AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಮಕ್ಕಳೇ ನನ್ನ ಮಾತು ಕೇಳಲ್ಲ’: ಆಮಿರ್​ ಖಾನ್​ ಹೀಗೆ ಹೇಳಿದ್ದು ಯಾಕೆ?

ಆಮಿರ್​ ಖಾನ್​ ಅವರು ‘ಪಿಕೆ’ ಸಿನಿಮಾದ ಒಂದು ದೃಶ್ಯದಲ್ಲಿ ಪೂರ್ತಿ ಬೆತ್ತಲಾಗಿ, ಕೇವಲ ರೇಡಿಯೋ ಅಡ್ಡ ಹಿಡಿದುಕೊಂಡು ನಟಿಸಿದ್ದರು. ಆ ದೃಶ್ಯದ ಬಗ್ಗೆಯೂ ‘ದಿ ಗ್ರೇಟ್​ ಇಂಡಿಯನ್​ ಕಪಿಲ್​ ಶೋ’ ಕಾರ್ಯಕ್ರಮದಲ್ಲಿ ಪ್ರಶ್ನೆ ಕೇಳಲಾಗಿದೆ. ಆ ಎಲ್ಲ ಪ್ರಶ್ನೆಗಳಿಗೆ ಅವರು ನಗು ನಗುತ್ತಲೇ ಉತ್ತರಿಸಿದ್ದಾರೆ. ಕಪಿಲ್​ ಶರ್ಮಾ ಸಾರಥ್ಯದ ಈ ಶೋ ಶೀಘ್ರದಲ್ಲೇ ಪ್ರಸಾರ ಆಗಲಿದ್ದು, ಪ್ರೋಮೋ ಭಾರಿ ವೈರಲ್​ ಆಗಿದೆ.

‘ನನ್ನ ಮಕ್ಕಳೇ ನನ್ನ ಮಾತು ಕೇಳಲ್ಲ’: ಆಮಿರ್​ ಖಾನ್​ ಹೀಗೆ ಹೇಳಿದ್ದು ಯಾಕೆ?
ಆಮಿರ್​ ಖಾನ್​
ಮದನ್​ ಕುಮಾರ್​
|

Updated on: Apr 24, 2024 | 5:35 PM

Share

ನಟ ಆಮಿರ್​ ಖಾನ್​ ಅವರು ‘ದಿ ಗ್ರೇಟ್​ ಇಂಡಿಯನ್​ ಕಪಿಲ್​ ಶೋ’ (The Great Indian Kapil Show) ಸಂಚಿಕೆಯಲ್ಲಿ ಪಾಲ್ಗೊಂಡಿದ್ದಾರೆ. ಇದರ ಹೊಸ ಪ್ರೋಮೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಆಮಿರ್​ ಖಾನ್​ (Aamir Khan) ಅವರಂಥ ಸ್ಟಾರ್​ ನಟ ಈ ಕಾರ್ಯಕ್ರಮಕ್ಕೆ ಬಂದಿರುವುದರಿಂದ ಜನರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ವೀಕೆಂಡ್​ನಲ್ಲಿ ಹೊಸ ಸಂಚಿಕೆ ಪ್ರಸಾರ ಆಗಲಿದೆ. ಕಪಿಲ್​ ಶರ್ಮಾ (Kapil Sharma) ಅವರು ನಡೆಸಿಕೊಡುವ ಈ ಕಾಮಿಡಿ ಶೋನಲ್ಲಿ ಆಮಿರ್​ ಖಾನ್​ ಅವರು ಕೆಲವು ಅಚ್ಚರಿಯ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮಕ್ಕಳು ಮಾತು ಕೇಳುವುದಿಲ್ಲ ಎಂದು ಅವರು ಹೇಳಿದ್ದಾರೆ.

ಅಂದಹಾಗೆ, ಆಮಿರ್​ ಖಾನ್​ ಅವರು ಹೀಗೆ ಹೇಳಿದ್ದು ತುಂಬ ಗಂಭೀರವಾಗಿ ಏನಲ್ಲ. ‘ದಿ ಗ್ರೇಟ್​ ಇಂಡಿಯನ್​ ಕಪಿಲ್​ ಶೋ’ ಕಾರ್ಯಕ್ರಮಕ್ಕೆ ಯಾವ ಬಟ್ಟೆ ಧರಿಸಿ ಬರಬೇಕು ಎಂಬ ಚರ್ಚೆ ಅವರ ಮನೆಯಲ್ಲಿ ನಡೆದಿತ್ತು. ಶಾರ್ಟ್ಸ್​​ ಧರಿಸಬೇಕು ಎಂಬುದು ಆಮಿರ್​ ಖಾನ್​ ನಿರ್ಧಾರ ಆಗಿತ್ತು. ಆದರೆ ಅವರ ಮಕ್ಕಳು ಅದಕ್ಕೆ ಅನುಮತಿ ನೀಡಿಲ್ಲ. ಬದಲಿಗೆ ಜೇನ್ಸ್​ ಪ್ಯಾಂಟ್​ ಧರಿಸುವಂತೆ ಮಕ್ಕಳು ತಾಕೀತು ಮಾಡಿದ್ದಾರೆ. ಆ ಕಾರಣದಿಂದ ‘ನನ್ನ ಮಕ್ಕಳು ನನ್ನ ಮಾತು ಕೇಳುವುದಿಲ್ಲ’ ಎಂದು ಆಮಿರ್​ ಖಾನ್​ ಹೇಳಿದ್ದಾರೆ.

ಇದನ್ನೂ ಓದಿ: ಭಿಕ್ಷೆ ಬೇಡುವ ವ್ಯಕ್ತಿಗೆ ಆಮಿರ್​ ಖಾನ್​ ಸಿನಿಮಾದಲ್ಲಿ ಅವಕಾಶ; ನಂತರ ಬದಲಾಯ್ತು ಬದುಕು

ನೆಟ್​ಫ್ಲಿಕ್ಸ್​ ಮೂಲಕ ‘ದಿ ಗ್ರೇಟ್​ ಇಂಡಿಯನ್​ ಕಪಿಲ್ ಶೋ’ ಪ್ರಸಾರ ಆಗಲಿದೆ. ಆಮಿರ್​ ಖಾನ್​ ಭಾಗವಹಿಸಿರುವ ಈ ಹೊಸ ಎಪಿಸೋಡ್​ ಏಪ್ರಿಲ್​ 27ರಂದು ರಾತ್ರಿ 8 ಗಂಟೆಗೆ ವೀಕ್ಷಣೆಗೆ ಲಭ್ಯವಾಗಲಿದೆ. ಈ ಸಂಚಿಕೆಯಲ್ಲಿ ಆಮಿರ್​ ಖಾನ್​ ಅವರು ತುಂಬ ಎಂಜಾಯ್​ ಮಾಡಿದ್ದಾರೆ. ತಮ್ಮ ಕಾರ್ಯಕ್ರಮಕ್ಕೆ ಆಮಿರ್​ ಖಾನ್​ ಬರಬೇಕು ಎಂಬುದು ಕಪಿಲ್​ ಶರ್ಮಾ ಅವರ ಬಹುದಿನಗಳ ಆಸೆ ಆಗಿತ್ತು. ಅದು ಈಗ ಈಡೇರಿದೆ.

View this post on Instagram

A post shared by Netflix India (@netflix_in)

ಆಮಿರ್​ ಖಾನ್​ ಅವರು ಯಾವುದೇ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ಹೋಗುವುದಿಲ್ಲ. ಆ ಬಗ್ಗೆ ‘ದಿ ಗ್ರೇಟ್​ ಇಂಡಿಯನ್​ ಕಪಿಲ್ ಶೋ’ನಲ್ಲಿ ಕೇಳಲಾಗಿದೆ. ಅದಕ್ಕೆ ಉತ್ತರಿಸಿರುವ ಅವರು, ‘ಸಮಯ ತುಂಬ ಅಮೂಲ್ಯವಾದದ್ದು. ಅದನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಬೇಕು’ ಹೇಳಿದ್ದಾರೆ. ಈ ಸಂಚಿಕೆ ನೋಡಲು ಫ್ಯಾನ್ಸ್​ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ