವಾಗಿ ಮಾತನಾಡಿದ್ದಾರೆ. ‘ದಿ ಗ್ರೇಟ್​ ಇಂಡಿಯನ್​ ಕಪಿಲ್​ ಶೋ’ ಕಾರ್ಯಕ್ರಮದಲ್ಲಿ ಈ ವಿಚಾರ ಚರ್ಚೆ ಆಗಿದೆ.

‘ತಪ್ಪು ನನ್ನದೇ’: ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರದ ಸೋಲಿಗೆ ಕಾರಣ ತಿಳಿಸಿದ ಆಮಿರ್ ಖಾನ್​
ಆಮಿರ್​ ಖಾನ್​
Follow us
|

Updated on: Apr 30, 2024 | 9:16 PM

ನಟ ಆಮಿರ್​ ಖಾನ್​ ಅವರಿಗೆ ಇತ್ತೀಚಿನ ವರ್ಷಗಳಲ್ಲಿ ಸರಿಯಾದ ಗೆಲುವು ಸಿಕ್ಕಿಲ್ಲ. ‘ಲಾಲ್​ ಸಿಂಗ್​ ಚಡ್ಡಾ’ (Laal Singh Chaddha) ಸಿನಿಮಾ ಮೇಲೆ ಅವರು ಭಾರಿ ಭರವಸೆ ಇಟ್ಟುಕೊಂಡಿದ್ದರು. 2022ರಲ್ಲಿ ತೆರೆಕಂಡ ಆ ಸಿನಿಮಾ ಹೀನಾಯವಾಗಿ ಸೋತಿತು. ಹಾಲಿವುಡ್​ನ ‘ಫಾರೆಸ್ಟ್​ ಗಂಪ್​’ ಚಿತ್ರವನ್ನು ಆಮಿರ್​ ಖಾನ್​ ಅವರು ಹಿಂದಿಗೆ ‘ಲಾಲ್​ ಸಿಂಗ್​ ಚಡ್ಡಾ’ ಶೀರ್ಷಿಕೆಯಲ್ಲಿ ರಿಮೇಕ್​ ಮಾಡಿದರು. ಭಾರಿ ಪ್ರೀತಿ ಇಟ್ಟುಕೊಂಡು ಮಾಡಿದ್ದ ಆ ಸಿನಿಮಾ ಯಾಕೆ ಸೋತಿತು ಎಂಬುದನ್ನು ಈಗ ಆಮಿರ್ ಖಾನ್​ (Aamir Khan) ಅವರು ವಿವರಿಸಿದ್ದಾರೆ. ಸೋಲಿನ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ.

ಕಪಿಲ್​ ಶರ್ಮಾ ನಡೆಸಿಕೊಡುವ ‘ದಿ ಗ್ರೇಟ್​ ಇಂಡಿಯನ್​ ಕಪಿಲ್​ ಶೋ’ ಕಾರ್ಯಕ್ರಮಕ್ಕೆ ಆಮಿರ್​ ಖಾನ್​ ಅವರು ಅತಿಥಿಯಾಗಿ ಬಂದಿದ್ದಾರೆ. ಕಳೆದ ಶನಿವಾರ ನೆಟ್​ಫ್ಲಿಕ್ಸ್​ನಲ್ಲಿ ಅವರ ಎಪಿಸೋಡ್​ ಪ್ರಸಾರ ಆಯಿತು. ಅದರ ಕೆಲವು ತುಣುಕುಗಳನ್ನು ಸೋಶಿಯಲ್​ ಮೀಡಿಯಾದಲ್ಲೂ ಹಂಚಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಬಂದ ಕೆಲವು ಪ್ರೇಕ್ಷಕರ ಎದುರಿನಲ್ಲಿ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದ ಸೋಲಿನ ಬಗ್ಗೆ ಆಮಿರ್​ ಖಾನ್​ ಮಾತನಾಡಿದ್ದಾರೆ.

‘ನಾನು ಆ ಸಿನಿಮಾದಲ್ಲಿ ನನ್ನ ಅಭಿನಯದ ಪಿಚ್​ ಸ್ವಲ್ಪ ಜಾಸ್ತಿ ಮಾಡಿಕೊಂಡಿದ್ದೆ. ಅದು ಸರಿಯಾಗಿ ಮೂಡಿಬರಲಿಲ್ಲ. ಅದರಿಂದಾಗಿ ಇಡೀ ಸಿನಿಮಾಗೆ ತೊಂದರೆ ಆಯಿತು. ಅದರ ಪೂರ್ತಿ ಭಾರ ನನ್ನ ಮೇಲೆ ಇತ್ತು. ನಾನೇ ತಪ್ಪು ಮಾಡಿದೆ’ ಎಂದು ಆಮಿರ್​ ಖಾನ್​ ಅವರು ಹೇಳಿದ್ದಾರೆ. ಅಲ್ಲದೇ ವೃತ್ತಿಜೀವನದಲ್ಲಿ ತಮ್ಮ ತಪ್ಪುಗಳಿಂದ ಹೆಚ್ಚು ಕಲಿತಿರುವುದಾಗಿ ಆಮಿರ್​ ಖಾನ್​ ತಿಳಿಸಿದ್ದಾರೆ.

ಇದನ್ನೂ ಓದಿ: ‘ನನ್ನ ಮಕ್ಕಳೇ ನನ್ನ ಮಾತು ಕೇಳಲ್ಲ’: ಆಮಿರ್​ ಖಾನ್​ ಹೀಗೆ ಹೇಳಿದ್ದು ಯಾಕೆ?

ಖಾಸಗಿ ಲೈಫ್​ನ ಅನೇಕ ಸಂಗತಿಗಳ ಬಗ್ಗೆಯೂ ಆಮಿರ್​ ಖಾನ್​ ಅವರು ‘ದಿ ಗ್ರೇಟ್​ ಇಂಡಿಯನ್​ ಕಪಿಲ್​ ಶೋ’ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಈಗ ಅವರು ‘ಸಿತಾರೆ ಜಮೀನ್​ ಪರ್​’ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಅವರು ದರ್ಶೀಲ್​ ಸಫಾರಿ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಅಭಿಮಾನಿಗಳಿಗೆ ಈ ಕಾಂಬಿನೇಷನ್​ ಬಗ್ಗೆ ತುಂಬ ನಿರೀಕ್ಷೆ ಇದೆ. ಆ ಸಿನಿಮಾ ಮೂಲಕವಾದರೂ ಆಮಿರ್​ ಖಾನ್​ ಗೆಲ್ಲುತ್ತಾರಾ ಎಂಬುದನ್ನು ಕಾದುನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್​ಗೆ 40 ಲಕ್ಷ ರೂ. ಕೊಟ್ಟಿದ್ದು ಯಾರು?
ಸೈಟು ಹಂಚಿಕೆ: ಮುಡಾ ಆಯುಕ್ತರನ್ನು ಭೇಟಿ ಮಾಡಿದ ಮೈಸೂರು ಕಾಂಗ್ರೆಸ್ ಮುಖಂಡರು
ಸೈಟು ಹಂಚಿಕೆ: ಮುಡಾ ಆಯುಕ್ತರನ್ನು ಭೇಟಿ ಮಾಡಿದ ಮೈಸೂರು ಕಾಂಗ್ರೆಸ್ ಮುಖಂಡರು