AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನ್ಮದಿನಕ್ಕೆ ಅಭಿಮಾನಿಗಳ ಬಳಿ ಅತಿ ದೊಡ್ಡ ಗಿಫ್ಟ್​ ಕೇಳಿದ ಆಮಿರ್ ಖಾನ್​

ನಿರ್ಮಾಪಕನಾಗಿ ಆಮಿರ್​ ಖಾನ್​ ಅವರಿಗೆ ತುಂಬ ಹೆಮ್ಮೆ ಇದೆ. ಅದಕ್ಕೆ ಕಾರಣ ಆಗಿರುವುದು ‘ಲಾಪತಾ ಲೇಡೀಸ್​’ ಸಿನಿಮಾ. ತಮ್ಮ 59ನೇ ವರ್ಷದ ಹುಟ್ಟುಹಬ್ಬದ ಆಚರಣೆ ವೇಳೆ ಆಮಿರ್​ ಖಾನ್​ ಅವರು ಈ ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮದವರು ಮತ್ತು ‘ಲಾಪತಾ ಲೇಡೀಸ್​’ ಸಿನಿಮಾ ತಂಡದ ಜೊತೆ ಆಮಿರ್​ ಖಾನ್​ ಅವರು ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.

ಜನ್ಮದಿನಕ್ಕೆ ಅಭಿಮಾನಿಗಳ ಬಳಿ ಅತಿ ದೊಡ್ಡ ಗಿಫ್ಟ್​ ಕೇಳಿದ ಆಮಿರ್ ಖಾನ್​
ಆಮಿರ್​ ಖಾನ್​
ಮದನ್​ ಕುಮಾರ್​
|

Updated on: Mar 14, 2024 | 8:47 PM

Share

ನಟ ಆಮಿರ್​ ಖಾನ್​ (Aamir Khan) ಅವರು ಇಂದು (ಮಾರ್ಚ್​ 14) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 59ನೇ ವರ್ಷಕ್ಕೆ ಕಾಲಿಟ್ಟ ಅವರಿಗೆ ಅಭಿಮಾನಿಗಳು, ಕುಟುಂಬದವರು, ಸ್ನೇಹಿತರು ಶುಭಾಶಯ ಕೋರಿದ್ದಾರೆ. ಆಮಿರ್​ ಖಾನ್​ ಅವರಿಗೆ ಈ ವರ್ಷದ ಜನ್ಮದಿನ (Aamir Khan Birthday) ತುಂಬ ವಿಶೇಷವಾಗಿದೆ. ಯಾಕೆಂದರೆ, ಅವರು ನಿರ್ಮಾಣ ಮಾಡಿದ ‘ಲಾಪತಾ ಲೇಡೀಸ್​’ ಸಿನಿಮಾ ಬಿಡುಗಡೆಯಾಗಿ ಉತ್ತಮ ವಿಮರ್ಶೆ ಪಡೆದುಕೊಂಡಿದೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಆಮಿರ್​ ಖಾನ್​ ಅವರು ಮಾಧ್ಯಮದವರ ಜೊತೆ ಹುಟ್ಟುಹಬ್ಬವನ್ನು ಸೆಲೆಬ್ರೇಟ್​ ಮಾಡಿಕೊಂಡಿದ್ದಾರೆ. ಈ ಬಾರಿ ಅವರಿಗೆ ‘ಲಾಪತಾ ಲೇಡೀಸ್​’ (Laapataa Ladies) ಚಿತ್ರತಂಡದವರು ಸಾಥ್​ ನೀಡಿದ್ದಾರೆ.

‘ಲಾಪತಾ ಲೇಡೀಸ್​’ ಸಿನಿಮಾಗೆ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಸಚಿನ್​ ತೆಂಡುಲ್ಕರ್​, ಅನುರಾಗ್​ ಕಶ್ಯಪ್​, ರಾಧಿಕಾ ಆಪ್ಟೆ ಮುಂತಾದವರು ಸೋಶಿಯಲ್​ ಮೀಡಿಯಾ ಮೂಲಕ ವಿಮರ್ಶೆ ತಿಳಿಸಿದ್ದಾರೆ. ಈ ಸಿನಿಮಾದಲ್ಲಿ ಸ್ಪರ್ಶ್​ ಶ್ರೀವಾಸ್ತವ, ನಿತಾಂಶಿ ಗೋಯಲ್​, ಪ್ರತಿಭಾ ರಂಟಾ, ರವಿ ಕಿಶನ್​ ಮುಂತಾದವರು ಅಭಿನಯಿಸಿದ್ದಾರೆ. ಆಮಿರ್​ ಖಾನ್​ ಅವರ ಮಾಜಿ ಪತ್ನಿ ಕಿರಣ್​ ರಾವ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಆಮಿರ್​ ಖಾನ್​ ಅವರ ಬರ್ತ್​ಡೇ ಸೆಲೆಬ್ರೇಷನ್​ನಲ್ಲಿ ‘ಲಾಪತಾ ಲೇಡೀಸ್​’ ಚಿತ್ರದ ಕಲಾವಿದರು ಭಾಗಿ ಆಗಿದ್ದಾರೆ.

ಆಮಿರ್ ಖಾನ್​ ಅವರು ತುಸು ಭಾವುಕರಾಗಿ ಮಾತನಾಡಿದ್ದಾರೆ. ‘ಪ್ರತಿ ವರ್ಷ ಬಂದು ನನ್ನ ಬರ್ತ್​ಡೇ ಸೆಲೆಬ್ರೇಟ್​ ಮಾಡುವ ನಿಮಗೆ ಧನ್ಯವಾದಗಳು. ಈ ವರ್ಷ ಕಿರಣ್​ ರಾವ್​ ಮತ್ತು ಲಾಪತಾ ಲೇಡೀಸ್​ ಸಿನಿಮಾದ ಟೀಮ್​ ಜೊತೆ ನಾನು ಹುಟ್ಟುಹಬ್ಬ ಆಚರಿಸುತ್ತಿದ್ದೇನೆ. ನನ್ನ ನಿರ್ಮಾಣ ಸಂಸ್ಥೆಗಾಗಿ ಅವರು ತುಂಬ ಸುಂದರವಾದ ಸಿನಿಮಾ ನೀಡಿದ್ದಾರೆ. 2001ರಲ್ಲಿ ಬಂದ ‘ಲಗಾನ್​’ ಸಿನಿಮಾದಿಂದ ಇಲ್ಲಿಯವರೆಗೆ ಸತತ 23 ವರ್ಷಗಳ ಕಾಲ ನಮ್ಮ ನಿರ್ಮಾಣ ಸಂಸ್ಥೆ ಕಾರ್ಯನಿರತವಾಗಿದೆ. ನಮಗೆ ಅತಿ ಹೆಚ್ಚು ಹೆಮ್ಮೆ ತಂದಿರುವ ಸಿನಿಮಾ ಲಾಪತಾ ಲೇಡೀಸ್​’ ಎಂದು ಆಮಿರ್​ ಖಾನ್ ಹೇಳಿದ್ದಾರೆ.

ಇದನ್ನೂ ಓದಿ: ಸಚಿನ್​ಗೂ ಇಷ್ಟವಾಯ್ತು ‘ಲಾಪತಾ ಲೇಡೀಸ್​’ ಸಿನಿಮಾ; ಇಲ್ಲಿದೆ ಪ್ರಾಮಾಣಿಕ ವಿಮರ್ಶೆ

‘ಮನುಷ್ಯರ ಸ್ವಭಾವದ ಬಗ್ಗೆ, ಕುಟುಂಬದ ಬಗ್ಗೆ, ಭಾವನೆಗಳ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗಿದೆ. ಪ್ರತಿ ಪಾಸಿಟಿವ್​ ವಿಚಾರವನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಇಂಥ ಅದ್ಭುತ ಸಿನಿಮಾವನ್ನು ಮಾಡಿದ್ದಕ್ಕಾಗಿ ಕಿರಣ್​ ರಾವ್​ ಅವರಿಗೆ ಧನ್ಯವಾದಗಳು’ ಎಂದು ಆಮಿರ್ ಖಾನ್​ ಹೇಳಿದ್ದಾರೆ. ಈ ವೇಳೆ ಅವರು ಅಭಿಮಾನಿಗಳ ಬಳಿ ದೊಡ್ಡ ಗಿಫ್ಟ್​ ಕೇಳಿದ್ದಾರೆ. ಏನದು? ‘ಲಾಪತಾ ಲೇಡೀಸ್​ ಸಿನಿಮಾ ಈಗಲೂ ಚಿತ್ರಮಂದಿರದಲ್ಲಿದೆ. ನೀವೆಲ್ಲರೂ ಹೋಗಿ ಸಿನಿಮಾ ನೋಡುತ್ತೀರಿ ಎಂಬ ನಂಬಿಕೆ ನನಗೆ ಇದೆ. ನನಗೆ ನೀವು ಉಡುಗೊರೆ ನೀಡಬೇಕು ಎಂದಾದರೆ ಹೋಗಿ ಈ ಸಿನಿಮಾದ ಒಂದು ಟಿಕೆಟ್​ ಖರೀದಿಸಿ. ಅದೇ ನನಗೆ ದೊಡ್ಡ ಗಿಫ್ಟ್​’ ಎಂದಿದ್ದಾರೆ ಆಮಿರ್​ ಖಾನ್​.

ಇದನ್ನೂ ಓದಿ: Laapataa Ladies Review: ಈ ಕಾಲಕ್ಕೆ ಬೇಕಾದ ಮಹತ್ವಪೂರ್ಣ ಸಿನಿಮಾ ‘ಲಾಪತಾ ಲೇಡೀಸ್’

ಆಮಿರ್​ ಖಾನ್​ ಅವರು ‘ಸಿತಾರೆ ಜಮೀನ್​ ಪರ್​’ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಅವರು ದರ್ಶೀಲ್​ ಸಫಾರಿ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಅಭಿಮಾನಿಗಳಿಗೆ ಈ ಚಿತ್ರದ ಮೇಲೆ ಸಖತ್​ ಭರವಸೆ ಇದೆ. ಇದು ಸಂಪೂರ್ಣ ಮನರಂಜನೆ ನೀಡುವ ಸಿನಿಮಾ ಆಗಲಿದೆ ಎಂದು ಆಮಿರ್​ ಖಾನ್​ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ